ಖರ್ಜೂರದ ಹಣ್ಣಾದಾಗ ಕಾಗೆಯ ಬಾಯಲ್ಲಿ ಹುಣ್ಣು.
ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ ಎಂಬ ಅರ್ಥವನ್ನುಕೊಡುತ್ತದೆ ಈ ಗಾದೆ.
ಖರ್ಜೂರದ ಹಣ್ಣು ಆಗುವ ಸಮಯದಲ್ಲಿ ಕಾಗೆಯ ಬಾಯಲ್ಲಿ ಹುಣ್ಣು ಆಗುತ್ತದೆಯಂತೆ.
ಹಾಗಾಗಿ ಕಾಗೆಗೆ ಖರ್ಜೂರದ ಹಣ್ಣನ್ನು ತಿನ್ನಲು ಆಗುವುದಿಲ್ಲ.
ಯಾವುದಾದರೂ ವಸ್ತು ಸಿಗುವಂತಿದ್ದಾಗ ನಮಗೆ ಅದನ್ನು ತೆಗೆದುಕೊಳ್ಳಲು ಕಷ್ಟ ಅಡ್ಡ ಬಂದರೆ ಈ ಮಾತನ್ನು ಹೇಳಬಹುದು.
ಎಲ್ಲಕ್ಕಿಂತ ಮಿಗಿಲಾಗಿ ಮನೆಯಲ್ಲಿ ವಿಶೇಷ ತಿಂಡಿ ಮಾಡಿದಾಗ ನಾವು ಅನಾರೋಗ್ಯದಿಂದ ಬಳಲಬಹುದು!
2 comments:
ಸೀಮಕ್ಕಾ...
ತುಂಬ ಚೆನ್ನಾಗಿದೆ.
ಹೌದು ನೀವು ಹೇಳಿದ ಹಾಗೆ ಈ ಗಾದೆಯಲ್ಲಿರುವಂತೆ ನಮ್ಮ ಸುತ್ತ ನಡೆಯುವುದನ್ನು ಕಾಣಬಹುದು.
ಎಲ್ಲ ಸುಖವನ್ನು ಅನುಭವಿಸುವ ವಯಸ್ಸಿನಲ್ಲಿ ಬಡತನ ಅದಕ್ಕೆ ಆಸ್ಪಧ ನೀಡದೇ, ವಯಸ್ಸಾಗಿ ದೇಹದಲ್ಲಿ ಶಕ್ತಿ ಕುಂದಿದ ಮೇಲೆ ಸಿರಿವಂತಿಕೆ ಬಂದರೆ ಪ್ರಯೋಜನವಾಗದೇ ಹೋಗುವ ಸಂದರ್ಭಗಳಲ್ಲಿ ಈ ಗಾದೆಯನ್ನುಜನರ ಬಾಯಿಯಿಂದ ಅರಿವಿಲ್ಲದೆಯೇ ನುಡಿಸುತ್ತವೆ.
ಬೇಕದಾಗ ಸಿಗದವುಗಳು ಬೇಡವಾದಾಗ ಸಿಕ್ಕರೆ ನಿಜವಾಗಿಯೂ ಪ್ರಯೋಜನವಿಲ್ಲದೇ ಈ ಗಾದೆಯನ್ನು ಆಗಾಗ ನೆನಪಿಸುತ್ತವೆ.
ಶಾಂತಲಾ,
ನೀನು ಹೇಳಿದ್ದು 100% ನಿಜ.
ಇನ್ನೂ ಒಂದು ಸಂದರ್ಭ ಇರ್ತು. ಅದರಲ್ಲಿ ವಯಸ್ಸು, ಸಿರಿತನ ಎರಡೂ ಇರ್ತು.
ಆದರೆ ಅನುಭವಿಸುವ ಮನಸ್ಸಿಲ್ಲದೇ ಸನ್ಯಾಸಿಗಳಾಗ್ತ.
Post a Comment