November 28, 2007

ಊರಿನೆತ್ತು … (ಉತ್ತರ ಕನ್ನಡದ ಗಾದೆ – 85 ಮತ್ತು 86)

ಊರಿನೆತ್ತು ಕುಣಿಯಿತೆಂದು ಉಪ್ಪಿನೆತ್ತು ಕುಣಿದಿತ್ತು.

ಉಪ್ಪಿನೆತ್ತು ಎಂದರೆ ಎತ್ತಿನ ಗೊಂಬೆ ಎಂದು ಕೇಳಿದ್ದೇನೆ. ನನಗೂ ಇದರ ಅರ್ಥ ಇನ್ನೂ ಸರಿಯಾಗಿ ಆಗಿಲ್ಲ. ಜೀವಂತ ಎತ್ತು ಕುಣಿಯಿತೆಂದು ಗೊಂಬೆಯೂ ಕುಣಿದಿತ್ತು.

ಯೋಗ್ಯತೆ ಇದ್ದವರು ಮಾಡುವ ಕೆಲಸವನ್ನು ನೋಡಿ ಯೋಗ್ಯತೆ ಇಲ್ಲದವರೂ ಮಾಡಲು ಹೋದಾಗ ಈ ಮಾತನ್ನು ಹೇಳುವುದುಂಟು. ಎಲ್ಲರೂ ಬಳಸುವ ಇನ್ನೊಂದು ಗಾದೆ ಎಂದರೆ ನವಿಲು ಕುಣಿಯಿತೆಂದು ಕೆಂಬೂತವೂ ಕುಣಿದಿತ್ತು.

2 comments:

Harisha - ಹರೀಶ said...

ಉಪ್ಪಿನ ಎತ್ತು = ಉಪ್ಪಿನೆತ್ತು

Seema S. Hegde said...

ಲೋಪ ಸಂಧಿ! ಗೊತ್ತು.
ಆದರೆ ಉಪ್ಪಿನಿಂದ ಗೊಂಬೆಯನ್ನು ತಯಾರಿಸುತ್ತಾರಾ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ.