November 14, 2008

ಕೊರಕ್ಲಜ್ಜಿಯ (ಉತ್ತರ ಕನ್ನಡದ ಗಾದೆ – 216)

ಕೊರಕ್ಲಜ್ಜಿಯ ಮನೆಯ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಂತೆ.
ಇದರ ಹಿಂದೊಂದು ಕಥೆಯೇ ಇದೆ.... ಎಲ್ಲದಕ್ಕೂ ಕಿರಿಕಿರಿ ಮಾಡುವ ಸ್ವಭಾವವುಳ್ಳ ಅಜ್ಜಿಯ ಬಳಿ ಒಂದು ಎಮ್ಮೆ ಕರುವಿತ್ತು. ಅದು ಮೇಯಲು ಹೋದಾಗ ಅದನ್ನು ಹುಲಿ ಹಿಡಿದುಬಿಟ್ಟಿತು... ತಿಂದೂಹಾಕಿತು. ನಂತರ ಹುಲಿ ಅಜ್ಜಿಯ ಮನೆಯ ಹಿಂದೆ ಬಂದು ಅಜ್ಜಿ ಏನು ಮಾಡುತ್ತಾಳೆ ಎಂದು ನೋಡುತ್ತಾ ಕುಳಿತಿತ್ತು (ಯಾಕೆ ಅಂತ ಗೊತ್ತಿಲ್ಲ :-) ಎಮ್ಮೆ ಕರು ಮನೆಗೆ ಬರದಿದ್ದನ್ನು ಕಂಡ ಅಜ್ಜಿ ಕಿರಿಕಿರಿ, ಗೊಣಗಾಟ ಶುರುಮಾಡಿದಳು. ಹುಲಿಗೆ ಆ ಕಿರಿಕಿರಿ ಸಹಿಸಲು ಸಾಧ್ಯವಾಗದೆ ಎಮ್ಮೆ ಕರುವನ್ನು ಅಜ್ಜಿಯ ಮನೆಯ ಹಿಂದೆ ಉಗುಳಿಹಾಕಿ ಓಡಿ ಹೋಯಿತು.


ನಾನು ಅಥವಾ ರಘು ಏನಾದರೂ ವಿಷಯಕ್ಕೆ ಕಿರಿಕಿರಿ ಮಾಡಿ ಮಾಡಿ ಅಪ್ಪ ಅಥವಾ ಅಮ್ಮನಿಗೆ ನಮ್ಮ ಕಿರಿಕಿರಿಯನ್ನು ತಡೆಯಲಾರದೆ ನಮ್ಮ ಹಟಕ್ಕೆ ಮಣಿಯುವಂತೆ ಆದಾಗ ಈ ಮಾತನ್ನು ನಾವು ಕೇಳಿಸಿಕೊಳ್ಳುತ್ತಿದ್ದೆವು - "ತಗ ನೆಡಿ ಅತ್ಲಾಗೆ, ಕೊರಕ್ಲಜ್ಜಿಯ ಮನೆ ಎಮ್ಮೆ ಕರುವನ್ನು ಹುಲಿ ಹಿಡಿದಿತ್ತಡ" ಎಂದು :)
ಇದು ನಿಜವಾಗಿ ಗಾದೆಯಲ್ಲದಿದ್ದರೂ ಗಾದೆಯಂತೆ ಬಳಸಲ್ಪಡುತ್ತದೆ.

4 comments:

shivu.k said...

ಸೀಮ ಹೆಗ್ಡೆ ಮೇಡಮ್,

ನಿಮ್ಮ ಗಾದೆಯಂತೆ ನನ್ನಾಕೆ ಕೆಲವೊಮ್ಮೆ ನಡೆದುಕೊಳ್ಳುತ್ತಾಳೆ ಅವಳ ಹಠಕ್ಕೆ ನಾನೇ ಮಣಿಯಬೇಕಾಗುತ್ತದೆ ನೋಡಿ !

Seema S. Hegde said...

@ ಶಿವು,
ಮಜಾ ಅಂದ್ರೆ ನಿಮ್ಮ ಹಠಕ್ಕೆ ನಿಮ್ಮಾಕೆ ಎಷ್ಟೊಂದು ಸಾರಿ ಮಣಿದಿರುತ್ತಾರೋ ನಿಮಗೆ ಗೊತ್ತೇ ಆಗಿರುವುದಿಲ್ಲ ನೋಡಿ!! (ತಮಾಷೆಗೆ ಅಂದೇ ಅಷ್ಟೆ :)

Harisha - ಹರೀಶ said...

ಸೀಮಕ್ಕೋಯ್.. ಆ ಹುಲಿಗೆ ಬುದ್ಧಿ ಇಲ್ಲೆ

Seema S. Hegde said...

@ ಹರೀಶ,
ಹಾಂಗಂಬ್ಯ?
ಹ್ಹಿ ಹ್ಹಿ ಹ್ಹಿ.... :)