October 12, 2007

ಮದುವೆಯಾಗೋ ಬ್ರಹ್ಮಚಾರಿ … (ಉತ್ತರ ಕನ್ನಡದ ಗಾದೆ – 40)

ಮದುವೆಯಾಗೋ ಬ್ರಹ್ಮಚಾರಿ ಅಂದರೆ ನೀನೇ ಹೆಂಡತಿಯಾಗು ಅಂದ.

ಅವನು ಬ್ರಹ್ಮಚಾರಿಯಾಗಿಯೇ ಜೀವನ ಕಳೆಯುತ್ತಿದ್ದವ.
ಅವಳು ಅವನಿಗೆ, "ಮದುವೆಯಾಗು ನಿನ್ನ ಜೀವನ ಚೆನ್ನಾಗಿರುತ್ತದೆ" ಎಂದರೆ ಅವನು ತಿರುಗಿ ಅವಳಿಗೆ "ಹಾಗಾದರೆ ನೀನೇ ನನ್ನ ಹೆಂಡತಿಯಾಗು" ಎಂದನಂತೆ.

ಯಾರಿಗಾದರೂ ಒಳ್ಳೆಯದಾಗುವಂತಹ ಕೆಲಸವನ್ನು ಮಾಡಿಕೊಳ್ಳಲು ನಾವು ಹೇಳಿದಾಗ ಅವರು ನಮ್ಮ ಹತ್ತಿರವೇ ಆ ಕೆಲಸವನ್ನು ಮಾಡಿಕೊಡು ಅಂದರೆ ಈ ಗಾದೆಯನ್ನು ಹೇಳಬಹುದು.

4 comments:

veena said...

ನಿಮಗೆ ಯಾರಾದ್ರೂ ಕೇಳಿದ್ರಾ????????

Jagali bhaagavata said...

ಸೀಮಾ,

ತುಂಬ ಚೆನ್ನಾಗಿ ಮೂಡಿ ಬರ್ತಿದೆ. ಮುಂದುವರಿಸಿ.

ಮಲ್ಲಿಕಾಜು೯ನ ತಿಪ್ಪಾರ said...

ಹ್ಹ ಹ್ಹ ಹ್ಹ ಹ್ಹ ಹ್ಹ.. ಇಂಥಾ ಜನಾನೇ ಬಹಳ ಇದ್ದಾರೆ ಮೇಡಂ.. Nice ಗಾದೆ..

ಧನ್ಯವಾದಗಳು
ಮಲ್ಲಿ
www.nannahaadu.blogspot.com

Seema S. Hegde said...

@ Vee ಮನಸ್ಸಿನ ಮಾತು, Blog ನಲ್ಲಿ ಎಲ್ಲರೂ ತಮ್ಮ ಸ್ವಂತ ಅನುಭವಗಳನ್ನ ಬರೀತಾರೆ ಅಂತಾ ನಂಬುವಷ್ಟು ಮುಗ್ಧರಲ್ಲ ನೀವು ಅಂದುಕೊಂಡಿದ್ದೀನಿ!!

@ ಜಗಲಿ ಭಾಗವತ, ನಿಮ್ಮ encouragement ಗೆ ಧನ್ಯವಾದಗಳು.

@ ನನ್ನ ಹಾಡು, ಧನ್ಯವಾದಗಳು. ಬಹುಶಃ ಅದಕ್ಕೇ ಇರಬೇಕು ಹೇಳೋದು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಅಂತ.