ಉಂತೇ ಸಾಯುವ ಮುದುಕಿಯನ್ನು ಒನಕೆಯಲ್ಲಿ ಹೊಡೆದು ಕೊಂದಂತೆ.
ಆ ಮುದುಕಿಯನ್ನು ಸುಮ್ಮನೇ ಬಿಟ್ಟಿದ್ದರೂ ಸಧ್ಯದಲ್ಲಿಯೇ ಸತ್ತು ಹೋಗುತ್ತಿದ್ದಳು.
ಆದರೆ ಅವಳನ್ನು ಒನಕೆಯಲ್ಲಿ ಹೊಡೆದು ಕೊಂದು ಹಾಕಿಬಿಟ್ಟರು.
ಯಾವುದಾದರೂ ವಸ್ತು ಹಾಗೇಯೇ ಬಿಟ್ಟಿದ್ದರೂ ಹಾಳಾಗುವುದರಲ್ಲಿತ್ತು.
ಆದರೆ ಅದರ ಮೇಲೆ ಇನ್ನೇನೋ ಪ್ರಯೋಗ ಮಾಡಲು ಹೋಗಿ ಅದು ಬೇಗ ಹಾಳಾದಾಗ ಈ ಗಾದೆಯನ್ನು ಹೇಳುತ್ತಾರೆ.
ನೆಟ್ಟ ಹೂವಿನ ಗಿಡ ಇನ್ನೇನು ಸಾಯುವುದರಲ್ಲಿದೆ ಎಂದಾಗ ನಾನು ಅದರ ಬುಡದಲ್ಲಿ ಗುದ್ದಲಿಯಿಂದ ಕೊಚ್ಚಿ ಗೊಬ್ಬರ ಹಾಕಲು ಹೋಗಿ ಅದು ಇನ್ನೂ ಬೇಗ ಸತ್ತು ಹೋದಾಗ ಅಮ್ಮನ ಹತ್ತಿರ ಹೇಳಿಸಿಕೊಳ್ಳುತ್ತಿದ್ದ ಮಾತು ಇದು!
2 comments:
ಹ್ಹ ಹ್ಹ.... ಒಳ್ಳೇ ಗಾದೆ.... ಕನಾ೯ಟಕದ ರಾಜಕಾರಣಕ್ಕೆ ಹೇಳಿಮಾಡಿಸಿದ್ದು... :)
ನೀವು ಹೇಳಿದ್ದು ನಿಜ.
ಸದ್ದಾಮ್ ಹುಸೇನರನ್ನು ಅಮೇರಿಕ ಗಲ್ಲಿಗೆ ಏರಿಸಿದಾಗ ನನಗೆ ಈ ಗಾದೆ ನೆನಪಾಗಿತ್ತು.
Post a Comment