ಅತ್ತೇರೆ, ಅತ್ತೇರೆ ಅರಳಿ ಕಟ್ಟೆಗೆ ದಿಬ್ಬಣ ಬಂತು ಹಾಡು ಹೇಳಿಕೊಡಿ.
ಮನೆಯ ಮುಂದಿರುವ ಅರಳಿ ಮರದ ಕಟ್ಟೆಯ ತನಕ ಮದುವೆ ದಿಬ್ಬಣ ಬರುವವರೆಗೂ ಸೊಸೆ ಹಾಡನ್ನು ಕಲಿತಿಲ್ಲ. ದಿಬ್ಬಣ ಬಂದ ಮೇಲೆ ಅತ್ತೆಯ ಬಳಿ ಬಂದು ಹಾಡು ಹೇಳಿಕೊಡಿ ಎನ್ನುತ್ತಾಳೆ.
ಪೂರ್ವ ಸಿದ್ಧತೆ ಇಲ್ಲದೇ ಕೊನೇ ಘಳಿಗೆಯಲ್ಲಿ ಚಡಪಡಿಸುವವರನ್ನು ಕುರಿತು ಇರುವ ಮಾತು ಇದು.
ಇದೇ ತರಹದಲ್ಲಿ ಬಳಸಲ್ಪಡುವ ಇನ್ನೊಂದು ಗಾದೆ- ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ್ದನು. ನೀರಿಗಾಗಿ ಪೂರ್ವ ಸಿದ್ಧತೆ ಇಲ್ಲದೇ ಗಡ್ಡ ಹೊತ್ತಿಕೊಂಡು ಉರಿಯತೊಡಗಿದಾಗ ಬಾವಿ ತೋಡಲು ಮುಂದಾಗಿದ್ದನು.
2 comments:
ನಮ್ಮ ಎಂಜಿನಿಯರಿಂಗ್ ಪರೀಕ್ಷೆ ಸಂದರ್ಭನೂ ಹೀಂಗೆ ಇರ್ತಿತ್ತು
:) :)
ವಿಕಾಸ್,
ಎಲ್ಲರದ್ದೂ ಅದೇ ಕಥೆ ಬಿಡು. :D
Post a Comment