December 4, 2008

ಕದಿಯಲು ಹೋಗುವವನು (ಉತ್ತರ ಕನ್ನಡದ ಗಾದೆ – 232)

ಕದಿಯಲು ಹೋಗುವವನು ಬಳ್ಳನನ್ನು ಕಟ್ಟಿಕೊಂಡು ಹೋಗಿದ್ದನಂತೆ.
‘ಬಳ್ಳ’ ಎಂದರೆ ನರಿ. ನರಿಗಳು ವಿಚಿತ್ರ ರೀತಿಯಲ್ಲಿ ಕೂಗುವುದಕ್ಕೆ ಹೆಸರುವಾಸಿ. ಅವಕ್ಕೆ ತಾಳ್ಮೆ ಕಡಿಮೆ ಎನ್ನುತ್ತಾರೆ. ಕದಿಯಲು ಹೋಗುವಾಗ ನರಿಯನ್ನು ಕಟ್ಟಿಕೊಂಡು ಹೋದರೆ ಅವು ಕೂಗಿಬಿಡುತ್ತವೆ, ಅದರಿಂದಾಗಿ ಅಪಾಯ ಎಂದು ಅರ್ಥ. ಗುಟ್ಟಿನ ವಿಚಾರವನ್ನು ವಿಚಾರಹೀನರ ಬಳಿ ಹೇಳಬಾರದು ಎನ್ನುವಾಗ ಬಳಸಬಹುದು. ಇಂಥದೇ ಇನ್ನೊಂದು ಮಾತಿದೆಯಲ್ಲ- ಕಹಳೆಯ ಬಾಯಿಗೆ ಮುತ್ತಿಟ್ಟಂತೆ.

13 comments:

Ittigecement said...

ಸೀಮಾ...
ನರಿ ಬಹಳ..ಚಂಚಲ ಸ್ವಭಾವದ ಪ್ರಾಣಿ. ಯಾವ, ಯಾವ ಕೆಲಸಕ್ಕೆ ಯಾರನ್ನು ಕರೆದುಕೊಂಡು ಹೋಗಬೇಕು ಅನ್ನುವ ಪರಿಜ್ನಾನ ನಮಗೆ ಇರಬೇಕು ಎನ್ನುವಾಗ ಈ ಗಾದೆ ಬಳಸ್ತ. ಅಲ್ದ? ರಾಶಿ ಚೊಲೊ ಇದ್ದು. "ಮನಸ್ವಿ" ಯವರ ಬ್ಲೊಗ್ ಒಮ್ಮೆ ನೋಡು. ನನ್ನ ಪ್ರೊಫೈಲ್ ನಲ್ಲಿ ಲಿಂಕ ಸಿಕ್ತು.
ಧನ್ಯವಾದಗಳು...

ಮನಸ್ವಿ said...

ಓಹ್ 232 ಗಾದೆಗಳು ಜೊತೆಗೆ ಅರ್ಥ ವಿವರಣೆ, ತುಂಬಾ ಖುಷಿ ಕೊಟ್ಟಿತು.. ಹೀಗೆ ಗಾದೆಗಳ ಬಂಡಾರ ಬೆಳೆಯಲಿ, ನಿಮ್ಮಣ್ಣ ಪ್ರಕಾಶ್ ಅವರಿಂದ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು, ನನ್ನ ಸ್ನೇಹಿತನಿಂದ ನಿಮ್ಮ ಬ್ಲಾಗ್ ಕೊಂಡಿ ದೊರಕಿತು..


@ Prakash Hegde
ಓಹ್ ಇಲ್ಲಿ ನನ್ನ ಬ್ಲಾಗ್ ಬಗ್ಗೆ ಬರದ್ಯಾ.. Thank you..
ಅಲ್ದಪಾ ನನ್ನ ತಂಗಿ ಸೀಮಾ ಬ್ಲಾಗ್ ಇದ್ದು ಹೇಳಿದೆ ಆದ್ರೆ ಲಿಂಕ್ ಕೊಡ್ಲೆ.. ಇಲ್ಲೂ ಹಂಗೆ ಆಯ್ದು ಮನಸ್ವಿ ಬ್ಲಾಗ್ ನೋಡು ಅಂತ ಬರದ್ದೆ.. ಮನಸ್ವಿ ಬ್ಲಾಗ್ ಅಂತ ಹುಡ್ಕಿರೆ ನನ್ನ "ಹಾಗೇ ಸುಮ್ಮನೆ..." ಬ್ಲಾಗ್ ಸಿಕ್ತಲ್ಲೆ :) ಆದ್ರೂ ಧನ್ಯವಾದಗಳು.. ನನ್ನ ಬ್ಲಾಗನ್ನು ನೋಡು ಅಂತ ಇಲ್ಲಿ ಬರೆದಿದ್ದಕ್ಕೆ ಮತ್ತೊಮ್ಮೆ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು

Seema S. Hegde said...

@ ಸಿಮೆಂಟು ಮರಳಿನ ಮಧ್ಯೆ,
ನಿಜ.
'ಮನಸ್ವಿ' ಬ್ಲಾಗ್ ದಾರಿ ತೋರಿಸಿದ್ದಕ್ಕೆ ಧನ್ಯವಾದಗಳು :)

@ ಮನಸ್ವಿ,
ಭೇಟಿಯಿತ್ತಿದ್ದಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗ್ ನೋಡಿ ಬಂದಿ ಚೆನ್ನಾಗಿದ್ದು.
ಫೋಟೋ ಬ್ಲಾಗ್ ಜಾಸ್ತಿ ಇಷ್ಟ ಆತು. ಮತ್ತೆ ಮತ್ತೆ ಬರ್ತಿ :)

Harisha - ಹರೀಶ said...

ಸೀಮಕ್ಕ, ಎರಡನೇ ಗಾದೆ (ಕಹಳೆಯ ಬಾಯಿಗೆ ಮುತ್ತಿಟ್ಟಂತೆ) ಅರ್ಥ ಆಜಿಲ್ಲೆ. Explain please!

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕಾ...
ಈ ಗಾದೆನ ‘ಕದ್ಯಲೆ ಹೋಪಂವ ಕುನ್ನಿ ಕಟ್ಗ್ಯಂಡ್ ಹೋದಂಗೆ’ ಹೇಳೂ ಹೇಳದ್ ಕೇಳಿದ್ದಿ. ನೆನಪಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

ವಿ.ರಾ.ಹೆ. said...

ಹರೀಶ, ಕಹಳೆಯ ಬಾಯಿಗೆ ಮುತ್ತಿಟ್ರೂ ಕೂಡ ಅದು ಶಬ್ದ ಮಾಡ್ತು . ಅದೇ ಅರ್ಥ :)

Harisha - ಹರೀಶ said...

ವಿಕಾಸ, ಕೆಲಸ ಹೆಚ್ಚಾಗಿ ಬುದ್ಧಿಗೆ ಮಂಕು ಕವದ್ದು... ನೀ ಹೇಳಿದ್ದು ಅರ್ಥ ಆಜಿಲ್ಲೆ.. :-(

ಕಹಳೆ ಬಾಯಿಗೆ ಅಲ್ದಾ ಮುತ್ತಿಡದು? ಅದು ಶಬ್ದ ಮಾಡ್ಲಿ ಅಂತ್ಲೆಯ..

ವಿ.ರಾ.ಹೆ. said...

over to seemakka :)

Laxman (ಲಕ್ಷ್ಮಣ ಬಿರಾದಾರ) said...

hi sima TUMBA CHENNAGIDE.. kEEP IT UP, NANAGANTU TUMBA KHUSHIYATU

shivu.k said...

ಸೀಮಾ ಮೇಡಮ್,
ನಿಮ್ಮ ಗಾದೆ ಮಾತಿನಂತೆ ಒಳ್ಳೆ ಕೆಲಸಕ್ಕೆ ಹೋಗುವಾಗ ಅದಕ್ಕೆ ತಕ್ಕವನನ್ನೇ ಕರೆದುಕೊಂಡು ಹೋಗಬೇಕು ಇಲ್ಲವಾದಲ್ಲಿ ಎಡವಟ್ಟು ಖಂಡಿತ.

Seema S. Hegde said...

@ ಹರೀಶ,
ಕಹಳೆಯನ್ನು ಸದ್ದು ಮಾಡ್ಲಿ ಹೇಳಿ ಊದದು ಬೇರೆ. ಆದ್ರೆ ಅದರ ಬಾಯಿಗೆ ಬರೀ ಮುತ್ತಿಟ್ಟರೂ ಅದು ಸದ್ದು ಮಾಡಿ ಬಿಡ್ತು. ಹಂಗಾಗಿ ವಿಚಾರಹೀನರ ಬಳಿ ಗುಟ್ಟನ್ನು ಹಂಚಿಕೊಳ್ಳಬಾರದು. ನಾವು ನಮ್ಮ ಮನಸ್ಸು ಹಗುರಾಗ್ಲಿ ಹೇಳಿ ಹೇಳಿದ್ರೆ ಅವು ಊರೆಲ್ಲಾ ಸುದ್ದಿ ಮಾಡ್ತಾ ಅಂತ...ಗೊತ್ತಾತ ಈಗ? :)

@ ವಿಕಾಸ,
ಹರೀಶನ ಸಮಸ್ಯೆಯನ್ನು ನೀನೆ ಬಗೆಹರಿಸಿದ್ರೂ ಆಗ್ತಿತ್ತು.
ತಪ್ಪಿಸಿಕೊಂಡು ಹೋದ್ಯಾ ಕಳ್ಳಾ? :)

@ ಶಾಂತಲಾ,
ಇದು ಯಂಗೆ ಗೊತ್ತಿತ್ತಿಲ್ಲೆ. ನರಿಗಿಂತ ಕುನ್ನಿ ಕಟ್ಗ್ಯಂದು ಹೊಪ್ದೇ ಅಡ್ಡಿಲ್ಯನ ಕಾಣ್ತು :)

@ ಲಕ್ಷ್ಮಣ,
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಬರುತ್ತಿರಿ :)

@ ಶಿವು,
ಆಯಾ ಕೆಲಸಕ್ಕೆ ತಕ್ಕಂತ ಜನರನ್ನೇ ಕರೆದುಕೊಂಡು ಹೋಗಬೇಕು. ಇಲ್ಲವಾದರೆ ನಿಜವಾಗಿಯೂ ಎಡವಟ್ಟೇ :)

Harisha - ಹರೀಶ said...

ಗೊತ್ತಾತು :-) ಭಾರತಕ್ಕೆ ಬಪ್ಪಲೆ ಎಲ್ಲ ತಯಾರಿ ಆತ? Welcome back :-)

Seema S. Hegde said...

@ ಹರೀಶ,
ತಯಾರಿ ಆಗ್ತಾ..... ಇದ್ದು.
Thanks :)