November 2, 2007

ಕದ ತಿನ್ನುವವನಿಗೆ … (ಉತ್ತರ ಕನ್ನಡದ ಗಾದೆ – 63)

ಕದ ತಿನ್ನುವವನಿಗೆ ಹಪ್ಪಳ ಈಡಾ?

ಅವನು ಬಾಗಿಲನ್ನೇ ತಿಂದು ಮುಗಿಸುತ್ತಾನೆ. ಇನ್ನೂ ಹಪ್ಪಳವಂತೂ ಯಾವ ಲೆಕ್ಕವೂ ಅಲ್ಲ.

ದೊಡ್ಡ ದೊಡ್ಡ ಮೋಸವನ್ನೇ ಮಾಡುತ್ತಿರುವವನಿಗೆ ಸಣ್ಣದು ಯಾವ ಲೆಕ್ಕವೂ ಅಲ್ಲ ಎಂದು ಹೇಳುವ ಮಾತು ಇದು.

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಒಳ್ಳೆಯ ಗಾದೆ ಮಾತು ಸೀಮಕ್ಕಾ.
ಯಾವುದಾದರೂ ದೊಡ್ಡ ಕಾರ್ಯವನ್ನ್ನು ಸರಾಗವಾಗಿ ಮುಗಿಸುವವರಿಗೆ ಚಿಕ್ಕ ಕಾರ್ಯಗಳನ್ನು ಮಾಡುವುದು ಕಷ್ಟವಿಲ್ಲ ಎಂಬುದನ್ನು ಹೇಳುವಾಗಲೂ ಸಹ ಈ ಮಾತನ್ನು ಉಪಯೋಗಿಸುವುದನ್ನು ಕೇಳಿದ್ದೇನೆ. ದಿನ ಬಳಕೆಯಲ್ಲಿ ಹೆಚ್ಚು ಬಳಸಬಹುದಾದ ಗಾದೆ. ಚೆನ್ನಾಗಿದೆ.

Seema S. Hegde said...

ಶಾಂತಲಾ,
ನೀನು ಹೇಳಿದ್ದು ಸರಿ.