December 31, 2007

ಶಿಕ್ಷೆಯಲ್ಲಿ ಅರ್ಧ ತಾಯಿಗೆ

ಮೊನ್ನೆ ಅಕ್ಕನ ಜೊತೆ ಮಾತಾಡ್ತಾ ಇದ್ದೆ, gtalk ನಲ್ಲಿ. ಅಕ್ಕ ಅಂದರೆ ನನ್ನ ದೊಡ್ಡಮ್ಮನ ಮಗಳು. ಆದರೆ ಅವಳು ನನ್ನ ಸ್ವಂತ ಅಕ್ಕನಂತೆಯೇ. ಅಕ್ಕ ತಂಗಿಯರು ಮಾತಾಡಲು ತೊಡಗಿದರೆ ಪ್ರಪಂಚದ ಅರಿವೇ ಇರುವುದಿಲ್ಲ ಅನ್ನುವುದಂತೂ ಸತ್ಯ; ಅವರ ಸುದ್ದಿಗೆ ಕೊನೆ ಎನ್ನುವುದೇ ಇಲ್ಲ. ಹೀಗೆಯೇ ಕಷ್ಟ ಸುಖ ಮಾತನಾಡುತ್ತಿರುವಾಗ ಅವಳ ಮಗಳು ಬಂದು 'ಅಮ್ಮಾ, ಕುಡಿಯಲ್ಲೇ ಕೊಡೇ' ಎಂದು ಹೇಳಿದ್ದು ನನಗೆ ಇಲ್ಲಿಯವರೆಗೆ ಕೇಳಿಸಿತ್ತು. 'ಒಂದೆರಡು ನಿಮಿಷಗಳಲ್ಲಿ ಬರುತ್ತೇನೆ ತಾಳು' ಎಂದು ಹೇಳಿ ಎದ್ದು ಹೋದಳು ಅಕ್ಕ. Horlicks ಕೊಟ್ಟಿರಬೇಕು ಬಹುಶಃ. ತಿರುಗಿ ಬರುವಾಗ 'ದಿಶಾ, ನೀನು ಕುಡಿದ ಲೋಟ ತೊಳೆದು ಇಡು, ನಿನ್ನ ಬಟ್ಟೆ ತೊಳೆದು ಹಾಕಿದ್ದೇನೆ ಒಣಗಿದೆಯಾ ನೋಡಿ ಮಡಿಸಿ ಇಡು ಮತ್ತು ನಿನ್ನ ರೂಮ್ ಕ್ಲೀನ್ ಮಾಡಿ ಆಡಲು ಹೋಗು' ಎಂದು ಹೇಳುತ್ತಾ ಬಂದಿದ್ದು ಕೇಳಿಸಿತು.

ಅವಳೂ ಕೆಲಸಕ್ಕೆ ಹೋಗಿ ಬರುವುದರಿಂದ ಸುಸ್ತಾಗಿರಬೇಕು ಅದಕ್ಕೆ ಮಗಳಿಗೆ ಕೆಲಸ ಹೇಳುತ್ತಿದ್ದಾಳೆ ಎಂದು ಅನಿಸಿದರೂ ಮತ್ತೆ ಮಾತಿಗೆ ತೊಡಗಿದ ತಕ್ಷಣ ನಾನು ಕೇಳಿದೆ, 'ಯಾಕೆ ಅನ್ನಕ್ಕಾ (ಅನುಪಮಾ ಅವಳ ಹೆಸರು) ದಿಶಾನ ಕೈಲಿ ಕೆಲಸ ಮಾಡಿಸುತ್ತಿದ್ದೀಯಾ, ನೀನೆ ಮಾಡಿದರೆ ಆಗದೇ? ಪಾಪ ಅವಳು'. ಅದಕ್ಕವಳು, 'ಅವಳೀಗೀಗ ಹನ್ನೆರಡು ವರ್ಷ. ನಿನಗೆ ಹನ್ನೆರಡು ವರ್ಷವಾಗಿದ್ದಾಗ ನಿನಗೆ ಅಡುಗೆಯನ್ನೂ ಮಾಡಲು ಬರುತ್ತಿತ್ತು ನೆನಪಿದೆಯಾ' ಎಂದಳು ಮತ್ತು ಮುಂದುವರಿಸಿದಳು 'ನೋಡು ನಿನ್ನ ಅಮ್ಮ ನಿನಗೆ ಎಲ್ಲ ಕೆಲಸಗಳನ್ನೂ ಕಲಿಸಿದ್ದಕ್ಕೆ ನಿನಗಿವತ್ತು ಜೀವನ ಸುಲಭ. ಅಮ್ಮಂದಿರು ಮಕ್ಕಳನ್ನು ಕೇವಲ ಮುದ್ದು ಮಾಡಿದರೆ ಸಾಲದು, ಮುಂದೆ ಅದರಿಂದ ಅವರಿಗೇ ಕಷ್ಟ. ಈಗ ನಾನು ಕಲಿಸಿದಷ್ಟೂ ಮುಂದೆ ಅವಳಿಗೇ ಲಾಭ. ಮುಂದೆಲ್ಲಾ ಜೀವನ ಯುದ್ಧದಂತೆಯೇ, the more you sweat in peace, the less you bleed in war… ಅದಕ್ಕಾಗಿ ಹೀಗೆ.’

ಹಾಗೆಯೇ short ಆಗಿ sweet ಆಗಿ ಒಂದು ನೀತಿ ಕಥೆಯನ್ನೂ ಹೇಳಿದಳು. ಹಾಗೆಯೇ ಸ್ವಲ್ಪ ಓದಿ ಬಿಡಿ.
ಒಬ್ಬ ಕಳ್ಳನನ್ನು ನ್ಯಾಯಾಲಯಕ್ಕೆ ತಂದು ಕಟಕಟೆಯಲ್ಲಿ ನಿಲ್ಲಿಸಿದ್ದರು,ಯಾವುದೋ ಒಂದು ದೊಡ್ಡ ಕಳ್ಳತನದ ಆಪಾದನೆಯಲ್ಲಿ. ವಿಚಾರಣೆಯ ನಂತರ ಅವನಿಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. Judge ಅವನ ಬಳಿ, 'ನೀನೇನಾದರೂ ಹೇಳುವುದಿದೆಯಾ?' ಎಂದು ಕೇಳಿದರು. ಆಗ ಆ ಕಳ್ಳ, 'ಮಾಹಾಸ್ವಾಮಿ, ನನಗೆ ಕೊಟ್ಟ ಎಂಟು ವರ್ಷಗಳ ಜೈಲು ಶಿಕ್ಷೆಯಲ್ಲಿ ನಾಲ್ಕು ವರ್ಷಗಳ ಶಿಕ್ಷೆಯನ್ನು ನನ್ನ ತಾಯಿಗೆ ಕೊಡಿ' ಎಂದನು. ಇಡೀ ನ್ಯಾಯಾಲಯ ಒಮ್ಮೆ ಸ್ತಬ್ಧವಾಯಿತು. Judge ಕೂಡ ಆಶ್ಚರ್ಯದಿಂದ ಕೇಳಿದರು, 'ಹೀಗೇಕೆ?' ಅದಕ್ಕವನು,'ಬಾಲ್ಯದಲ್ಲಿ ನನ್ನ ತಾಯಿ ನನ್ನನ್ನು ಸರಿಯಾಗಿ ಬೆಳೆಸಲಿಲ್ಲ. ನಾನು ಮೂರನೇ ತರಗತಿಯಲ್ಲಿದ್ದಾಗ ಪೆನ್ಸಿಲ್ ಕದ್ದೆ. ಅಪ್ಪ ಬೈದರೂ ಅಮ್ಮ ನನ್ನ ಪರವಹಿಸಿದಳು. ಒಂಭತ್ತನೇ ತರಗತಿಯಲ್ಲಿದ್ದಾಗ ಸೈಕಲ್ ಕದ್ದೆ. ಅಪ್ಪ ಶಿಕ್ಷೆ ಕೊಡಲು ಮುಂದಾದರೂ ಅಮ್ಮ ನನ್ನ ಪರವಾಗಿ ಮಾತನಾಡಿದಳು. ನಾನು ಅದರ ಲಾಭ ಪಡೆಯುತ್ತಾ ಹೋದೆ. ಅಂದು ಅಪ್ಪನಂತೆಯೇ ಅಮ್ಮನೂ ನನ್ನನ್ನು ಶಿಕ್ಷಿಸಲು ಮುಂದಾಗಿದ್ದರೆ ಇಂದು ನಾನು ಹೀಗಾಗುತ್ತಿರಲಿಲ್ಲ. ಆದ್ದರಿಂದ ನನ್ನ ಶಿಕ್ಷೆಯಲ್ಲಿ ಅರ್ಧ ಅವಳಿಗೇ ಸಲ್ಲಬೇಕು' ಅಂದನಂತೆ.

ಅಕ್ಕ ಹೇಳುತ್ತಿದ್ದ ಕಥೆ ಮುಗಿಯಿತು. ಮುಂದೆ ಏನೇನೋ ಮಾತನಾಡಿದೆವು. ಆದರೆ ಅಕ್ಕ ಹೇಳಿದ ಕಥೆ ಏಕೋ ಮನಸ್ಸಿಗೆ ನಾಟಿತ್ತು. ಆಗೆಯೇ ನನ್ನನ್ನು ಸ್ವಾವಲಾಂಬಿಯಾಗಿ ಬೆಳೆಸಿದ ಅಪ್ಪ, ಅಮ್ಮನ ನೆನಪೂ ಆಗದೇ ಇರಲಿಲ್ಲ. ನಾನು ಹಾಗೆಯೇ ಯೋಚಿಸುತ್ತಾ ಒಮ್ಮೆ ಭೂತ ಕಾಲಕ್ಕೆ ಹೋಗಿ ಬಂದೆ. ನಮ್ಮ ಪ್ರತಿಯೊಂದು ಕೆಲಸವನ್ನೂ ನಾವೇ ಮಾಡಿಕೊಳ್ಳಬೇಕು ಎನ್ನುತ್ತಿದ್ದರು ಅಪ್ಪ, ಅಮ್ಮ. ನನ್ನ ಮತ್ತು ನನ್ನ ತಮ್ಮನ college admission ಕೂಡ ನಾವೇ ಮಾಡಿಕೊಂಡ ನೆನಪು. ಆಗೆಲ್ಲಾ ಅಪ್ಪ, ಅಮ್ಮನ ಮೇಲೆ ಸಿಟ್ಟು ಬರುತ್ತಿದ್ದುದು ನಿಜ. ಆದರೆ ನಂತರದ ದಿನಗಳಲ್ಲಿ ಅವರೇಕೆ ಹಾಗೆ ಮಾಡಿದರು ಎಂಬುದು ಅರ್ಥವಾಗುತ್ತಾ ಹೋಯಿತು. ನಮಗೆ ಈಗಿರುವ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆಲ್ಲಾ ಕಾರಣ ಅಪ್ಪ, ಅಮ್ಮ ನಮ್ಮನ್ನು ಬೆಳೆಸಿದ ರೀತಿ. ಅಕ್ಕನಿಗೆ ನನಗಿಂತ ಮೊದಲೇ ಈ ವಿಷಯಗಳೆಲ್ಲಾ ಅರ್ಥವಾಗಿದ್ದಿರಬೇಕು, ಅದಕ್ಕೇ ಈಗ ತನ್ನ ಜೀವನದಲ್ಲೂ ಆಚರಣೆಗೆ ತಂದಿದ್ದಾಳೆ, ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುತ್ತಿದ್ದಾಳೆ.

ಮುದುಕಿಯ ತುಪ್ಪ … (ಉತ್ತರ ಕನ್ನಡದ ಗಾದೆ – 119)

ಮುದುಕಿಯ ತುಪ್ಪ ಮೂಸಿ ನೋಡಿಯೇ ಖರ್ಚಾಗಿತ್ತು.

ಮುದುಕಿಯ ಬಳಿ ಇರುವುದೇ ಸ್ವಲ್ಪ ತುಪ್ಪ. ಅದು ಮೂಸಿ ನೋಡಿಯೇ ಖರ್ಚಾಗುತ್ತದೆ. (ನಿಜವಾಗಿ ಮೂಸಿ ನೋಡಿದರೆ ಖರ್ಚೇನೂ ಆಗುವುದಿಲ್ಲ. ಆದರೂ ಹಾಗೆ ಹೇಳುತ್ತಾರೆ.)

ಸ್ವಲ್ಪವೇ ಇರುವ ವಸ್ತು ಪರೀಕ್ಷೆಗೊಳಪಟ್ಟೇ ಖರ್ಚಾಗುತ್ತದೆ ಎಂಬ ಸಂದರ್ಭವಿದ್ದಾಗ ಈ ಮಾತನ್ನು ಉಪಯೋಗಿಸಬಹುದು. ಹೊಸ ತಿಂಡಿ ಮಾಡುವಾಗ ಸ್ವಲ್ಪವೇ ಮಾಡುತ್ತಿದ್ದು, ಅದು ಸರಿಯಾಗಿದೆಯಾ ಎಂದು ರುಚಿ ನೋಡಿಯೇ ಅರ್ಧ ಮುಗಿದಿರುತ್ತದೆ! ಅಂತ ಸಂಧರ್ಭದಲ್ಲಿ ಈ ಮಾತನ್ನು ಬಳಸಬಹುದು.

December 28, 2007

What did I like the most in Tokyo?

Yesterday I was talking to my friend over phone. She asked me ‘did you like Japan?’ ‘Yes’ I told her. The next question she shot was totally unexpected for me. ‘Which thing in Japan did you like the most?’ As you know, that which is in mind comes out unknowingly. That is what happed with me yesterday. Suddenly I replied ‘garbage management’. She exclaimed ‘what?!!!’ Of course I like many other qualities of Japan and Japanese. But I don’t know somehow I like their garbage management a lot…. may be because I used to think a lot on the matter that even educated people littering the streets and about their mismanagement of garbage. Just for your information I am briefing the system of garbage management here in Tokyo. Hope you find it interesting just as I did. Every house will have a paper pasted on the wall. It reads something like this…

Could you please separate the garbage by the rules?

1. Plastic wrapping materials (Empty bottles of sauces, detergents, shampoos etc, cups of instant noodles, yogurt, jelly etc, shopping bag etc.)
Collected every Monday
Please use a designated bag for ‘plastic wrapping materials’.*
Please empty the contents and wash inside.

2. Empty bottles and cans
Collected every Friday
Please wash the inside and put them in separate bags, either designated bag or transparent/ semi transparent bag.
Papers and cloth- collected every Friday

3. Newspapers, magazines, cardboard boxes, paper packages, clothes
Collected every Friday
Pleas tie up as per each item.
Please avoid placing them on a rainy day.

4. Burnable garbage (Kitchen garbage- food scrap and leftovers, leather goods, synthetic leather goods, video tapes, CDs, cassette tapes, paper diapers, refrigerated materials etc.)
Collected every Tuesday, Thursday and Saturday
Please use designated green bag for ‘burnable’.
For kitchen garbage, please drain water.
For oil, please soak into paper or cloth or harden.

5. Non-burnable garbage (Pans, kettles, glass wares, China wares, umbrellas, knives, mirrors, pots, cosmetic bottles etc.)
Collected every Wednesday
Please use the designated bag for ‘non burnable’.
For broken glasses and knives, please wrap with a paper and indicate danger on the bag.

6. Harmful garbage (Dry batteries, fluorescent lamps, mercury thermometers)
Collected every Wednesday
Please do not put harmful garbage together with non burnable garbage.
Please wrap fluorescent lamps with paper and indicate danger on the bag.
Please put dry batteries and thermometers into a transparent bag.

7. Large sized garbage- Please call ……numbers for collection.

8. Household electrical appliances- They are not collectible. If you replace a current appliance with a new one, the purchase shop can take it with some charges.

Please keep the garbage at the garbage dump before 8 AM on the collection days.

Believe me; people separate the garbage according to the rules. Even we do! This may look tedious for the first time. But my experience says, with a little patience we can get adjusted to this system. I am sure all the developed countries must be following their own systematic way of garbage management. When I was in India, though I never used to throw anything on the road, I had never imagined that garbage can be managed so nicely, wisely to keep the surroundings clean.

* Designated garbage disposal bags are available in the market.

ಹೋದರೆ ಒಂದು ಕಲ್ಲು… (ಉತ್ತರ ಕನ್ನಡದ ಗಾದೆ – 118)

ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು.

ಒಂದು ಕಲ್ಲನ್ನು ಎಸೆಯುವುದು. ಒಂದು ವೇಳೆ ಗುರಿ ತಾಗಿದರೆ, ಅದೃಷ್ಟವಿದ್ದರೆ ಮೂರು ಹಣ್ಣು ಬಿದ್ದರೂ ಬೀಳಬಹುದು. ಇಲ್ಲವಾದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ, ಒಂದು ಕಲ್ಲು ತಾನೇ.

ಯಾವುದೋ ಒಂದು ಕೆಲಸಕ್ಕಾಗಿ ಅಥವಾ ವಸ್ತುವಿಗಾಗಿ ಇನ್ನೊಬ್ಬರನ್ನು ಕೇಳುವ ಅವಕಾಶವಿದ್ದರೆ ಕೇಳುವುದು. ಅದು ಒಂದು ಪ್ರಯತ್ನವಷ್ಟೇ. ಸಿಕ್ಕಿದರೆ ಅದೇ ಲಾಭ; ಇಲ್ಲವಾದಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಸಂದರ್ಭದಲ್ಲಿ ಉಪಯೋಗಿಸಿ.

December 27, 2007

Two monks and a beautiful woman

Two monks were wandering through the forest when they came upon a beautiful courtesan standing on the banks of a flooded stream. Because they had sworn a vow of chastity, the younger monk ignored the woman and crossed the stream quickly.
Realising that the beautiful woman could not safely cross the stream by herself, the older monk gathered her up in his arms and carried her across the stream. Once they had reached the other side, he gently returned her to the ground. She smiled her thanks, and the two monks continued on their way.

The young monk quietly seethed as he replayed the incident again and again in his own mind. How could he? The young monk thought angrily to himself. Does our vow of chastity mean nothing to him? The more the young monk thought about what he had seen, the angrier he became, and the argument in his head grew louder: Why, had I done such a thing I would have been thrown out of our order. This is disgusting. I may not have been a monk as long as he has, but I know right from wrong.

He looked over at the older monk to see if he at least was showing remorse for what he had done, but the man seemed as serene and peaceful as ever. Finally, the young monk could stand it no longer. ‘How could you do that?’ he demanded. ‘How could you even look at that woman, let alone pick her up and carry her? Do you remember your vow of chastity?’

The older monk looked surprised, and then smiled with great kindness in his eyes.
‘I am no longer carrying her, brother. Are you?'


The story has made me think about all the unnecessary things I am carrying with me. How about you?

Taken from- Paul McKenna (2004), Change Your Life in 7 Days, Bantham Press, London, pp. 51-2.

ಮುರುಕು ಮಂಚ … (ಉತ್ತರ ಕನ್ನಡದ ಗಾದೆ – 117)

ಮುರುಕು ಮಂಚ ಹೊತ್ತು ದನ ಕಾಯುತ್ತೀಯಾ ಅಥವಾ ಒಡಕು ಗಡಿಗೆಯಲ್ಲಿ ನೀರು ತರುತ್ತೀಯಾ?

ಒಂದೇ ಮುರುಕು ಮಂಚವನ್ನು ಹೊತ್ತುಕೊಂಡು ದನಗಳನ್ನು (ಹಸುಗಳು) ಕಾಯಬೇಕು. ದನಗಳು ಎಲ್ಲಿ ಓಡಿದರೂ ಆ ಮಂಚವನ್ನು ಹೊತ್ತುಕೊಂಡೇ ಓಡಬೇಕು. ಇಲ್ಲವಾದರೆ ಒಡಕು ಗಡಿಗೆಯಲ್ಲಿ ನೀರನ್ನು ಹೊತ್ತು ತರಬೇಕು. ತರುವಷ್ಟರಲ್ಲಿ ಅರ್ಧ ನೀರು ಸೋರಿ ಹೋಗುತ್ತದೆ. ಪುನಃ ತರಬೇಕು.

ಯಾವ ಕೆಲಸವನ್ನು ಆರಿಸಿಕೊಂಡರೂ ಕಷ್ಟ ಇದ್ದಿದ್ದೇ. ಕಷ್ಟಕರವಾದ ಕೆಲಸಗಳ ನಡುವೆ ಆಯ್ಕೆ ಬಂದಾಗ ಈ ಮಾತನ್ನು ನಿಮಗೆ ನೀವೇ ಹೇಳಿಕೊಳ್ಳಬಹುದು. ಮುರುಕು ಮಂಚವನ್ನು ಒಂದು ಕಡೆ ಇಟ್ಟು ದನ ಕಾಯ್ದರೆ ಆಗದೇ, ಹೊತ್ತುಕೊಂಡೇ ಏಕೆ ಕಾಯಬೇಕು ಎಂದು ಕೇಳಬೇಡಿ. ನನಗೂ ಗೊತ್ತಿಲ್ಲ. ಕಷ್ಟಕರವಾದ ಕೆಲಸ ಎಂದು ಹೇಳಲು ಹಾಗೆ ಬಳಸಿದ್ದಾರೆ ಎಂದು ಅನಿಸುತ್ತದೆ.

December 26, 2007

ಹೆಣ ಸುಡುವ ಬೆಂಕಿಯಲ್ಲಿ … (ಉತ್ತರ ಕನ್ನಡದ ಗಾದೆ – 115 ಮತ್ತು 116)

ಹೆಣ ಸುಡುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವವನು.

ಸುಮ್ಮನೇ ಏಕೆ ಒಂದು ಕಡ್ಡಿ ಗೀರಿ ಖರ್ಚು ಮಾಡಲಿ ಎಂದು ಅವನು ಹೆಣ ಸುಡುತ್ತಿರುವ ಬೆಂಕಿಯಲ್ಲೇ ಬೀಡಿಯನ್ನು ಹೊತ್ತಿಸಿಕೊಳ್ಳುತ್ತಾನೆ. ಹೆಣ ಸುಡುತ್ತಿರುವ ಬೆಂಕಿ ಎಂಬ ಭಾವನೆಯೂ ಕೂಡ ಅವನನ್ನು ಬಾಧಿಸುವುದಿಲ್ಲ. ತಮ್ಮ ಜಿಪುಣತನದಲ್ಲಿ ಭಾವನೆಗಳಿಗೂ ಕೂಡ ಬೆಲೆ ಕೊಡದವರು ಇವರು. ಅಂತಹ ಜಿಪುಣರನ್ನು ಕುರಿತು ಈ ಗಾದೆಯನ್ನು ಹೇಳಿ.

ಇನ್ನೂ ಸ್ವಲ್ಪ ಕಡಿಮೆ ಜಿಪುಣತನವನ್ನು ತೋರಿಸುವ ಕೆಲವರಿರುತ್ತಾರೆ. ಅಂಥವರನ್ನು ಕುರಿತು ಎಂಜಲು ಕೈಯ್ಯಲ್ಲಿ ಕಾಗೆಯನ್ನೂ ಓಡಿಸದವರು ಎಂದು ಹೇಳಬಹುದು. ಏಕೆಂದರೆ ಕಾಗೆಗೆ ಎಲ್ಲಿಯಾದರೂ ಒಂದೆರಡು ಅಗುಳು ಅನ್ನ ಸಿಕ್ಕಿಬಿಟ್ಟೀತೆಂಬ ಜಿಪುಣತನದಿಂದ.

December 25, 2007

ಹೊಟ್ಟೆಗಿಲ್ಲದ ಶಾನುಭೋಗ … (ಉತ್ತರ ಕನ್ನಡದ ಗಾದೆ – 113 ಮತ್ತು 114)

ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಮಗುಚಿದ್ದನು.

ಆ ಶಾನುಭೋಗನಿಗೆ ಹೊಟ್ಟೆಗಿಲ್ಲ. ಅದಕ್ಕಾಗಿ ಅವನು ಹಳೆಯ ಕಡತಗಳನ್ನೆಲ್ಲಾ ತಿರುವಿ ಹಾಕುತ್ತಿದ್ದಾನೆ, ಏಕೆಂದರೆ ಯಾವುದಾದರೂ ಒಬ್ಬ ವ್ಯಕ್ತಿಯಿಂದ ಏನಾದರೂ ಬರಬೇಕಿದ್ದ ಬಾಕಿ ಸಂದಾಯ ಒಂದು ವೇಳೆ ತಪ್ಪಿ ಉಳಿದುಬಿಟ್ಟಿದ್ದರೆ ಅವನನ್ನು ಬೆದರಿಸಿ ಕೊಡಬೇಕಾಗಿರುವ ಬಾಕಿಯ ಜೊತೆಗೆ ತಾನೂ ಸ್ವಲ್ಪ ಲಂಚ ತೆಗೆದುಕೊಳ್ಳಬಹುದು ಎಂಬ ಆಸೆಯಿಂದ.

ಮಾಡಲು ಏನೂ ಕೆಲಸವಿಲ್ಲದಿದ್ದಾಗ ಇನ್ನೊಬ್ಬನಿಂದ ಏನಾದರೂ ಕಿತ್ತುಕೊಳ್ಳಲು (ಅಥವಾ ನಿಜವಾಗಿಯೂ ಬರಬೇಕಾದ್ದನ್ನು ಪಡೆದುಕೊಳ್ಳಲು) ಯೋಜನೆ ಹಾಕುವ ಸಲುವಾಗಿ ಇದ್ದ ಬಿದ್ದ ಕಾಗದ, ರಸೀತಿಗಳನ್ನೆಲ್ಲಾ ಹರಡಿಕೊಂಡು ಹುಡುಕುವ ಅಭ್ಯಾಸ ಕೆಲವರಿಗಿರುತ್ತದೆ. ಅಂಥವರನ್ನು ಕುರಿತಾದ ಮಾತು ಇದು.

ಇನ್ನೂ ಒಂದು ಬಗೆಯ ಜನರಿರುತ್ತಾರೆ. ಅವರಿಗೆ ಮಾಡಲು ಏನೂ ಕೆಲಸವಿಲ್ಲದಿದ್ದಾಗ ಹೊಸ ಕೆಲಸ ಹುಡುಕಿಕೊಂಡು ಮಾಡಲು ಹೋಗಿ ಅನಾಹುತವನ್ನೇ ಮಾಡಿ ಬಿಟ್ಟಿರುತ್ತಾರೆ.ಅಂಥವರ ಬಗ್ಗೆ ಹೇಳುವ ಮಾತೆಂದರೆ- ಉದ್ಯೋಗ ಇಲ್ಲದ ಆಚಾರಿ ಮಗನ ಹಿಂಭಾಗವನ್ನು ಕೆತ್ತಿ ಮೂರು ಮಣೆ ಮಾಡಿದ್ದನಂತೆ.

December 24, 2007

ಎಣ್ಣೆ ಬರುವ ಹೊತ್ತಿಗೆ … (ಉತ್ತರ ಕನ್ನಡದ ಗಾದೆ – 112)

ಎಣ್ಣೆ ಬರುವ ಹೊತ್ತಿಗೆ ಕಣ್ಣು ಮುಚ್ಚಿಕೊಂಡಿದ್ದನು.

ಎಣ್ಣೆ ಗಾಣದಲ್ಲಿ ರಾತ್ರಿ ಕೆಲಸ ಮಾಡುತ್ತಿರುವಾಗ, ಇಡೀ ರಾತ್ರಿ ಕೆಲಸ ಮಾಡಿ ಸುಸ್ತಾಗಿರುತ್ತದೆ, ತಾಳ್ಮೆ ಹೊರಟು ಹೋಗಿರುತ್ತದೆ.
ಕಣ್ಣ ತುಂಬಾ ನಿದ್ರೆಯೂ ಬಂದಿರುತ್ತದೆ. ಇನ್ನೇನು ಗಾಣದಿಂದ ಎಣ್ಣೆ ಬೀಳಬೇಕೆನ್ನುವಷ್ಟರಲ್ಲಿ ಒಂದು ಕ್ಷಣ ಕಣ್ಣು ಮುಚ್ಚಿಹೋಗುತ್ತದೆ.
ಎಣ್ಣೆ ಪಾತ್ರೆಯಲ್ಲಿ ಬೀಳದೇ ಇನ್ನೆಲ್ಲೋ ಬಿದ್ದು ಹೋಗುತ್ತದೆ. ಎಷ್ಟೋ ಹೊತ್ತಿನಿಂದ ಪಟ್ಟ ಶ್ರಮ ವ್ಯರ್ಥವಾಗುತ್ತದೆ.

ಪ್ರತಿಫಲದ ನಿರೀಕ್ಷೆಯಲ್ಲಿ ಯಾವುದೋ ಕೆಲಸವನ್ನು ಬಹಳ ಶ್ರಮವಹಿಸಿ ಮಾಡಿ ಇನ್ನೇನು ಪ್ರತಿಫಲ ಸಿಗುವುದರಲ್ಲಿದೆ ಎನ್ನುವಾಗ ತಾಳ್ಮೆ ಕಳೆದುಕೊಂಡು ಆ ಕೆಲಸವನ್ನು ಬಿಟ್ಟು ಬಿಡುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.

December 23, 2007

ಅಕ್ಕ ತಂಗಿಯರು … (ಉತ್ತರ ಕನ್ನಡದ ಗಾದೆ – 111)

ಅಕ್ಕ ತಂಗಿಯರು ಕಾಶಿಗೆ ಹೋದಂತೆ.

ಇದು ಕೇಳಲು ಗಾದೆ ಮಾತಿನಂತೆ ಅನಿಸದಿದ್ದರೂ ಇದನ್ನು ಗಾದೆ ಮಾತಿನಂತೆ ಉಪಯೋಗಿಸುತ್ತಾರೆ. ನೂರಾರು ವರ್ಷಗಳ ಹಿಂದೆ ಅಕ್ಕ ತಂಗಿಯರು ಕಾಶಿಗೆ ಹೋಗಿದ್ದರಂತೆ. ವಾಹನಗಳು ಇರದಿದ್ದ ಕಾಲ. ನಡೆದುಕೊಂಡೇ ಹೋಗಿ ನಡೆದುಕೊಂಡೇ ಬಂದರು. ಹೋಗುವಾಗ, ಬರುವಾಗ ಸುದ್ದಿ ಹೇಳುತ್ತಲೇ ಇದ್ದಿರಬೇಕು, ಸುಮ್ಮನಂತೂ ಇದ್ದಿರಲಿಕ್ಕಿಲ್ಲ. ಹಿಂದಿರುಗಿ ಬಂದ ಮೇಲೆ ತಂಗಿಯ ಮನೆ ಮೊದಲು ಸಿಕ್ಕಿತು. ರಾತ್ರಿಯಾಗಿರುವುದರಿಂದ ಅಕ್ಕ ತಂಗಿಯ ಮನೆಯಲ್ಲೇ ಉಳಿದಳು. ರಾತ್ರಿಯಿಡೀ ಕುಳಿತು ಇಬ್ಬರೂ ಸುದ್ದಿ ಹೇಳಿದರು. ಬೆಳಗಾದ ತಕ್ಷಣ ಅಕ್ಕ ತನ್ನ ಮನೆಗೆ ಹೊರಟಳು. ಆಗ ತಂಗಿ, 'ಅಕ್ಕಾ, ಒಂದೆರಡು ದಿನ ಪುರಸೊತ್ತು ಮಾಡಿಕೊಂಡು ನಮ್ಮನೆಗೆ ಉಳಿಯಲು ಬಾ. ನಿನ್ನ ಹತ್ತಿರ ತುಂಬಾ ಸುದ್ದಿ ಹೇಳುವುದಿದೆ' ಎಂದಳಂತೆ!

ನಾವೆಲ್ಲಾ cousins ಒಟ್ಟಿಗೆ ಸೇರಿದಾಗ ರಾತ್ರಿಯೆಲ್ಲಾ ಕುಳಿತು ಸುದ್ದಿ ಹೇಳುವುದುಂಟು. ಆಗ ನೋಡಿದವರು ಯಾರಾದರೂ, 'ಮುಗದ್ದಿಲ್ಯನ್ರೇ ಸುದ್ದಿ ಇನ್ನೂವಾ, ಅಕ್ಕ ತಂಗಿ ಕಾಶಿಗ್ ಹೋಗಿದಿದ್ವಡ' ಎಂದು ನಗುವುದುಂಟು.

December 21, 2007

ಮು0ಡೆಗೆ ಮು0ಡೆಯನ್ನು … (ಉತ್ತರ ಕನ್ನಡದ ಗಾದೆ – 110)

ಮು0ಡೆಗೆ ಮು0ಡೆಯನ್ನು ಕಂಡರೆ ಉಂಡಷ್ಟೇ ಸಂತೋಷ.

ಮು0ಡೆ ಎಂದರೆ ವಿಧವೆ. ಅವಳಿಗೆ ಇನ್ನೊಬ್ಬಳು ವಿಧವೆಯನ್ನು ಕಂಡರೆ ತುಂಬಾ ಸಂತೋಷವಾಗುತ್ತದೆ; ಏಕೆಂದರೆ ತನ್ನ ಕಷ್ಟಕ್ಕೆ ತಾನೊಬ್ಬಳೇ ಅಲ್ಲ, ತನ್ನಂತೆಯೇ ಇನ್ನೊಬ್ಬಳೂ ಇದ್ದಾಳೆ ಎನ್ನುವ ಮಾನಸಿಕ ಸಮಾಧಾನ ಸಿಗುವುದರಿಂದ.

ತನ್ನಂತೆಯೇ ಸಮಸ್ಯೆಯಲ್ಲಿ ಸಿಕ್ಕಿಕೊಂಡಿರುವ ಇನ್ನೊಬ್ಬನನ್ನು ನೋಡಿ ಸಮಾಧಾನ ಮಾಡಿಕೊಳ್ಳುವವರನ್ನು, ಸಂತೋಷಪಡುವವರನ್ನು ನೋಡಿ ಈ ಗಾದೆಯನ್ನು ಮಾಡಲಾಗಿದೆ. ಪರೀಕ್ಷೆಯಲ್ಲಿ ನಾವು ಬರೆಯದ ಉತ್ತರವನ್ನು ನಮ್ಮ ಸ್ನೇಹಿತರೂ ಬರೆಯದಿದ್ದಾಗ ಒಂಥರಾ ಸಮಾಧಾನವಾಗುತ್ತದೆಯಲ್ಲಾ ಅದಿರಬಹುದು ಬಹುಶಃ!

December 20, 2007

ಗಂಡನ ಮೊದಲ ಕರ್ತವ್ಯ

ಇದೂ ಕೂಡ ಮರೆಯಲಾರದ್ದು...
ನನ್ನ ಧರ್ಮಪತಿ (ಹೆಂಡತಿ ಧರ್ಮಪತ್ನಿಯಾದ ಮೇಲೆ ಗಂಡ...) ರಾಜೀವ ಅವರ ಸಹೋದ್ಯೋಗಿಗಳೆಲ್ಲಾ ಹೇಳುವಂತೆ ideal husband. ಆ ಮಾತನ್ನು ನಾನೂ ಒಪ್ಪಲೇ ಬೇಕು. ಅವರಷ್ಟು ಸಹನೆ ಇರುವವರನ್ನು ಇನ್ನೂ ತನಕ ನಾನು ನೋಡಿಲ್ಲ. ನಾನು ಕೆಲವೊಮ್ಮೆ ಜಗಳವಾಡಿ ಅವರಿಗೆ ಹೊಡೆದರೂ, ಉಗುರಿನಿಂದ ಪರಚಿದರೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ, ನಾನು ಅವರಿಗಿಂತ ಚಿಕ್ಕವಳು ಎಂಬ ಒಂದೇ ಕಾರಣಕ್ಕಾಗಿ. ಸಿಟ್ಟು ಇಳಿದ ಮೇಲೆ ನಾನು, 'ನೀವೇಕೆ ನನ್ನನ್ನು ತಡೆಯಲಿಲ್ಲ' ಎಂದು ಕೇಳಿದರೆ, 'ಹೊಡೆಯುವಾಗ, ಪರಚುವಾಗ ನಿನಗೆ ಸಿಗುವ ಖುಷಿಯನ್ನು ನಾನು ತಡೆದಂತೆ ಆಗುತ್ತದೆ. ಅದಕ್ಕಾಗಿ ತಡೆಯಲಿಲ್ಲ' ಎನ್ನುತ್ತಾರೆ!

ಇದೇನು ಗಂಡನನ್ನು ಇಷ್ಟೊಂದು ಹೊಗಳುತ್ತಿದ್ದಾಳೆ ಎಂದುಕೊಳ್ಳದೇ ಮುಂದೆ ಓದಿ. ನನಗೆ ಇಷ್ಟಕ್ಕೇ ಸಮಾಧಾನವೆಲ್ಲಿ? ಒಮ್ಮೆ ಹೇಳುತ್ತಿದ್ದೆ, 'ನೋಡಿ ಉಳಿದವರೆಲ್ಲಾ ತಮ್ಮ ಹೆಂಡತಿಯರಿಗೆ ಹೊರಗಡೆಗೆ ಹೋಗಿ ಮಾಡಬೇಕಾದಂತ ಕೆಲಸಗಳನ್ನೆಲ್ಲಾ ಮಾಡಿಕೊಡುತ್ತಾರೆ, ನೀನೆ ಹೋಗಿ ನೋಡು, ಕಲಿತುಕೋ, ನೀನೆ try ಮಾಡು, explore ಮಾಡು ಎಂದೆಲ್ಲಾ ಹೇಳುವುದಿಲ್ಲ. ನೀವು ಮಾತ್ರ ನನ್ನನ್ನೇ ದೂಡುತ್ತೀರಿ. so very unkind of you' ಎಂದು.

ಆಗ ಅವರು ಹೇಳಿದ್ದರು,' ಅದು ಹಾಗಲ್ಲ, ಎಲ್ಲವನ್ನೂ ನೀನೆ ನಿಭಾಯಿಸುವಷ್ಟರ ಮಟ್ಟಿಗೆ ನೀನು ಸಶಕ್ತಳಿರಬೇಕು, ಎಲ್ಲವನ್ನೂ ಕಲಿತಿರಬೇಕು....ಹೆಂಡತಿಯನ್ನು ವೈಧವ್ಯಕ್ಕೆ ಸಿದ್ಧವಾಗಿಡುವುದೇ ಗಂಡನ ಪ್ರಪ್ರಥಮ ಕರ್ತವ್ಯ' ಮುಂದೆ ನನಗೆ ಮಾತಾಡಲೂ ಆಗಲಿಲ್ಲ. ಗಂಟಲು ಕಟ್ಟಿತ್ತು... ಮನಸ್ಸಿಗೆ ಹೌದೆನಿಸಿದರೂ ಹೃದಯ ಇನ್ನೊ ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಯೋಚಿಸಿದರೂ ಅನಿಸುತ್ತದೆ, ಅವರು ಹೇಳುವುದು ನಿಜ. ಆದರೆ ನನ್ನ ಯೋಚನೆಯೇ ಬೇರೆ. ಸಾವು ಬರುವಾಗ ಇಬ್ಬರಿಗೂ ಒಟ್ಟಿಗೆ ಬರಲಿ. ಇಲ್ಲವಾದರೆ ಅವರಿಗೆ ಮೊದಲು ಬರಲಿ. ಅವರಿಲ್ಲದೆ ನಾನು ಹೇಗೋ ಬದುಕಿಬಿಡಬಲ್ಲೆ, ಅವರ ನೆನಪಿನಲ್ಲೇ. ಆದರೆ ನಾನು ಇಲ್ಲವಾದರೆ ಅವರನ್ನು ಗಮನಿಸಲೂ ಯಾರೂ ಇರುವುದಿಲ್ಲ, ಅವರಿಗೆ ಅಂತ ಪರಿಸ್ಥಿತಿ ಬೇಡ.

ರಾಜೀವನಿಗೆ ವಿಶೇಷ ಸೂಚನೆ: ಹೋಗಳಿದ್ದೇನೆ, ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೇನೆಂದು ಅಳಿದುಳಿದ ಕೆಲಸಗಳಿಗೂ ನನ್ನನ್ನೇ ದೂಡುವಂತಿಲ್ಲ, ನಾನು ಮಾಡುವುದಿಲ್ಲ ಅಷ್ಟೇ! :)

ಹೆಂಡತಿ ಸತ್ತ ದುಃಖ… (ಉತ್ತರ ಕನ್ನಡದ ಗಾದೆ – 109)

ಹೆಂಡತಿ ಸತ್ತ ದುಃಖ, ಮೊಣಕೈ ಗಂಟಿನ ನೋವು ಬಹಳ ಕಾಲ ಇರುವುದಿಲ್ಲ.

ಮೊಣಕೈ ಗಂಟಿನ ತುದಿಗೆ ಏನಾದರೂ ತಾಗಿದಾಗ ಗಮನಿಸಿದ್ದೀರಾ? ಕರೆಂಟು ಹೊಡೆದಂತಾಗುತ್ತದೆ ಮತ್ತು ಒಂದು ಕ್ಷಣ ಜೀವವೇ ಹೋದಂತಾಗುತ್ತದೆ. ಸ್ವಲ್ಪವೇ ಹೊತ್ತಿನ ನಂತರ ಗಮನಿಸಿದರೆ ನೋವು ಮಾಯವಾಗಿರುತ್ತದೆ. ಅದರ ಬದಲು ಬೇರೆ ಅಂಗಗಳಿಗೆ ಏನಾದರೂ ತಾಗಿದರೆ ನೋವು ಅಷ್ಟು ಬೇಗ ಮಾಯವಾಗುವುದಿಲ್ಲ.

ಅಂತೆಯೇ ಹೆಂಡತಿ ಸತ್ತಾಗ ಗಂಡನಿಗೆ ಒಮ್ಮೆ ತುಂಬಾ ನೋವಾಗುತ್ತದೆ. ಜೀವವೇ ಹೋದಂತೆನಿಸುತ್ತದೆ. ಆದರೆ ಅಷ್ಟೇ ಬೇಗ ಆ ದುಃಖ ಮಾಯವಾಗಿಬಿಡುತ್ತದೆ. ಹೆಂಡತಿ ಸತ್ತಾಗ ಇನ್ನಿಲ್ಲದಂತೆ ದುಃಖಿಸಿ ನಂತರ ಎರಡೇ ತಿಂಗಳಲ್ಲಿ ಮರುಮದುವೆಯಾಗುವವರನ್ನು ನೋಡಿದಾಗ ಈ ಮಾತನ್ನು ಹೇಳುತ್ತಾರೆ.

December 19, 2007

ತಾನು ಮಾಡುವ … (ಉತ್ತರ ಕನ್ನಡದ ಗಾದೆ – 108)

ತಾನು ಮಾಡುವ ಭಾಗ್ಯಕ್ಕೆ ನಡು ಕಾನಿಗೆ ಹೋಗಿದ್ದನು.

ಕಾನು ಎಂದರೆ ಕಾಡು. ನಡು ಕಾನು ಎಂದರೆ ಕಾಡಿನ ನಡುವೆ ಅಥವಾ ಕಾಡಿನ ಮಧ್ಯ ಭಾಗ ಮತ್ತು 'ಮಾಡು' ಎನ್ನುವುದನ್ನು ಪ್ರಾತರ್ವಿಧಿ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ವಿವರಿಸಲು ಮುಜುಗರ ಎನಿಸುತ್ತಿರುವುದರಿಂದ ಈ ಗಾದೆಯನ್ನು ನಿಮ್ಮ ಕಲ್ಪನೆಗೆ ಬಿಡುತ್ತಿದ್ದೇನೆ.

ನಾನು ಊಟಕ್ಕೆ ದೊಡ್ಡ plate ಬೇಕು ಎಂದು ಕಿರಿಕಿರಿ ಮಾಡಿದಾಗಲೆಲ್ಲಾ ಅಮ್ಮನಿಂದ ಇದನ್ನು ತಪ್ಪದೇ ಹೇಳಿಸಿಕೊಳ್ಳುತ್ತಿದ್ದೆ. 'ತಿನ್ನುವುದು ಕೋಳಿ ಕೆದರಿದ ಹಾಗಾದರೂ plate ಮಾತ್ರ ದೊಡ್ಡದು ಬೇಕು ನೋಡು ನಿನಗೆ. ತಾನು ಮಾಡುವ ಭಾಗ್ಯಕ್ಕೆ......'ಎಂದು.

December 18, 2007

ಬಾಗಿಲು ಹಾಕಿದರೆ … (ಉತ್ತರ ಕನ್ನಡದ ಗಾದೆ – 107)

ಬಾಗಿಲು ಹಾಕಿದರೆ ಒಂದೇ ದೂರು, ಬಾಗಿಲು ತೆಗೆದರೆ ನಾ ನಾ ದೂರು.

ಯಾರಾದರೂ ಬಂದು ಬಾಗಿಲು ಬಡಿದು ಒಳಗೆ ಬರಲಾ ಎಂದು ಕೇಳಿದಾಗ, ಬೇಡ ಎಂದು ಬಾಗಿಲು ಹಾಕಿಬಿಟ್ಟರೆ ನಿಮ್ಮ ಮೇಲೆ ಬರುವ ದೂರು ಒಂದೇ- ಬಾಗಿಲು ಹಾಕಿಬಿಟ್ಟ ಎಂದು. ಅದೇ ಬಾಗಿಲು ತೆಗೆದು ಒಳಗೆ ಬರಲು ಅನುಮತಿ ಕೊಟ್ಟರೆ, ಜೊತೆಯಲ್ಲಿರುತ್ತಾನೆ. ನಂತರ ನಿಮ್ಮ ಬಗ್ಗೆ ಹಲವಾರು ದೂರುಗಳನ್ನು ಹೇಳತೊಡಗುತ್ತಾನೆ.

ಯಾರಾದರೂ ನಿಮ್ಮ ಬಳಿ ಸಹಾಯ ಕೇಳಿದಾಗ, 'ಸಾಧ್ಯವಿಲ್ಲ' ಎಂದು ಹೇಳಿದರೆ ಒಂದೇ ದೂರನ್ನು ಕೇಳಿಸಿಕೊಳ್ಳುತ್ತೀರಿ. ಆದರೆ ಸಹಾಯ ಮಾಡುತ್ತಾ ಹೋದರೆ ಅವನ ನಿರೀಕ್ಷೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಮಾಡಿದ ಸಹಾಯದಲ್ಲಿ ತಪ್ಪನ್ನು ಹುಡುಕಿ ಹಲವಾರು ದೂರುಗಳನ್ನು ಹೇಳತೊಡಗುತ್ತಾನೆ ಎಂಬ ಸಂದರ್ಭದಲ್ಲಿ ಇದರ ಬಳಕೆಯನ್ನು ಕಾಣಬಹುದು.

December 17, 2007

Creativity

Does creativity have a limit?... Have you ever seen a cat carrying its kitten?... Two unrelated questions…. 'ಬೆಟ್ಟದ ನೆಲ್ಲಿಕಾಯಿ, ಸಮುದ್ರದ ಉಪ್ಪು...ಎತ್ತಣದಿಂದ ಎತ್ತಣ ಸಂಬಂಧವಯ್ಯಾ' ಎಂದು ಕೇಳಿದಂತಿದೆಯಾ?
Look at the pictures above! This is an advertisement of a parcel service here in Tokyo. For their service, they have taken a cat carrying a kitten as logo. You would understand this better if you had ever seen a cat carrying its kitten. It takes the kitten to the other place so gently by holding the kitten’s skin over the neck without causing any harm. So these parcel service people say that they carry their customers’ goods as gently as a cat carries its kitten. Hats off to the designer of this logo!! Now do you agree with me that creativity does not have a limit?

ಹೆಳೆ ಇಲ್ಲದೇ … (ಉತ್ತರ ಕನ್ನಡದ ಗಾದೆ – 105 ಮತ್ತು 106)

ಹೆಳೆ ಇಲ್ಲದೇ ಅಳುವವನ ಹೆಂಡತಿ ಸತ್ತು ಹೋಗಿದ್ದಳಂತೆ.

ಹೆಳೆ ಎಂದರೆ ನೆಪ. ಅವನು ಮೊದಲೇ ಕಾರಣವಿಲ್ಲದೇ, ನೆಪವಿಲ್ಲದೇ ಅಳುತ್ತಲೇ ಇರುತ್ತಾನೆ. ಈಗಂತೂ ಹೆಂಡತಿಯೂ ಸತ್ತು ಹೋಗಿದ್ದರಿಂದ ಅಳುತ್ತಾನೆ, ಸಕಾರಣದಿಂದ.

ಏನೂ ಕಾರಣವಿಲ್ಲದೆಯೇ ಕೆಲವರು ಕೊರಗುವುದುಂಟು. ಅಂತಹವರಿಗೆ ಕಾರಣ ಸಿಕ್ಕಿದರಂತೂ ಕೇಳುವುದೇ ಬೇಡ. ಅಂತವರನ್ನು ಕುರಿತು ಇರುವ ಗಾದೆ ಇದು. ಇದೇ ಅರ್ಥದಲ್ಲಿ ಬಳಸುವ ಇನ್ನೊಂದು ಗಾದೆ ಎಂದರೆ ಅಳುವವನ ಮೈಮೇಲೆ ಗೋಡೆ ಬಿದ್ದಂತೆ. ಏನೂ ಕಾರಣವಿಲ್ಲದೆಯೇ ಅಳುತ್ತಾನೆ. ಇನ್ನು ಗೋಡೆ ಮೈಮೇಲೆ ಬಿದ್ದರಂತೂ ಕೇಳುವುದೇ ಬೇಡ.

December 14, 2007

ಮಗಳೇ ಮಗಳೇ … (ಉತ್ತರ ಕನ್ನಡದ ಗಾದೆ – 103 ಮತ್ತು 104)

ಮಗಳೇ ಮಗಳೇ ಎಂದರೆ ಮನೆಯಿಡೀ ತೆವಳಿದ್ದಳು.

ಮಗಳೇ ಮಗಳೇ ಎಂದು ತೀರಾ ಮುದ್ದು ಮಾಡಿದರೆ ಎದ್ದು ಓಡಾಡಲೂ ಆಲಸಿಯಾಗಿ ಮನೆಯಿಡೀ ತೆವೆಳಿಕೊಂಡೇ ಇದ್ದಳಂತೆ. ಹಾಗಾಗಿ ಕೆಲಸವನ್ನೆಲ್ಲ ಉಳಿದವರೇ ಮಾಡಬೇಕಾಯಿತು.

ಯಾರನ್ನಾದರೂ ಅಗತ್ಯಕ್ಕಿಂತ ಜಾಸ್ತಿ ಮುದ್ದು ಮಾಡಿದರೆ ಕೈಲಾಗದವರಂತೆ ನಟಿಸಲು ಪ್ರಾರಂಭಿಸುತ್ತಾರೆ, ಆಲಸಿತನವನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ಅರ್ಥ.

ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ- ಮಾಡುವವರನ್ನು ಕಂಡರೆ ನೋಡು ನನ್ನ ಸೇವೆ. ಯಾರಾದರೂ ಸೇವೆ ಮಾಡಲು ತಯಾರಿದ್ದರೆ ನಾನು ಎಷ್ಟು ಬೇಕಾದರೂ ಸೇವೆ ಮಾಡಿಸಿಕೊಳ್ಳಲು ತಯಾರಿದ್ದೇನೆ ಎಂದು ಅರ್ಥ.

December 13, 2007

ಹಾಕು ಮಣೆ… (ಉತ್ತರ ಕನ್ನಡದ ಗಾದೆ – 101 ಮತ್ತು 102)

ಹಾಕು ಮಣೆ, ನೂಕು ಮಣೆ, ತೋರು ಮಣೆ.

ಇನ್ನೊಬ್ಬರ ಮನೆಗೆ ಅವರಿಷ್ಟಕ್ಕೆ ವಿರುದ್ಧವಾಗಿ ಪದೇ ಪದೇ ಹೋದರೆ ಸಿಗುವ ಸತ್ಕಾರ ಇದು. ಮೊದಲನೆಯ ಸಲ ಹೋದಾಗ ಎದ್ದು ಬಂದು ಮಣೆ ಹಾಕಿ ಕುಳಿತುಕೋ ಎನ್ನುತ್ತಾರೆ. ಮತ್ತೆ ಮತ್ತೆ ಹೋಗತೊಡಗಿದರೆ ಕುಳಿತಲ್ಲಿಂದಲೇ ಮಣೆಯನ್ನು ನೂಕಿ ಕುಳಿತುಕೋ ಎನ್ನುತ್ತಾರೆ. ಇನ್ನೂ ದಿನ ಕೆಳೆದಂತೆ ಪುನಃ ಪುನಃ ಹೋಗತೊಡಗಿದರೆ ಮಣೆ ಇರುವ ಜಾಗವನ್ನು ತೋರಿಸಿ, ಹಾಕಿಕೊಂಡು ಕುಳಿತುಕೋ ಎನ್ನುತ್ತಾರೆ.

ಇಂಥದೇ ಇನ್ನೊಂದು ಗಾದೆ- ಹೋಗು ಎನ್ನಲಾರದೇ ಹೊಗೆ ಹಾಕಿದರು.
ಹೋಗು ಎಂದು ಬಾಯಿ ಬಿಟ್ಟು ಹೇಳಲು ಆಗುತ್ತಿಲ್ಲ, ಆದರೆ ಕಳುಹಿಸಬೇಕಾಗಿದೆ ಅದಕ್ಕಾಗಿ ಹೊಗೆ ಹಾಕಿ ಓಡಿ ಹೋಗುವಂತೆ ಮಾಡುತ್ತಾರೆ!

December 12, 2007

ಬೇಡಿಕೊಂಡು ಬಂದ … (ಉತ್ತರ ಕನ್ನಡದ ಗಾದೆ – 100)

ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಮಾಡಿತ್ತು.

ಮೊದಲೇ ಮನೆಯಲ್ಲಿ ಅಕ್ಕಿಯಿಲ್ಲ. ಹೇಗೋ ಬೇಡಿಕೊಂಡು ಬಂದು ಸ್ವಲ್ಪ ಅಕ್ಕಿಯನ್ನು ಕೂಡಿಹಾಕಿದರೆ ಅದರಲ್ಲಿ ಬೆಕ್ಕು ಉಚ್ಚೆ ಮಾಡಿಬಿಟ್ಟಿತು.

ಕಷ್ಟಪಟ್ಟು ಕೂಡಿಹಾಕಿಕೊಂಡ ವಸ್ತುವನ್ನು ಇನ್ಯಾರಾದರೂ ತೆಗೆದುಕೊಂಡರೆ ಅಥವಾ ಹಾಳು ಮಾಡಿದರೆ ಈ ಮಾತು ಸರಿಹೋಗುತ್ತದೆ. ಮಾಡಿದ ಅಡುಗೆ ಸ್ವಲ್ಪವೇ ಇದ್ದಾಗ ಯಾರಾದರೂ (ಸಾಮಾನ್ಯವಾಗಿ ಮಕ್ಕಳು) ಅದನ್ನು ಬೀಳಿಸಿ ಚೆಲ್ಲಿ ಹಾಕಿದಾಗ ಈ ಮಾತನ್ನು ಹೇಳಿಸಿಕೊಳ್ಳುವುದುಂಟು.

December 11, 2007

ಬರಗಾಲದಲ್ಲಿ… (ಉತ್ತರ ಕನ್ನಡದ ಗಾದೆ – 99)

ಬರಗಾಲದಲ್ಲಿ ಮಗ ಉಣ್ಣಲು ಕಲಿತಿದ್ದ.

ಮೊದಲೆಂದೂ ಉಣ್ಣಲು ಆಸಕ್ತಿ ತೋರಿಸದ ಮಗ ಬರಗಾಲ ಬಂದೊಡನೆಯೇ ಉಣ್ಣಲು ಕಲಿಯತೊಡಗಿದ್ದ.

ಯಾವುದಾದರೂ ವಸ್ತುವಿನ ಕೊರತೆಯಿದ್ದಾಗ ಅದು ಬೇಕೆಂದು ಯಾರಾದರೂ ಕೇಳಿದರೆ ಈ ಗಾದೆ ಅನ್ವಯಿಸುತ್ತದೆ. ಸಿಹಿ ತಿಂಡಿಗಳನ್ನು ತಿನ್ನಲು ಎಂದೂ ಹೆಚ್ಚು ಆಸಕ್ತಿ ತೊರದ ನನ್ನ ತಮ್ಮ ಚಿಕ್ಕವನಿದ್ದಾಗ, ನೆಂಟರು ಬಂದಾಗ ಅದರಲ್ಲೂ ವಿಶೇಷವಾಗಿ ತಿಂಡಿ ಕಡಿಮೆಯಾಗಬಹುದು ಎಂಬ ಆತಂಕವಿದ್ದಾಗ ಅದನ್ನು ತಿನ್ನುತ್ತೇನೆಂದು ಕೇಳುತ್ತಿದ್ದ. ಆಗ ಅಮ್ಮ ಅವನಿಗೆ ಈ ಮಾತನ್ನು ಹೇಳುತ್ತಿದ್ದುದು ಇಂದೂ ಕೂಡ ನಮಗಿಬ್ಬರಿಗೂ ನೆನಪಿದೆ!!

December 10, 2007

ನನಗೂ ಸಾಕಾಗಿತ್ತು … (ಉತ್ತರ ಕನ್ನಡದ ಗಾದೆ – 98)

ನನಗೂ ಸಾಕಾಗಿತ್ತು, ನಾಯಕರೂ ಛೀ ಎಂದರು.

ನನಗೂ ಅಲ್ಲಿರುವುದು ಬೇಕಾಗಿರಲಿಲ್ಲ. ಆದರೂ ಸುಮ್ಮನಿದ್ದೆ. ಅಷ್ಟರಲ್ಲಿ ನಾಯಕರೂ ಛೀ ಎಂದು ಹೀಯಾಳಿಸಿದರು. ತಕ್ಷಣ ಹೊರಬಿದ್ದು ಬಂದೆ.

ಅವನಿಗೆ ಯಾವುದೋ ಒಂದು ಸ್ಥಳದಿಂದ ಅಥವಾ ವ್ಯವಸ್ಥೆಯಿಂದ ಅಥವಾ ವ್ಯಕ್ತಿಯಿಂದ ದೂರವಾಗುವ ಮನಸ್ಸಿದೆ. ಆದರೆ ನಿರ್ಧಾರ ಮಾಡಲು ಆಗುತ್ತಿಲ್ಲ. ಅಷ್ಟರಲ್ಲಿ ಆ ವ್ಯವಸ್ಥೆ / ವ್ಯಕ್ತಿಯೇ ಅವನನ್ನು ದೂರಮಾಡಿಕೊಳ್ಳಲು ತಯಾರಿ ನಡೆಸಿದೆ/ ನಡೆಸಿದ್ದಾನೆ. ಅವನು ತಕ್ಷಣ ಹೊರಬಿದ್ದು ಬಂದು ಈ ಮಾತನ್ನು ಹೇಳುತ್ತಾನೆ.

December 7, 2007

ನಾವೇ ಸಾಯಬೇಕು … (ಉತ್ತರ ಕನ್ನಡದ ಗಾದೆ – 95, 96 ಮತ್ತು 97)

ನಾವೇ ಸಾಯಬೇಕು ಸ್ವರ್ಗ ಕಾಣಬೇಕು.

ಬೇರೆಯವರು ಸತ್ತರೆ ನಮಗೆ ಸ್ವರ್ಗ ಸಿಗುವುದಿಲ್ಲ. ನಾವು ಸತ್ತರೆ ಮಾತ್ರ ಸ್ವರ್ಗವನ್ನು ಕಾಣಲು ಸಾಧ್ಯ.

ಬೇರೆಯವರನ್ನು ನಂಬಿ ಕುಳಿತರೆ ನಮ್ಮ ಕೆಲಸ ಆಗುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು ಎಂಬುದು ಇದರ ಅರ್ಥ.

ಹೆಚ್ಚು ಕಡಿಮೆ ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಮಾತುಗಳೆಂದರೆ, ನಮ್ಮ ತಲೆಗೆ ನಮ್ಮ ಕೈ. ನಮಗೆ ಸಮಸ್ಯೆಗಳು ಬಂದಾಗ ನಮ್ಮ ತಲೆಯ ಮೇಲೆ ನಾವೇ ಕೈ ಹೊತ್ತುಕೊಳ್ಳಬೇಕೇ ವಿನಃ ಬೇರೆಯವರು ನಮ್ಮ ತಲೆಯ ಮೇಲೆ ಕೈ ಹೊರಿಸುವುದಿಲ್ಲ. ಅಂದರೆ ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳಬೇಕು.

ನಮಗೆ ನಾವು, ಗೋಡೆಗೆ ಮಣ್ಣು. ಮಣ್ಣಿನಿಂದಾದ ಗೋಡೆ ಹೇಗೆ ತನ್ನಷ್ಟಕ್ಕೇ ತಾನು ಭದ್ರವಾಗಿ ನಿಂತಿರುತ್ತದೆಯೋ ಹಾಗೆಯೇ ನಮ್ಮಷ್ಟ್ಟಕ್ಕೇ ನಾವು ಭದ್ರವಾಗಿ ನಿಲ್ಲಬೇಕು, ಇತರರು ಸಹಾಯ ಮಾಡಲಾರರು ಎಂದು ಅರ್ಥ.

December 6, 2007

ನಾನೂ ನಾಗಪ್ಪನೂ … (ಉತ್ತರ ಕನ್ನಡದ ಗಾದೆ – 94)

ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.

ನಾಗಪ್ಪ ಎಂದರೆ ಇಲ್ಲಿ ಹಾವು ಎಂದು ಅರ್ಥ. ನಿಜವಾಗಿ ಕಚ್ಚಿದವನು ನಾಗಪ್ಪ. ಹೇಳುವಾಗ ನಾನೂ ಮತ್ತು ನಾಗಪ್ಪನೂ ಸೇರಿ ಕಚ್ಚಿದೆವು ಎಂದು ಹೇಳಲಾಗಿದೆ.

ತಾನೇನೂ ಮಾಡದಿದ್ದರೂ ಕೆಲಸ ಆದ ಮೇಲೆ ತಾನೂ ಕೆಲಸದಲ್ಲಿ ಶಾಮೀಲಾಗಿದ್ದೆ, ತಾನು ಮತ್ತು ಇನ್ನೊಬ್ಬರು ಕೂಡಿ ಕೆಲಸ ಮಾಡಿದೆವು ಎಂದು ಹೇಳಿಕೊಳ್ಳುವವರ ಬಗೆಗಿನ ಮಾತು ಇದು. ಆದರೆ ನಿಜವಾಗಿ ಕೆಲಸವನ್ನು ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ!

December 5, 2007

ನೆತ್ತಿಯ ಮೇಲೆ ಬಾಯಿ … (ಉತ್ತರ ಕನ್ನಡದ ಗಾದೆ – 93)

ನೆತ್ತಿಯ ಮೇಲೆ ಬಾಯಿ ಇದ್ದಿದ್ದರೆ ಮತ್ತೊಂದು ತುತ್ತು ಉಣ್ಣುತ್ತಿದ್ದೆ.

ಗಂಟಲ ಮೇಲೆಯೇ ಬಾಯಿ ಇರುವುದರಿಂದ ಕಡಿಮೆ ಊಟ ಮಾಡಬೇಕಾಗುತ್ತದೆ. ಅದೇ ಬಾಯಿ ನೆತ್ತಿಯ ಮೇಲೆ ಇದ್ದಿದ್ದರೆ ಇನ್ನೂ ಹೆಚ್ಚು ಊಟ ಮಾಡಬಹುದಾಗಿತ್ತು.

ಹಣ ಗಳಿಸಲು ಇರುವ ಎಲ್ಲಾ ಮಾರ್ಗಗಳನ್ನೂ ಉಪಯೋಗಿಸಿದ ನಂತರವೂ ಹೊಸ ಮಾರ್ಗಕ್ಕಾಗಿ ಹಾತೊರೆಯುವವರನ್ನು ಕುರಿತು ಮಾಡಲಾದ ಗಾದೆ ಇದು. ಕೆಲವೊಮ್ಮೆ ತೀರಾ ಕಾಂಜೂಸಿ ವ್ಯಕ್ತಿಗಳ ಬಗ್ಗೆಯೂ ಬಳಸುವುದುಂಟು ಏಕೆಂದರೆ ಅವರು ಇನ್ನೂ ಹಣ ಉಳಿಸುವುದು ಹೇಗೆ ಎಂದು ಹಾತೊರೆಯುತ್ತಿರುತ್ತಾರೆ.

December 4, 2007

ಕುಂಬಳಕ್ಕೆ ಹೋಗುವುದರೊಳಗೇ … (ಉತ್ತರ ಕನ್ನಡದ ಗಾದೆ – 92)

ಕುಂಬಳಕ್ಕೆ ಹೋಗುವುದರೊಳಗೇ ಕಿವಿ ಹರಿದುಕೊಳ್ಳಬೇಡ.

ಕುಂಬಳ ಎಂದರೆ ಕರ್ನಾಟಕ-ಕೇರಳದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಚಾಲ್ತಿಯಲ್ಲಿರುವ ಪ್ರದೇಶ. ಇದನ್ನು ಕುಂಬಳ ಸೀಮೆ ಎನ್ನುವುದು ರೂಢಿ. ಉತ್ತರ ಕನ್ನಡದ ಹುಡುಗರಿಗೆ ಕೆಲವೊಮ್ಮೆ ಇಲ್ಲಿಂದ ಹೆಣ್ಣು ತರುವುದೂ ಇದೆ.ಈ ಕುಂಬಳ ಪ್ರದೇಶದ ಜನರು ಹಿಂದಿನ ಕಾಲದಲ್ಲಿ ತಮ್ಮ ಕಿವಿಯನ್ನು ಹರಿದುಕೊಂಡಿರುತ್ತಿದ್ದರಂತೆ. ಅಂದರೆ ಕಿವಿಗೆ ಒಲೆ ಹಾಕಿಕೊಳ್ಳಲೆಂದು ಮಾಡಿರುವ ತೂತನ್ನು ತುಂಬಾ ದೊಡ್ಡದಾಗಿ ಮಾಡಿಕೊಂಡಿರುತ್ತಿದ್ದರು ಎಂದು ಕೇಳಿದ್ದೇನೆ. ಇತರ ಜನರು ಅಲ್ಲಿಗೆ ಹೋಗಬೇಕಾದ ಅಗತ್ಯ ಬಂದರೆ ಹೋಗುವ ಮೊದಲೇ ಕಿವಿ ಹರಿದುಕೊಳ್ಳುವ ಅಗತ್ಯವಿಲ್ಲ. ಅಲ್ಲಿ ಹೋಗಿ ನೋಡಿ, ಅಗತ್ಯ ಬಿದ್ದರೆ ಮಾತ್ರ ಹರಿದುಕೊಂಡರೆ ಸಾಕು.

ಏನಾದರೂ ಕೆಲಸವನ್ನು ಮಾಡುವಾಗ ಅಗತ್ಯವಿಲ್ಲದಿದ್ದರೂ ಮೊದಲೇ ಮಾಡಿಬಿಡುವುದು, ಆತವಾ ಯಾರಾದರೂ ಒಂದು ವಿಷಯವನ್ನು ವಿವರಿಸುತ್ತಿರುವಾಗ ಅವರಿಗೆ ಹೇಳಲೂ ಅವಕಾಶ ಕೊಡದೇ ಪ್ರಶ್ನೆ ಕೇಳಿದಾಗ ಈ ಮಾತನ್ನು ಹೇಳುತ್ತಾರೆ. ಬೇರೆಯವರಿಗೆ ವಿವರಿಸಲು ಬಿಟ್ಟು, ಅವರು ಮುಗಿಸಿದ ನಂತರ ಅಗತ್ಯವಿದ್ದರೆ ಮಾತ್ರ ಪ್ರಶ್ನಿಸಿದರೆ ಈ ಗಾದೆಯಿಂದ ತಪ್ಪಿಸಿಕೊಳ್ಳಬಹುದು!

December 3, 2007

ಒಲೆಯಿಂದ ಮೇಲೆ … (ಉತ್ತರ ಕನ್ನಡದ ಗಾದೆ – 91)

ಒಲೆಯಿಂದ ಮೇಲೆ ಬೆಂಕಿ, ತಲೆಯಿಂದ ಮೇಲೆ ಸಾಲ ಆಗಬಾರದು.

ಈ ಎರಡರಲ್ಲಿ ಯಾವುದು ಆದರೂ ಅನಾಹುತ ತಪ್ಪಿದ್ದಲ್ಲ. ಒಲೆಯಿಂದ ಮೇಲೆ ಬೆಂಕಿ ಆದರೆ ಈಡೀ ಮನೆಗೇ ಬೆಂಕಿ ಹೊತ್ತಿಕೊಳ್ಳಬಹುದು. ತೀರಿಸಲಾರದಷ್ಟು ಸಾಲವಾದರೂ ಸಂಕಷ್ಟಗಳು ಬರುತ್ತವೆ ಎಂಬ ಅರ್ಥವನ್ನು ಕೊಡುತ್ತದೆ.

November 30, 2007

ಚಿಕ್ಕಪ್ಪ ತಾನೂ ಇಕ್ಕ … (ಉತ್ತರ ಕನ್ನಡದ ಗಾದೆ – 90)

ಚಿಕ್ಕಪ್ಪ ತಾನೂ ಇಕ್ಕ, ಬೇಡುವುದಕ್ಕೂ ಬಿಡ.

ಇಕ್ಕುವುದು ಎಂದರೆ ಊಟವನ್ನು ಬಡಿಸುವುದು (ನೀಡುವುದು) ಎಂದು ಅರ್ಥ. ಚಿಕ್ಕಪ್ಪ ತಾನೂ ಊಟವನ್ನು ನೀಡುವುದಿಲ್ಲ, ಬೇಡಿಕೊಂಡು ಬದುಕುತ್ತೇನೆ ಎಂದರೆ ಅದಕ್ಕೂ ಬಿಡುವುದಿಲ್ಲ.

ಯಾವುದೋ ಕೆಲಸವನ್ನು ಯಾರಾದರೂ ನಮಗೆ ಮಾಡಿಕೊಳ್ಳಲೂ ಬಿಡುವುದಿಲ್ಲ ಹಾಗೆಂದು ತಾವು ಮಾಡಿಯೂ ಕೊಡುವುದಿಲ್ಲ ಎಂಬ ಸನ್ನಿವೇಶದಲ್ಲಿ ಈ ಮಾತನ್ನು ಉಪಯೋಗಿಸಿಕೊಳ್ಳಿ.

November 29, 2007

ನಾಯಿ ತೆಗೆದುಕೊಂಡು ಹೋಗಿ … (ಉತ್ತರ ಕನ್ನಡದ ಗಾದೆ – 87, 88 ಮತ್ತು 89)

ನಾಯಿ ತೆಗೆದುಕೊಂಡು ಹೋಗಿ ದಂಡಿಗೆ ಹತ್ತಿಸಿದರೆ ಹೊಲಸು ಕಂಡಲ್ಲಿ ಜಿಗಿದು ಹಾರಿತ್ತು.

ದಂಡಿಗೆ ಎಂದರೆ ಸಿಂಹಾಸನ. ನಾಯಿಯನ್ನು ಸಿಂಹಾಸಾನದ ಮೇಲೆ ಕೂರಿಸಿದರೂ ಅದಕ್ಕೆ ಸಿಂಹಾಸಾನದ ಬೆಲೆ ಗೊತ್ತಗುವುದಿಲ್ಲ. ಹೊಲಸು ಕಂಡ ತಕ್ಷಣ ಅದು ಜಿಗಿದು ಹಾರಿ ಬಿಡುತ್ತದೆ.

ಯೋಗ್ಯತೆ ಇಲ್ಲದವರಿಗೆ ಅಧಿಕಾರ ಅಥವಾ ವಸ್ತುಗಳನ್ನು ಕೊಟ್ಟರೆ ಅವರಿಗೆ ಅದರ ಬೆಲೆ ಗೊತ್ತಾಗುವುದಿಲ್ಲ. ಅವರು ಪುನಃ ತಮ್ಮ ಹಳೆಯ ಗುಣಗಳನ್ನೇ ಅನುಸರಿಸುತ್ತಾರೆ ಎಂಬ ಅರ್ಥ.

ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಗಾದೆಗಳೆಂದರೆ- ಕಾಗೆಯ ಕೈಯ್ಯಲ್ಲಿ ಕಾರುಬಾರು ಕೊಟ್ಟರೆ ಕಛೇರಿಯೆಲ್ಲ ಗಲೀಜು ಮಾಡಿತ್ತು ಮತ್ತು ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಮೂಸಿ ನೋಡಿ ಏಳು ಸಮುದ್ರದ ಆಚೆ ಎಸೆದಿತ್ತು.

November 28, 2007

ಊರಿನೆತ್ತು … (ಉತ್ತರ ಕನ್ನಡದ ಗಾದೆ – 85 ಮತ್ತು 86)

ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.

ಉಪ್ಪಿನೆತ್ತು ಎಂದರೆ ಎತ್ತಿನ ಗೊಂಬೆ ಎಂದು ಕೇಳಿದ್ದೇನೆ. ನನಗೂ ಇದರ ಅರ್ಥ ಇನ್ನೂ ಸರಿಯಾಗಿ ಆಗಿಲ್ಲ. ಜೀವಂತ ಎತ್ತು ಕುಣಿಯಿತೆಂದು ಗೊಂಬೆಯೂ ಕುಣಿದಿತ್ತು.

ಯೋಗ್ಯತೆ ಇದ್ದವರು ಮಾಡುವ ಕೆಲಸವನ್ನು ನೋಡಿ ಯೋಗ್ಯತೆ ಇಲ್ಲದವರೂ ಮಾಡಲು ಹೋದಾಗ ಈ ಮಾತನ್ನು ಹೇಳುವುದುಂಟು. ಎಲ್ಲರೂ ಬಳಸುವ ಇನ್ನೊಂದು ಗಾದೆ ಎಂದರೆ ನವಿಲು ಕುಣಿಯಿತೆಂದು ಕೆಂಬೂತವೂ ಕುಣಿದಿತ್ತು.

November 27, 2007

ದಾನಕ್ಕೆ ಬಂದ … (ಉತ್ತರ ಕನ್ನಡದ ಗಾದೆ – 84)

ದಾನಕ್ಕೆ ಬಂದ ಎಮ್ಮೆಯನ್ನು ಹಲ್ಲು ಹಿಡಿದು ನೋಡಿದ್ದನು.

ಆಕಳು, ಎಮ್ಮೆಗಳಿಗೆ ವಯಸ್ಸಾದಂತೆ ಹಲ್ಲುಗಳು ಮೂಡುತ್ತಿರುತ್ತವೆ. ಹಾಗಾಗಿ ಅವುಗಳನ್ನು ಕೊಂಡು ತರುವಾಗ ಎಷ್ಟು ಹಲ್ಲುಗಳು ಮೂಡಿವೆ ಎಂದು ನೋಡಿ ಅವುಗಳ ವಯಸ್ಸನ್ನು ಅಳೆದು ತರುವುದು ರೂಢಿ. ದಾನಕ್ಕೆ ಬಂದ ಎಮ್ಮೆಗೆ ಎಷ್ಟು ಹಲ್ಲುಗಳು ಮೂಡಿವೆ ಎಂದು ನೋಡಿ ಎಮ್ಮೆ ಮುದಿಯಾಗಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದನಂತೆ.

ಉಡುಗೊರೆಯಾಗಿ ಬಂದ ವಸ್ತುವಿನ ಬಗ್ಗೆ ಅಸಮಾಧಾನ ತೋರುವವರು ಅಥವಾ ಅದರ ಮೌಲ್ಯವನ್ನು ಅಳೆಯುವವರ ಬಗ್ಗೆ ಇರುವ ಮಾತು ಇದು.

November 26, 2007

ದಾನ ಕೊಟ್ಟಿದ್ದನ್ನು … (ಉತ್ತರ ಕನ್ನಡದ ಗಾದೆ – 83)

ದಾನ ಕೊಟ್ಟಿದ್ದನ್ನು ಮರೆಯಬೇಕು; ಸಾಲ ಕೊಟ್ಟಿದ್ದನ್ನು ಬರೆಯಬೇಕು.

ದಾನ ಎಂದು ಕೊಟ್ಟ ಮೇಲೆ ಅದನ್ನು ಮರಳಿ ನಿರೀಕ್ಷಿಸಬಾರದು. ಕೊಟ್ಟ ತಕ್ಷಣವೇ ಮರೆತುಬಿಡಬೇಕು. ಸಾಲ ಎಂದು ಕೊಟ್ಟಾಗ ಬರೆದು ಇಡಬೇಕು. ಇದರಿಂದ ಮುಂದೆ ಬರಲು ಸಾಧ್ಯವಿರುವ ತಪ್ಪು ತಿಳುವಳಿಕೆಗಳನ್ನು ನಿವಾರಿಸಿಕೊಳ್ಳಬಹುದು.

November 24, 2007

ಕುನ್ನಿಗೆ ಕೆಲಸವಿಲ್ಲ … (ಉತ್ತರ ಕನ್ನಡದ ಗಾದೆ – 82)

ಕುನ್ನಿಗೆ ಕೆಲಸವಿಲ್ಲ ಕುಳಿತುಕೊಳ್ಳಲು ಪುರಸೊತ್ತಿಲ್ಲ.

ನಾಯಿಯ ಇರುವಿಕೆಯನ್ನು ಗಮನಿಸಿದರೆ ಗೊತ್ತಾಗುತ್ತದೆ, ಅದಕ್ಕೆ ಒಂದು ಕಡೆ ಕುಳಿತಿರಲು ಸಮಾಧಾನ ಇರುವುದಿಲ್ಲ. ಏನೂ ಕೆಲಸವಿಲ್ಲದಿದ್ದರೂ ಆಚೆಯಿಂದ ಈಚೆ, ಈಚೆಯಿಂದ ಆಚೆ ತಿರುಗಾಡುತ್ತಾ ಇರುತ್ತದೆ. ಅದಕ್ಕೆ ಕೆಲಸ ಇಲ್ಲದಿದ್ದರೂ ಕುಳಿತುಕೊಳ್ಳಲು ಪುರಸೊತ್ತು ಇದ್ದಂತೆ ಕಾಣಿಸುವುದಿಲ್ಲ.

ಕಣ್ಣಿಗೆ ಕಾಣುವಂತ ದೊಡ್ಡ ಕೆಲಸವೇನೂ ಇಲ್ಲದಿದ್ದರೂ, ಸಣ್ಣ ಪುಟ್ಟ ಕೆಲಸಗಳಿಂದಲೇ ಬಿಡುವು ಸಿಗದಂತಾಗಿ, ಕೆಲಸದಿಂದಾದ ಉತ್ಪಾದನೆ ಸೊನ್ನೆ ಎಂದು ಅನಿಸಿದಾಗ ಹೇಳಿಕೊಳ್ಳಬಹುದಾದಂತ ಮಾತು ಇದು.

November 22, 2007

ಕಣ್ಣಿ ಇದೆ … (ಉತ್ತರ ಕನ್ನಡದ ಗಾದೆ – 80 ಮತ್ತು 81)

ಕಣ್ಣಿ ಇದೆ ಎಂದು ಎಮ್ಮೆ ಕೊಂಡಿದ್ದನು.

ಎಮ್ಮೆಯನ್ನು ಕಟ್ಟುವ ಹಗ್ಗ ಇದೆಯೆಂದು ಹೊಸದಾಗಿ ಎಮ್ಮೆಯನ್ನು ಕೊಂಡುಕೊಳ್ಳುತ್ತಾನೆಯೇ ಹೊರತು ಅದರ ಅವಶ್ಯಕತೆಯಿದೆ ಎಂದಲ್ಲ.

ಯಾರಾದರೂ ಅವಶ್ಯಕತೆ ಇಲ್ಲದಿದ್ಡೂ ಯಾವುದೋ ಒಂದು ಸಣ್ಣ ವಸ್ತು ಇದೆಯೆಂದು ಅದಕ್ಕೆ ಹೊಂದುವಂಥ ದೊಡ್ಡ ವಸ್ತುವನ್ನು ಕೊಂಡಾಗ ಈ ಮಾತನ್ನು ಹೇಳಿ.

ಇನ್ನೂ ಕೆಲವು ಕಡೆ ವಿಶೇಷವಾಗಿ ಉತ್ತರ ಕರ್ನಾಟಕದ ಕಡೆ ಲಾಳ ಇದೆಯೆಂದು ಕುದುರೆಯನ್ನು ಕೊಂಡಿದ್ದನು ಎಂದು ಹೇಳುವುದನ್ನು ಕೇಳಿದ್ದೇನೆ. ಇತ್ತೀಚೆಗೆ ನಮ್ಮ ಕಡೆಯ ಗಂಡಸರು ಇದನ್ನು ನವೀಕರಿಸಿ ಹೆಂಗಸರ ಮೇಲೆ ಪ್ರಯೋಗಿಸುತ್ತಿದ್ದಾರೆ - Blouse piece ಇದೆಯೆಂದು ಸೀರೆ ಕೊಂಡಿದ್ದಳು!

November 21, 2007

ಅರಸ ಬರುವ ತನಕ … (ಉತ್ತರ ಕನ್ನಡದ ಗಾದೆ – 79)

ಅರಸ ಬರುವ ತನಕ ಹಲಸು ತಡೆಯುವುದಿಲ್ಲ.

ಹಲಸಿನ ಕಾಯಿ ಹಣ್ಣಾಗುವುದು ಮತ್ತು ಹಣ್ಣು ಕೊಳೆತು ಹೋಗುವುದು ಅದರ ಸ್ವತಂತ್ರ ಮತ್ತು ನೈಸರ್ಗಿಕ ಕ್ರಿಯೆ.
ಬರುವವನು ಅರಸನೇ ಆಗಿದ್ದರೂ ಆ ಹಲಸಿನ ಹಣ್ಣಾಗುವಿಕೆ, ಕೊಳೆಯುವಿಕೆಯಲ್ಲಿ ಬದಲಾವಣೆ ಇರುವುದಿಲ್ಲ.

ನಡೆಯುವಂಥ ಕೆಲಸಗಳು ತಮ್ಮ ಪಾಡಿಗೆ ತಾವು ನಡೆಯುತ್ತಲೇ ಇರುತ್ತವೆ, ಅವು ಯಾರಿಗಾಗಿಯೂ ಕಾಯುವುದಿಲ್ಲ ಎಂದು ಹೇಳುವಾಗ ಈ ಗಾದೆ ಬಳಸಲ್ಪಡುತ್ತದೆ.

November 20, 2007

ಇದ್ದವರಿಗೇ ಹೊಟ್ಟೆಗಿಲ್ಲ … (ಉತ್ತರ ಕನ್ನಡದ ಗಾದೆ – 78)

ಇದ್ದವರಿಗೇ ಹೊಟ್ಟೆಗಿಲ್ಲ ಇನ್ನೊಂದು ಕೊಡೋ ಪರಮೇಶ್ವರ.

ಈಗಾಗಲೇ ಇರುವ ಮಕ್ಕಳಿಗೆ ಹೊಟ್ಟೆಗೆ ಹಾಕುವುದೇ ಕಷ್ಟವಾಗಿರುವಾಗ ದೇವರಲ್ಲಿ ಇನ್ನೊಂದು ಮಗುವನ್ನು ಬೇಡಿದ್ದನಂತೆ.

ಮೈತುಂಬಾ ಕೆಲಸವಿದ್ದು, ಅವನ್ನು ಮಾಡಿ ಮುಗಿಸುವುದೇ ಕಷ್ಟವಾಗಿರುವಾಗ ಇನ್ನೊಂದು ಹೊಸ ಕೆಲಸವನ್ನು ಮೈಮೇಲೆ ಹಾಕಿಕೊಳ್ಳಲು ಉತ್ಸುಕರಾಗಿರುವವರನ್ನು ಕಂಡಾಗ ಈ ಗಾದೆಯನ್ನು ಪ್ರಯೋಗಿಸಬಹುದು.

ಓದೂಗರೊಬ್ಬರು ‘ಹೌದು, ಗಾದೆಗಳದ್ದೇ ಒಂದು blog ಯಾಕೆ ಮಾಡಬಾರದು ನೀವು?’ ಎಂಬ ಸಲಹೆಯನ್ನಿತ್ತಾಗ ನನಗೆ ಈ ಗಾದೆ ನೆನೆಪಾಗಿತ್ತು.
ಶುರು ಮಾಡಿಕೊಂಡಿರುವ ಒಂದು blogಅನ್ನೇ ತುದಿ ಮುಟ್ಟಿಸುತ್ತೇನೆ ಎಂಬ ಧೈರ್ಯ ಇಲ್ಲದ ನಾನು ಇನ್ನೊಂದು blog ಶುರು ಮಾಡಿಕೊಂಡರೆ ಈ ಗಾದೆ ಎಲ್ಲರಿಗಿಂತ ಮೊದುಲು ನನಗೇ ಅನ್ವಯವಾಗುತ್ತದೆ!

November 19, 2007

ಅವರಿರುವುದೇ ಹೀಗೆ

ಊರಿನಲ್ಲಿದ್ದಾಗ ನಡೆಯುತ್ತಿದ್ದ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಜ.
ನಮ್ಮೂರಿನ ಜನರು….. ಅವರೆಲ್ಲಾ ನಿಜವಾಗಿ ಮುಗ್ಧರು.
ತಾವೇನು ಮಾತನಾಡುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ಮಾತನಾಡುತ್ತಿರುತ್ತಾರೆ.
ಅವುಗಳಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ ಓದಿ...

ಗಣಪ ಹಸ್ಲರ್ ಸುಮಾರು 80 ವರ್ಷಗಳ, ಬೆನ್ನು ಬಾಗಿ ಹೋಗಿರುವ ಮುದುಕ. ಆತ ತನ್ನಮಗಳು ಪಾರ್ವತಿಯನ್ನು register ಮದುವೆ ಮಾಡಿಸಬೇಕೆಂದು ಮನಸ್ಸುಮಾಡಿ ಯಾರ ಹತ್ತಿರವೋ marriage registration form ಕೂಡ ತರಿಸಿಕೊಂಡಿದ್ದ.
ಅದನ್ನು ತುಂಬಿಸಿಕೊಳ್ಳಲು ಬಂದಿದ್ದ. ಅದರಲ್ಲಿ ಹುಡುಗಿಯ ವಯಸ್ಸು ಎಂಬುದನ್ನು ತುಂಬುವಾಗ ಅಮ್ಮ ಕೇಳಿದರು, 'ಗಣಪ, ಪಾರ್ವತಿಗೆ ಎಷ್ಟು ವರ್ಷ ಆಯ್ತಾ’ . ಆಗ ಆತ ಹೇಳಿದ, ‘ಅದ್ಕೇ... ಒಂದ್ ಹತ್ತ್ ವರ್ಸ.'
ಅಮ್ಮ ಗಲಿಬಿಲಿಯಾಗಿ ಕೇಳಿದರು, 'ಹಂಗಾರೆ ನಿಂಗೆ ಎಷ್ಟು ವರ್ಷವಾ?' ಅದಕ್ಕವನು ಹೇಳಿದ್ದು, 'ನಂಗೇ… ಒಂದಿಪ್ಪತ್ ವರ್ಸ'!
ಅಮ್ಮನ ಬಾಯಿ ಸುಮಾರು ನಾಲ್ಕೈದು ಸೆಕೆಂಡುಗಳಷ್ಟು ಕಾಲ ತೆರೆದೇ ಇತ್ತು!

ವಿಟ್ಠಲ ಪೂಜಾರಿ- ಕುಂದಾಪುರದಿಂದ ಬಂದು ನಮ್ಮ ಊರಿನಲ್ಲಿ ಒಂದಷ್ಟು ವರ್ಷಗಳ ಕಾಲ ನೆಲಸಿದ್ದವ. ನಂತರ ಅವನು ತನ್ನ ಊರಿಗೇ ತಿರುಗಿ ಹೋಗಿಬಿಟ್ಟಿದ್ದ. ಇತ್ತೀಚೆಗೆ ತೀರಿಹೋದ ಎಂದೂ ಕೂಡ ತಿಳಿಯಿತು.ಅವನಿಗೆ ವಿಪರೀತ ಕುಡಿಯುವ ಚಟ. ಅಂಗಿಯ ಎರಡು ಗುಂಡಿಗಳು ಯಾವಾಗಲೂ ತೆರೆದುಕೊಂಡೇ ಇರುತ್ತಿದ್ದವು.ಅವನು ಒಮ್ಮೆ ಯಾರದೋ ಬಗ್ಗೆ ದೂರನ್ನು ಹೇಳಲು ಅಪ್ಪನಲ್ಲಿಗೆ ಬಂದಿದ್ದ, ಮತ್ತು ಹೇಳುತ್ತಿದ್ದ,'ಆ ಮನ್ ಷಾ ಉಪ್ಯೋಗಿಲ್ಲ ಹೆಗಡೆರೇ. ನಾ ನಿಮ್ ಹತ್ರೆ ಹೇಳೂದ್ ಎಂತದೂ ಅಂದ್ರೆ… ಅವ ಬಿಸ್ಲ್ ಕೊಪ್ಪದ ಕತ್ರಿಲೆಲ್ಲಾ ಅಂಗಿ ಗುಬ್ಬಿ (ಗುಂಡಿ) ತೆಗ್ದು ಬಚ್ಚಿಕಂಡು ತಿರಗ್ತಾ.'
ಅಪ್ಪ ತಕ್ಷಣ ಕೇಳಿದ್ದರು,'ಮತ್ತೆ ನೀ ಮಾಡದು ಯಂತದಾ?' ಅವ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದ,'ನಾನಾರೆ ಎರಡೇ ಗುಬ್ಬಿ ತೆಕ್ಕತ್ತೆ, ಅವ ಅಷ್ಟೂ ಗುಬ್ಬಿ ತೆಕ್ಕತ್ನಲೆ.' ಎಂದು!

ಶಂಕರ ಹಸ್ಲರ ಒಮ್ಮೆ ಯಾವುದೋ ಕಾರಣಕ್ಕೆ ನಮ್ಮ ಮನೆಗೆ ಬಂದಿದ್ದ. ಅವನನ್ನು ಎಲ್ಲರೂ ಕರೆಯುವುದು ಗಿಡ್ಡ ಶಂಕರ ಎಂದು, ಏಕೆಂದರೆ ಅವನು ಸ್ವಲ್ಪ ಕುಳ್ಳಗಿದ್ದಾನೆ. ಆಗಿನ್ನೂ ಕೇಬಲ್ ಟಿವಿ ಗಳೆಲ್ಲಾ ಇರದಿದ್ದ ಕಾಲ. ನಾವೆಲ್ಲ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಏನೋ ಒಂದು ಕಾರ್ಯಕ್ರಮ ನೋಡುತ್ತಿದ್ದೆವು. ಏನು ಎಂಬುದು ಸರಿಯಾಗಿ ನೆನಪಿಲ್ಲ. ಅಂತೂ ಬೇರೆ ಬೇರೆ ರೀತಿಯ ಪ್ರಾಣಿಗಳನ್ನೆಲ್ಲಾ ತೋರಿಸುತ್ತಿದ್ದರು. ಗಿಡ್ಡ ಶಂಕರನೂ ಕುಳಿತು ಪೂರ್ತಿ ಕಾರ್ಯಕ್ರಮ ಮುಗಿಯುವವರೆಗೂ ಕುಳಿತು ನೋಡಿದ.
ನಂತರ ಹೊರಡುವಾಗ ಹೇಳುತ್ತಾ ಹೋದ, 'ಪರ್ ಪಂಚಾದಾಗೇ (ಪ್ರಪಂಚದಲ್ಲಿ) ಯಾವ್ ಯಾವ್ ನಮ್ನೀ ಪಕ್ಸಿ (ಪಕ್ಷಿ) ಎಲ್ಲಾ ಐದಾವೋ ಏನೋ' ಎಂದು. ಅದರಲ್ಲೇನು ಮಜ ಅಂತೀರಾ? ಆ ಕಾರ್ಯಕ್ರಮದಲ್ಲಿ ಪ್ರಾಣಿಗಳ ಹೊರತಾಗಿ ಒಂದೇ ಒಂದು ಪಕ್ಷಿಯನ್ನೂ ತೋರಿಸಿರಲಿಲ್ಲ!

ಶಂಕರ ಗೌಡ, ಮಲಕ್ಯಾ ಗೌಡ ಅಣ್ಣ-ತಮ್ಮಂದಿರು.
ಯಾವಾಗ ನೋಡಿದರೂ ಇಬ್ಬರ ಜಗಳ ಇದ್ದದ್ದೇ. ಒಮ್ಮೆ ಇಬ್ಬರೂ ಜಗಳವಾಡಿಕೊಂಡು ಅಪ್ಪನ ಹತ್ತಿರ ದೂರು ತಂದಿದ್ದರು.
ಮಾತಿಗೆ ಮಾತು ಬೆಳೆದು ಅಲ್ಲಿಯೇ ಪುನಃ ಜಗಳಕ್ಕಿಳಿದರು.
ಮಲಕ್ಯಾನಿಗೆ ಸಿಟ್ಟು ನೆತ್ತಿಗೇರಿ ಕೂಗಿದ, '@#$!^ ಮಗನೇ, ನಿನ್ನ ಕಾಲ್ದಾಗೇ ಮನೆ ಹಾಳಾಗಿದ್ದು.'
ಶಂಕರನಿಗೆ ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟ,'ಹೆಗಡೆರ ಮನೆ ಅಂಗಳದಾಗೇ
@#$!@ ಮಗನೆ ಅಂತೀಯಾ &%#$@ ಮಗನೆ'.
ಅಪ್ಪ ಕೇಳಿದ್ದರು, 'ಮತ್ತೆ ಈಗ ನೀ ಹೇಳ್ತಾ ಇರದು ಯಂತದಾ ಶಂಕ್ರಾ?'
ಶಂಕರ ಗೌಡ ಮುಸಿ ಮುಸಿ ನಗುತ್ತಾ ತಲೆ ಕೆರೆದುಕೊಂಡ ಚಿತ್ರ ಇನ್ನೂ ಕಣ್ಣೆದುರಿಗಿದೆ.

ಕೋಲು ಎಂದು … (ಉತ್ತರ ಕನ್ನಡದ ಗಾದೆ – 77)

ಕೋಲು ಎಂದು ಕೊಟ್ಟರೆ ಕುದುರೆ ಎಂದು ಕುಣಿದಿದ್ದ.

ಅವನ ಕೈಗೆ ಕೋಲನ್ನು ಕೊಟ್ಟರೆ ಅದನ್ನೇ ಕುದುರೆ ಎಂದು ತಿಳಿದು ಕುಣಿಯತೊಡಗಿದ್ದ.

ಕೈಗೆ ಸಿಕ್ಕ ಸಣ್ಣ ಅಧಿಕಾರವನ್ನೇ ದೊಡ್ಡದೆಂದು ಭಾವಿಸುವವರನ್ನು ಕುರಿತು ಇರುವ ಮಾತು ಇದು.ನಮ್ಮ ಊರಿನ ಗ್ರಾಮ ಪಂಚಾಯತಿಯ ಸದಸ್ಯರು ತಮ್ಮನ್ನು ತಾವೇ ಪ್ರಧಾನಮಂತ್ರಿಯೆಂದು ತಿಳಿದು ಮಾತನಾಡುವ ಪರಿಯನ್ನು ನೋಡಿದಾಗ ನನಗೆ ಈ ಮಾತು ತಪ್ಪದೇ ನೆನೆಪಾಗುತ್ತದೆ!

November 17, 2007

ಸಿರಿ ಬಂದು … (ಉತ್ತರ ಕನ್ನಡದ ಗಾದೆ – 76)

ಸಿರಿ ಬಂದು ಹೊಕ್ಕುತ್ತಿರುವಾಗ ಓತಿಕ್ಯಾತವೆಂದು ತೆಗೆದು ಎಸೆದ.

ಐಶ್ವರ್ಯ ಬಂದು ಮನೆಯೊಳಗೆ ಹೊಕ್ಕುತ್ತಿದ್ದರೆ ಅದನ್ನು ಓತಿಕ್ಯಾತವೆಂದು ತಿಳಿದು ಓಡಿಸಿಬಿಟ್ಟಿದ್ದನು.

ಅದೃಷ್ಟ ಬಂದು ಬಾಗಿಲು ಬಡಿಯುತ್ತಿರುವಾಗ ಅಲಕ್ಶ್ಯ ತೋರುವವರ ಬಗ್ಗೆ ಇರುವ ಮಾತು ಇದು. English ನಲ್ಲಿ ಹೇಳುತ್ತಾರಲ್ಲ, ‘when fortune knocks the door, fool will complain of noise’ ಎಂದು. ಹಾಗೆಯೇ ಇದು.

November 16, 2007

ಮಾತನಾಡುವ ಪರಿ- 4

ನಮ್ಮೂರಿನ ಇನ್ನೂ ಕೆಲವರ English ಓದಿ ನೋಡಿ...
ಅವರ ಮುಗ್ಧತೆಯ ಹಿಂದಿರುವ funny part ಮಾತ್ರ ನೋಡುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಹ ಅವರನ್ನು ಗೇಲಿ ಮಾಡುವ ಉದ್ದೇಶ ನನ್ನದಲ್ಲ.

ಪಿ. ಬಿ. ಗೌಡ ನಮ್ಮೂರಿನ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬ.
ಆಗಷ್ಟೇ ಬಿಜೆಪಿ ಪಕ್ಷದಿಂದ ಶ್ರೀ ಅನಂತಕುಮಾರ ಹೆಗಡೆ ಲೋಕಸಭೆಗೆ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಅಪ್ಪನ ಜೊತೆ ನಾನು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಮತ್ತು ಹೇಳಿದ, 'ನಮ್ಮ ಪಕ್ಷದ candidate (ಸರಿಯಾಗೇ ಬಳಸಿದ್ದಾನೆ ನೋಡಿ) ಸರಿ ಇಲ್ರಾ ಈ ಸಲ. ಅವ ಆರಿಸಿ ಬರದು ಖಾತ್ರಿ ಇಲ್ಲ ಬಿಡಿ. ಅವನ ಮೇಲೆ 13 tribunal ಕೇಸು ಐತಿ ಅಂತ ಹೇಳ್ತಾರೇ...'
Tribunal ನ ಅರ್ಥ criminal!

ನಮ್ಮೂರಿನ ಕೊನೆಗೌಡ ಸಣ್ಣತಮ್ಮ. ಅವನು ಸಣ್ಣವನೂ ಅಲ್ಲ, ತಮ್ಮನೂ ಅಲ್ಲ. ಅವನ ಹೆಸರೇ ಸಣ್ಣತಮ್ಮ. ನಮ್ಮನೆಗೆ ತೆಂಗಿನಕಾಯಿ ಕೊಯ್ಯಲು ಬಂದಾಗ ಒಮ್ಮೆ ಹೇಳುತ್ತಿದ್ದ,
'ಆ ಮರ ನಾ ಹತ್ತದಿಲ್ರಾ ಹೆಗಡೆರೇ... ಅದರಾಗೇ ರಿಕ್ಸ್ ಅದೇ...'
ಅಪ್ಪ ಹೇಳಿದ್ರು...'ಇಲ್ಲಾ ಅದರಲ್ಲಿ ಸವ್ಳಿ*, ಗಿವ್ಳಿ ಇಲ್ಲ'.
ಅವ ಮತ್ತೆ ಹೇಳಿದ, 'ಇಲ್ರಾ... ಸವ್ಳಿ ಇದ್ರೆ ಅಡ್ಡಿಲ್ಲಾಗಿತ್ತು, ಮರ ಎತ್ರಕ್ಕೆ ಹೋಗಿದ್ದಕ್ಕೆ ರಿಕ್ಸು, ಸುಮ್ನೇ ಬ್ಯಾಡಾ ಹೇಳಿ.'
ಆಗ ಗೊತ್ತಾಯಿತು. ರಿಕ್ಸು ಅಂದರೆ Risk ಎಂದು!

*ಸವ್ಳಿ ಎಂದರೆ ದೊಡ್ಡ ಜಾತಿಯ ಕೆಂಪು ಇರುವೆ, ಕಚ್ಚಿದರೆ ಉರಿಯಾಗುವಂತದು.

ಎಲ್ಲಾ ಬಿಟ್ಟ … (ಉತ್ತರ ಕನ್ನಡದ ಗಾದೆ – 75)

ಎಲ್ಲಾ ಬಿಟ್ಟ ಭಂಗಿ ನೆಟ್ಟ ಗೊಂಡೆ ಹಕ್ಕಲ ಸುಬ್ರಾಯ ಭಟ್ಟ.

ಭಂಗಿಯನ್ನು ಬೆಳೆಯುವುದು ಕಾನೂನು ಬಾಹಿರ.
ಅದರ ಗಿಡ ನೋಡಲು ಹೆಚ್ಚು ಕಡಿಮೆ ಗೊಂಡೆಯ ಗಿಡದಂತೆಯೇ ಕಾಣುತ್ತದೆ.
ಇಷ್ಟು ದಿನ ಗೊಂಡೆಯ ಗಿಡವನ್ನು ನೆಡುತ್ತಿದ್ದ ಸುಬ್ರಾಯ ಭಟ್ಟ ಈಗ ಹೊಸದಾಗಿ ಭಂಗಿ ಗಿಡವನ್ನು ಬೆಳೆಸಲು ಶುರುಮಾಡಿದ್ದಾನೆ.

ಸರಿಯಾಗಿ ನಡೆಯುತ್ತಿದ್ದ ಕೆಲಸವನ್ನು ಬಿಟ್ಟು ಇನ್ಯಾವುದೋ ಅನಗತ್ಯ ಎನಿಸುವಂತಹ ಕೆಲಸಕ್ಕೆ ಕೈ ಹಾಕುವವರ ಬಗ್ಗೆ ಈ ಮಾತನ್ನು ಹೇಳುತ್ತಾರೆ.

November 15, 2007

Changing world

Vishakha, the little girl of four years who stays in Bangalore had come to my village for vacation with her parents. She was playing alone with some colourful cards. I was curious and went near her to see what she is playing with. She had 26 cards, each card with an alphabet, a word beginning with that alphabet and an appropriate picture for that word.

I just took a look at those cards. Alphabet ‘A’ had and Apple and ‘B’ had a Bat. For ‘C’ I expected a Cat but to all my surprise, it showed a Car! I still remember my school days... when we studied, 'C' showed a Cat because cats were more and cars were rare. But in these days, when cats are rare and cars are everywhere, what else can we expect? If she had a card with Cat in it, her mother would have struggled to show her a cat in Bangalore and now she can easily show a car!

I told to myself, ‘stupid lady, where are you? The world is moving very fast and in a different direction than what you think.’ I wish there will not come a day with cards A for Alcohol, B for Beer, C for Cheese, … P for Pizza,… W for Wine…

ಇದಿಯನ್ನು… (ಉತ್ತರ ಕನ್ನಡದ ಗಾದೆ – 74)

ಇದಿಯನ್ನು ಕಟ್ಟಿಕೊಂಡು ಸಮಾಧಿಗೆ ಹೋಗಿದ್ದನಂತೆ.

ಇದಿ ಎಂದರೆ ಕಾಡುವಂತಹದ್ದು ಎಂದು ಕೇಳಿದ್ದೇನೆ.
ಅದರ ಜೊತೆ ಸಮಾಧಿಗೆ ಹೋದರೂ ಅದು ಕಾಡುವುದನ್ನು ನಿಲ್ಲಿಸುವುದಿಲ್ಲ. ಅಂದರೆ ಸತ್ತಮೇಲೂ ಕಾಡುತ್ತದೆ ಎಂದು ಅರ್ಥ.

ನಾವು ಎಲ್ಲಿಗಾದರೂ ಹೊರಟಾಗ ನಮಗೆ ಇಷ್ಟವಿಲ್ಲದವರು, ಕಿರಿಕಿರಿಯ ವ್ಯಕ್ತಿ ತಗಲುಹಾಕಿಕೊಂಡಾಗ ಈ ಮಾತು ನೆನೆಪಾಗುತ್ತದೆ.

November 14, 2007

ಅತ್ತೇರೆ, ಅತ್ತೇರೆ … (ಉತ್ತರ ಕನ್ನಡದ ಗಾದೆ – 72 ಮತ್ತು 73)

ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.

ಮನೆಯ ಮುಂದಿರುವ ಅರಳಿ ಮರದ ಕಟ್ಟೆಯ ತನಕ ಮದುವೆ ದಿಬ್ಬಣ ಬರುವವರೆಗೂ ಸೊಸೆ ಹಾಡನ್ನು ಕಲಿತಿಲ್ಲ. ದಿಬ್ಬಣ ಬಂದ ಮೇಲೆ ಅತ್ತೆಯ ಬಳಿ ಬಂದು ಹಾಡು ಹೇಳಿಕೊಡಿ ಎನ್ನುತ್ತಾಳೆ.

ಪೂರ್ವ ಸಿದ್ಧತೆ ಇಲ್ಲದೇ ಕೊನೇ ಘಳಿಗೆಯಲ್ಲಿ ಚಡಪಡಿಸುವವರನ್ನು ಕುರಿತು ಇರುವ ಮಾತು ಇದು.

ಇದೇ ತರಹದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ದನು. ನೀರಿಗಾಗಿ ಪೂರ್ವ ಸಿದ್ಧತೆ ಇಲ್ಲದೇ ಗಡ್ಡ ಹೊತ್ತಿಕೊಂಡು ಉರಿಯತೊಡಗಿದಾಗ ಬಾವಿ ತೋಡಲು ಮುಂದಾಗಿದ್ದನು.

November 13, 2007

ಮಾತನಾಡುವ ಪರಿ- 3

ನಮ್ಮ ಊರಿನ ಜನ ಅಪ್ಪನ ಹತ್ತಿರ ಮಾತನಾಡಲು ಬಂದರೆ ಏನಾದರೂ ಒಂದು ನಗು ತರಿಸುವಂಥ ಮಾತನ್ನು ಆಡಿಯೇ ತೀರುತ್ತಾರೆ.
ಕೆಲವರಂತೂ ತಮ್ಮನ್ನು ತಾವೇ ರಾಜಕೀಯ ಪುಢಾರಿಗಳು ಎಂದು ತಿಳಿದುಕೊಂಡವರಿದ್ದಾರೆ.
ಅವರಿಗಂತೂ English ಶಬ್ದಗಳನ್ನು ಬಳಸಿ ಮಾತನಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.
ಅಂತಹ ಕೆಲವು ಸಂದರ್ಭಗಳನ್ನು ಇಲ್ಲಿ ಹೇಳುತ್ತಿದ್ದೇನೆ.

ಶಂಕರ ಗೌಡ - ಊರಿನ ಮುಖಂಡ, ಅಂದು ಅಪ್ಪನ ಹತ್ತಿರ ಹೇಳುತ್ತಿದ್ದ, 'ಹೆಗಡೆರೇ ಆ ದಾಕ್ತಾರ ತವ ಹೋಗಿದ್ದೆ. ಔಷಧಿ ಕೊಟ್ಯಾರು. ಆದ್ರೂ ಯಾಕೋ ಜರ Continuous ಆಗಾಕೆ ವಲ್ದು.'
ಅದರ ಅರ್ಥ Doctor ಬಳಿ ಹೋಗಿದ್ದೆ, ಔಷಧಿ ಕೊಟ್ಟಿದ್ದಾರೆ. ಆದರೂ ಏಕೋ ಜ್ವರ ಕಡಿಮೆ ಆಗ್ತಾನೇ ಇಲ್ಲ. Continuous ಎನ್ನುವ ಶಬ್ದವನ್ನು ಕಡಿಮೆ ಎನ್ನುವ ಅರ್ಥದಲ್ಲಿ ಬಳಸಿಬಿಟ್ಟಿದ್ದಾನೆ ಶಂಕರ ಗೌಡ!

ಗಣಪತಿ- ಅದೇ ಊರಿನ ಒಕ್ಕಲಿಗ. ಅವನಿಗೆ ಆಗಾಗ ಮತಿಭ್ರಮಣೆಯಾಗುತ್ತಿತ್ತು. ಹಾಗಾದಾಗಲೆಲ್ಲ ಅವನು ಹೆಂಡತಿ, ಮಕ್ಕಳಿಗೆಲ್ಲ ಹೊಡೆದು ರಾದ್ಧಾಂತ ಮಾಡುತ್ತಿದ್ದ. ಆಗ ಅವನನ್ನು ಅಪ್ಪನ ಹತ್ತಿರ ಪಂಚಾಯಾತಿಗೆಂದು ಕರೆದುಕೊಂಡು ಬರುತ್ತಿದ್ದರು, ಏಕೆಂದರೆ ಅಪ್ಪ ಹೇಳಿದ ಮಾತನ್ನು ಅವನು ಎಂದೂ ಮೀರುತ್ತಿರಲಿಲ್ಲ. ಒಮ್ಮೆ ಹಾಗೆಯೇ ಅವನನ್ನು ಕರೆದುಕೊಂಡು ಬಂದಿದ್ದಾಗ, ಆ ಊರಿನ ಈಗಿನ ಗೌಡ (ಶಂಕರ ಗೌಡ ತೀರಿಕೊಂಡ ಬಳಿಕ) ಬಂಗಾರ್ಯ ಗೌಡ ಗಣಪತಿಗೆ ಬುದ್ಧಿ ಹೇಳಿದ್ದು, 'ನೀ ಹಿಂಗೆಲ್ಲ ಗದ್ಲಾ ಮಾಡ್ಕೀನಾದು ಚೊಲೊ ಅಲ್ಲ ನೋಡು ಗಣಪತಿ. ಇನ್ನೊಂದು ನಾಕ್ ವರ್ಷ ಆದ್ರೆ ನಿನ್ನ ಮಕ್ಕಳು ಕೈಗೆ ಬರ್ತಾವು. ಕೆಲ್ಸಾ ಅವೇ ಮಾಡ್ಕಿ0ದು ಹೋಕಾವು. ನೀ ಅಷ್ಟ್ರಾಗ ಹಿಂಗೆಲ್ಲಾ temporary ಮಾಡ್ಕಿ0ತಿ.
Temporary ಅನ್ನುವ ಶಬ್ದವನ್ನು ಅನಾಹುತ ಎನ್ನುವ ಅರ್ಥದಲ್ಲಿ ಬಳಸಲಾಗಿದೆ!

ಕೃಷ್ಣ ಪೂಜಾರಿ- ಕುಂದಾಪುರದಿಂದ ಕೆಲಸಕ್ಕೆಂದು ಬಂದು ನಮ್ಮೊರಿನಲ್ಲೇ settle ಆಗಿ ತುಂಬಾ ವರ್ಷಗಳೇ ಕಳೆದಿವೆ.
ಆತ ಒಮ್ಮೆ ನನ್ನನ್ನು ಕೇಳಿದ್ದು, 'ಅಲ್ರಾ… ಅಮ್ಮಾ ನಿಮ್ಮ ಆಸ್ಟ್ರೇಲಿಯಾದಾಗೆಲ್ಲಾ ಮೀನಾ ಗೀನಾ ಬೇಯ್ಸಾದಿಲ್ಲೇನ್ರಾ?'
ನನಗೆ ಅರ್ಥವೇ ಆಗಲಿಲ್ಲ. ಎಲ್ಲಿಯ ಆಸ್ಟ್ರೇಲಿಯಾ, ಎಲ್ಲಿಯ ಮೀನು ಎಂದು. ಕಣ್ಣು ಕಣ್ಣು ಬಿಡುತ್ತಾ ನಾನು ನಿಂತಿದ್ದನ್ನು ನೋಡಿ ಮತ್ತೆ ಹೇಳಿದ, 'ಅದೇ ಧಾರವಾಡದಾಗೇ, ನಿಮ್ಮ ಆಸ್ಟ್ರೇಲಿಯಾದಾಗೇ.....'
ನನಗೆ ಆಗ ಅರ್ಥ ಆಯಿತು. ಆತ ಕೇಳುತ್ತಿದ್ದುದು ಧಾರವಾಡದ ನನ್ನhostel ಬಗ್ಗೆ ಎಂದು!

ಇನ್ನೂ ಉಮೇಶನಂತೂ SSLC ವರೆಗೆ ಓದಿದ್ದಾನೆ. ಅವನ English ಅಂತೂ ಇನ್ನೊ ಮಜಾವಾಗಿರುತ್ತದೆ.
ಒಮ್ಮೆ ಏನೋ ಒಂದು ವಿಷಯ ಕೇಳಲು ಅಪ್ಪನ ಹತ್ತಿರ ಬಂದಿದ್ದಾನೆ. ಆಗ ಹೇಳುತ್ತಿದ್ದ, 'ನಮಗೆ ಗೊತ್ತಾಗದಿಲ್ಲ ಹೆಗಡೆರೇ ನೀವೇ ಹೇಳ್ರಿ. ನಾವೆಲ್ಲಾ ನೋಸೆಂಟು.'
ನೋಸೆಂಟು ಅಂದರೆ Innocent! ಅದರ ನಂತರ ನಾವು ಅವನನ್ನು ಕರೆಯುತ್ತಿದ್ದುದೇ ನೋಸೆಂಟು ಎಂದು!
ಇಬ್ಬನಿ ಬಿದ್ದಾಗ ಅವನು ಅದಕ್ಕೆ ಇಬ್ಬನಿ ಎಂದು ಅವನು ಎಂದೂ ಹೇಳುವುದಿಲ್ಲ. ಮಿಷ್ಟು (Mist) ಎಂದೇ ಹೇಳುತ್ತಾನೆ.

ಅರಸನ ಮಗಳಿಗೆ … (ಉತ್ತರ ಕನ್ನಡದ ಗಾದೆ – 71)

ಅರಸನ ಮಗಳಿಗೆ ಭತ್ತದ ಸುಂಗು ಚುಚ್ಚಿಕೊಂಡಿತ್ತಂತೆ.

ಅರಸನ ಮಗಳು ಮುದ್ದಿನಿಂದ ಬೆಳೆದವಳು.
ಭತ್ತದ ಸುಂಗು ಅಂದರೆ ಒಂದು ಅತಿ ಚಿಕ್ಕ ಮುಳ್ಳಿನಂತಹ ವಸ್ತು.
ಅವಳಿಗೆ ಆ ಸುಂಗೂ ಕೂಡ ನೋವನ್ನುಂಟು ಮಾಡುತ್ತದೆ.

ಯಾರಾದರೂ ತೀರಾ ಚಿಕ್ಕ ನೂವಿಗೆ ಅತಿಯಾದ ಯಾತನೆ ಪಟ್ಟರೆ (ಅಥವಾ ಯಾತನೆಯನ್ನು ನಟಿಸಿದರೆ) ಈ ಮಾತನ್ನು ಪ್ರಯೋಗಿಸಬಹುದು.

November 12, 2007

ಅಪ್ಪನಿಗೇ ಅಪ್ಪ … (ಉತ್ತರ ಕನ್ನಡದ ಗಾದೆ – 70)

ಅಪ್ಪನಿಗೇ ಅಪ್ಪ ಎನ್ನುವುದಿಲ್ಲ ಚಿಕ್ಕಪ್ಪನಿಗೆ ಅಪ್ಪ ಎನ್ನುತ್ತಾನಾ?

ಅವನು ತನ್ನ ಅಪ್ಪನನ್ನೇ ಅಪ್ಪ ಎಂದು ಕರೆಯುವುದಿಲ್ಲ ಇನ್ನು ಚಿಕ್ಕಪ್ಪನಿಗೆ ಅಪ್ಪ ಎಂದು ಕರೆಯುವುದು ಸಾಧ್ಯವೇ ಇಲ್ಲ.

ಯಾರಾದರೂ ತಮ್ಮ ಕರ್ತವ್ಯವನ್ನೇ ಮಾಡುವುದಿಲ್ಲ ಇನ್ನು ಉಳಿದ ಕೆಲಸವನ್ನಂತೂ ಮಾಡುವುದಂತೂ ಸಾಧ್ಯವೇ ಇಲ್ಲ ಎಂಬುದನ್ನು ಸೂಚಿಸಲು ಈ ಗಾದೆಯನ್ನು ಉಪಯೋಗಿಸಬಹುದು.

November 8, 2007

ಗುತ್ಯಾ ಮತ್ತು ಅವನ ಕಿರೀಟ

ಇದು ನಾನು ನೋಡಿದ ಘಟನೆಯಲ್ಲ. ಅಮ್ಮನಿಂದ ಕೇಳಿದ್ದು, ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದು. ಅಮ್ಮ ಸುಮಾರು 22 ಅಥವಾ 23 ವರ್ಷದವಳಿದ್ದಾಗಿನ ಕಥೆ. ಅವಳ ಊರು ಅಂದರೆ ನನ್ನ ಅಜ್ಜನ ಮನೆ ಶಿರಸಿ ತಾಲೂಕಿನ ದೊಡ್ನಳ್ಳಿಯಲ್ಲಿ ಆಗಿನ ಕಾಲದಲ್ಲಿ ನಾಟಕಗಳ ಗೀಳು ಎಲ್ಲರಿಗೂ ಸ್ವಲ್ಪ ಜಾಸ್ತಿಯೇ ಇತ್ತು ಎಂದು ಕೇಳಿದ್ದೇನೆ.

ಒಂದು ನಾಟಕವನ್ನು ತಯಾರಿ ಮಾಡಿಕೊಂಡಿದ್ದರು. ಅದರ ಕಥೆಯ ಸಾರಾಂಶವೆಂದರೆ ಒಬ್ಬ ಅರಸನಿದ್ದವನು ಏನೋ ಕಾರಣದಿಂದ ಬಡವನಾಗಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನು ತಲುಪುತ್ತಾನೆ. ತೀರಾ unrealistic ಅಂತೀರಾ? ಅದು ನನಗೂ ಗೊತ್ತು, ಅಮ್ಮನಿಗೂ ಗೊತ್ತು. ಆದರೆ ಅದು ನಾಟಕ ತಾನೇ, ಏನು ಬೇಕಾದರೂ ಆಗಬಹುದು. ಅದೇ ಊರಿನ ಎಮ್ಮೆ ಕಾಯುವ ಗುತ್ಯಾ ತನಗೆ ಅರಸನ ಪಾತ್ರವೇ ಬೇಕು ಎಂದು ಹಟಮಾಡಿ ಕೊನೆಗೂ ಆ ಪಾತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಸಾಕಷ್ಟು ಮೊದಲಿನಿಂದಲೇ ತಾಲೀಮು ನಡೆಸಿದ್ದರು. ಎಲ್ಲವೂ ಸರಿಯಾಗಿಯೇ ನಡೆದಿತ್ತು.

ನಾಟಕ ಪ್ರದರ್ಶಿಸುವ ರಾತ್ರಿ ಬಂತು. ಎಲ್ಲರೂ ತಮ್ಮ ತಮ್ಮ ಉಡುಗೆಗಳೊಂದಿಗೆ ರಂಗಮಂಚಕ್ಕೆ ಬರಲು ಸಿದ್ಧರಾದರು. ಗುತ್ಯಾನಿಗೆ ಅರಸನ ವೇಷ ಕಟ್ಟಿದರು. ಬಣ್ಣ ಬಣ್ಣದ ಅಂಗಿ, ಬಂಗಾರ ಮತ್ತು ಮುತ್ತಿನ ಸರಗಳು, ಕೈಯ್ಯಲ್ಲಿ ಹೊಳೆಯುವ ಖಡ್ಗ, ತಲೆಯಮೇಲೆ ರತ್ನಖಚಿತ ಕಿರೀಟ...
ಗುತ್ಯಾನಿಂಗಂತೂ ಖುಷಿಯೋ ಖುಷಿ. ಹೆಚ್ಚು ಕಡಿಮೆ ಅವನು ನೆಲದ ಮೇಲೆಯೇ ಇಲ್ಲ ಆ ರಾತ್ರಿ. ನಾಟಕ ನಡೆಯುತ್ತಿರುವಾಗ ಗುತ್ಯಾನ ಪ್ರವೇಶದ ದೃಶ್ಯ ಬಂತು. ರಾಜ ಗಂಭೀಯದಿಂದಲೇ ಹೋಗಿ ತಾನು ಹೇಳಬೇಕಾಗಿದ್ದನ್ನೆಲ್ಲಾ, ಮಾಡಬೆಕ್ಕಾಗಿದ್ದನ್ನೆಲ್ಲಾ ಸರಿಯಾಗಿಯೇ ಮುಗಿಸಿ ಒಳಗೆ ಬಂದ. ನಿರ್ದೇಶಕರು ಒಮ್ಮೆ ನಿಟ್ಟುಸಿರು ಬಿಟ್ಟರು.

ಕಥೆ ಮುಂದುವರಿಯಿತು. ಅರಸ ದಿವಾಳಿಯಾಗುವ ದೃಶ್ಯ ಹತ್ತಿರ ಬಂತು. ಒಳಗಡೆ ಗುತ್ಯಾನಿಗೆ ಹರುಕು ಅಂಗಿ ತೋಡಿಸಿದರು, ತಲೆಕೊದಲನ್ನು ಕೆದರಿದರು, ಕೈಯ್ಯಲ್ಲಿ ಮುರುಕು ಪಾತ್ರೆಯನ್ನು ಹಿಡಿಸಿದರು. ಗುತ್ಯಾನಿಗೆ ಈ ವೇಷ ಏನು ಮಾಡಿದರೂ ಮನಸ್ಸಿಗೆ ಬರಲೊಲ್ಲದು. ನೋಡಲು ಕುಳಿತಿರುವ ನೂರಾರು ಜನರ ಮುಂದೆ ಹೀಗೆ ಹೋಗಬೇಕಾಯಿತಲ್ಲಾ ಎಂಬ ಕೊರಗು. ಏಕೆಂದರೆ ತಾಲೀಮಿನ ಸಮಯದಲ್ಲಿ ಅವನಿಗೆ ಇದ್ಯಾವುದರ ಕಲ್ಪನೆಯೂ ಇರಲಿಲ್ಲ.
ಗುತ್ಯಾನಿಗೆ ಭಿಕ್ಷುಕನ ವೇಷ ತೊಡಿಸಿದ ನಂತರ ವೇಷವನ್ನು ತೊಡಿಸುವವನು ಇನ್ನೊಬ್ಬನಿಗೆ ವೇಷ ತೊಡಿಸುವುದರಲ್ಲಿ ಮಗ್ನನಾಗಿದ್ದ. ಕೆಲ ಕ್ಷಣಗಳ ಬಳಿಕ ತಿರುಗಿ ನೋಡಿದರೆ ಗುತ್ಯಾ ಮತ್ತೆ ಕಿರೀಟ ತೊಟ್ಟು ಕುಳಿತಿದ್ದಾನೆ! ಗುತ್ಯಾನಿಗೆ ಕಿರೀಟವನ್ನಂತೂ ತೆಗೆಯುವುದು ಸುತಾರಾಂ ಇಷ್ಟವಿರಲಿಲ್ಲ. ಅರಸನ ಅಂಗಿಯಂತೂ ಇಲ್ಲ, ಕಿರೀಟವಾದರೂ ಇರಲಿ ಎಂಬ ಆಸೆ ಅವನಿಗೆ. ಅಂತೂ ಇಂತೂ ಅವನಿಗೆ ಬುದ್ಧಿ ಹೇಳಿ, 'ನೋಡು ಈಗ ನೀನು ರಾಜನಲ್ಲ, ಭಿಕ್ಷುಕ' ಎಂದು ಮನವರಿಕೆ ಮಾಡಿಕೊಟ್ಟರು. ಅವನು ಗೊತ್ತಾಯಿತು ಎನ್ನುವಂತೆ ತಲೆಯಾಡಿಸಿದ. ಸರಿ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾದರು.

ಗುತ್ಯಾ ಭಿಕ್ಷೆ ಬೇಡುವ ದೃಶ್ಯ ಬಂತು. ತಕ್ಷಣ ಗುತ್ಯಾ stage ಮೇಲೆ ಬಂದ. ನೋಡಿದರೆ ಕಿರೀಟ ತಲೆಯ ಮೇಲೇ ಇದೆ! ಇನ್ನೇನು ಬರಬೇಕು ಎನ್ನುವಾಗ ಒಳಗಡೆ ಇದ್ದವರ ಕಣ್ಣು ತಪ್ಪಿಸಿ ಕಿರೀಟವನ್ನು ಹಾಕಿಕೊಂಡು ಬಂದುಬಿಟ್ಟಿದ್ದ!! ಹರುಕು ಅಂಗಿ, ತಲೆಯ ಮೇಲೆ ಕಿರೀಟವನ್ನು ಹಾಕಿಕೊಂಡ ಗುತ್ಯಾ ಭಿಕ್ಷುಕ ಕೈಯ್ಯಲ್ಲಿ ಮುರುಕು ಪಾತ್ರೆ ಹಿಡಿದುಕೊಂಡು 'ಹಸಿವಾಗಿ ಪ್ರಾಣವ ಬಿಡುತಿಹೆನಾ, ತಾಯೇ ಕೊಡವ್ವಾ ನಂಗೆ ನೀರವನ (ನೀರನ್ನು-ಗುತ್ಯಾನ ಬಾಯಲ್ಲಿ ಅದು ನೀರವನ ಆಗಿತ್ತು) ಎಂದು ಪ್ರಾಸಬದ್ಧವಾಗಿ ಹಾಡುತ್ತಿದ್ದರೆ, ಪ್ರೇಕ್ಷಕರು ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಗುತ್ತಿದ್ದರಂತೆ!

ಆರು ಮೂರಾಗಲಿ … (ಉತ್ತರ ಕನ್ನಡದ ಗಾದೆ – 68 ಮತ್ತು 69)

ಆರು ಮೂರಾಗಲಿ, ಮೂರು ಆರಾಗಲಿ, ಹೆಂಡತಿಯ ತಂಗಿ ಮಾರಾಟವಾಗಿ ಹೋಗಲಿ...

ಯಾವುದೋ ಒಂದು ಕೆಲಸಕ್ಕೆ ಏನೇ ಅಡ್ಡ ಬಂದರೂ ಮಾಡಿಯೇ ತೀರುತ್ತೇನೆ ಎಂದು ಹೇಳುವಾಗ ಈ ಮಾತನ್ನು ಹೇಳುತ್ತಾರೆ.
ಇದೆ ರೀತಿಯಲ್ಲಿ ಹೇಳುವ ಇನ್ನೊಂದು ಮಾತೆಂದರೆ ಹೊಳೆ ಮೇಲೆ ಹೊಳೆ ಹೋಗಲಿ.....

ಆರು ಮೂರಾದರೂ, ಮೂರು ಆರಾದರೂ, ಹೆಂಡತಿಯ ತಂಗಿ ಮಾರಾಟವಾಗಿ ಹೋದರೂ ಅಥವಾ ಹೊಳೆಯ ಮೇಲೆ ಹೊಳೆ ಹೋದರೂ ಮಾಡಬೇಕೆಂದುಕೊಂಡಿರುವ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂಬ ಅರ್ಥ.
English ನಲ್ಲಿ ಹೇಳುವುದಾದರೆ, at any cost ಅಥವಾ come what may ಎಂದು ಬಳಸುತ್ತೇವಲ್ಲಾ, ಹಾಗೆ.

ಇದು ಗಾದೆ ಮಾತಿನ ಸಾಲಿಗೆ ಸೇರದಿದ್ದರೂ, ಓದಲು ತಮಾಷೆ ಎನಿಸುವಂಥದ್ದಾಗಿರುವುದರಿಂದ ಗಾದೆಗಳ ಜೊತೆಯಲ್ಲಿಯೇ ಸೇರಿಸಿ ಹಾಕಿದ್ದೇನೆ.

November 7, 2007

ದೇಶದ ರಕ್ಷಕರು, ಭಕ್ಷಕರು

ಮೊನ್ನೆ ರಾತ್ರಿ ಇಲ್ಲಿ 10 ಘಂಟೆಯ ಸಮಯ. ಅಂದರೆ ನಮ್ಮ ದೇಶದಲ್ಲಿ ಸುಮಾರು ಸಂಜೆ 6:30. Gmail ನಿಂದ ಇನ್ನೇನು logout ಆಗಬೇಕೆನಿಸಿದರೂ ಯಾಕೋ ಒಂದು ಕ್ಷಣ ತಡೆದೆ. ತಕ್ಷಣ ನನ್ನ ತಮ್ಮ online ಕಾಣಿಸಿದ. ನಿಧಿ ಸಿಕ್ಕಿದ್ದಕ್ಕಿಂತ ಜಾಸ್ತಿ ಸಂತೋಷವಾಯಿತು. ನಾನೂ, ಅವನೂ ಭೇಟಿಯಾಗಿ ಹೆಚ್ಚು ಕಡಿಮೆ ಒಂದು ವರ್ಷವೇ ಕಳೆಯುತ್ತಾ ಬಂತು. ಈಗ ಮೂರು ತಿಂಗಳುಗಳ ಹಿಂದೆ ಅವನು ರಜೆಗೆಂದು ಊರಿಗೆ ಬರುವಷ್ಟರಲ್ಲಿ ನಾನು ನನ್ನದಲ್ಲದ ದೇಶಕ್ಕೆ ಬಂದು ತಲುಪಿದ್ದೆ. ಅವನು ಊರಿನಲ್ಲಿದ್ದಾಗ ಫೋನಿನಲ್ಲಿ ಮಾತಾಡಲು ಸಿಗುತ್ತಿದ್ದ. ಅವನು ರಜೆ ಮುಗಿಸಿ ಮನೆಯಿಂದ ತಿರುಗಿ ಹೊರಡುವ ದಿನ ಮಾತಾಡಿದ್ದು ಅಷ್ಟೇ. ನಂತರ ಎರಡು ತಿಂಗಳಿನಿಂದ ಅವನು phone, mail ಯಾವುದಕ್ಕೂ ಸಿಕ್ಕಿರಲಿಲ್ಲ. ಏಕೆಂದರೆ ಅವನಿರುವುದು ಮಣಿಪುರದ ಯಾವುದೋ ಒಂದು ಕಾಡಿನಲ್ಲೋ, ಕೊಳ್ಳದಲ್ಲೋ, ಗುಡ್ಡದಲ್ಲೋ...ಅವನು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್.

ಯಾಕೋ ಇತ್ತೀಚೆಗೆ ತುಂಬಾ ನೆನಪಾಗುತ್ತಿದ್ದ. ಅಕ್ಕ-ತಮ್ಮರಾದರೂ ನಾವಿರುವುದು ಸ್ನೇಹಿತರಂತೆ. ಸಣ್ಣ ವಿಷಯವನ್ನೂ ಬಿಡದೆ ಹಂಚಿಕೊಳ್ಳುವುದು ಚಿಕ್ಕವರಿಂದಾಗಿನಿಂದ ಬೆಳೆದು ಬಂದ ರೂಢಿ. ಒಮ್ಮೆ ಹೇಳುತ್ತಿದ್ದ, 'ಯಾಕೋ ಮನಸ್ಸಿಗೆ depression ಬಂದಿದೆ. ಓದಿದ್ದೆಲ್ಲಾ waste ಆಗ್ತಾ ಇದೆ. ಇಲ್ಲಿ ಮಾವೋ, ನಾಗಾ, ಉಲ್ಫಾ, ಬೋಡೋಗಳ ನಡುವೆ ಇರುವುದರ ಬದಲು ನನಗಿಷ್ಟವಾದ physics field ನಲ್ಲಿಯೇ ಮುಂದುವರಿದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ' ಎಂದು. ಆಗ ಏನೇನೋ ಹೇಳಿ ಅವನನ್ನು ಸಮಾಧಾನಿಸಿದ್ದೆ.

ಎರಡು ತಿಂಗಳುಗಳ ನಂತರ ಸಿಕ್ಕಿದ್ದು ಅವನಿಗೂ ನನಗಾದಷ್ಟೇ ಖುಷಿ ಆಗಿರಬೇಕು. ಅವನು ಗಡಿಬಿಡಿಯಲ್ಲಿದ್ದರೂ ಕೂಡ chat ಮಾಡತೊಡಗಿದೆವು. ಮಣಿಪುರದಿಂದ ಮಿಜ಼ೋರಮ್ ಗೆ ಹೊರಟಾಗ ದಾರಿಯಲ್ಲಿ ಸಿಕ್ಕ ಯಾವುದೋ internet browsing centre ನಲ್ಲಿ ಇದ್ದೇನೆ ಎಂದು ಹೇಳಿದ. ಅರ್ಧ ಘಂಟೆ chat ಮಾಡಿದ ಮೇಲೆ ಹೇಳಿದ, 'ನಾನು ಹೊರಡುತ್ತೇನೆ, ಈ city ಸರಿ ಇಲ್ಲ'. ನಾನು ಕೇಳಿದೆ, 'ಸರಿ ಇಲ್ಲ ಎಂದರೆ... terrorists?' ಅದಕ್ಕವನು ಅವನು ಹೇಳಿದ, 'not exactly. ಈ ರಾತ್ರಿ ನಾಲ್ಕು ಜನ ತಿರುಗಾಡ್ತಾರೆ ಅಂತ ಊಹೆ ಇದೆ. ನಮ್ಮನ್ನೂ ಕೂಡ target ಮಾಡಿರಬಹುದು'. ನಾನು ಕುಳಿತಲ್ಲೇ ಬೆವತು ಹೋದೆ. ತಕ್ಷಣ ಕೇಳಿದೆ, 'ನಿನ್ನ ಜೊತೆ ಎಷ್ಟು ಜನರಿದ್ದಾರೆ?' 'ನಾನು ಮತ್ತು ನನ್ನ unit ನ ಇನ್ನೊಬ್ಬ officer Captain Apte' ಎಂದ. 'Gun ಇದೆಯಾ?' ಎಂದು ಕೇಳಿದ್ದಕ್ಕೆ 'pistol ಇದೆ ಹುಷಾರ್‍ರ್‍ರ್‍ರ್ ' ಎಂದು ತಮಾಷೆ ಮಾಡಿದ ಮತ್ತು 'ನಾಳೆ ಮಿಜ಼ೋರಮ್ ನಲ್ಲಿ internet ಸಿಗಬಹುದು ಅಲ್ಲಿಂದ ಮತ್ತೆ ಸಿಗುತ್ತೇನೆ, ನಾನು ಆದಷ್ಟು ಬೇಗ ಇಲ್ಲಿಂದ ಹೊರಡುತ್ತೇನೆ, bye' ಎಂದು ಹೇಳಿ ಹೊರಟ.

Logout ಆದ ನಂತರ ಆ ರಾತ್ರಿ ಮುಗಿಯಲಾರದೇನೋ ಎನ್ನುವಷ್ಟು ದೀರ್ಘವಾಗಿತ್ತು. ಕಣ್ಮುಚ್ಚಿಕೊಂಡರೂ ಹೆಸರಿಗೆ ಮಾತ್ರವೂ ನಿದ್ದೆ ಬರಲಿಲ್ಲ. ನಿನ್ನೆ ಇಡೀ ದಿನ ಕಾಯುತ್ತಲೇ ಇದ್ದೆ. ಇಂದೂ ಕೂಡ ಕಾಯುತ್ತಿದ್ದೇನೆ. 'ನೀನೇಕೆ ಕೆಟ್ಟದ್ದನ್ನೇ ಆಲೋಚನೆ ಮಾಡುತ್ತೀಯಾ ಬಹುಶಃ ಅವನಿಗೆ internet ಸಿಕ್ಕಿರಲಿಕ್ಕಿಲ್ಲ' ಎಂದು ನನ್ನ ಗಂಡ ಕೊಟ್ಟ ಭರವಸೆಯನ್ನು ನಂಬಿದ್ದೇನೆ.

ನನಗೆ ಯಾವಾಗಲೂ ಅನಿಸುವುದುಂಟು, ಒಂದು ಕಡೆ ನನ್ನ ತಮ್ಮನೊಬ್ಬನೇ ಅಲ್ಲ, ಅವನಂತೆಯೇ ಸಾವಿರ... ಸಾವಿರ ಸೈನಿಕರು ತಮ್ಮ ಜೀವವನ್ನೂ ಲೆಕ್ಕಿಸದೇ ದೇಶದ ರಕ್ಷಣೆಯಲ್ಲಿ ತೊಡಗಿದ್ದಾರೆ. ಅವರಿಗಾಗಿ ಅವರ ತಂದೆ ತಾಯಂದಿರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಇನ್ನೊಂದು ಕಡೆ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ದೇಶವನ್ನು ಕಿತ್ತು ತಿನ್ನುತ್ತಿದ್ದಾರೆ. ಅಯ್ಯೋ ದೇವರೇ, ನಮ್ಮ ದೇಶದಲ್ಲಿ ಪ್ರಾಮಾಣಿಕತೆ ಏಕೆ ಸತ್ತು ಹೋಗುತ್ತಿದೆ?

ನನಗೆ ಹಿಂದಿ ಭಾಷೆ ಅರ್ಥವಾಗಲು ತೊಡಗಿದಾಗಿನಿಂದ ಲತಾ ಮಂಗೇಶ್ಕರ್ ಅವರು ಹಾಡಿರುವ ए मेरे वतन के लोगों ಹಾಡನ್ನು ಕೇಳಿದಾಗಲೆಲ್ಲಾ ಅಳುತ್ತೇನೆ, ಜನವರಿ 26, ಆಗಷ್ಟ್ 15 ರಂದು ದೂರದರ್ಶನ ತೋರಿಸುವ ಪಥಸಂಚಲನ ನೋಡಿಯೂ ಅಳುತ್ತೇನೆ. ನನಗೆ ಗೊತ್ತು ಮುಂದೂ ಕೂಡ ಅಳುತ್ತೇನೆ.

ನಾವೆಲ್ಲಾ ಸುಖವಾಗಿರುವಂತೆ ನೋಡಿಕೊಳ್ಳುವ ಆ ಅಸಂಖ್ಯಾತ ಸೈನಿಕರನ್ನು ದೇವರು ರಕ್ಷಿಸಲಿ. ದೇಶದ ಹೊರಗಿರುವ ಭಯೋತ್ಪಾದಕರಿಗೆ ಮತ್ತು ದೇಶದ ಒಳಗಡೆ ನಮ್ಮ ನಡುವೆಯೇ ಇದ್ದು ದೇಶವನ್ನು ಕಿತ್ತು ತಿನ್ನುತ್ತಿರುವ ಇರುವ ಭಯೋತ್ಪಾದಕರಿಗೆ ದೇವರು ಸದ್ಬುದ್ಧಿಯನ್ನು ದಯಪಾಲಿಸಲಿ.

ಊರು ಉಪಕಾರ … (ಉತ್ತರ ಕನ್ನಡದ ಗಾದೆ – 67)

ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು.

ಇಲ್ಲಿ ಊರು ಎಂಬುದನ್ನು ಜನರು ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಹೆಣಕ್ಕೆ ಹೇಗೆ ಎಷ್ಟು ಶೃಂಗಾರ ಮಾಡಿದರೂ ಪರಿವೆಯೇ ಇರುವುದಿಲ್ಲವೋ ಹಾಗೆಯೇ ಜನರಿಗೆ ಎಷ್ಟು ಉಪಕಾರ ಮಾಡಿದರೂ ಅವರಿಗೆ ಅದರ ಪರಿವೆಯೇ ಇರುವುದಿಲ್ಲ. ನಮ್ಮಿಂದ ಉಪಕಾರ ಮಾಡಿಸಿಕೊಂಡವರು ನಮಗೆ ಕೃತಘ್ನರಾದಾಗ ಅಥವಾ ಅವರಿಗೆ ನಮ್ಮ ಉಪಕಾರದ ನೆನಪೂ ಕೂಡ ಇಲ್ಲದಂತಾದಾಗ ಈ ಮಾತನ್ನು ಹೇಳಬಹುದು.

November 6, 2007

ಉಂತೇ ಸಾಯುವ … (ಉತ್ತರ ಕನ್ನಡದ ಗಾದೆ – 66)

ಉಂತೇ ಸಾಯುವ ಮುದುಕಿಯನ್ನು ಒನಕೆಯಲ್ಲಿ ಹೊಡೆದು ಕೊಂದಂತೆ.

ಆ ಮುದುಕಿಯನ್ನು ಸುಮ್ಮನೇ ಬಿಟ್ಟಿದ್ದರೂ ಸಧ್ಯದಲ್ಲಿಯೇ ಸತ್ತು ಹೋಗುತ್ತಿದ್ದಳು.
ಆದರೆ ಅವಳನ್ನು ಒನಕೆಯಲ್ಲಿ ಹೊಡೆದು ಕೊಂದು ಹಾಕಿಬಿಟ್ಟರು.

ಯಾವುದಾದರೂ ವಸ್ತು ಹಾಗೇಯೇ ಬಿಟ್ಟಿದ್ದರೂ ಹಾಳಾಗುವುದರಲ್ಲಿತ್ತು.
ಆದರೆ ಅದರ ಮೇಲೆ ಇನ್ನೇನೋ ಪ್ರಯೋಗ ಮಾಡಲು ಹೋಗಿ ಅದು ಬೇಗ ಹಾಳಾದಾಗ ಈ ಗಾದೆಯನ್ನು ಹೇಳುತ್ತಾರೆ.

ನೆಟ್ಟ ಹೂವಿನ ಗಿಡ ಇನ್ನೇನು ಸಾಯುವುದರಲ್ಲಿದೆ ಎಂದಾಗ ನಾನು ಅದರ ಬುಡದಲ್ಲಿ ಗುದ್ದಲಿಯಿಂದ ಕೊಚ್ಚಿ ಗೊಬ್ಬರ ಹಾಕಲು ಹೋಗಿ ಅದು ಇನ್ನೂ ಬೇಗ ಸತ್ತು ಹೋದಾಗ ಅಮ್ಮನ ಹತ್ತಿರ ಹೇಳಿಸಿಕೊಳ್ಳುತ್ತಿದ್ದ ಮಾತು ಇದು!

November 5, 2007

ತಿಥಿ ಮನೆಯಲ್ಲಿ … (ಉತ್ತರ ಕನ್ನಡದ ಗಾದೆ – 65)

ತಿಥಿ ಮನೆಯಲ್ಲಿ ಉಂಡ ಭಟ್ಟ ಹುಲ್ಲು ಗೊಣಬೆಗೆ ಬೆಂಕಿ ಹಾಕಿದ್ದನಂತೆ.

ಗೊಣಬೆ ಅಂದರೆ ಹುಲ್ಲಿನ ಬಣವೆ ಎಂದು ಅರ್ಥ.
ತಿಥಿ ಮನೆಯಲ್ಲಿ ಚೆನ್ನಾಗಿ ಊಟ ಮಾಡಿದ ಭಟ್ಟ ತನಗೆ ಇನ್ನು ಯಾವತ್ತೂ ಊಟ ಬೇಡ, ಎಂದೂ ಹಸಿವಾಗುವುದೇ ಇಲ್ಲ ಎಂದು ತನ್ನ ಮನೆಯ ಹುಲ್ಲಿನ ಬಣವೆಗೆ ಬೆಂಕಿ ಹಾಕಿ ಭತ್ತವನ್ನೆಲ್ಲ ಸುಟ್ಟು ಹಾಕಿದ್ದನಂತೆ.
ಅಂದು ಸಂಜೆ ಹಸಿವಾಗದಿದ್ದರೂ ಮಾರನೆಯ ದಿನ ಎಂದಿನಂತೆ ಹಸಿವಾಯಿತು!

ಯಾರಾದರೂ ಚೆನ್ನಾಗಿ ಊಟ ಮಾಡಿದ ನಂತರ ತನಗೆ ಇನ್ನೆರಡು ಹೊತ್ತು ಊಟ ಬೇಡ ಎಂದು ಅಭಿಪ್ರಾಯಪಟ್ಟಾಗ ಈ ಮಾತನ್ನು ಹೇಳುತ್ತಾರೆ.

November 3, 2007

ತೆರೆ ಕಳೆದು … (ಉತ್ತರ ಕನ್ನಡದ ಗಾದೆ – 64)

ತೆರೆ ಕಳೆದು ಸಮುದ್ರ ಮುಳುಗಿದಂತೆ.

ಆತ ಸಮುದ್ರದಲ್ಲಿ ಮುಳುಗಲೆಂದು ಹೋಗಿದ್ದ.
ತೆರೆ ಬರುತ್ತಿರುವುದನ್ನು ನೋಡಿ, ಇದೊಂದು ತೆರೆ ಕಳೆದು ಮುಳುಗಿದರಾಯಿತು ಎಂದುಕೊಂಡ.
ಆದರೆ ಅಷ್ಟರಲ್ಲಿ ಇನ್ನೊಂದು ತೆರೆ ಬಂದಿತ್ತು.

ಯಾವುದಾದರೂ ದೊಡ್ಡ ಕೆಲಸವನ್ನುಮಾದುವ ತಯಾರಿಯಲ್ಲಿದ್ದಾಗ, ಸಣ್ಣ ಕೆಲಸಗಳು ಒಂದಾದ ನಂತರ ಒಂದರಂತೆ ಅಡ್ಡ ಬಂದು ದೊಡ್ಡ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡಿದಾಗ, ಸಣ್ಣ ಕೆಲಸಗಳಲ್ಲೇ ತೊಡಗಿಕೊಂಡಿರುವಂತಾದಾಗ ಈ ಮಾತನ್ನು ಉಪಯೋಗಿಸುತ್ತಾರೆ.

November 2, 2007

ಕದ ತಿನ್ನುವವನಿಗೆ … (ಉತ್ತರ ಕನ್ನಡದ ಗಾದೆ – 63)

ಕದ ತಿನ್ನುವವನಿಗೆ ಹಪ್ಪಳ ಈಡಾ?

ಅವನು ಬಾಗಿಲನ್ನೇ ತಿಂದು ಮುಗಿಸುತ್ತಾನೆ. ಇನ್ನೂ ಹಪ್ಪಳವಂತೂ ಯಾವ ಲೆಕ್ಕವೂ ಅಲ್ಲ.

ದೊಡ್ಡ ದೊಡ್ಡ ಮೋಸವನ್ನೇ ಮಾಡುತ್ತಿರುವವನಿಗೆ ಸಣ್ಣದು ಯಾವ ಲೆಕ್ಕವೂ ಅಲ್ಲ ಎಂದು ಹೇಳುವ ಮಾತು ಇದು.

November 1, 2007

ಖರ್ಜೂರದ ಹಣ್ಣಾದಾಗ … (ಉತ್ತರ ಕನ್ನಡದ ಗಾದೆ – 61 ಮತ್ತು 62)

ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.

ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಅರ್ಥವನ್ನುಕೊಡುತ್ತದೆ ಈ ಗಾದೆ.
ಖರ್ಜೂರದ ಹಣ್ಣು ಆಗುವ ಸಮಯದಲ್ಲಿ ಕಾಗೆಯ ಬಾಯಲ್ಲಿ ಹುಣ್ಣು ಆಗುತ್ತದೆಯಂತೆ.
ಹಾಗಾಗಿ ಕಾಗೆಗೆ ಖರ್ಜೂರದ ಹಣ್ಣನ್ನು ತಿನ್ನಲು ಆಗುವುದಿಲ್ಲ.

ಯಾವುದಾದರೂ ವಸ್ತು ಸಿಗುವಂತಿದ್ದಾಗ ನಮಗೆ ಅದನ್ನು ತೆಗೆದುಕೊಳ್ಳಲು ಕಷ್ಟ ಅಡ್ಡ ಬಂದರೆ ಈ ಮಾತನ್ನು ಹೇಳಬಹುದು.
ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ವಿಶೇಷ ತಿಂಡಿ ಮಾಡಿದಾಗ ನಾವು ಅನಾರೋಗ್ಯದಿಂದ ಬಳಲಬಹುದು!

October 31, 2007

ಶುಭ ನುಡಿಯೇ … (ಉತ್ತರ ಕನ್ನಡದ ಗಾದೆ – 59 ಮತ್ತು 60)

ಶುಭ ನುಡಿಯೇ ಮದುವಣಗಿತ್ತಿ ಅಂದರೆ ಹಂದರದೊಳಗಿದ್ದವರೆಲ್ಲಾ ಬೋಳೇರಾ ಎಂದಳು

ಮದುವಣಗಿತ್ತಿಯ ಬಳಿ ಏನಾದರೂ ಒಳ್ಳೆಯ ಮಾತನಾಡು ಅಂದರೆ ಮದುವೆಯ ಚಪ್ಪರದೊಳಗಿದ್ದವರೆಲ್ಲಾ ವಿಧವೆಯರಾ ಎಂದು ಹೇಳಿದಳ0ತೆ.

ಏನಾದರೂ ಒಳ್ಳೆಯ ಕೆಲಸವನ್ನು ಮಾಡಲು ಹೊರಟಾಗ ಅದರ ಬಗ್ಗೆ ಒಳ್ಳೆಯ ಮಾತನಾಡುವ ಬದಲು ನಿರಾಶಾವಾದದ ಮಾತನ್ನಡುವವರನ್ನು ಕುರಿತು ಇರುವ ಮಾತು ಇದು.
ಕೆಲಸಕ್ಕೆ ಹೊರಟಾಗ ಅಡ್ಡ ಬಾಯಿ ಹಾಕುವುದು ಎನ್ನುತ್ತಾರೆ ಇದಕ್ಕೆ ನಮ್ಮ ಕಡೆ.

ಇದೇ ಅರ್ಥದಲ್ಲಿ ಉಪಯೋಗಿಸುವ ಇನ್ನೊಂದು ಮಾತು; ಸೋಬಾನೆ ಹಾಡೇ ಸುಬ್ಬಕ್ಕ ಅಂದರೆ ಹಂದರದೊಳಗಿದ್ದವರೆಲ್ಲಾ ರಂಡೆ, ಮು0ಡೇರಾ ಎಂದಳು.

October 30, 2007

ಶಾಲೆ ಮಾಸ್ತರಿಗೆ … (ಉತ್ತರ ಕನ್ನಡದ ಗಾದೆ – 58)

ಶಾಲೆ ಮಾಸ್ತರಿಗೆ ಬುಧ್ಧಿಯಿಲ್ಲ, ಸ್ಟೇಷನ್ ಮಾಸ್ತರಿಗೆ ನಿದ್ದೆಯಿಲ್ಲ.

ಎಲ್ಲಾ ಶಾಲೆ ಮಾಸ್ತರುಗಳ ಕ್ಷಮೆ ಕೋರಿ ಇದನ್ನು ಬರೆಯುತ್ತಿದ್ದೇನೆ.
ನನಗೆ ಕಳಿಸಿದ ಎಲ್ಲ ಮಾಸ್ತರುಗಳಿಗೂ ನಾನು ಎಂದಿಗೂ ಚಿರರುಣಿ.
ಅವರೆಲ್ಲ ನೀಡಿದ ದಾರಿದೀಪಗಳ ಸಹಾಯದಿಂದ ಇಂದು ನಾನು ಈ ಮಟ್ಟವನ್ನು ತಲುಪಿದ್ದೇನೆ ಮತ್ತು ಮುನ್ನಡೆಯುತ್ತಿದ್ದೇನೆ.
ಎಲ್ಲಕ್ಕಿಂತ ಮಿಗಿಲಾಗಿ ನಾನು ಕೂಡ ಸುಮಾರು ಮೂರು ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ.

ಇದೆಲ್ಲದಕ್ಕೆ ಅಪವಾದವೆಂಬಂತೆ, ತಮ್ಮ ಕೆಲಸ ಸರಿಯಾಗಿ ಮಾಡದ ಕೆಲವು ಶಾಲೆ ಮಾಸ್ತರುಗಳು ಇರುವುದುಂಟು.
ಅಂಥವರನ್ನು ನೋಡಿ ಈ ಗಾದೆಯನ್ನು ಮಾಡಿರಲಿಕ್ಕೆ ಸಾಕು. ಇದನ್ನು ಇಲ್ಲಿಗೇ ಬಿಡುತ್ತೇನೆ. ವಿವರಣೆಯ ಅಗತ್ಯ ಇಲ್ಲ ಎಂದು ನಂಬಿದ್ದೇನೆ.

October 27, 2007

ಅಕ್ಕಸಾಲಿಗ ಚುಚ್ಚಿದರೆ … (ಉತ್ತರ ಕನ್ನಡದ ಗಾದೆ – 56 ಮತ್ತು 57)

ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.

ನಚ್ಚಗೆ ಆಗುವುದು ಎಂದರೆ ಬೆಚ್ಚಾಗಾಗುವಿಕೆ ಅಥವಾ ಹಿತವಾಗುವಿಕೆ.
ನೋವಿದ್ದಾಗ ಶಾಖ ಮಾಡಿಕೊಂಡರೆ ನಚ್ಚಗಾಗುತ್ತದೆ ಎನ್ನುವುದು ರೂಢಿ.
ಯಾರೋ ಕಿವಿ ಚುಚ್ಚಿದರೆ ನಚ್ಚಗಾಗುವುದಿಲ್ಲ ಆದರೆ ಅಕ್ಕಸಾಲಿಗ ಚುಚ್ಚಿದರೆ ಮಾತ್ರ ನಚ್ಚಗಾಗುತ್ತದೆ.

ನಾವು ಹೇಳಿದರೆ ಆ ಮಾತು ಪಥ್ಯವಾಗುವುದಿಲ್ಲ ಆದರೆ ಬೇರೆ ಯಾರೋ ಒಬ್ಬ ನಿರ್ದಿಷ್ಟ ವ್ಯಕ್ತಿ ಹೇಳಿದರೆ ಮಾತ್ರ ಮನಸ್ಸಿಗೆ ನಾಟುತ್ತದೆ ಎಂಬ ಅರ್ಥವನ್ನು ಕೊಡುತ್ತದೆ.

ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಶಂಖದಿಂದ ಬಿದ್ದರೇ ತೀರ್ಥ. ಬೇರೆ ಯಾವುದೋ ಪಾತ್ರೆಯಿಂದ ಬಿದ್ದರೂ, ಅದು ತೀರ್ಥವೇ ಆಗಿದ್ದರೂ ತೀರ್ಥವೆಂದು ಅನಿಸುವುದಿಲ್ಲ. ಆದರೆ ಅದೇ ನೀರು ಶಂಖದಿಂದ ಬಿದ್ದಾಗ ತೀರ್ಥವೆಂದು ಅನಿಸುತ್ತದೆ.

October 26, 2007

ಎಲ್ಲ ಕೆಲಸ ಆದ ಮೇಲೆ … (ಉತ್ತರ ಕನ್ನಡದ ಗಾದೆ – 55)

ಎಲ್ಲ ಕೆಲಸ ಆದ ಮೇಲೆ ಆದ ಮೇಲೆ ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳು.

ಯಾರೋ ಕೆಲಸ ಮಾಡುತ್ತಿದ್ದಾಗ ಸಹಾಯಕ್ಕೆ ಹೋಗದ ಅವಳು ಕೆಲಸ ಮುಗಿದ ಮೇಲೆ ಸಹಾಯ ಮಾಡಲು ನಾನು ಬರಲಾ ಅಥವಾ ನನ್ನ ಅತ್ತೆಯನ್ನು ಕಳುಹಿಸಲಾ ಎಂದು ಕೇಳಿದ್ದಳಂತೆ.

ನೀವು ಮಾಡುತ್ತಿರುವ ಕೆಲಸ ಮುಗಿದ ನಂತರ ಯಾರಾದರೂ ಸಹಾಯ ಮಾಡುತ್ತೇನೆಂದು ಬಂದಾಗ (ಮೊದಲು ಬರದೇ) ಈ ಗಾದೆಯು ನಿಮಗೂ ಕೂಡ ಉಪಯೋಗಕ್ಕೆ ಬರುತ್ತದೆ.

October 24, 2007

ಬಡವ ದೇವರನ್ನು … (ಉತ್ತರ ಕನ್ನಡದ ಗಾದೆ – 53 ಮತ್ತು 54)

ಬಡವ ದೇವರನ್ನು ಕಂಡರೆ ಬಿಲ್ವ ಪತ್ರೆಯೂ ಹುಬ್ಬು ಹಾರಿಸಿತ್ತು.

ಹುಬ್ಬು ಹಾರಿಸುವುದು ಎಂದರೆ ಮಾತನಾಡದೆಯೇ 'ಏನು' ಎಂದು ಕೇಳುವುದು.
ದೇವರು ಬಡವ ಎಂದು ಗೊತ್ತಾದರೆ ಅವನ ಎದುರಿನಲ್ಲಿ ಇಟ್ಟಿರುವ ಬಿಲ್ವ ಪತ್ರೆಯೂ ಕೂಡ ಸೊಕ್ಕಿನಿಂದ 'ಏನು' ಎಂದು ದೇವರನ್ನು ಪ್ರಶ್ನಿಸುತ್ತದೆ, ಹುಬ್ಬು ಹಾರಿಸುವ ಮೂಲಕ.

ಮೆತ್ತಗಿರುವವರನ್ನು ಕಂಡರೆ ಎಂಥ ಯೋಗ್ಯತೆ ಇಲ್ಲದವರೂ ಕೂಡ ಕೀಳಾಗಿ ನೋಡಲು ಪ್ರಯತ್ನಿಸುತ್ತಾರೆ ಎಂಬ ಅರ್ಥವನ್ನು ಕೊಡುತ್ತದ ಈ ಗಾದೆ.

ಸಾಮಾನ್ಯವಾಗಿ ಇದೇ ಅರ್ಥವನ್ನು ಕೊಡುವ ಇನ್ನೊಂದು ಮಾತೆಂದರೆ ಮೆತ್ತಗಿರುವಲ್ಲೇ ಮತ್ತೊಂದು ಗುದ್ದಲಿ ಅಗೆಯುತ್ತಾರೆ. ಮಣ್ಣನ್ನು ಅಗೆಯಲು ಹೊರಟಾಗ ಎಲ್ಲರೂ ಮೆತ್ತಗಿರುವ ಜಾಗವನ್ನು ಹುಡುಕುತ್ತಾರೆಯೇ ವಿನಹ ಗಟ್ಟಿಯಿರುವ ಜಾಗವನ್ನಲ್ಲ. ಎಲ್ಲಿ ಮಣ್ಣು ಮೆತ್ತಗಿದೆಯೋ ಅಲ್ಲಿಯೇ ಮತ್ತೊಂದು ಗುದ್ದಲಿ ಮಣ್ಣನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ.
ಅಂತೆಯೇ ಮೆತ್ತಗಿರುವ ಮನುಷ್ಯನಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

October 23, 2007

ಅಪ್ಪನನ್ನು ದೂಡಿ … (ಉತ್ತರ ಕನ್ನಡದ ಗಾದೆ – 52)

ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.

ದೂಡುವುದು ಎಂದರೆ ತಳ್ಳುವುದು.
ಅಪ್ಪ, ಮಗ ಇಬ್ಬರೂ ಮಾವಿನ ಹಣ್ಣುಗಳನ್ನು ಆರಿಸುತ್ತಿರುವಾಗ ಮಗನಿಗೆ ಒಂದು ಒಳ್ಳೆಯ ಮಾವಿನ ಹಣ್ಣು ಬಿದ್ದಿರುವುದು ಕಾಣಿಸುತ್ತದೆ.
ಅಪ್ಪ ಅದರ ಹತ್ತಿರ ಹೋಗಿಬಿಟ್ಟಿದ್ದಾನೆ.
ಇನ್ನೇನು ಅಪ್ಪ ಅದನ್ನು ಆರಿಸಿಕೊಳ್ಳುತ್ತಾನೆ ಎನ್ನುವಷ್ಟರಲ್ಲಿ ಮಗ ಬಂದು ಅಪ್ಪನನ್ನು ತಳ್ಳಿ ಚೆನ್ನಾಗಿರುವ ಆ ಮಾವಿನ ಹಣ್ಣನ್ನು ತಾನು ಎತ್ತಿಕೊಳ್ಳುತ್ತಾನೆ.

ಚೆನ್ನಾಗಿರುವ ವಸ್ತುವನ್ನು ಅಪ್ಪನಿಂದ ಮಗ/ ಮಗಳು ಹೇಗಾದರೂ ಮಾಡಿ ಕಿತ್ತುಕೊಂಡಾಗ ಈ ಮಾತನ್ನು ಹೇಳುತ್ತಾರೆ.

October 22, 2007

ಮೊದಲು ಹುಟ್ಟಿದ … (ಉತ್ತರ ಕನ್ನಡದ ಗಾದೆ – 51)

ಮೊದಲು ಹುಟ್ಟಿದ ಕಿವಿಗಿಂತ ನಂತರ ಹುಟ್ಟಿದ ಕೋಡು ಚೂಪು.

ಹಸುಗಳಿಗೆ ಕಿವಿ ಹುಟ್ಟುವಾಗಲೇ ಇದ್ದರೆ, ಕೋಡು ನಂತರದಲ್ಲಿ ಬೆಳೆಯುವಂತದು.
ಮೊದಲೇ ಹುಟ್ಟಿದರೂ ಕೂಡ ಕಿವಿ ಚೂಪಾಗಿಲ್ಲ ಆದರೆ ಕೋಡು ನಂತರ ಹುಟ್ಟಿದರೂ ಚೂಪಗಿರುತ್ತದೆ.

ಹಿರಿಯರಿಗಿಂತಲೂ ಕಿರಿಯರು ಜಾಣ್ಮೆ ತೋರಿದಾಗ ಈ ಮಾತನ್ನು ಹೇಳುವುದು ವಾಡಿಕೆ.

October 21, 2007

ಅಜ್ಜ ತಿನ್ನುವ ಕಬ್ಬು … (ಉತ್ತರ ಕನ್ನಡದ ಗಾದೆ – 49 ಮತ್ತು 50)

ಅಜ್ಜ ತಿನ್ನುವ ಕಬ್ಬು ರಸದಾಳಿ.

ಅಜ್ಜ, ಮೊಮ್ಮಗ ಇಬ್ಬರೂ ಕಬ್ಬು ತಿನ್ನುತ್ತಿದ್ದಾಗ ಮೊಮ್ಮಗನಿಗೆ ಅನಿಸುತ್ತದೆ- 'ಬಹುಶಃ ಅಜ್ಜ ತಿನ್ನುತ್ತಿರುವುದು ರಸದಾಳಿ ಕಬ್ಬೇ ಇರಬೇಕು. ಏಕೆಂದರೆ ಅವನು ಸ್ವಲ್ಪವೂ ಕಷ್ಟಪಡದೇ ತಿನ್ನುತ್ತಿದ್ದಾನೆ. ನಾನು ತಿನ್ನುತ್ತಿರುವ ಕಬ್ಬು ಮಾತ್ರ ಗಟ್ಟಿಯಾಗಿದೆ'' ಎಂದು. ಅಜ್ಜನ ಕೈಯ್ಯಲ್ಲಿರುವ ಕಬ್ಬನ್ನು ತೆಗೆದುಕೊಂಡು ಸ್ವಲ್ಪ ತಿಂದು ನೋಡಿದಾಗ ಗೊತ್ತಾಗುತ್ತದೆ, ಅದೂ ಕೂಡ ಗಟ್ಟಿಯಾಗಿದೆ ಎಂದು.

ಬೇರೆಯವರು ಮಾಡುತ್ತಿರುವ ಕೆಲಸ ಸುಲಭವೆಂದು ಕಾಣಿಸುತ್ತದೆ. ಅದೇ ಕೆಲಸವನ್ನು ನಾವು ಮಾಡಿದಾಗ ಅದರಲ್ಲಿರುವ ಕಷ್ಟ ಗೊತ್ತಾಗುತ್ತದೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಎಲ್ಲರಿಗೂ ಗೊತ್ತಿರುವ ಗಾದೆಯ ಬದಲಾಗಿ ಬಳಸಲ್ಪಡುವ ಗಾದೆ ಇದು.

ನನ್ನನ್ನು ಕಾಡುವ ದೆವ್ವ … (ಉತ್ತರ ಕನ್ನಡದ ಗಾದೆ – 48)

ನನ್ನನ್ನು ಕಾಡುವ ದೆವ್ವ ನೆರೆಮನೆ ಬೊಮ್ಮಕ್ಕನನ್ನು ಕಾಡು.

ನನ್ನನ್ನು ಕಾಡಲು ಬಂದ ದೆವ್ವದ ಬಳಿ, ನನ್ನನ್ನು ಕಾಡಬೇಡ, ಅಲ್ಲಿ ಪಕ್ಕದ ಮನೆಯಲ್ಲಿ ಬೊಮ್ಮಕ್ಕ ಇದ್ದಾಳೆ. ಅವಳನ್ನು ಕಾಡು ಎಂದು ಹೇಳುತ್ತೇನೆ.

ನಮಗೆ ಇಷ್ಟವಿಲ್ಲದವರು ನಮ್ಮ ಬಳಿ ಕೆಲಸ ತಂದಾಗ ನಾವು ಅವರನ್ನು ನಮ್ಮಿಂದ ದೂರ ಮಾಡಿ ಬೇರೆಯವರ ಬಳಿ ಸಾಗು ಹಾಕಿದಾಗ ಈ ಮಾತನ್ನು ಹೇಳಬಹುದು.

October 19, 2007

ತಾಮ್ರದ ದುಡ್ಡು … (ಉತ್ತರ ಕನ್ನಡದ ಗಾದೆ – 46 ಮತ್ತು 47)

ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಕೆಡಿಸಿತ್ತು.

ಹಣ ಅಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ಎಲ್ಲರಿಗೂ ಗೊತ್ತಿರುವಂತದು. ದುಡ್ಡು ಎಂತಹ ಸಂಬಂಧವನ್ನೂ ಹಾಳು ಮಾಡುವ ಗುಣವನ್ನು ಹೊಂದಿದೆ. ಅದಕ್ಕೆ ತಾಯಿ ಮಕ್ಕಳ ಸಂಬಂಧವೂ ಹೊರತಲ್ಲ.

ಹಣದ ಈ ಸ್ವಭಾವದ ಬಗ್ಗೆ ಮಾತನಾಡುವಾಗ, ವಿಶೇಷವಾಗಿ ಹಣದಿಂದಾಗಿ ಯಾರದ್ದೋ ಸಂಬಂಧ ಹಾಳಾದ ವಿಚಾರವನ್ನು ಮಾತನಾಡುವಾಗ ಈ ಗಾದೆಯ ಪ್ರಯೋಗವನ್ನು ಕಾಣಬಹುದು.

October 18, 2007

ಒಲ್ಲದ ಅಳಿಯ … (ಉತ್ತರ ಕನ್ನಡದ ಗಾದೆ – 45)

ಒಲ್ಲದ ಅಳಿಯ ಒರಳು ಕಲ್ಲು ನೆಕ್ಕಿದ್ದನಂತೆ.

ಇದರ ಬಗ್ಗೆ ಒಂದು ಕಥೆಯೇ ಇದೆ. ಅಳಿಯ ಮಾವನ ಮನೆಗೆ ಬಂದಾಗ ಅತ್ತೆ ಹೋಳಿಗೆ ಮಾಡಿದ್ದಳು.
ಊಟಕ್ಕೆ ಕುಳಿತಾಗ ಹೋಳಿಗೆ ಬಡಿಸಲು ಹೋದರೆ ದಾಕ್ಷಿಣ್ಯ ಮಾಡಿಕೊಂಡ ಅಳಿಯ ಒಂದು ಹೋಳಿಗೆಯನ್ನೂ ತಿನ್ನಲಿಲ್ಲ.
ಎಲ್ಲರೂ ಮಲಗಿದರು. ಕೆಲಸ ಮಾಡಿ ಸುಸ್ತಾಗಿದ್ದ ಅತ್ತೆ ಹೋಳಿಗೆಯ ಹೂರಣವನ್ನು ರುಬ್ಬಿದ್ಡ ಒರಳು ಕಲ್ಲನ್ನು ತೊಳೆಯದೇ ಮಲಗಿದ್ದಳು. ಅಳಿಯನಿಗೆ ಹೋಳಿಗೆ ತಿನ್ನಬೇಕೆಂದು ಆಸೆ. ಎಲ್ಲರೂ ಮಲಗಿದ್ದಾಗ ಸದ್ದು ಮಾಡದೇ ಎದ್ದು ಹೋಗಿ ಒರಳು ಕಲ್ಲನ್ನು ನೆಕ್ಕಿದ್ದನಂತೆ!

ಯಾವುದಾದರೂ ವಸ್ತು ಮನಸ್ಸಿಗೆ ಬೇಕು ಎನಿಸಿದರೂ ದಾಕ್ಷಿಣ್ಯಕ್ಕೆಂದು ಬೇಡ ಎಂದು ನಂತರ ಆಸೆಯನ್ನು ತಡೆಯಲಾರದೇ ಅದನ್ನು ತೆಗೆದುಕೊಂಡರೆ ಈ ಗಾದೆಯನ್ನು ಹೇಳುತ್ತಾರೆ.

October 17, 2007

ಕೇಳದೆಯೇ ಕುದುರೆ … (ಉತ್ತರ ಕನ್ನಡದ ಗಾದೆ – 44)

ಕೇಳದೆಯೇ ಕುದುರೆ ಕೊಟ್ಟ ಕೇಳಿದರೆ ಹೆಂಡತಿಯನ್ನೂ ಕೊಡುತ್ತಾನೆ.

ಅವನು ತುಂಬಾ ದಾನಿ. ಬಾಯಿ ಬಿಟ್ಟು ಕೇಳದಿದ್ದರೂ ತನ್ನ ಕುದುರೆಯನ್ನು ಕೊಟ್ಟುಬಿಟ್ಟಿದ್ದಾನೆ.
ಇನ್ನು ಒಂದು ವೇಳೆ ಕೇಳಿಯೇ ಬಿಟ್ಟರೆ ಹೆಂಡತಿಯನ್ನೂ ಕೊಟ್ಟುಬಿಡುತ್ತಾನೆ.

ಹಿಂದೆ ಮುಂದೆ ವಿಚಾರ ಮಾಡದೇ ಅನಗತ್ಯವಾಗಿ ದಾನ ಮಾಡುವವರನ್ನು ಕುರಿತಾಗಿ ಇರುವಂತಹ ಮಾತು ಇದು.
ದಾನ ಶೂರ ಕರ್ಣ ಎನ್ನುತ್ತೇವಲ್ಲ ಅಂಥವರು ಇವರು.

October 16, 2007

ಆಲದ ಮರವನ್ನು … (ಉತ್ತರ ಕನ್ನಡದ ಗಾದೆ – 43)

ಆಲದ ಮರವನ್ನು ನೋಡುತ್ತೀಯಾ? ಬ್ರಹ್ಮರಾಕ್ಷಸನನ್ನು ನೋಡುತ್ತೀಯಾ?

ಅದು ಸೊಂಪಾಗಿ ಬೆಳೆದ ಸುಂದರವಾದ ಆಲದ ಮರ. ಆದರೆ ಅದರಲ್ಲಿ ಬ್ರಹ್ಮರಾಕ್ಷಸ ವಾಸವಾಗಿದ್ದಾನೆ.
ಆಲದ ಮರದ ಮೇಲಿನ ಪ್ರೀತಿಯಿಂದ ಹತ್ತಿರ ಹೋದರೆ ಬ್ರಹ್ಮರಾಕ್ಷಸ ಹಿಡಿದುಕೊಳ್ಳುತ್ತಾನೆ.
ಹಾಗೆಂದು ಆಲದ ಮರವನ್ನು ಬಿಡಲೂ ಮನಸ್ಸಿಲ್ಲ.

ಒಂದು ವಸ್ತುವಿನ ಅಥವಾ ಒಬ್ಬ ಮನುಷ್ಯನ ಒಳ್ಳೆಯ ಗುಣಗಳ ಜೊತೆಯಲ್ಲೇ ಸೇರಿಕೊಂಡಿರುವ ಕೆಟ್ಟ ಗುಣಗಳನ್ನು ಅವಲೋಕಿಸುವಾಗ ಈ ಮಾತನ್ನು ಉಪಯೋಗಿಸುತ್ತಾರೆ.

October 15, 2007

ಉಂತೇ ಹೋಗೋಳೇ … (ಉತ್ತರ ಕನ್ನಡದ ಗಾದೆ – 41 ಮತ್ತು 42)

ಉಂತೇ ಹೋಗೋಳೇ ನನ್ನ ಅಪ್ಪನ ಸೊಸೆಯಾಗು.

ಸುಮ್ಮನೇ ಅವಳು ಹೋಗುತ್ತಿದ್ದಾಳೆ.
ಅವಳನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಕಷ್ಟ ಇಲ್ಲ ಎಂದು ಕಂಡುಕೊಂಡ ಅವನು ಅವಳನ್ನು ಕುರಿತು "ಸುಮ್ಮನೇ ಯಾಕೆ ಹೋಗುತ್ತೀಯಾ, ನನ್ನ ಹೆಂಡತಿಯಾಗು" ಎಂದು ಹೇಳುತ್ತಾನೆ.

ಕಷ್ಟಪಡದೇ ಸಿಗುವ ವಸ್ತುವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಕಾತುರರಾಗಿರುವವರನ್ನು ಕುರಿತು ಇರುವ ಮಾತು ಇದು.
ಇದೇ ಅರ್ಥ ಕೊಡುವ ಇನ್ನೊಂದು ಗಾದೆ ಎಂದರೆ ಪುಕ್ಕಟೆ ಸಿಗುವುದಿದ್ದರೆ ನನಗೊಂದಿರಲಿ, ನನ್ನ ಅಪ್ಪನಿಗೊಂದಿರಲಿ.

October 12, 2007

ಮದುವೆಯಾಗೋ ಬ್ರಹ್ಮಚಾರಿ … (ಉತ್ತರ ಕನ್ನಡದ ಗಾದೆ – 40)

ಮದುವೆಯಾಗೋ ಬ್ರಹ್ಮಚಾರಿ ಅಂದರೆ ನೀನೇ ಹೆಂಡತಿಯಾಗು ಅಂದ.

ಅವನು ಬ್ರಹ್ಮಚಾರಿಯಾಗಿಯೇ ಜೀವನ ಕಳೆಯುತ್ತಿದ್ದವ.
ಅವಳು ಅವನಿಗೆ, "ಮದುವೆಯಾಗು ನಿನ್ನ ಜೀವನ ಚೆನ್ನಾಗಿರುತ್ತದೆ" ಎಂದರೆ ಅವನು ತಿರುಗಿ ಅವಳಿಗೆ "ಹಾಗಾದರೆ ನೀನೇ ನನ್ನ ಹೆಂಡತಿಯಾಗು" ಎಂದನಂತೆ.

ಯಾರಿಗಾದರೂ ಒಳ್ಳೆಯದಾಗುವಂತಹ ಕೆಲಸವನ್ನು ಮಾಡಿಕೊಳ್ಳಲು ನಾವು ಹೇಳಿದಾಗ ಅವರು ನಮ್ಮ ಹತ್ತಿರವೇ ಆ ಕೆಲಸವನ್ನು ಮಾಡಿಕೊಡು ಅಂದರೆ ಈ ಗಾದೆಯನ್ನು ಹೇಳಬಹುದು.

October 11, 2007

ಬಗ್ಗಿದಾಗಲೇ … (ಉತ್ತರ ಕನ್ನಡದ ಗಾದೆ – 39)

ಬಗ್ಗಿದಾಗಲೇ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ.

ತನ್ನ ಅತ್ತೇರಿಗೆ ನಮಸ್ಕಾರ ಮಾಡಲೆಂದು ಬಗ್ಗಿದ್ದಾಳೆ. ಅಲ್ಲೇ ಪಕ್ಕದಲ್ಲಿ ಆಚೆ ಮನೆಯ ಅತ್ತೇರೂ ಕೂತಿದ್ಡಾಳೆ (ಬಹುಶಃ ಸಣ್ಣ ಅತ್ತೆ ಇರಬಹುದು). ಹೇಗೂ ಬಗ್ಗಿ ಆಗಿದೆ, ಹಾಗಾಗಿ ಆಚೆ ಮನೆಯ ಅತ್ತೇರಿಗೂ ಒಂದು ನಮಸ್ಕಾರ ಮಾಡಿ ಮುಗಿಸಿಬಿಡುತ್ತಾಳೆ.

ಒಂದು ಕೆಲಸವನ್ನು ಮಾಡುವಾಗ ಅದರ ಜೊತೆಯಲ್ಲಿಯೇ ಇನ್ನೊಂದು ಕೆಲಸದ ಸಾಧ್ಯತೆಯೂ ಆಕಸ್ಮಾತಾಗಿ ಅರಿವಾಗಿ, ತಕ್ಷಣ ಅದನ್ನೂ ಕೂಡ ಮಾಡಿ ಮುಗಿಸಿಬಿಟ್ಟಾಗ ಹೇಳುವ ಗಾದೆ ಇದು.

October 10, 2007

ಅಲವರಿಕೆಯ ಗಂಡನಿಗೆ … (ಉತ್ತರ ಕನ್ನಡದ ಗಾದೆ – 37 ಮತ್ತು 38)

ಅಲವರಿಕೆಯ ಗಂಡನಿಗೆ ತುದಿ ಕೈಯ್ಯಲ್ಲಿ ಬಾಯಿ ಬಡಿದುಕೊಂಡಿದ್ದಳು.

ಅವನು ಕಿರಿಕಿರಿ ಮಾಡುತ್ತಿದ್ದ ಗಂಡ. ಅವನು ಸತ್ತಾಗ ಅವಳು ಒಲ್ಲದ ಮನಸ್ಸಿನಿಂದ ಬಾಯಿಬಡಿದುಕೊಳ್ಳುತ್ತಾಳೆ.
ಇಡೀ ಕೈಯ್ಯಾನ್ನೂ ಕೂಡ ಉಪಯೋಗಿಸುವ ಮನಸ್ಸಿಲ್ಲ ಅವಳಿಗೆ.
ಅವನು ಸತ್ತಿದ್ದಾನೆ; ಬಾಯಿ ಬಡಿದುಕೊಳ್ಳದೇ ಬೇರೆ ದಾರಿಯಿಲ್ಲ.
ಅದಕ್ಕಾಗಿ ತುದಿ ಕೈಯ್ಯಲ್ಲಿಯೇ ಬಾಯಿ ಬಡಿದುಕೊಂಡು ಮುಗಿಸುತ್ತಾಳೆ.

ನೀವು ಯಾರಿಗಾದರೂ ಇಷ್ಟವಿಲ್ಲದ ಕೆಲಸ ಹೇಳಿದಾಗ ಅವರು ಅದನ್ನು
ಒಲ್ಲದ ಮನಸ್ಸಿನಿಂದ ಹೇಗೆ ಹೇಗೋ ಅಂತೂ ಮಾಡಿ ಮುಗಿಸಿದಾಗ ಈ ಮಾತನ್ನು ಹೇಳಿ!

ಇದಕ್ಕೆ ಬದಲಾಗಿ ನೀವು ಹೇಳಬಹುದಾದಂತಹ ಇನ್ನೊಂದು ಗಾದೆ- ಕಟಕಟೆಯ ದೇವರಿಗೆ ಮರದ ಜಾಗಟೆ.
ಅವನು ಕಿರಿಕಿರಿ ಮಾಡುವ ದೇವರು. ಆದರೂ ಅವನ ಪೂಜೆಗೆ ಜಾಗಟೆ ಬಾರಿಸುವುದು ಅನಿವಾರ್ಯ.
ಲೋಹದ ಜಾಗಟೆ ಬಾರಿಸಲು ಮನಸ್ಸಿಲ್ಲದೇ ಮರದ ಜಾಗಟೆಯಲ್ಲಿಯೇ ಪೂಜೆ ಮುಗಿಸಲಾಗುತ್ತದೆ.

October 9, 2007

ಇಷ್ಟು ಕ0ಡ್ಯಾ ವಿಷ್ಣು ಭಟ್ಟ … (ಉತ್ತರ ಕನ್ನಡದ ಗಾದೆ – 36)

ಇಷ್ಟು ಕ0ಡ್ಯಾ (ಕಂಡೆಯಾ) ವಿಷ್ಣು ಭಟ್ಟ ಮುಪ್ಪಿನ ಕಾಲಕ್ಕೆ ಮೂರು ಹೆ೦ಡ್ರು.

ವಿಷ್ಣು ಭಟ್ಟನಿಗೆ ಮುಪ್ಪಿನ ಕಾಲ ಬರುವುದರೊಳಗೆ ಮುರು ಸಲ ಮದುವೆಯಾಗಿ, ಮೂರು ಹೆಂಡತಿಯರನ್ನು ಕಂಡಿದ್ದಾನೆ.
ಆದರೂ ಜೀವನದಲ್ಲಿ ತನಗೆ ಸಿಕ್ಕಿದ್ದು ಸಾಲದು ಎಂದು ಹೇಳುತ್ತಲೇ ಇರುತ್ತಾನೆ.

ಜೀವನದಲ್ಲಿ ಸಾಮಾನ್ಯವಾಗಿ ಎಲ್ಲಾ ಸುಖಗಳೂ ಸಿಕ್ಕಿದರೂ ಇನ್ನೂ ಸಾಲದು ಎಂದು ಹೇಳುತ್ತಾ ಕೊರಗುತ್ತಿರುವವರನ್ನು ಕುರಿತು 'ನಿನಗೆ ಇಷ್ಟೆಲ್ಲಾ ಸಿಕ್ಕಿದೆ, ಸುಮ್ಮನಿರು. ಇನ್ನೊ ದುರಾಸೆ ಪಡಬೇಡ' ಎಂದು ಹೇಳುವಾಗ ಉಪಯೋಗಿಸುವ ಮಾತು ಇದು.

October 8, 2007

ಕರುವಿನ ಹಾರಾಟ … (ಉತ್ತರ ಕನ್ನಡದ ಗಾದೆ – 35)

ಕರುವಿನ ಹಾರಾಟ ಗೂಟದ ಕೆಳಗೆ.

ಆಕಳ ಕರು ಗೂಟಕ್ಕೆ ಕಟ್ಟಿ ಹಾಕಿಕೊಂಡಿದ್ದಾಗ ತಪ್ಪಿಸಿಕೊಳ್ಳಲೆಂದು ಕೆಲವೊಮ್ಮೆ ಜಿಗಿದಾಡುತ್ತದೆ.
ಆದರೆ ಗೂಟ ಎತ್ತರವಿರುವುದರಿಂದ ಅದಕ್ಕೆ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಸಾಮಾನ್ಯವಾಗಿ ಸಣ್ಣ ಮಕ್ಕಳು ದೊಡ್ಡವರ ಇಚ್ಛೆಗೆ ವಿರುಧ್ಧವಾಗಿ ಹೋರಾಡಿ ವಿಫಲರಾದಾಗ ಈ ಗಾದೆಯ ಉಪಯೋಗ ಕಾಣ ಸಿಗುತ್ತದೆ.

October 6, 2007

ಸುಟ್ಟೇವು ಸುಡುವ ಮುದುಕಿಗೆ … (ಉತ್ತರ ಕನ್ನಡದ ಗಾದೆ – 33 ಮತ್ತು 34)

ಸುಟ್ಟೇವು ಸುಡುವ ಮುದುಕಿಗೆ ಸಿಂಬಳ ತೆಗೆಯಲು ಇನ್ನೊಬ್ಬಳು.

ಸುಟ್ಟೇವು ಅಂದರೆ ಎಣ್ಣೆಯಲ್ಲಿ ಕರಿದ ಸಿಹಿ ತಿಂಡಿ.
ಸುಟ್ಟೇವನ್ನು ಕರಿಯುತ್ತಿರುವ ಮುದುಕಿಗೆ ಸಿಂಬಳ ಬಂದರೆ ಅದನ್ನು ತೆಗೆಯಲು ಇನ್ನೊಬ್ಬಳು ಸಹಾಯಕಿ ಬೇಕು.

ಮಾಡುತ್ತಿರುವುದು ಸಣ್ಣ ಕೆಲಸವಾದರೂ ಅದಕ್ಕೆ ಬೇರೆಯವರ ಸಹಾಯವನ್ನು ಬಯಸಿದರೆ ಈ ಗಾದೆ ಅನ್ವಯಿಸುತ್ತದೆ.

ಇದಕ್ಕೆ ಬದಲಿಯಾಗಿ ಬಳಸುವಂತಹ ಗಾದೆ ಎಂದರೆ ಅಂಬಲಿ ಕುಡಿಯುವವನಿಗೆ ಮೀಸೆ ತೀಡಲು ಇನ್ನೊಬ್ಬ.
ಇದನ್ನು ನೆನಪಿಸಿದಂತಹ ವಿಕಾಸ್‌ಗೆ ಧನ್ಯವಾದಗಳು.

October 5, 2007

ಕುರುಡಿಯ ಕೈಲಿ … (ಉತ್ತರ ಕನ್ನಡದ ಗಾದೆ – 32)

ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.

ಒಗೆಯುವುದು ಎಂದರೆ ಎಸೆಯುವುದು ಎಂದು ಅರ್ಥ.
ಕುರುಡಿಯ ಕೈಲಿ ಬಾಳೆಯನ್ನು ತೆಗೆದು ಎಸೆ ಎಂದು ಹೇಳಿದರೆ ಅವಳಿಂದ ಅದು ಆಗದ ಕೆಲಸ.
ಬಾಳೆಯನ್ನು ತೆಗೆಯುವುದು ಮಾತ್ರವಲ್ಲದೇ ಅದನ್ನು ಎಸೆಯುವ ಅರೆಗೂ ಅವಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಬೇಕು.
ಅದೆಲ್ಲದರ ಬದಲು ಆ ಕೆಲಸವನ್ನು ನಾವೇ ಮಾಡುವುದು ಉತ್ತಮ ಎನಿಸುತ್ತದೆ.

ಯಾರಿಗಾದರೂ ಗೊತ್ತಿಲ್ಲದ ಕೆಲಸವನ್ನು ಮಾಡಲು ಹೇಳಿ ಅವರಿಗೆ ಪ್ರತಿಯೊಂದು ಹಂತದಲ್ಲೂ ನಾವೇ ಸಹಾಯ ಮಾಡಬೇಕಾದಂತ ಸಂದರ್ಭದಲ್ಲಿ ಈ ಗಾದೆಯ ಉಪಯೋಗವನ್ನು ಕಾಣಬಹುದು.

October 4, 2007

ಆದರೆ, ಹೋದರೆ … (ಉತ್ತರ ಕನ್ನಡದ ಗಾದೆ – 31)

ಆದರೆ, ಹೋದರೆ, ಹತ್ತಿ ಬೆಳೆದರೆ, ಅಜ್ಜಿಗೊಂದು ಪಟ್ಟೆ ಸೀರೆ.

ಬಿತ್ತಿದ ಹತ್ತಿ ಬೀಜ ಸರಿಯಾಗಿ ಹುಟ್ಟಿ, ಬೆಳೆದು, ಹೂವಾದರೆ ಅಜ್ಜಿಗೊಂದು ಪಟ್ಟೆ ಸೀರೆಯನ್ನು ನೇಯಿಸಿ ಕೊಡಬಹುದು.

ಎಲ್ಲಾ ಕಡೆಯಿಂದ ಅನಿಶ್ಚಿತತೆ ಇದ್ದು, ಎಲ್ಲವೂ ನಾವೆಣಿಸಿದಂತೆ ನಡೆದರೆ ಮಾತ್ರ ಏನೋ ಒಂದು ಲಾಭ ಆಗಬಹುದು ಎಂಬುದನ್ನು ಸೂಚಿಸಲು ಹೇಳುವ ಗಾದೆ ಇದು.

October 3, 2007

ಹಾರುವ ಮಂಗಕ್ಕೆ … (ಉತ್ತರ ಕನ್ನಡದ ಗಾದೆ – 30)

ಹಾರುವ ಮಂಗಕ್ಕೆ ಏಣಿ ಹಾಕಿ ಕೊಟ್ಟಂತೆ.

ಮೊದಲೇ ಅದು ಹಾರುತ್ತ, ಕುಣಿಯುತ್ತ, ಚೇಷ್ಟೆ ಮಾಡುತ್ತಿರುವ ಮಂಗ.
ಅದಕ್ಕೆ ಏಣಿಯನ್ನೂ ಹಾಕಿ ಕೊಟ್ಟು ಬಿಟ್ಟರೆ ಅದರ ಚೇಷ್ಟೆಗೆ ಮಿತಿಯೇ ಇರುವುದಿಲ್ಲ.

ಮೊದಲಿನಿಂದಲೇ ಕಪಿ ಬುದ್ಧಿ ಇರುವವರಿಗೆ ಯಾರಾದರೂ ಇನ್ನಷ್ಟು ಪ್ರೋತ್ಸಾಹ ಕೊಟ್ಟಾಗ ಹೇಳುವ ಮಾತು ಇದು.
ಮಂಗನಿಗೆ ಹೆಂಡ ಕುಡಿಸಿ ಚೇಳು ಕಡಿಸಿಡರೆ... ಎಂಬ ವಾಡಿಕೆಯ ಮಾತೂ ಕೂಡ ಇದೆ.

October 2, 2007

ಸವಿ ಕಂಡ ನಾಯಿ … (ಉತ್ತರ ಕನ್ನಡದ ಗಾದೆ – 28 ಮತ್ತು 29)

ಸವಿ ಕಂಡ ನಾಯಿ ಕಿವಿ ಕೊಯ್ದರೂ ಬಿಡುವುದಿಲ್ಲ.

ನಾಯಿಗೆ ಯಾವುದಾದರೂ ಒಂದು ಕೆಟ್ಟ ವಸ್ತುವಿನ ರುಚಿ ಹತ್ತಿತೆಂದರೆ ಅದು ಕಿವಿ ಕೊಯ್ದರೂ
ಆ ವಸ್ತುವಿನ ಸಹವಾಸವನ್ನು ಬಿಡುವುದಿಲ್ಲ.

ಯಾರಾದರೂ ಒಂದು ಕೆಟ್ಟ ಚಟಕ್ಕೆ ಬಲಿಯಾದರೆಂದರೆ ತೀವ್ರವಾದ ಶಿಕ್ಷೆಯಿಂದ ಕೂಡ ಅವರ ಚಟವನ್ನು ಬಿಡಿಸುವುದು ಕಷ್ಟ ಎಂಬ ಅರ್ಥವನ್ನು ಕೊಡುತ್ತದೆ.

ಇದರ ಹೊರತಾಗಿ ಇಂತಹದೇ ಸಂದರ್ಭದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ ಎಂದರೆ ಹುಟ್ಟು ಗುಣ ಚಟ್ಟ ಹತ್ತಿದರೂ ಹೋಗುವುದಿಲ್ಲ.
ಅಂದರೆ ಮೊದಲಿನಿಂದ ರೂಡಿಸಿಕೊಂಡು ಬಂದ ಚಟ ಸಾಯುವ ತನಕ ಹೋಗುವುದಿಲ್ಲ ಎಂದು.

October 1, 2007

ತಲೆಯನ್ನು … (ಉತ್ತರ ಕನ್ನಡದ ಗಾದೆ – 26 ಮತ್ತು 27)

ತಲೆಯನ್ನು ಕಡಿದು ಕೊಟ್ಟರೂ ಸೋರೆ ಬುರುಡೆ ಎಂದೇ ಹೇಳುತ್ತಾನೆ.

ಸೋರೆ ಬುರುಡೆ ಎಂದರೆ ಸೋರೆ ಕಾಯಿ ಅಥವಾ ಕುಂಬಳ ಕಾಯಿಯನ್ನು ಪೂರ್ತಿಯಾಗಿ ಬೆಳೆಸಿ, ಒಣಗಿಸಿ ಅದರ ಒಳಗಿನ ತಿರುಳು ಮತ್ತು ಬೀಜಗಳನ್ನು ತೆಗೆದಿಟ್ಟಿದ್ದು. ನಮ್ಮ ತಲೆಯನ್ನೇ ಕಡಿದು ಆತನ ಕೈಯ್ಯಲ್ಲಿ ಕೊಟ್ಟರೂ ಆತ ಅದನ್ನು ತಲೆ ಎಂದು ಒಪ್ಪಿಕೊಳ್ಳದೇ ಅದು ಸೋರೆ ಬುರುಡೆ ಎಂದು ಹೇಳುತ್ತಾನೆ.

ತಮ್ಮ ವಾದ ತಪ್ಪಿದ್ದರೂ ಕೂಡ ಅದನ್ನೇ ಮುಂದುವರಿಸುತ್ತಾ, ಬೇರೆಯವರ ಮಾತನ್ನು ಸುತಾರಾಂ ಒಪ್ಪಿಕೊಳ್ಳದವರನ್ನು ಕುರಿತು ಈ ಗಾದೆಯನ್ನು ಬಳಸಿ.

ಇದಕ್ಕೆ ಸರಿ ಹೋಗುವಂತಹ ಮತ್ತು ತುಂಬಾ ಪ್ರಚಲಿತವಾಗಿರುವ ಗಾದೆ ಎಂದರೆ ತಾನು ಕಂಡ ಮೊಲಕ್ಕೆ ಮೂರೇ ಕಾಲು.

September 30, 2007

ಮನೆ ದೇವರೇ … (ಉತ್ತರ ಕನ್ನಡದ ಗಾದೆ – 23, 24 ಮತ್ತು 25)

ಮನೆ ದೇವರೇ ಮಣ್ಣು ತಿನ್ನುತ್ತಿರುವಾಗ ಮಾರಿಯಮ್ಮ ಹೋಳಿಗೆ ಕೇಳಿದ್ದಳು.

ಮನೆಯಲ್ಲಿನ ದೇವರಿಗೇ ನೈವೇದ್ಯ ಮಾಡುವುದು ಕಷ್ಟವಾಗಿರುವಾಗ ಮರಿಯಮ್ಮನಿಗೆ ಎಲ್ಲಿಂದ ಹೋಳಿಗೆ ನೈವೇದ್ಯ ಮಾಡುವುದು?

ನಾವೇ ಕಷ್ಟದಲ್ಲಿರುವಾಗ ಇನ್ನೊಬ್ಬರು ನಮ್ಮಿಂದ ಮಾಡಲು ಸಾಧ್ಯವಿಲ್ಲದ ಸಹಾಯವನ್ನು ಬಯಸಿದಾಗ ಹೇಳುವ ಮಾತು ಇದು.

ಇದಕ್ಕೆ ಹತ್ತಿರದ ಇನ್ನೆರಡು ಗಾದೆಗಳೆಂದರೆ, ಹನುಮಂತ ದೇವರೇ ಹಗ್ಗ ತಿನ್ನುತ್ತಿರುವಾಗ ಪೂಜಾರಿ ಶಾವಿಗೆ ಕೇಳಿದ್ದನು ಮತ್ತು
ಗುರುವಿಗೇ ಗುಟುಕು ನೀರು ಶಿಷ್ಯನಿಗೆಲ್ಲಿಂದ ಎಣ್ಣೆ ಮಜ್ಜನ?

September 29, 2007

ಗಂಡ ರಂಡೆ ಎಂದರೆ … (ಉತ್ತರ ಕನ್ನಡದ ಗಾದೆ – 22)

ಗಂಡ ರಂಡೆ ಎಂದರೆ ಘಟ್ಟದ ಕೆಳಗಿನ ಭಟ್ಟನೂ ಹೇಳುತ್ತಾನೆ.

ರಂಡೆ ಎಂದರೆ ಸ್ವಲ್ಪ ಕೀಳು ಭಾಷೆಯಲ್ಲಿ ವಿಧವೆ ಎಂದರ್ಥ.
ಸಾಮಾನ್ಯವಾಗಿ ಬಯ್ಯುವಾಗ ಈ ಶಬ್ದವನ್ನು ಬಳಸುತ್ತಾರೆ.
ಗಂಡನೇ ತನ್ನ ಹೆಂಡತಿಯನ್ನು ರಂಡೆ ಎಂದು ಕರೆದರೆ ಘಟ್ಟದ ಕೆಳಗಿನಿಂದ ಅತಿಥಿಯಾಗಿ ಬಂದ ಭಟ್ಟನೂ ಕೂಡ ಅವಳನ್ನು ಹಾಗೆಯೇ ಸಂಭೋಧಿಸುತ್ತಾನೆ.

ನಮಗೆ ತೀರಾ ಹತ್ತಿರದವರೇ ನಮ್ಮನ್ನು ಅವಮಾನಿಸಿದರೆ ದೂರದವರೂ ಕೂಡ ಅವಮಾನಿಸಿಯೇ ತೀರುತ್ತಾರೆ ಎಂಬುದು ಈ ಗಾದೆಯ ಅರ್ಥ.

September 28, 2007

ಮನೆಯಲ್ಲಿ ಗದ್ದಲ ಎಂದು … (ಉತ್ತರ ಕನ್ನಡದ ಗಾದೆ – 21)

ಮನೆಯಲ್ಲಿ ಗದ್ದಲ ಎಂದು ಮಂಜುಗುಣಿ ತೇರಿಗೆ ಹೋಗಿದ್ದನಂತೆ.

ತೇರು ಎಂದರೆ ಸಣ್ಣ ಪ್ರಮಾಣದ ಜಾತ್ರೆ.
ಮನೆಯಲ್ಲಿ ಗದ್ದಲವನ್ನು ತಡೆಯಲಾರದೇ ಒಬ್ಬನು ಮಂಜುಗುಣಿ ಎಂಬ ಊರಿನಲ್ಲಿ ನಡೆಯುವ ತೇರಿಗೆ ಹೋಗಿದ್ದನಂತೆ.

ಯಾರಾದರೂ ಮನಃ ಶಾಂತಿಯನ್ನು ಹುಡುಕಿಕೊಂಡು ಇದ್ದ ಸ್ಥಳದಿಂದ ಬೇರೆ ಕಡೆ ಹೋಗಿ ಅಲ್ಲೂ ಗದ್ದಲದ ಪರಿಸ್ಥಿತಿಯನ್ನೇ ಎದುರಿಸುವ ಪ್ರಸಂಗ ಬಂದರೆ ಈ ಮಾತನ್ನು ಉದಾಹರಿಸುತ್ತಾರೆ.

September 27, 2007

ಊದುವುದನ್ನು ಕೊಟ್ಟು … (ಉತ್ತರ ಕನ್ನಡದ ಗಾದೆ – 19 ಮತ್ತು 20)

ಊದುವುದನ್ನು ಕೊಟ್ಟು ಬಾರಿಸುವುದನ್ನು ತೆಗೆದುಕೊಂಡಿದ್ದನು.

ಊದುವ ವಾದ್ಯ ಕಷ್ಟಕರ ಎಂದೆನಿಸಿ ಅಥವಾ ಅದರಲ್ಲಿ ನಿರಾಸಕ್ತಿ ಹೊಂದಿ ಬಾರಿಸುವ ತಮಟೆಯನ್ನು ತೆಗೆದುಕೊಂಡಿದ್ದನು.
ಆದರೆ ಎರಡರಲ್ಲೂ ಅಷ್ಟೇ ಕಷ್ಟ ಇದೆ ಎಂದು ಅವನಿಗೆ ನಂತರ ತಿಳಿಯುತ್ತದೆ.

ಯಾವುದೋ ಒಂದು ಕೆಲಸದಲ್ಲಿ ಅಥವಾ ವಸ್ತುವಿನಲ್ಲಿ ಕಷ್ಟ ಇದೆ ಎಂದು ಅದನ್ನು ಬದಲಾಯಿಸಿಕೊಂಡರೆ ಇನ್ನೊಂದರಲ್ಲೂ ಅಷ್ಟೇ ಕಷ್ಟ ಇದೆಯೆಂದು ತಿಳಿದಾಗ ಈ ಮಾತನ್ನು ಹೇಳಬಹುದು.

ಇದಕ್ಕೆ ಸರಿಸಮಾನವಾಗಿ ಬಳಸುವ ಮಾತೆಂದರೆ ಕರಿಯುವ ಬಾಣಲೆಯಿಂದ ಉರಿಯುವ ಬೆಂಕಿಗೆ ಬಿದ್ದಂತೆ.
ಒಂದು ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಇನ್ನೊಂದು ದೊಡ್ಡ ಕಷ್ಟದಲ್ಲಿ ಸಿಕ್ಕಿಕೊಂಡಾಗ ಬಳಸುವ ಮಾತು.

September 26, 2007

ಮಾಣಿ, ಗೋಣಿ, ಓಣಿ … (ಉತ್ತರ ಕನ್ನಡದ ಗಾದೆ – 17 ಮತ್ತು 18)

ಮಾಣಿ, ಗೋಣಿ, ಓಣಿ ಈ ಮೂರು ಸಿಗದಿದ್ದರೆ ನಾಯಿ ಮೂರೂ ಮುಕ್ಕಾಲು ಘಳಿಗೆಯಲ್ಲಿ ಕಾಶಿಗೆ ಹೋಗುತ್ತಿತ್ತು.

ನಾಯಿ ಕಾಶಿಗೆ ಹೊರಟರೆ ನೇರವಾಗಿ ಹೋಗುವುದಿಲ್ಲ. ಮಾಣಿ (ಹುಡುಗ) ಕಂಡ ಕೂಡಲೇ ಆಟ ಆಡುತ್ತದೆ, ಗೋಣಿಚೀಲ ಕಂಡ ಕೂಡಲೇ ಮಲಗಿಕೊಳ್ಳುತ್ತದೆ ಮತ್ತು ಓಣಿ ಕಂಡ ಕೂಡಲೇ ಸುಮ್ಮನೆ ಅಲೆಯತೊಡಗುತ್ತದೆ.
ಹಾಗಾಗಿ ಅದು ಕಾಶಿಯನ್ನೇ ತಲುಪುವುದಿಲ್ಲ.

ನೇರವಾಗಿ ಗುರಿ ಮುಟ್ಟುವ ಬಗ್ಗೆ ಆಲೋಚನೆ ಮಾಡದೇ ಸಣ್ಣ ಪುಟ್ಟ ಆಕರ್ಷಣೆಗಳಲ್ಲೇ ತಲ್ಲೀನರಾಗಿರುವವರ ಬಗ್ಗೆ ಹೇಳುವಾಗ ಈ ಗಾದೆಯನ್ನು ಬಳಸುತ್ತಾರೆ.

ಇದಕ್ಕೆ ಹತ್ತಿರವಾದ ಇನ್ನೊಂದು ಗಾದೆ ಅಂದರೆ ಮಾಡುವ ಕೆಲಸ ಬಿಟ್ಟು ಹಾಡುವ ದಾಸಯ್ಯನ ಜೊತೆ ಹೋಗಿದ್ದಳು.
ಅವಳು ಕೆಲಸ ಮಾಡುತ್ತಿದ್ದಾಗ ದಾಸಯ್ಯ ಬಂದು ಹಾಡು ಹೇಳಿದರೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಅವನ ಜೊತೆ ಹೋಗಿ ಬಿಡುತ್ತಾಳೆ.ತನ್ನ ಕೆಲಸವನ್ನು ನಿರ್ಲಕ್ಷಿಸಿ ಇನ್ನೊಂದು ಆಕರ್ಷಣೆಗೆ ಒಳಪಟ್ಟಾಗ ಬಳಸುವ ಮಾತು.

September 25, 2007

ಹೊಳೆಗೆ ಮೂರು ಮಾರು … (ಉತ್ತರ ಕನ್ನಡದ ಗಾದೆ – 16)

ಹೊಳೆಗೆ ಮೂರು ಮಾರು ಇರುವಾಗಲೇ ಚಲ್ಲಾಣ ಮೇಲೇರಿಸಿದ್ದ.

ನೀರು ತಾಕಿದರೆ ಒದ್ದೆಯಾಗುತ್ತದೆ ಎಂದು ಹೊಳೆ ಇನ್ನೊ ಸ್ವಲ್ಪ ದೂರದಲ್ಲಿರುವಾಗಲೇ ಚಡ್ಡಿಯನ್ನು ಮೇಲೇರಿಸಿಕೊಂಡಿದ್ದ.

ಅಗತ್ಯಕ್ಕಿಂತ ತುಂಬಾ ಮೊದಲೇ ಮುಂಜಾಗ್ರತೆವಹಿಸುವವರನ್ನು ನೋಡಿ ಈ ಗಾದೆಯನ್ನು ಮಾಡಿದ್ದಾರೆ.

September 21, 2007

ಕುದುರೆ ಕಂಡರೆ… (ಉತ್ತರ ಕನ್ನಡದ ಗಾದೆ – 14 ಮತ್ತು 15)

ಕುದುರೆ ಕಂಡರೆ ಕಾಲು ನೋವು.

ಎಷ್ಟೋ ಹೊತ್ತಿನ ತನಕ ಸುಮ್ಮನೆ ನಡೆಯುತ್ತಿದ್ದವನಿಗೆ ಕುದುರೆ ಕಂಡ ಕೂಡಲೇ ಕಾಲು ನೋವು ಬಂದಂತೆನಿಸುತ್ತದೆ.

ಆರಾಮದಾಯಕ ವಸ್ತುಗಳನ್ನು ಕಂಡ ಕೂಡಲೇ ಆಯಾಸವೆಂದು ಹೇಳುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.

ಹೆಚ್ಚೂ ಕಡಿಮೆ ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಹೊತ್ತುಕೊಂಡು ಹೋಗುವವರಿದ್ದರೆ ಸತ್ತವರಂತೆ ಬಿದ್ದೇನು. ಬೇರೆ ಯಾರಾದರೂ ಕೆಲಸ ಮಾಡುತ್ತಾರೆ ಎಂದು ಅನಿಸಿದರೆ ನಾನು ಆಲಸಿಯಾಗುತ್ತೇನೆ ಎಂಬ ಅರ್ಥವನ್ನು ಕೊಡುತ್ತದೆ.

ಇವೆರಡರ ಬದಲಿಗೆ ಉಪಯೋಗಿಸಬಹುದಾದಂತ ಗಾದೆ ಎಂದರೆ ತಾಯಿ ಕಂಡರೆ ತಲೆ ಬೇನೆ. ಇದನ್ನು ನೆನಪಿಸಿದ ಗಾಯತ್ರಿ ಅವರಿಗೆ ಧನ್ಯವಾದಗಳು.

September 20, 2007

ಅಕಸ್ಮಾತ್ ಉದುರಿದ ಹನಿಗಳು...!!

Chatting

ಪಕ್ಕದಲ್ಲಿಯೇ ಜೀವದ ಗೆಳೆಯ ನಿಂತಿದ್ದರೂ
ಅವನ ಕಡೆ ದಿವ್ಯ ನಿರ್ಲಕ್ಷ ತೋರಿ
ದೂರದ ಮುಖ ಕಾಣದಿರುವ
ಗೆಳೆಯನ ಜೊತೆ
ಹರಟೆ ಹೊಡೆಯುವುದೇ chatting.
========================================================

i-pod

'ಅದೂ ಇದೂ ಕೇಳಿಸದಂತೆ
ಕಿವುಡನ ಮಾಡಯ್ಯ...' ಎಂದು
ದಾಸರು ಅಂದು ಹಾಡಿದ್ದು
ದೇವರಿಗೆ ಇಂದು ಕೇಳಿಸಿರಬೇಕು.
ಜಗತ್ತಿಗೆ i-pod ಕರುಣಿಸಿ
ತಣ್ಣಗೆ ಕುಳಿತಿದ್ದಾನೆ.


ನಾನೆಷ್ಟು ಮೊರೆಯಿಟ್ಟರೂ
ಕೇಳುತ್ತಿಲ್ಲ ಆತ ನನ್ನ ಪಾಡು.
ಆ ದೇವರ ಬಳಿಯೂ ಇರಬಹುದೇ
i- ಪಾಡು?
========================================================

ಸೃಷ್ಟಿ ವೈಚಿತ್ರ್ಯ

ಬ್ರಹ್ಮನ ಸೃಷ್ಟಿ ವಿಚಿತ್ರವಾಗತೊಡಗಿದೆ:
ಹಿಂದೆ ಗಾತ್ರ ದೊಡ್ಡದಾದಂತೆ
ಸಾಮರ್ಥ್ಯ ಹೆಚ್ಚಾಗುತ್ತಿತ್ತು, ರಾಕ್ಷಸರಿಗೆ.
ಇಂದು ಗಾತ್ರ ಚಿಕ್ಕದಾದಂತೆ
ಸಾಮರ್ಥ್ಯ ಹೆಚ್ಚಾಗುತ್ತಿದೆ USB, Nano ಗಳಿಗೆ.
========================================================

Google

ಎಲ್ಲಾ ಮಾಹಿತಿಗಳನ್ನೂ ನೆನಪಿಟ್ಟುಕೊಳ್ಳುವ
ಅಗತ್ಯ ಈಗ ಇಲ್ಲ ಬಿಡಿ.
Google ಗೆ ಹೋಗಿ ನೋಡಿ.
========================================================

ಸುಖ ಹೆಚ್ಚಾಗಿ… (ಉತ್ತರ ಕನ್ನಡದ ಗಾದೆ – 13)

ಸುಖ ಹೆಚ್ಚಾಗಿ ಶಾನೂಭೋಗನನ್ನು ಬಯಸಿದ್ದಳು.

ಅವಳ ಗಂಡ ಊರಿನ ಸಾಹುಕಾರ. ಒಳ್ಳೆಯ ಗಂಡನಿದ್ದಾನೆ, ಸಂಸಾರ ಇದೆ. ಅವಳಿಗೆ ಯಾವುದಕ್ಕೂ ಕೊರತೆಯಿಲ್ಲ. ಆದರೂ ತನ್ನ ಗಂಡನ ಕೈಕೆಳಗೆ ಕೆಲಸ ಮಾಡುವ ಶಾನೂಭೋಗನ ಕಡೆಗೆ ಆಕರ್ಷಿತಳಾಗುತ್ತಾಳೆ.

ಜೀವನದಲ್ಲಿ ಎಲ್ಲಾ ಸುಖ ಇದ್ದರೂ ಏನೋ ಒಂದು ಒಳ್ಳೆಯದಲ್ಲದ್ದಕ್ಕೆ ಆಸೆಪಡುವವರ ಕುರಿತು ಇರುವ ಮಾತು ಇದು.

September 19, 2007

ಅಗ್ಗಕ್ಕೆ… (ಉತ್ತರ ಕನ್ನಡದ ಗಾದೆ – 12)

ಅಗ್ಗಕ್ಕೆ ಮುಗ್ಗಿದ ಜೋಳ.

ಕಡಿಮೆ ಬೆಲೆ ಕೊಟ್ಟು ಜೋಳ ತಂದರೆ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಅದು ಮುಗ್ಗಿ ಹಾಳಾಗಿ ಹೋಗುತ್ತದೆ.

ಯಾರಾದರೂ ಕಾಂಜೂಸುತನದಿಂದ ಅಗ್ಗದ ವಸ್ತುವನ್ನು ತಂದು ಅದು ಬೇಗ ಹಾಳಾದರೆ, ಅಂಥವರನ್ನು ಉದ್ದೇಶಿಸಿ ಈ ಮಾತನ್ನು ಹೇಳಿ.

September 18, 2007

ಅಕ್ಕಮ್ಮಜ್ಜಿಗೆ... (ಉತ್ತರ ಕನ್ನಡದ ಗಾದೆ – 11)

ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲ.

ಅಕ್ಕಮ್ಮಜ್ಜಿಗೆ ಗಂಡ ಇಲ್ಲದ್ದರಿಂದ ಹಾಗೂ ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲದ್ದರಿಂದ ಮದುವೆಯಾಗುತ್ತಾರೆಯೇ ವಿನಹ ಪರಸ್ಪರ ಮೆಚ್ಚುಗೆಯಿಂದಲ್ಲ.

ಯಾರಿಗೂ ಮನಸ್ಸಿಲ್ಲದಿದ್ದರೂ ಅನಿವಾರ್ಯ ಕಾರಣಗಳಿಗಾಗಿ, ಬೇರೆ ದಾರಿ ಕಾಣದೇ ಒಪ್ಪಂದ ಮಾಡಿಕೊಳ್ಳುವಂತಹ ಸಂದರ್ಭ ಬಂದರೆ ನೀವೂ ಕೂಡ ಈ ಮಾತನ್ನು ಉಪಯೋಗಿಸಬಹುದು.

September 15, 2007

ಸಣ್ಣ ಹುಣ್ಣಿಗೆ... (ಉತ್ತರ ಕನ್ನಡದ ಗಾದೆ – 10)

ಸಣ್ಣ ಹುಣ್ಣಿಗೆ ಸಣ್ಣ ಕ್ವಾಟಲೆ; ದೊಡ್ಡ ಹುಣ್ಣಿಗೆ ದೊಡ್ಡ ಕ್ವಾಟಲೆ.

ಕ್ವಾಟಲೆ ಅಂದರೆ ನೋವು. ಕೋಟಲೆ ಎಂಬ ಶಬ್ದ ವಾಡಿಕೆಯಲ್ಲಿ ಕ್ವಾಟಲೆ ಆಗಿರಬಹುದೆಂದು ನನ್ನ ಊಹೆ.ಹುಣ್ಣು ಸಣ್ಣದಿದ್ದರೆ ಕಡಿಮೆ ನೋವಿರುತ್ತದೆ. ಹುಣ್ಣು ದೊಡ್ಡದಿದ್ದರೆ ಹೆಚ್ಚು ನೋವಿರುತ್ತದೆ. ನೋವು ಮಾತ್ರ ತಪ್ಪಿದ್ದಲ್ಲ.

ಶ್ರೀಮಂತರು, ದೊಡ್ಡ ಜನರೆಂದು ಕರೆಸಿಕೊಳ್ಳುವವರು ಕೂಡ ಅವರದೇ ಆದ ಕಷ್ಟಗಳನ್ನು ಹೊಂದಿರುತ್ತಾರೆ ಎಂದು ಹೇಳುವಾಗ ಈ ಮಾತನ್ನು ಬಳಸುವುದು ರೂಢಿಯಲ್ಲಿದೆ.

September 14, 2007

ಭಟ್ಟನ ಮಗಳಿಗೆ... (ಉತ್ತರ ಕನ್ನಡದ ಗಾದೆ – 9)

ಭಟ್ಟನ ಮಗಳಿಗೆ ಹುಟ್ಟಲು ದಿನವಿಲ್ಲ.

ಭಟ್ಟನ ಪ್ರಕಾರ ಅವನ ಮಗಳು ಅತ್ಯಂತ ಶ್ರೇಷ್ಟ ದಿನದಂದು ಹುಟ್ಟಬೇಕು. ಆದರೆ ಅವನಿಗೆ ಪ್ರತಿಯೊಂದು ದಿನದಲ್ಲೂ ಏನಾದರೂ ಕುಂದು ಕಂಡೇ ಕಾಣುತ್ತದೆ. ಅದಕ್ಕೆ ಅವನು 'ದೇವರೇ ನನ್ನ ಮಗಳು ಇವತ್ತು ಹುಟ್ಟುವುದು ಬೇಡ' ಎಂದು ದಿನಾಲೂ ಪ್ರಾರ್ಥಿಸುತ್ತಿದ್ದನಂತೆ.

ಯಾವುದಾದರೂ ಕೆಲಸವನ್ನು ಕ್ಷುಲ್ಲಕ ಕಾರಣಕ್ಕೆ ಮುಂದೂಡುವವರನ್ನು ಕುರಿತು ಈ ಗಾದೆ ಮಾತನ್ನು ಹೇಳುತ್ತಾರೆ.
ಭಟ್ಟನ ಮಗಳೇ ಏಕೆ? ಮಗನೂ ಆಗಿರಬಹುದಲ್ಲ, ಅವನಿಗೆ ಮೊದಲೇ ಹೇಗೆ ಗೊತ್ತಾಯಿತು ಎಂದು ಕೇಳಬೇಡಿ. ಇದು ಕೇವಲ ವಾಡಿಕೆಯ ಮಾತು ಅಷ್ಟೇ.

September 13, 2007

ಉಂಡಾತಾ ಕೇಳಿದರೆ... (ಉತ್ತರ ಕನ್ನಡದ ಗಾದೆ – 8)

ಉಂಡಾತಾ ಕೇಳಿದರೆ ಮುಂಡಾಸು ಮೂವತ್ಮೂರು ಮೊಳ ಎಂದಿದ್ದ.

ಒಬ್ಬನ ಬಳಿ ಊಟಾವಾಯಿತಾ ಎಂದು ಕೇಳಿದ್ದಕ್ಕೆ, ತನ್ನ ಮುಂಡಾಸು ಮೂವತ್ಮೂರು ಮೊಳ ಇದೆ ಎಂದಿದ್ದನಂತೆ.

ಯಾರನ್ನಾದರೂ ಏನಾದರೂ ಕೇಳಿದಾಗ ಅವರು ಅದಕ್ಕೆ ಸಂಬಂಧವಿಲ್ಲದ ಉತ್ತರವನ್ನು ಕೊಟ್ಟರೆ ಈ ಗಾದೆಯನ್ನು ಉದಾಹರಿಸುತ್ತಾರೆ.

September 12, 2007

ತೆಪ್ಪಾರ ಗೌಡ... (ಉತ್ತರ ಕನ್ನಡದ ಗಾದೆ – 7)

ತೆಪ್ಪಾರ ಗೌಡ ಮುಂಡಾಸು ಸುತ್ತುವುದರೊಳಗೆ ಮಂಜುಗುಣಿ ತೇರು ನೆಲೆ ನಿಂತಿತ್ತು.

ಮಂಜುಗುಣಿ ಎಂಬ ಊರಲ್ಲಿ ತೇರನ್ನು ಎಳೆಯುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದ್ದ ತೆಪ್ಪಾರು ಎಂಬ ಊರಿನ ಗೌಡ ಮುಂಡಾಸು ಸುತ್ತಿಕೊಂಡು ತಯಾರಾಗಿ ಬರುವುದರೊಳಗೆ ತೇರನ್ನು ಎಳೆದು ಮುಗಿಸಿದ್ದರು.

ಯಾವುದಾದರೂ ಕೆಲಸಕ್ಕೆ ಯಾರಾದರೂ ಗಡಿಬಿಡಿಯಿಲ್ಲದೇ ತುಂಬಾ ನಿಧಾನವಾಗಿ ತಯಾರಿ ನಡೆಸುತ್ತಿದ್ದರೆ ಅಂಥವರ ಬಗ್ಗೆ ಈ ಗಾದೆಯನ್ನು ಹೇಳಲಾಗುತ್ತದೆ.

September 11, 2007

ಹಂಚು ಕಾಣದ ಮೂಳೆ … (ಉತ್ತರ ಕನ್ನಡದ ಗಾದೆ – 4, 5 ಮತ್ತು 6)

ಹಂಚು ಕಾಣದ ಮೂಳೆ (ಮುದುಕಿ) ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು.

ಹೆಂಚಿನ ಮನೆಯನ್ನೂ ಕಾಣದ ಮುದುಕಿಗೆ ಅಕಸ್ಮಾತ್ ಕ0ಚಿನ ಪಾತ್ರೆಗಳೇನಾದರೂ ಸಿಕ್ಕಿದರೆ ಅವುಗಳನ್ನು ಸೊಕ್ಕಿನಿಂದ ಮೂರು ಸಲ ತಿಕ್ಕಿ, ತೊಳೆದು ಎಲ್ಲರ ಮುಂದೆ ಪ್ರದರ್ಶನ ಮಾಡುತ್ತಾಳೆ.

ಅಪರೂಪಕ್ಕೊಮ್ಮೆ ಸಿಕ್ಕ ವಸ್ತುವನ್ನು ಎಲ್ಲರ ಮುಂದೆ ಜಂಭದಿಂದ ಪ್ರದರ್ಶನ ಮಾಡುವವರ ಬಗ್ಗೆ ಇರುವ ಗಾದೆ ಇದು.

ಇದಕ್ಕೆ ತತ್ಸಮಾನವಾದ ಇನ್ನೂ ಎರಡು ಗಾದೆಗಳು ಪ್ರಚಲಿತದಲ್ಲಿವೆ.
ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ ಮತ್ತು ಮೂರ್ಖನಿಗೆ ಅಧಿಕಾರ ಬಂದರೆ ಮಧ್ಯ ರಾತ್ರಿಯಲ್ಲೂ ಕೊಡೆ ಹಿಡಿದ.
ಇದನ್ನು ನೆನಪಿಸಿದಂತಹ ಹರೀಶ್ ಗೆ ಧನ್ಯವಾದಗಳು.

September 10, 2007

ಕಾಶಿಗೆ ಹೋದರೆ... (ಉತ್ತರ ಕನ್ನಡದ ಗಾದೆ - 3)

ಕಾಶಿಗೆ ಹೋದರೆ ಕಾಸಿಗೊಂದು ಕುದುರೆ.

ನಾವಿರುವ ಸ್ಥಳದಲ್ಲಿ ಕುದುರೆ ದುಬಾರಿ.
ಕಾಶಿಗೆ ಹೋದರೆ ಒಂದು ಕಾಸಿಗೆ ಒಂದು ಕುದುರೆ ಸಿಗುತ್ತದೆ.
ಆದರೆ ಅದನ್ನು ತರಲು ಕಾಶಿಯ ತನಕ ಹೋಗಬೇಕು.

ಯಾವುದಾದರೂ ವಸ್ತುವನ್ನು ಕಡಿಮೆ ಬೆಲೆಗೆ ತರಲು ನಾವಿರುವ ಸ್ಥಳದಿಂದ ದೂರ ಹೋಗಬೇಕಾದ ಪ್ರಸಂಗ ಬಂದಾಗ ಈ ಗಾದೆಯನ್ನು ಉಪಯೋಗಿಸುತ್ತಾರೆ.

September 8, 2007

ಅಡಿಕೆ ಕೊಯ್ಲು... (ಉತ್ತರ ಕನ್ನಡದ ಗಾದೆ - 2)

ಅಡಿಕೆ ಕೊಯ್ಲು, ಅಗಚಯದ ಹೊತ್ತು; ಅಳುವ ಮಕ್ಕಳು, ಹೊರುವ ನೀರು; ಒದ್ದೆ ಕಟ್ಟಿಗೆ, ಒಡಕಲು ಗಡಿಗೆ; ಒದಕಲು ಎಮ್ಮೆ, ಬಡಕಲು (ಬಡಿಯುವ) ಗಂಡ ಇಷ್ಟಿದ್ದರೆ ಆ ಹೆಂಗಸಿಗೆ ಅಷ್ಟೈಶ್ವರ್ಯಕ್ಕೆ ಎಂಟೆ ಕಮ್ಮಿ.

ಅಡಿಕೆ ಕೊಯ್ಲಿನ ಸಂದರ್ಭ, ಬೇಗ ಕತ್ತಲಾಗುವ ದಿನಗಳು, ಅಳುತ್ತಿರುವ ಮಕ್ಕಳು, ದೂರದಿಂದ ಹೊತ್ತು ತರುವ ನೀರು, ಒದ್ಡೆಯಾದ ಕಟ್ಟಿಗೆ, ಒಡಕು ಗಡಿಗೆ, ಕರೆಯಲು ಹೋದರೆ ಒದೆಯುವ ಎಮ್ಮೆ, ಯಾವಾಗಲೂ ಹೊಡೆಯುತ್ತಿರುವ ಗಂಡ ಇದ್ದರೆ ಆ ಹೆಂಗಸಿನ ಕಷ್ಟಕ್ಕೆ ಕೊನೆಯಿಲ್ಲ.

ತುಂಬಾ ಕರುಣಾಜಾನಕಾವಾದ ಸ್ಥಿತಿಯನ್ನು ಹೇಳುವಾಗ ಈ ಗಾದೆಯ ಉಪಯೋಗವನ್ನು ಕಾಣಬಹುದು.

ಬಕನ ಬಾರಿ... (ಉತ್ತರ ಕನ್ನಡದ ಗಾದೆ - 1)

ಬಕನ ಬಾರಿ, ಮಗನ ಮದುವೆ, ಹೊಳೆಯಿಂದ ಆಚೆ ಪರಾನ್ನ.

ಬಕಾಸುರಾನಿಗೆ ಊಟವನ್ನು ತೆಗೆದುಕೊಂಡು ಹೋಗುವ ಪಾಳಿ ಬಂದಿದೆ, ಅದೇ ದಿನ ಮಗನ ಮದುವೆ ಇದೆ, ಇನ್ನೊಂದೆಡೆ ಹೊಳೆಯಿಂದ ಆಚೆ ಶ್ರಾಧ್ಧಕ್ಕೂ ಹೋಗಬೇಕಾಗಿದೆ.

ಹಲವಾರು ಕೆಲಸಗಳು ಒಟ್ಟಿಗೆ ಬಂದು ಯಾವುದನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬೇಕು ಎಂದು ತಿಳಿಯದಂತಾದ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುತ್ತಾರೆ.


ಟಿಪ್ಪಣಿ: ನನ್ನ ದೊಡ್ಡಮ್ಮನ ಪ್ರತಿಯೊಂದು ಮಾತಿನಲ್ಲೂ ಗಾದೆಗಳು ಇಣುಕುತ್ತಿದ್ದುದು ವಿಶೇಷ. ಅವರ ಬಾಯಿಯಿಂದ ನಾನು ಕೇಳಿದ ಗಾದೆಗಳು ಸಾವಿರಕ್ಕಿಂತಲೂ ಹೆಚ್ಚು.
ಅವರ ಜೊತೆ ಹನ್ನೊಂದು ವರುಷಗಳನ್ನು ಕಳೆದ ನಾನು ಅವರು ಹೇಳುತ್ತಿದ್ದ ಪ್ರತಿಯೊಂದು ಗಾದೆಗಳನ್ನೂ ದಾಖಲಿಸಿಕೊಂಡಿದ್ದೇನೆ. ಇಂದು ಅವರು ನನ್ನೊಂದಿಗಿಲ್ಲ. ಆದರೆ ಅವರ ನೆನಪುಗಳು ಈ ಗಾದೆಗಳ ರೂಪದಲ್ಲಿ ನನ್ನೊಂದಿಗಿವೆ.
ಅವುಗಳನ್ನೆಲ್ಲಾ ಒಂದೊಂದಾಗಿ ನಿಮ್ಮ ಮುಂದಿಡುವ ಆಸೆ ನನಗೆ. ಅಂತೆಯೇ, ಗಾದೆಗಳಿಗೆ ಸಂಬಂಧಿಸಿದ ಎಲ್ಲ ಬರಹಗಳನ್ನೂ ನನ್ನ ದೊಡ್ಡಮ್ಮ, ದಿವಂಗತ ಶ್ರೀಮತಿ ಮೀನಾಕ್ಷಿ ಹೆಗಡೆ ಅವರಿಗೆ ಅರ್ಪಿಸುತ್ತಿದ್ದೇನೆ.

September 6, 2007

ಏಳೂವರೆ ಗಡಿಗೆ ಹೊನ್ನು

ಚಿಕ್ಕಂದಿನಲ್ಲಿ ಅಜ್ಜ ಹೇಳಿದ ಕತೆ.
ಆಗ ಅದರಲ್ಲಿ ವಿಶೇಷವೇನೂ ಕಂಡಿರಲಿಲ್ಲ.
ವರುಷಗಳು ಉರುಳಿದಂತೆ ಅದರ ವಿಶೇಷತೆ ಮನವರಿಕೆಯಾಗುತ್ತಿದೆ...
ಅಜ್ಜ ಆ ಕತೆಯನ್ನು ಯಾಕೆ ಹೇಳಿದ್ದ ಎಂಬುದೂ ತಿಳಿಯುತ್ತಿದೆ...

ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಅವನು ಒಂದು ದಿನ ಕಟ್ಟಿಗೆ ತರಲು ಕಾಡಿಗೆ ಹೋದಾಗ ತನ್ನ ಬಡತನವನ್ನು ನೆನೆದು ದುಃಖಿಸತೊಡಗಿದ.
ಆಗ ಅವನ ಎದುರು ಒಂದು ದೇವತೆ ಪ್ರತ್ಯಕ್ಷವಾಗಿ ಹೇಳಿತು- "ಅಯ್ಯಾ, ನಿನ್ನ ಬಡತನಕ್ಕಾಗಿ ದುಃಖಿಸಬೇಡ. ನಾನು ನಿನಗೆ ಏಳೂವರೆ ಗಡಿಗೆ ಹೊನ್ನನ್ನು ಕೊಡುತ್ತೇನೆ. ಅದರಿಂದ ನೀನು ಜೀವನಪೂರ್ತಿ ಸುಖವಾಗಿರಬಹುದು."
ಆತ ಒಪ್ಪಿ ಏಳೂವರೆ ಗಡಿಗೆ ಹೊನ್ನನ್ನು ತೆಗೆದುಕೊಂಡು ಮನೆಗೆ ಬಂದ. ಜೀವಮಾನದಲ್ಲೇ ಅಷ್ಟು ಹೊನ್ನನ್ನು ಕಂಡಿರದ ಆತ ಒಂದು ಕ್ಷಣ ಗಡಿಗೆಗಳನ್ನೇ ನೋಡುತ್ತಾ ನಿಂತ.
ತಕ್ಷಣ ಅವನ ಮನಸ್ಸಿಗೆ ಒಂದು ಆಲೋಚನೆ ಬಂತು- "ಈ ಗಡಿಗೆಗಳಲ್ಲಿ ಒಂದು ಗಡಿಗೆ ಮಾತ್ರ ಅರ್ಧ ತುಂಬಿದೆ. ಅದನ್ನೊಂದು ತುಂಬಿಸಿಬಿಟ್ಟರೆ ಮುಂದೆ ಇಡೀ ಜೀವನ ಸುಖವಾಗಿ ಕಳೆಯಬಹುದು."
ನಂತರ ಆತ ಗಡಿಗೆಯನ್ನು ತುಂಬಿಸಲು ಹಗಲು ಇರುಳು ದುಡಿಯ ತೊಡಗಿದ.
ದಿನಾಲೂ ಸಂಜೆ ದಿನದ ಗಳಿಕೆಯ ಹೊನ್ನನ್ನು ತಂದು ಗಡಿಗೆಗೆ ಹಾಕುತ್ತಿದ್ದ.
ಎಷ್ಟೋ ದಿನಗಳ ವರೆಗೆ ಹೀಗೆಯೇ ನಡೆಯಿತು...
ಗಡಿಗೆ ಮಾತ್ರ ಅರ್ಧದಷ್ಟೇ ಇತ್ತು. ತುಂಬುವ ಲಕ್ಷಣವೇ ಕಾಣಿಸಲಿಲ್ಲ.
ಆತ ಮಾತ್ರ ತನ್ನ ಆರೋಗ್ಯವನ್ನು ಕಳೆದುಕೊಂಡ. ಮನಃಶಾಂತಿಯನ್ನು ಕಳೆದುಕೊಂಡ. ಗಡಿಗೆಯನ್ನು ತುಂಬಿಸುವ ಹಟದಲ್ಲಿ ಕೃಶವಾಗಿ ಹೋದ. ನಿದ್ದೆಯನ್ನು ಕಳೆದುಕೊಂಡು ಹುಚ್ಚನಾಂತಾದ.
ದಿನಗಳು ಉರುಳಿದಂತೆ ಅವನಿಗೆ ಒಂದು ದಿನ ಅರಿವಾಯಿತು, ತಾನು ಎಡವಿದ್ದೇನೆಂದು. ಪುನಃ ಕಾಡಿಗೆ ಹೋಗಿ ದೇವತೆಯನ್ನು ಕರೆದ. ದೇವತೆ ಪ್ರತ್ಯಕ್ಷವಾಯಿತು.
ಆತ ಹೇಳಿದ- "ದಯವಿಟ್ಟು ನನ್ನ ಬಳಿಯಿರುವ ಗಡಿಗೆಗಳನ್ನು ಹಿಂದೆಗೆದುಕೊ. ಇರುವುದರಲ್ಲಿಯೇ ನಾನು ಸುಖವಾಗಿರಬಲ್ಲೆ ಎಂಬುದು ನನಗೆ ಗೊತ್ತಾಗಿದೆ."
ದೇವತೆ ಗಡಿಗೆಗಳನ್ನು ತೆಗೆದುಕೊಂಡು ಮಾಯವಾಯಿತು. ಆತ ಮನೆಗೆ ಬಂದು ಎಷ್ಟೋ ದಿನಗಳ ನಂತರ ಸುಖವಾಗಿ ನಿದ್ದೆ ಮಾಡಿದ.

ಇಂದು ನಾವೂ ಕೂಡ ನಮ್ಮ ಬಳಿಯಿರುವ ಏಳು ಗಡಿಗೆ ಹೊನ್ನನ್ನು ಲಕ್ಷಿಸದೆಯೇ ಇನ್ನುಳಿದ ಅರ್ಧ ಗಡಿಗೆಯನ್ನು ತುಂಬಿಸುವ ಯತ್ನದಲ್ಲಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ?

Home


There is an old saying, ‘Home’ is not the place where you live, but the place where they understand you.

How true! One will never recognize the value of a home unless one really stays in the place other than home. It is not only the place where we learn to utter the first word and listen to some bedtime stories, but it is the place where we are taken care of and the place where all our emotions are understood. We will be cared for everything right from our hunger to our anger. Only people in our home can understand our varying emotions…from our aspiration to our desperation. If we slam the door in anger, they just seem to understand. Can you ever imagine slamming the door at the place other than your home?

August 28, 2007

ಮಾತನಾಡುವ ಪರಿ- 2

ಅರಿವಿಲ್ಲದೇ ಮಾತನಾಡಿ ಉಳಿದವರು ನಗುವಂತಾದ ಮತ್ತೊಂದು ಘಟನೆಯಿದು.
'ನಾಗ್ಯಾ' ನಮ್ಮ ಗದ್ದೆಯನ್ನು ಊಳಲು ಖಾಯಂ ಬರುತ್ತಿದ್ದವ. ನಮ್ಮ ಮನೆಯ ಎತ್ತುಗಳಿಗೂ ಮತ್ತು ಅವನಿಗೂ ಅವಿನಾಭಾವ ಸಂಭಂಧ. ಗದ್ದೆ ಊಳುವಾಗ ಎತ್ತುಗಳು ಸ್ವಲ್ಪ ಆಕಡೆ ಈಕಡೆ ಎಳೆದರೂ ಅವನು ಅವುಗಳನ್ನು ಬಯ್ಯುತ್ತಿದ್ದುದು
"ಹೂ... ಇದರ ಮನೆ ಹಾಳಾಗಾ..." !!! ಒಮ್ಮೆ ಅಮ್ಮ ಕೊಟ್ಟಿಗೆಯಲ್ಲಿ ಸಂಜೆ ಹೊತ್ತು ಹಾಲು ಕರೆಯುತ್ತಿದ್ದಾಗ
ನಾಗ್ಯಾ ಗದ್ದೆ ಯಿಂದ ಎತ್ತುಗಳನ್ನು ಹೊಡೆದುಕೊಂಡು ಕೊಟ್ಟಿಗೆಗೆ ಬಂದ. ಅವುಗಳನ್ನು ಜಾಗದಲ್ಲಿ ಕಟ್ಟಿ ಹಾಕುತ್ತಿರುವಾಗ ಪಕ್ಕದಲ್ಲಿ ಕಟ್ಟಿದ್ದ ಆಕಳು ಕುಣಿದಾಡಿತು. ಕೊಟ್ಟಿಗೆಯಲ್ಲಿ ಕೆಲವೊಮ್ಮೆ ಎತ್ತು ಅಥವಾ ಆಕಳುಗಳನ್ನು ಕಟ್ಟಿ ಹಾಕುವಾಗ ಅಕ್ಕ ಪಕ್ಕದಲ್ಲಿರುವ ಆಕಳುಗಳು ಕುಣಿದಾಡುವದುಂಟು. ಅದು ಕುಣಿದಾಡುವುದನ್ನು ನೋಡಿದ ನಾಗ್ಯಾ ಹೇಳಿದ್ದು- "ತಡಿ...ತಡಿ...ಯಾಕ್ ಹಾಂಗ್ ಕುಣೀತೀ... ನಾವೂ ನಿಮ್ಮಂಗಲೇ ಮನಾಷಾರೇ..." ನಾಗ್ಯಾ ಎತ್ತುಗಳನ್ನು ಕಟ್ಟಿ ಹಾಕಿ ಹೋದ. ಅಮ್ಮ ಕೊಟ್ಟಿಗೆಯಲ್ಲಿ ಒಬ್ಬರೇ ನಗುತ್ತಿದ್ದರು!

August 23, 2007

Green Room

‘Green Room’ is a commonly used word to refer to the dressing room at the place some stage performance. For me it was amazing to know the origin of the word ‘Green Room’. Even you will be astonished!

It’s still wonderful to note that the word ‘Limelight’ is associated with the word ‘Green Room’. During olden days while performing the stage shows, it was a practice to use limestone to get a bright light with some chemical reactions, as there was no electricity. Hence, emerged the term ‘Limelight’. Today we notice that it is being widely used as a synonym to ‘popular’ as ‘he came to limelight’ or ‘she came to limelight’.

Actors and actresses were prone severe headache due to that bright light and chemical reaction. Immediately after their role on the stage, they were made to sit in a room filled with lots of herbs and shrubs and walls painted with green colour to give a soothing effect to their eyes just to make them get rid of their headache. Thus emerged the term ‘Green Room’. Isn’t it amazing?
Note: This piece of information is obtained by Mrs. Anupama. My thanks are due to her.

August 22, 2007

ಮಾತನಾಡುವ ಪರಿ- 1

ಮಾತನಾಡುವುದು ಕತ್ತಿಯ ಅಲುಗಿನ ಮೇಲೆ ನಡೆದಂತೆ. ಸ್ವಲ್ಪ ಲಕ್ಷ್ಯ ಕಡಿಮೆಯಾದರೂ ಮಾತು ಅಪಾರ್ತಕ್ಕೆ ಗುರಿಯಾಗುತ್ತದೆ. ಅಂತಹ ಒಂದು ಘಟನೆಯನ್ನು ಬರೆದಿದ್ದೇನೆ ಓದಿ... ಉತ್ತರ ಕನ್ನಡದ ಹಳ್ಳಿಗಳಲ್ಲಿ ಇಂತಹ ಸನ್ನಿವೇಶಗಳು ಅಪರೂಪವೇನಲ್ಲ.
ನಮ್ಮ ಮನೆ ಶಿರಸಿಯ ಸಮೀಪದ ಒಂದು ಹಳ್ಳಿ. ಅಲ್ಲಿ ನಮ್ಮದು ಕಾಡಿನಿಂದ ಸುತ್ತುವರಿದ ಒಂಟಿ ಮನೆ. ಅದಕ್ಕಾಗಿ ನಮ್ಮ ಮನೆಯಲ್ಲಿ ದೈತ್ಯಾಕಾರದ ಎರಡು ನಾಯಿಗಳನ್ನು ಸಾಕುವುದು ಎಂದಿನಿಂದಲೂ ಬಂದ ರೂಢಿ.
ನೋಡಿದರೆ ಭಯ ಬರುವಂತಹ ನಾಯಿಗಳು ಯಾರಾದರೂ ಬಂದರೆ ಕಟ್ಟಿ ಹಾಕಿದ ಸರಪಳಿಯನ್ನು ಹರಿದುಕೊಂಡು ಬಂದು ಕಚ್ಚಿ ಸಾಯಿಸಿ ಹಾಕುತ್ತವೇನೋ ಅನ್ನುವಷ್ಟರ ಮಟ್ಟಿಗೆ ಬೊಗಳುತ್ತವೆ. ಬಿಟ್ಟು ಹಾಕಿದರೆ ಎಂಥ ಕಳ್ಳರ ಜೊತೆಗೂ ಆಟ ಆಡಿಬಿಡುತ್ತವೆ! (ಈ ವಿಷಯ ನಿಮ್ಮಲ್ಲೇ ಇರಲಿ).
ಸಾಮಾನ್ಯವಾಗಿ ಊರಿನವರೆಲ್ಲಾ ಆ ನಾಯಿಗಳಿಗೆ ಹೆದರುವುದು ವಾಡಿಕೆ. ನಾಯಿಗಳು ಅವುಗಳನ್ನು ಕಟ್ಟುವ ಜಾಗದಲ್ಲಿ ಕಾಣದಿದ್ದಾಗ "ಹೆಗಡೆ ರೇ...... ನಾಯಿೇ......" ಅಥವಾ "ಅಮ್ಮಾ...... ನಾಯಿೇ......" ಎಂದು ಒಂದು ಗಾವುದ ದೂರದಿಂದಲೇ ಕೂಗುತ್ತಾರೆ.
ಯಾರಾದರೂ ಬಂದು ನಾಯಿಗಳನ್ನು ಕಟ್ಟಿದ ಮೇಲೆಯೇ ಅವರು ಮುಂದ ಹೆಜ್ಜೆ ಇಡುವುದು.

ಅದೇ ಊರಿನವನಾದ 'ಧರ್ಮ ' ಅಪ್ಪನ ಹತ್ತಿರ ಹಣಕಾಸಿಗಾಗಿ ಆಗಾಗ ಬರುತ್ತಿದ್ದವ. ಒಮ್ಮೆ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸಮಯ. ಅಮ್ಮ ಗಿಡಗಳಿಗೆ ನೀರು ಹಾಕುವಾಗ ಎಂದಿನಂತೆಯೇ ನಾಯಿಗಳನ್ನು ಬಿಟ್ಟು ಹಾಕಿದ್ದರು.
ಅವು ಇಡೀ ಅಂಗಳದ ತುಂಬಾ ಕುಣಿದು, ದಣಿದು ಕಟ್ಟೆಯ ಮೇಲೆ ಮಲಗಿ ನಿದ್ದೆ ಹೊಡೆಯುತ್ತಿದ್ದವು.
ನೀರು ಹಾಕುತ್ತಿದ್ದ ಅಮ್ಮ ಏನೋ ಸದ್ದು ಕೇಳಿದಂತಾಗಿ ತಿರುಗಿ ನೋಡಿದರೆ ಧರ್ಮ ಮರ ಹತ್ತಿ ಕುಳಿತಿದ್ದಾನೆ!ಅಮ್ಮ ಅಲ್ಲಿಂದಲೇ ಹೇಳಿದರು, "ಏ ಧರ್ಮ ಮರ ಇಳಿಯೋ..." ಅವ ಅಮ್ಮನಿಗಿಂತ ಜೋರಾಗಿ ಕೂಗಿದ,
"ಅಮ್ಮಾ, ಮೊದ್ಲು ನೀವು ನಾಯಿ ಕಟ್ಟಾಕ್ರೀ ಮಾರಯ್ರಾ...ಅಂಕಾ ಮಟಾ ನಾ ಇಲ್ಲೇ ಕುಂದ್ರತೆನಿ".
ಅಮ್ಮ ನಾಯಿ ಕಟ್ಟಿ ಹಾಕಿದ್ದೆ ತಡ, ಸರಸರನೆ ಮಂಗನಂತೆ ಮರ ಇಳಿದು ಬಂದ ಧರ್ಮ.
ಅಮ್ಮ ಹೇಳಿದರು, "ಹೆಗಡೆರು ಇಲ್ಲಲ ಧರ್ಮ, ಈಗಷ್ಟೇ ಸಿರ್ಸಿಗೆ ಹೊದ್ರೂ... ನೀ ಬೆಳಿಗ್ಗೆ ಬೇಗ ಬರಬೇಕಾಗಿತ್ತು..."
ನಾಯಿಗಳಿಗೆ ತುಂಬಾ ಹೆದರುತ್ತಿದ್ದ ಧರ್ಮ ತನಗೆ ಅರಿವಿಲ್ಲದಂತೆ ಹೇಳಿದ, "ಹೆಗಡೆರು ಸಾಯ್ಲ್ ರಿ ಮಾರಯ್ರಾ... ನಿಮ್ಮ ನಾಯಿ ನನ್ನ ತೆಗದೆ ಬಿಡ್ತಿದ್ವು...ಹೆಗಡೆರು ಹೋಗೆ ಬಿಟ್ರೆನ್ರಿ?" !!!! ನಗು ಬರುತ್ತಿದ್ದರೂ ತಡೆದುಕೊಂಡು ಅಮ್ಮ ಮತ್ತೊಮ್ಮೆ ಕೇಳಿದರು, "ಹೆಗಡೆರಿಗೆ ಯಾಕೆ ಹಾಗಂತೀಯೋ ಧರ್ಮ... " ನಾಯಿಗಳ ಭಯದಿಂದ ಇನ್ನೊ ಹೊರ ಬಂದಿರದ ಧರ್ಮ ಅದನ್ನೇ ಪುನರುಚ್ಚರಿಸಿದ, "ಹೆಗಡೆರು ಸಾಯ್ಲ್ ರಿ... ನಾಯಿೇ..." ಎಂದವನೆ ತಲೆ ಕೆರೆದುಕೊಳ್ಳುತ್ತಾ, "ನಮ್ಮ ಎತ್ತಿಗೊಂದು ಉಸಾರಿಲ್ಲಾಗಿತ್ತು.... ಹೆಗಡೆರ ತವ ರೊಕ್ಕ...." ಎಂದು ಗೊಣಗುತ್ತಾ ಹೊರಟೆ ಹೋದ.

ಧರ್ಮನೇನೋ ಏನೂ ಆಗದವನಂತೆ ಹೋದ. ಉಕ್ಕಿ ಬರುತ್ತಿದ್ದ ನಗುವನ್ನು ತಡೆಯುವ ಬಗೆ ನಮಗೆ ತಿಳಿಯಲಿಲ್ಲ!

August 14, 2007

Post Office Incident

Yesterday was a very hot sunny day here in Tokyo. I left for Post Office at 12:00 hrs to pay the water bill. By the time I reached there, I was almost tired because of heat. Those automated doors welcomed me… I went inside and saw many people seated. They looked to be waiting. I did not know what to do.
I went to a counter and asked a person working there-"Excuse me; I need to pay the bills…what should I do".
He told me something in Japanese which I did not understand. By looking at my blank face he repeated it once again but I think I must have maintained the blankness on my face as it is, he went aside and brought a slip with a number. Then I realized I am in a queue! I sat waiting just like all others. The office was very cool because of AC. I sat relaxing.

A lady appeared before me with a form. She gave me the form but everything was written in Japanese language. By looking at the big question mark on my face, she explained me that I should fill my name and 'terehone' number (most of the Japanese people pronounce ‘telephone’ as ‘terehone’ and ‘thank you’ as ‘sank you’). As directed I filled name, address and ‘terehone’ number. As my turn came, I paid the bill without hassle.

Then I faced the real problem of conversation. I needed air mail stamps to write to my brother who is in India. I asked the lady who took my bill to give me air mail stamp. I could make out that she did not understand what I said and she directed me to the other counter. I went there. A man aged about 45 years was sitting. He smiled at me and I could see his silver filled teeth greeting me pleasantly. I asked him about the air mail stamps. He requested me to repeat as he too could not make out what I was telling. I repeated thrice but he could not understand. Then he gave me a piece of paper and pen to write it down. I wrote – ‘I need to write letters to India. So I need air mail stamps’. He took the paper inside. I thought he might have taken it to the person who knows English and I had all hopes to get the stamps. To all my surprise, he came out with a notebook in his hand. He wrote a ‘terehone’ number on the piece of paper on which I had given him the written thing and gave it to me explaining something in Japanese. He repeated twice but I could not understand what I should do with that number. By looking at my face…he stared telling ‘Sorry’. I was in trouble and even he was. I was sweating even in that cool place. I decided to leave without stamps and said ‘Thank you’. Again he pleasantly smiled at me but I felt the silver in his teeth is mocking at me! That piece of paper with the ‘terehone’ number he gave me is sleeping nicely in my bag hardly bothering about me!

August 13, 2007

ದೃಷ್ಠಿಕೋನ

"ನಾನು ಕುರುಡನಿದ್ದೆ.
ಬ್ರಿಟಿಷ್ ನೇತ್ರನಿಧಿಯಿಂದ ಪಡೆದ
ಕಣ್ಣುಗಳನ್ನು ನನ್ನ ಕಣ್ಣು ಗೂಡುಗಳಲ್ಲಿ ಸೇರಿಸಿದಾಗ
ನನಗೆ ಎಲ್ಲವೂ ಸ್ಪಷ್ಟವಾಗಿ ಕಾಣಿಸತೊಡಗಿತು.
ಆಗ ನನಗೆ ಅನಿಸಿತು- ಬೇರೆಯವರ ದೃಷ್ಠಿಕೋನವನ್ನು
ತನ್ನದಾಗಿಸಿಕೊಂಡಾಗಲೂ ಕುರುಡುತನ
ದೂರವಾಗುತ್ತದೆ."

ಟಿಪ್ಪಣಿ: ಎಲ್ಲೋ ಎಂದೋ ಓದಿದ್ದು. ಸಂಗ್ರಹ ದಿಂದ ಇಂದು ಹೊರಗೆ ಬಂದಿದೆ.

August 9, 2007

ಹನ್ನೊಂದು ಹೊನ್ನಿನ ಪುರಾಣಿಕರ ಕಥೆ

'ಪಾಪಿ ಸಮುದ್ರ ಕ್ಕೆ ಹೋದರೂ ಮೊಳಕಾಲು ನೀರು'. ಇದು ಪ್ರಚಲಿತದಲ್ಲಿರುವ ಗಾದೆಮಾತು. ಇದಕ್ಕೆ ಪೂರಕ ಎನಿಸುವ ಈ ಕೆಳಗಿನ ಕಥೆಯನ್ನು ಓದಿ.ಹಣೆ ಬರಹವನ್ನು ಕೆಲವೊಮ್ಮೆ ನಂಬಬೇಕಾದಂತ ಪರಿಸ್ಥಿತಿ ಬಂದೊದಗುತ್ತದೆ.

ತ್ರೇತಾಯುಗದಲ್ಲಿ, ಒಂದು ಊರಿನಲ್ಲಿ ಒಬ್ಬ ಪುರಾಣಿಕರು (ಪೂಜಾರಿ) ಇದ್ದರು.
ಮನುಷ್ಯ ಸಹಜ ಧರ್ಮದಂತೆ ಅವರಿಗೂ ಸ್ವಲ್ಪ ಆಸೆ ಜಾಸ್ತಿ. ಯಾರ ಮನೆಯಲ್ಲಿ ಪೂಜೆ ಮಾಡಿದರೂ ಅವರಿಗೆ ಜನರು ಕೊಡುತ್ತಿದ್ದುದು ಹನ್ನೊಂದೇ ಹೊನ್ನು. ಆದ ಕಾರಣ, ಅವರಿಗೆ ಯಾವಾಗಲೂ ಬೇಜಾರಾಗುತ್ತಿತ್ತು. ಒಮ್ಮೆ ಅವರಿಗೆ ಯಾರೋ ಹೇಳಿದರು- "ನೀವು ರಾವಣನ ರಾಜ್ಯ ಲಂಕೆಗೆ ಏಕೆ ಹೋಗಬಾರದು? ರಾವಣ ತುಂಬಾ ಉದಾರಿ. ಕೇಳದಿದ್ದರೂ ದಾನ ಮಾಡುತ್ತಾನೆ" ಎಂದು. ಸರಿ, ಪುರಾಣಿಕರು ಲಂಕೆಯಲ್ಲಿ ಪೂಜೆ ಮಾಡಿದರು. ರಾವಣನೋ ತುಂಬಾ ಖುಷಿಯಿಂದ ಒಂದು ಚೀಲ ನಾಣ್ಯಗಳನ್ನು ದಾನವಾಗಿ ಕೊಟ್ಟ. ಪುರಾಣಿಕರಿಗೋ ಖುಷಿಯೋ ಖುಷಿ. ಮರಳಿ ತಮ್ಮ ದೇಶಕ್ಕೆ ಬಂದರು. ಲಂಕಾ ಪಟ್ಟನದಲ್ಲಿ ಕಬ್ಬಿಣವೇ ಆಭರಣ ಮತ್ತು ನಾಣ್ಯಗಳು ತಾನೇ, ಪುರಾಣಿಕರು ತಮಗೆ ದೊರೆತ ಒಂದು ಚೀಲ ಕಬ್ಬಿಣದ ನಾಣ್ಯಗಳನ್ನು ಮಾರಿ ಹೊನ್ನಿನ ನಾಣ್ಯಗಳನ್ನು ಕೊಂಡರು. ಆಗ ಅವರಿಗೆ ಸಿಕ್ಕಿದ್ದು ಕೇವಲ ಹನ್ನೊಂದು ಹೊನ್ನು.

ಹಿಂದಿಯಲ್ಲೂ ಇದಕ್ಕೊಂದು ಮಾತಿದೆ- समय से पेहले, नसीब से ज्ञादा कुछ नही मिलता

ಟಿಪ್ಪಣಿ: ಚೇತನಾ ರೋಹಿತ್ ಅವರು ತಮ್ಮ Blog ನಲ್ಲಿ ಬರೆದ ಕಥೆಯಿಂದ inspire ಆಗಿ ಈ ಕಥೆಯನ್ನು ಬರೆದಿದ್ದೇನೆ. My thanks are due to her.

ಕದ್ದಿರುವ ಕವಿತೆ

ಎವರೆಸ್ಟ್ ಏರಿದವರಲ್ಲಿ
ಮೊದಲಿಗ 'ಹಿಲ್ಲೆರಿ'.
ಅದರಲ್ಲೇನಿದೆ ವಿಶೇಷ?
ಹೆಸರಿನಲ್ಲೇ
ಅಡಗಿದೆ ಗುಟ್ಟು 'ಹಿಲ್-ಏರಿ'.

ಟಿಪ್ಪಣಿ: ಈ ಕವಿತೆ ರಾಜೀವ್ ನ ನೋಟ್ ಬುಕ್ ನಿಂದ ಕದ್ದಿದ್ದು; ನನ್ನ Blogಅನ್ನು ಸುಂದರವಾಗಿಸಲು. ನಾನು ಅವರಿಗೆ ಚಿರಋಣಿ.

ಅಪ್ಪ


Dear Appa,
It’s your birthday! Many Happy Returns of the Day!
You know there are not many persons in this world whom I admire just as I admire you. I know you never bother to remember your own birthday. You hardly bother whether we greet you on that day or not. I wonder why I can’t be like you. I wish to be with you toady. But this distance hardly allows me.

Sitting alone at home today has made me think all that you have done to us. I know all the sacrifices you have done to keep us happy. It’s so painful to remember those past days of difficulty when you struggled hard to earn a living for all of us. Though we didn’t have much money to share, we had lots of affection to share. Still you never uttered a single word about your problems before us but, somehow we seemed to understand you. We silently understood the hardships that you and Amma had to undergo. But unfortunately, at that time we were not matured enough to provide you any type of assurance. Now we say, “We are with you”.

The world says you are a self made man. Yes, it’s true. We have seen you turning the soli of that barren land into gold. We, only we can understand the effort beyond it. You have spent your valuable youth and energy in that process of transformation. I know you can never get back that youth and energy spent, but your achievement is before your eyes! Very few people can achieve what you have achieved. We are really proud of you. And so are all others.

We know you as a principled and idealistic person. I feel proud when one of your friends always calls you ‘Gandhiji’. You have inculcated Gandhian principles in us right from our childhood. You have made us so principled that, we can leave our work for principles without compromising. You have also taught us be self reliant. We had seen you making us to do our work on our own without anyone’s assistance. No doubt that we used to be upset with you at that time. But now we realise that, it was your way of teaching us to minimise our dependency on others. Thank you so much for that. Your capacity to help others is amazing! Most of the people who have taken help from you have deceived you. But you have not changed your way. Hats off! You are the only man I have seen who supports his wife to be successful in life. I have seen you supporting Amma so much to make her outgoing. I have never seen the typical male ego in you.

Today you have crossed 58 and stepped into 59th year of your life. This is the age of retirement right? You need to take some rest to regain your vitality. I know bee keeping is one of your favourite hobbies. Raghu and I used to go with you into many deep forests to locate the bee hives. Sometimes I think you are inspired by the working of bees… because most of the times I see you working…working…and working. But see father, every busy bee needs some rest. You have done so much to us. Now it’s our turn to do something in return. Let you and your principles guide us and we come to you with some achievement. I pray for your health and peace of mind. I can somehow thank you for always being there for me… but how can thank you for all your sacrifices made to keep me happy? Will I be ever able to do that? And finally, 'My Daddy Strongest!'

With lots of love,
Yours affectionately,
Koosu.

Note: This was posted on 31st August, on his birthday; but reposted today due to deletion of all older posts.