May 28, 2009

ಕ್ರೀಮ್ ಬಿಸ್ಕೆಟ್

ಕ್ರೀಮ್ ಬಿಸ್ಕೆಟ್ ಹೇಗೆ ತಿಂತೀರಾ?.... ಇದೆಂಥ ಪ್ರಶ್ನೆ ಅಲ್ಲವಾ? ನಿಜ. ಮಕ್ಕಳು ಕ್ರೀಮ್ ಬಿಸ್ಕೆಟ್ ತಿನ್ನುವುದನ್ನು ಗಮನಿಸಿದ್ದೀರಾ? ಬಿಸ್ಕೆಟ್ಟನ್ನು ಬೇರೆಯಾಗಿಸಿ, ಅದರ ನಡುವೆ ಇರುವ ಕ್ರೀಮನ್ನು ನಾಲಿಗೆಯಿಂದ ಘಂಟೆಗಟ್ಟಲೆ ಸವಿದು, ನಂತರ ಉಳಿದಿರುವ ಎರಡೂ ಬಿಸ್ಕೆಟ್ಟನ್ನು ತಿನ್ನುತ್ತಾರೆ. ಎಂದಾದರೂ ಹಾಗೆ ತಿಂದಿದ್ದೀರಾ? ನಾನಂತೂ ನಾನೂ ಚಿಕ್ಕವಳಿದ್ದಾಗ ಹಾಗೆಯೇ ತಿನ್ನುತ್ತಿದ್ದೆ. ಆದರೆ ಇಂದು ಏಕೋ ಹಾಗೆ ತಿನ್ನಲು ಮನಸ್ಸಾಗುವುದಿಲ್ಲ. ಈಗ ಹಾಗೆ ತಿನ್ನಲು ನಾಚಿಕೆ ಒಂದು ಕಾರಣವಾದರೆ ಇನ್ನೊದು ಕಾರಣ ಅದರಲ್ಲಿ ಯಾವ ಮಜವೂ ಕಾಣುತ್ತಿಲ್ಲ. ಒಟ್ಟಿನಲ್ಲಿ ಬಿಸ್ಕೆಟ್ಟನ್ನು ಬಾಯಿಗೆ ತುರುಕಿ ನುಂಗಿದರೆ ಮುಗಿದು ಹೋಯಿತು. ಅದನ್ನು enjoy ಮಾಡಿ ತಿನ್ನುವಷ್ಟು ಪುರುಸೊತ್ತು, ತಾಳ್ಮೆ ಎರಡೂ ಇಲ್ಲ. ಚಿಕ್ಕ ಜಗತ್ತಿನಲ್ಲಿ ಸಣ್ಣ ಪುಟ್ಟ ವಿಷಯಗಳೇ ಅದ್ಭುತ ಆನಂದವನ್ನು ತಂದುಕೊಡುತ್ತಿದ್ದವು. ಬಿಸ್ಕೆಟ್ ಎಂದರೆ ಪ್ರಾಣಕ್ಕಿಂತ ಪ್ರಿಯವಾಗಿದ್ದ ನನಗೆ ಈಗ ಕೆಲವೊಮ್ಮೆ ಅದನ್ನು ನೋಡಿದರೇ ಮೂಗು ಮುರಿಯಬೇಕೆನಿಸುತ್ತದೆ. ಮಕ್ಕಳಿದ್ದಾಗ ಖುಷಿ ಕೊಡುತ್ತಿದ್ದ ಕೆಲವೇ ಕೆಲವು ವಿಷಯಗಳು ಇಂದೂ ಕೂಡ ಖುಷಿ ಕೊಡುತ್ತವೆ; ನೀರಾಟ ಆಡುವುದು, ಕಾಡು ಅಲೆಯುವುದು, ಬೆಕ್ಕು-ನಾಯಿಗಳ ಜೊತೆ ಆಟ ಆಡುವುದು, ಹೊಸ ಬಟ್ಟೆ ಹಾಕಿಕೊಳ್ಳುವುದು ಹೀಗೆ ಇನ್ನೊಂದೆರಡು ಅಷ್ಟೇ. ಅಪ್ಪ, ಅಮ್ಮನಿಗೆ ಇಷ್ಟು ವಯಸ್ಸಿನಲ್ಲಿಯೂ ಇರುವಷ್ಟು ಉತ್ಸಾಹ ನಮಗೆ ಈಗಲೇ ಇಲ್ಲವಾಗಿದೆ. ದೊಡ್ಡದೇನೋ ಒಂದರ ಬೆನ್ನು ಹತ್ತಿ ಚಿಕ್ಕ ಚಿಕ್ಕ ವಿಷಯಗಳನ್ನೇ ಮರೆತುಬಿಟ್ಟಿದ್ದೇವೆ. ಮಕ್ಕಳಿದ್ದಾಗ ಆನಂದಿಸಿದ ವಿಷಯಗಳು ಈಗ ಅಷ್ಟೊಂದು ಮಹತ್ವದ್ದಾಗಿ ಅನಿಸುವುದೇ ಇಲ್ಲ. ಹಾಗಿದ್ದರೆ ನಾನು ಅಷ್ಟೊಂದು ಬೆಳೆದುಬಿಟ್ಟಿದ್ದೆನೆಯೆ?- ತಿರುಗಿ ನೋಡಲಾರದಷ್ಟು. ನನ್ನಲ್ಲಿರುವ ಅಪ್ಪ, ಅಮ್ಮನ ಪ್ರೀತಿಯ ಮಗಳು ಎಲ್ಲಿಯೋ ಕಳೆದು ಹೋಗುತ್ತಿದ್ದಾಳೆಯೆ? “Backward, turn backward, Oh Time! in your flight Make me a child again just for tonight!!” -Elizabeth Akers Allen

5 comments:

shivu.k said...

ಸೀಮ ಮೇಡಮ್,

ಇಷ್ಟು ದಿನ ಎಲ್ಲಿ ಹೋಗಿದ್ರಿ...ಹೋಗ್ಲಿ ಬಿಡಿ ಮತ್ತೆ ಬಂದಿರಲ್ಲ...welcome.

ಕ್ರೀಮ್ ಬಿಸ್ಕೆಟ್ ವಿಚಾರಕ್ಕೆ ಬಂದರೆ ಈಗಲೂ ನಾನು ಯಾರು ಇಲ್ಲದಾಗ ಮದ್ಯದ ಕ್ರೀಮ್ ಮಾತ್ರನೇ ತಿನ್ನೋದು...ಎಲ್ಲರೂ ಇದ್ದಾಗ ಅವರಿಗಾಗಿ ಒಟ್ಟಾರೆ ಬಿಸ್ಕಟ್ ತಿನ್ನುತ್ತೇನೆ...ಮನೆಯಲ್ಲಿ ಮಾತ್ರ ನನಗಿಷ್ಟಬಂದಂತೆ ತಿನ್ನುತ್ತಾ enjoy ಮಾಡುತ್ತೇನೆ..
ಧನ್ಯವಾದಗಳು.

Seema S. Hegde said...

@ ಶಿವು
ಶಿವು,
Blog update ಆದ ತಕ್ಷಣ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಳು. ಸಂತೋಷವಾಯಿತು. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಋಣಿ.

ವಿ.ರಾ.ಹೆ. said...

Seemak, welcome back after lo..ng break :)

inmunde regularragi cream bisket tinnal kodtya nangakke? :)

Ittigecement said...

ಸೀಮಾರವರೆ...

ಹಿರಿಯರಿಗಿರುವಷ್ಟು ಬದುಕಿನಲ್ಲಿರುವ ಆಸಕ್ತಿ ನಮಗಿಲ್ಲವಾಗುತ್ತಿದೆ...
ಸಣ್ಣ, ಸಣ್ಣ ಹಬ್ಬ ಹರಿದಿನಗಳಲ್ಲಿ..
ಮನೆಗೆ ಬಂದ ನೆಂಟರಿಷ್ಟರಲ್ಲಿ..
ಅವರು ಪಡುತ್ತಿದ್ದ ಸಂಭ್ರಮ, ಸಂತೋಷ..
ನಮ್ಮಿಂದ ಆಗುತ್ತಿಲ್ಲ...

ನಮ್ಮ ಜೀವನ ದ್ರಷ್ಟಿಯೇ ಬೇರೆಯಾಗುತ್ತಿದೆ....

ಸಂಭ್ರಮ, ಸಂತೋಷ ಕಡಿಮೆಯಾಗಿರುವ..
ನಮ್ಮ ಜೀವನದ ದ್ರಷ್ಟಿ ಅದಂಥೆದೋ...

ಬಹಳ ದಿನಗಳ ನಂತರ...

ಅಭಿನಂದನೆಗಳು...

Seema S. Hegde said...

@ ವಿಕಾಸ,
Thank you so much!
ಕ್ರೀಮ್ ಬಿಸ್ಕೆಟ್ ಕೊಡಲ್ಲೆ try ಮಾಡ್ತಿ.
ಆದ್ರೆ promise ಮಾಡ್ತಾ ಇಲ್ಲೆ :)

@ ಸಿಮೆಂಟು ಮರಳಿನ ಮಧ್ಯೆ,
ನಿಮ್ಮ ಮಾತು ನಿಜ. ನಾವೇ ಹೀಗೆ...ಇನ್ನೂ ಮುಂದಿನ ಪೀಳಿಗೆಯವರು ಇನ್ನು ಹೇಗೋ.
Thanks a lot for the comment :)