September 13, 2007

ಉಂಡಾತಾ ಕೇಳಿದರೆ... (ಉತ್ತರ ಕನ್ನಡದ ಗಾದೆ – 8)

ಉಂಡಾತಾ ಕೇಳಿದರೆ ಮುಂಡಾಸು ಮೂವತ್ಮೂರು ಮೊಳ ಎಂದಿದ್ದ.

ಒಬ್ಬನ ಬಳಿ ಊಟಾವಾಯಿತಾ ಎಂದು ಕೇಳಿದ್ದಕ್ಕೆ, ತನ್ನ ಮುಂಡಾಸು ಮೂವತ್ಮೂರು ಮೊಳ ಇದೆ ಎಂದಿದ್ದನಂತೆ.

ಯಾರನ್ನಾದರೂ ಏನಾದರೂ ಕೇಳಿದಾಗ ಅವರು ಅದಕ್ಕೆ ಸಂಬಂಧವಿಲ್ಲದ ಉತ್ತರವನ್ನು ಕೊಟ್ಟರೆ ಈ ಗಾದೆಯನ್ನು ಉದಾಹರಿಸುತ್ತಾರೆ.

2 comments:

ವಿಕಾಸ್ ಹೆಗಡೆ/ Vikas Hegde said...

ಹೀಗೆ ಬ್ರೌಸ್ ಮಾಡುತ್ತಾ ಇರುವಾಗ ನಿಮ್ಮ ಬ್ಲಾಗ್ ಗೆ ಬಂದೆ.
ಉತ್ತರಕನ್ನಡ ಗಾದೆಗಳನ್ನು ವಿವರಣೆ ಸಮೇತ ಹಾಕುತ್ತಾ ಇರುವುದು ನೋಡಿ ಸಂತೋಷವಾಯಿತು. ಒಳ್ಳೆ ಮಾಹಿತಿ. ಮುಂದುವರೆಸಿ. ಧನ್ಯವಾದಗಳು

Seema said...

Thanks Vikas for your encouragement.