November 16, 2007

ಮಾತನಾಡುವ ಪರಿ- 4

ನಮ್ಮೂರಿನ ಇನ್ನೂ ಕೆಲವರ English ಓದಿ ನೋಡಿ...
ಅವರ ಮುಗ್ಧತೆಯ ಹಿಂದಿರುವ funny part ಮಾತ್ರ ನೋಡುವ ಪ್ರಯತ್ನ ಮಾಡುತ್ತಿದ್ದೇನೆಯೇ ವಿನಹ ಅವರನ್ನು ಗೇಲಿ ಮಾಡುವ ಉದ್ದೇಶ ನನ್ನದಲ್ಲ.

ಪಿ. ಬಿ. ಗೌಡ ನಮ್ಮೂರಿನ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಲ್ಲಿ ಒಬ್ಬ.
ಆಗಷ್ಟೇ ಬಿಜೆಪಿ ಪಕ್ಷದಿಂದ ಶ್ರೀ ಅನಂತಕುಮಾರ ಹೆಗಡೆ ಲೋಕಸಭೆಗೆ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಅಪ್ಪನ ಜೊತೆ ನಾನು ಬರುತ್ತಿರುವಾಗ ದಾರಿಯಲ್ಲಿ ಸಿಕ್ಕಿದ ಮತ್ತು ಹೇಳಿದ, 'ನಮ್ಮ ಪಕ್ಷದ candidate (ಸರಿಯಾಗೇ ಬಳಸಿದ್ದಾನೆ ನೋಡಿ) ಸರಿ ಇಲ್ರಾ ಈ ಸಲ. ಅವ ಆರಿಸಿ ಬರದು ಖಾತ್ರಿ ಇಲ್ಲ ಬಿಡಿ. ಅವನ ಮೇಲೆ 13 tribunal ಕೇಸು ಐತಿ ಅಂತ ಹೇಳ್ತಾರೇ...'
Tribunal ನ ಅರ್ಥ criminal!

ನಮ್ಮೂರಿನ ಕೊನೆಗೌಡ ಸಣ್ಣತಮ್ಮ. ಅವನು ಸಣ್ಣವನೂ ಅಲ್ಲ, ತಮ್ಮನೂ ಅಲ್ಲ. ಅವನ ಹೆಸರೇ ಸಣ್ಣತಮ್ಮ. ನಮ್ಮನೆಗೆ ತೆಂಗಿನಕಾಯಿ ಕೊಯ್ಯಲು ಬಂದಾಗ ಒಮ್ಮೆ ಹೇಳುತ್ತಿದ್ದ,
'ಆ ಮರ ನಾ ಹತ್ತದಿಲ್ರಾ ಹೆಗಡೆರೇ... ಅದರಾಗೇ ರಿಕ್ಸ್ ಅದೇ...'
ಅಪ್ಪ ಹೇಳಿದ್ರು...'ಇಲ್ಲಾ ಅದರಲ್ಲಿ ಸವ್ಳಿ*, ಗಿವ್ಳಿ ಇಲ್ಲ'.
ಅವ ಮತ್ತೆ ಹೇಳಿದ, 'ಇಲ್ರಾ... ಸವ್ಳಿ ಇದ್ರೆ ಅಡ್ಡಿಲ್ಲಾಗಿತ್ತು, ಮರ ಎತ್ರಕ್ಕೆ ಹೋಗಿದ್ದಕ್ಕೆ ರಿಕ್ಸು, ಸುಮ್ನೇ ಬ್ಯಾಡಾ ಹೇಳಿ.'
ಆಗ ಗೊತ್ತಾಯಿತು. ರಿಕ್ಸು ಅಂದರೆ Risk ಎಂದು!

*ಸವ್ಳಿ ಎಂದರೆ ದೊಡ್ಡ ಜಾತಿಯ ಕೆಂಪು ಇರುವೆ, ಕಚ್ಚಿದರೆ ಉರಿಯಾಗುವಂತದು.

2 comments:

ವಿ.ರಾ.ಹೆ. said...

*ಸವ್ಳಿ ಎಂದರೆ ದೊಡ್ಡ ಜಾತಿಯ ಕೆಂಪು ಇರುವೆ, ಕಚ್ಚಿದರೆ ಉರಿಯಾಗುವಂತದು.

ಸೀಮಾ, ಗಿವ್ಳಿ ಅಂದ್ರೆ ಎಂತುದು? :-)

ನಮ್ಮ ಜನರ ಇಂಗ್ಲೀಶ್ ವ್ಯಾಮೋಹ ಹಾಸ್ಯಾಸ್ಪದವೂ ಹೌದೂ, ವಿಷಾದಕರವೂ ಹೌದು. ಇಲ್ಲೊಂದು ಕಡೆ ಯಾವುದೋ ರಾಜಕೀಯ ಪಕ್ಷದವ್ರು ಬ್ಯಾನರ್ ಕಟ್ಟಿದ್ರು .. ಅದ್ರಲ್ಲಿ ಎಂತ ಇತ್ತು ಗೊತ್ತಾ
Long leave our belowed leader !!
:) :) :)

Seema S. Hegde said...

ವಿಕಾಸ,
ಗಿವ್ಳಿ ಅಂದ್ರೆ ಗಿವ್ಳಿ. ನೀನು ಸಿಕ್ದಾಗ ಹೇಳ್ತಿ ಅಕಾ, :D
Long leave....ಚೊಲೊ ಇದ್ದು. :)