November 22, 2008

ಸಾಲ ಮಾಡಿ (ಉತ್ತರ ಕನ್ನಡದ ಗಾದೆ – 222 ಮತ್ತು 223 )

ಸಾಲ ಮಾಡಿ ಓಲೆ ಮಾಡಿಸಿ ಸಾಲದ ಬಡ್ಡಿಗೆ ಓಲೆ ಮಾರಿದ.
ಕೈಲಾಗದಿದ್ದರೂ ಸಾಲ ಮಾಡಿ ಓಲೆ ಮಾಡಿಸಿದರೆ ಮುಂದೆ ಆ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋದಂತೆ ಓಲೆಯನ್ನು ಮಾರಿ ಬಡ್ಡಿಯನ್ನು ತೀರಿಸಬೇಕಾಗುತ್ತದೆ. ಆದರೆ ಸಾಲದ ಅಸಲು ಹಾಗೆಯೇ ಉಳಿದುಕೊಳ್ಳುತ್ತದೆ. ಅದಕ್ಕಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಇನ್ನೂ ಒಂದು ಮಾತಿದೆ ತಲೆಯಿಂದ ಮೇಲೆ ಸಾಲ ಒಲೆಯಿಂದ ಮೇಲೆ ಬೆಂಕಿ ಆಗಬಾರದು ಎಂದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇರುವ ಮಾತೆಂದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

9 comments:

Harish - ಹರೀಶ said...

ಸಲ ಅಂದ್ರೆ?

Seema Hegde said...

@ ಹರೀಶ,
ಅಲ್ಲ. ಅದು 'ಸಾಲ'. Typing error.
ಈಗ ಸರಿ ಮಾಡಿದ್ದಿ. Thanks :)

ಪಾಪಣ್ಣ (Amar Tumballi) said...

"ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು" anno context actually bere ne. Its not against it. you can't compare both. because illi ಓಲೆ vaapas hogi biDatte.. alli tuppa thinda kushi idde iratte alva? i would consider hunger as primary need, and ornament as a luxury, so context bere bere antha nanna anisike.

Seema Hegde said...
This comment has been removed by the author.
Seema Hegde said...

@ ಪಾಪಣ್ಣ,
ನನಗೆ ನೀವು ಹೇಳಿದ ರೀತಿಯ difference ಏನೂ ಜಾಸ್ತಿ ಕಾಣ್ತಾ ಇಲ್ಲ. ಏಕೆಂದರೆ... ತುಪ್ಪ ತಿಂದ ಖುಷಿ ಇರೋ ಹಾಗೇನೇ ಓಲೆ ಹೋದರೂ ಕೂಡ ಓಲೆ ಹಾಕಿಕೊಂಡಿದ್ದ ಖುಷಿ ಇರತ್ತೆ ಅಲ್ವ ?
Thanks :)

ಕೆ. ರಮೇಶ್ ಬಾಬು said...

ಸೀಮಾ ಅವರೇ:
ಈ ಗಾದೆಯ ಮಾತು ಬಹಳ ನಿಜವಾದುದು. ಈಗ ಅಮೆರಿಕಾಗೆ ಬಂದಿರುವ ಖಾಯಿಲೆ ಈ ಗಾದೆಗೆ ಸಂಬಂಧಪಟ್ಟಿರುವುದು. ಉದಾಹರಣೆಗೆ, ಈಗ Citicorp stock ಬೆಲೆ $೩.೭೭; ಸುಮಾರು ೫ ವರ್ಷಗಳ ಹಿಂದೆ $೫೫.೦೦ ಇತ್ತು. ಮೈಯೆಲ್ಲಾ ಸಾಲವಾದರೆ ಇನ್ನೇನಾಗುತ್ತದೆ?
--
ರಮೇಶ್

Seema Hegde said...

@ ರಮೇಶ್ ಬಾಬು,
ನೀವು ಹೇಳಿದ್ದು ನಿಜ.
ಧನ್ಯವಾದಗಳು.

ಅಸತ್ಯ ಅನ್ವೇಷಿ said...

ಅದು ಸಾಲ ಅಲ್ಲ... ಶೂಲ ಅಂತಾಗಬೇಕಿತ್ತು... ಪ್ರೂಫ್ ಮಿಸ್ಟೇಕ್ ಇರಬೌದಾ????

ಇನ್ನೊಂದು ಕೂಡ ಪೂರಕ. "ಹೊಟ್ಟೆಗೆ" ಜುಟ್ಟಿಲ್ಲದಿದ್ದರೂ "ಹಿಟ್ಟಿಗೆ" ಮಲ್ಲಿಗೆ!!! :)

Seema Hegde said...

@ ಅಸತ್ಯ ಅನ್ವೇಷಿ,
ಸಾಲ ಯಾವತ್ತಿದ್ದರೂ ಶೂಲವೇ.
ತಿರುವು-ಮುರುವು ಚೆನ್ನಾಗಿದೆ :)