ತಿಥಿ ಮನೆಯಲ್ಲಿ ಉಂಡ ಭಟ್ಟ ಹುಲ್ಲು ಗೊಣಬೆಗೆ ಬೆಂಕಿ ಹಾಕಿದ್ದನಂತೆ.
ಗೊಣಬೆ ಅಂದರೆ ಹುಲ್ಲಿನ ಬಣವೆ ಎಂದು ಅರ್ಥ.
ತಿಥಿ ಮನೆಯಲ್ಲಿ ಚೆನ್ನಾಗಿ ಊಟ ಮಾಡಿದ ಭಟ್ಟ ತನಗೆ ಇನ್ನು ಯಾವತ್ತೂ ಊಟ ಬೇಡ, ಎಂದೂ ಹಸಿವಾಗುವುದೇ ಇಲ್ಲ ಎಂದು ತನ್ನ ಮನೆಯ ಹುಲ್ಲಿನ ಬಣವೆಗೆ ಬೆಂಕಿ ಹಾಕಿ ಭತ್ತವನ್ನೆಲ್ಲ ಸುಟ್ಟು ಹಾಕಿದ್ದನಂತೆ.
ಅಂದು ಸಂಜೆ ಹಸಿವಾಗದಿದ್ದರೂ ಮಾರನೆಯ ದಿನ ಎಂದಿನಂತೆ ಹಸಿವಾಯಿತು!
ಯಾರಾದರೂ ಚೆನ್ನಾಗಿ ಊಟ ಮಾಡಿದ ನಂತರ ತನಗೆ ಇನ್ನೆರಡು ಹೊತ್ತು ಊಟ ಬೇಡ ಎಂದು ಅಭಿಪ್ರಾಯಪಟ್ಟಾಗ ಈ ಮಾತನ್ನು ಹೇಳುತ್ತಾರೆ.
2 comments:
ತನ್ನ ಕೆಲಸ ಆದ ಮೇಲೆ ಬೇರೆಯದ್ದೇನನ್ನೂ ನೋಡದ ಅಥವಾ ಬೇರೆಯವರಿಗೆ ಸಿಗದಂತೆ ಮಾಡುವ ಪರಮ ಸ್ವಾರ್ಥ ಬುದ್ಧಿಯವರಿಗೆ ಈ ಗಾದೆ ಅನ್ವಯಿಸುತ್ತದೆ ಅನ್ನಿಸ್ತಿಲ್ಯ ಸೀಮಾ?
ಹೂಂ... ಆನು ಒಂದೇ ದಿಕ್ಕಿನಲ್ಲಿ ವಿಚಾರ ಮಾಡಿದ್ದಿ.
ಎಂತಕ್ಕೆ ಅಂದ್ರೆ ಆನು ಆ ಗಾದೆ ಕೇಳಿದ್ದೆಲ್ಲಾ ಅದೇ ಸಂದರ್ಭದಲ್ಲಿ.
ನೀನು ಹೇಳಿದ ರೀತೀನೂ ವಿಚಾರ ಮಾಡ ಬಗ್ಗೆ ಆನು ಯಾರನ್ನಾದ್ರೂ ಕೇಳವ್ವು.
Post a Comment