October 7, 2008

ಬೇಡವೆಂದು ಎಸೆಯುವ … (ಉತ್ತರ ಕನ್ನಡದ ಗಾದೆ – 200)

ಬೇಡವೆಂದು ಎಸೆಯುವ ಕಡ್ಡಿ ಹಲ್ಲಿನಲ್ಲಿ ಹಾಕುವುದಕ್ಕಾದರೂ ಬೇಕಾಗುತ್ತದೆ.
ಯಾವುದೊ ಒಂದು ಕಡ್ಡಿಯನ್ನು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆದರೆ ಅದರ ಉಪಯುಕ್ತತೆ ಇನ್ಯಾವತ್ತೋ ಕಂಡು ಬರಬಹುದು - ಹಲ್ಲಿನಲ್ಲಿ ಏನೋ ಪದಾರ್ಥ ಸಿಕ್ಕುಬಿದ್ದು ಅದನ್ನು ತೆಗೆಯಲು ಕಡ್ಡಿಯನ್ನು ಹುಡುಕುತ್ತಿರುವಾಗ. ಇಂದು ಎಸೆಯಲು ಅನುವಾದ ವಸ್ತು ಇನ್ಯಾವತ್ತೋ ಉಪಯೋಗಕ್ಕೆ ಬರಬಹುದು ಎಂದು ಅನಿಸಿದಾಗ ಹೇಳುವ ಮಾತು. ಯಾರದ್ದೋ ಜೊತೆ ಸಂಬಂಧವನ್ನು ಕೆಡಿಸಿಕೊಳ್ಳುವ ಮೊದಲು ಅವರು ಮುಂದೆ ಉಪಯೋಗಕ್ಕೆ ಬರಬಹುದಾ ಎಂಬ ಬಗ್ಗೆ ವಿಚಾರ ಮಾಡು ಎನ್ನುವಾಗಲೂ ಬಳಕೆಯಾಗುತ್ತದೆ.

2 comments:

Harisha - ಹರೀಶ said...

ಸೀಮಕ್ಕಾ, ಡಬಲ್ ಸೆಂಚುರಿ ಹೊಡ್ದಿದ್ದಕ್ಕೆ ಕಂಗ್ರಾಟ್ಸ್...

Seema S. Hegde said...

@ ಹರೀಶ,
ಅಭಿನಂದನೆಗಳಿಗೆ ಧನ್ಯವಾದಗಳು :)
ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮೆಲ್ಲರ ಹಾರೈಕೆ ಮತ್ತು ಸ್ಫೂರ್ತಿಯಿಂದ.