December 19, 2007

ತಾನು ಮಾಡುವ … (ಉತ್ತರ ಕನ್ನಡದ ಗಾದೆ – 108)

ತಾನು ಮಾಡುವ ಭಾಗ್ಯಕ್ಕೆ ನಡು ಕಾನಿಗೆ ಹೋಗಿದ್ದನು.

ಕಾನು ಎಂದರೆ ಕಾಡು. ನಡು ಕಾನು ಎಂದರೆ ಕಾಡಿನ ನಡುವೆ ಅಥವಾ ಕಾಡಿನ ಮಧ್ಯ ಭಾಗ ಮತ್ತು 'ಮಾಡು' ಎನ್ನುವುದನ್ನು ಪ್ರಾತರ್ವಿಧಿ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ವಿವರಿಸಲು ಮುಜುಗರ ಎನಿಸುತ್ತಿರುವುದರಿಂದ ಈ ಗಾದೆಯನ್ನು ನಿಮ್ಮ ಕಲ್ಪನೆಗೆ ಬಿಡುತ್ತಿದ್ದೇನೆ.

ನಾನು ಊಟಕ್ಕೆ ದೊಡ್ಡ plate ಬೇಕು ಎಂದು ಕಿರಿಕಿರಿ ಮಾಡಿದಾಗಲೆಲ್ಲಾ ಅಮ್ಮನಿಂದ ಇದನ್ನು ತಪ್ಪದೇ ಹೇಳಿಸಿಕೊಳ್ಳುತ್ತಿದ್ದೆ. 'ತಿನ್ನುವುದು ಕೋಳಿ ಕೆದರಿದ ಹಾಗಾದರೂ plate ಮಾತ್ರ ದೊಡ್ಡದು ಬೇಕು ನೋಡು ನಿನಗೆ. ತಾನು ಮಾಡುವ ಭಾಗ್ಯಕ್ಕೆ......'ಎಂದು.

4 comments:

Sushrutha Dodderi said...

ಅದೆಲ್ಲಿ ಸಿಕ್ತು ಮಾರಾಯ್ತಿ ನಿಂಗೆ ಇಷ್ಟೆಲ್ಲಾ ಗಾದೆಗಳು? ನಮ್ಮನೆ ಅಜ್ಜಿಗೂ ಗೊತ್ತಿದ್ದಾ ಇಲ್ಯ ಇಷ್ಟೊಂದು..

Seema S. Hegde said...

ಸುಶ್ರುತ,
ಇದರಲ್ಲಿ ಹೆಚ್ಚಿನ ಗಾದೆಗಳನ್ನ ನನ್ನ ದೊಡ್ಡಮ್ಮನಿಂದ ಕೇಳಿದ್ದು ಮತ್ತು ಇನ್ನೂ ಕೆಲವು ಅಮ್ಮನಿಂದ. ದೊಡ್ಡಮ್ಮನ ಜೊತೆ ನಾನು ಸುಮಾರು ಹತ್ತು ವರ್ಷ ಉಳಿದಿದ್ದಿ, ಶಾಲೆಗೆ ಹೋಗಕಾದ್ರೆ.
ನನ್ನ ದೊಡ್ಡಮ್ಮ ಈಗ ಇಲ್ಲೆ, ನಂಗೆ ಅಮ್ಮನ ಥರಾನೇ ಇತ್ತು ಅವಳು. ಆದರೆ ಅವಳಿದ್ದಾಗಲೇ ಅವಳು ಹೇಳ್ತಾ ಇದ್ದ ಎಲ್ಲ ಗಾದೆಗಳನ್ನೂ ಬರೆದು ಇಟ್ಟಿದಿದ್ದಿ. ಎಲ್ಲಾ ಗಾದೆಗಳೂ ಅವಳ ಜೊತೆಯಲ್ಲೇ ಹೋಗಲ್ಲಾಗ ಹೇಳಿ ಎಲ್ಲರಿಗೂ ತಲುಪಿಸೋ ಪ್ರಯತ್ನ ಮಾಡ್ತಾ ಇದ್ದಿ ಅಷ್ಟೇ.

ಯಜ್ಞೇಶ್ (yajnesh) said...

ಸೀಮಾ,

"ಅಳಿವಿನ ಅಂಚಿನಲ್ಲಿರುವ ಗಾದೆಗಳು " ನೋಡಿ ಬಹಳ ಸಂತೋಷವಾತು.
ನಮ್ಮ ಸಂಸ್ಕೃತಿಯ ಒಂದು ಅಂಗವಾದ ಗಾದೆಗಳು ಈಗ ಮರೆಯಾಗ್ತಾಯಿದ್ದು. ಅದನ್ನ ನೀವು ಸಂಗ್ರಹಿಸ್ತಾಯಿರದು ಬಹಳ ಒಳ್ಳೆ ಕೆಲ್ಸ. ಇದನ್ನ ಒಂದು ಪುಸ್ತಕರೂಪದಲ್ಲಿ ತಂದ್ರೆ ಇನ್ನೂ ಒಳ್ಳೇದು.

ಹಾಂ, ನಿಮ್ಮ ಬ್ಲಾಗನ್ನು ನನ್ನ ಬ್ಲಾಗಿಗೆ ಲಿಂಕಾಯಿಸ್ಲಕ್ಕ?

- ಯಜ್ಞೇಶ್

Seema S. Hegde said...

ಯಜ್ಞೇಶ್,
ನಿಮ್ಮ comment ಗೆ thanks.
ಮುದ್ದಾಂ ಲಿಂಕಾಯಿಸಿ, ಅಡ್ಡಿಯಿಲ್ಲೆ :)