September 18, 2007

ಅಕ್ಕಮ್ಮಜ್ಜಿಗೆ... (ಉತ್ತರ ಕನ್ನಡದ ಗಾದೆ – 11)

ಅಕ್ಕಮ್ಮಜ್ಜಿಗೆ ಗಂಡ ಇಲ್ಲ, ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲ.

ಅಕ್ಕಮ್ಮಜ್ಜಿಗೆ ಗಂಡ ಇಲ್ಲದ್ದರಿಂದ ಹಾಗೂ ಮಾಣೇಶ ಭಟ್ಟರಿಗೆ ಹೆಂಡತಿಯಿಲ್ಲದ್ದರಿಂದ ಮದುವೆಯಾಗುತ್ತಾರೆಯೇ ವಿನಹ ಪರಸ್ಪರ ಮೆಚ್ಚುಗೆಯಿಂದಲ್ಲ.

ಯಾರಿಗೂ ಮನಸ್ಸಿಲ್ಲದಿದ್ದರೂ ಅನಿವಾರ್ಯ ಕಾರಣಗಳಿಗಾಗಿ, ಬೇರೆ ದಾರಿ ಕಾಣದೇ ಒಪ್ಪಂದ ಮಾಡಿಕೊಳ್ಳುವಂತಹ ಸಂದರ್ಭ ಬಂದರೆ ನೀವೂ ಕೂಡ ಈ ಮಾತನ್ನು ಉಪಯೋಗಿಸಬಹುದು.

5 comments:

Sanath said...

seema ,
gaadegala vivaraneyanna neevu post maaduthirudu bahala kushi kottide.
idanna heege munduvarisi.

Seema S. Hegde said...

Sure, Sanath.I will do.

Harisha - ಹರೀಶ said...

ಈ ಗಾದೆಯ ವಿವರಣೆಯ ಬಗ್ಗೆ ನಂದೊಂದು ಭಿನ್ನಾಭಿಪ್ರಾಯ..

ಇದು ಎಲ್ಲಿ ಒಪ್ಪಿಗೆ ಆಗುವುದಿಲ್ಲವೋ ಅಲ್ಲಿ ಬಳಸುವ ಗಾದೆ ಎಂದು ನನ್ನ ಅನಿಸಿಕೆ.

ಉದಾಹರಣೆಗೆ ಡಬ್ಬಿ ಇದ್ದರೆ ಮುಚ್ಚಳವಿಲ್ಲ, ಮುಚ್ಚಳವಿದ್ದರೆ ಡಬ್ಬಿಯಿಲ್ಲ.. ಆಗ ಈ ಗಾದೆಯನ್ನು ಹೇಳಬಹುದು

Seema S. Hegde said...

ಊಹೂಂ. ಗಾದೆ ಸರಿಯಾಗಿಯೇ ಇದೆ.
ಒಬ್ಬರಿಗೆ ಗಂಡ, ಮತ್ತೊಬ್ಬರಿಗೆ ಹೆಂಡತಿ ಇಲ್ಲದ ಕಾರಣ ಮದುವೆಯಾಗುತ್ತಾರೆ.
ಮದುವೆಯಾಗುತ್ತಾರೆ ಎಂಬುದನ್ನು ಗಾಡೆಯಲ್ಲಿ ಹೇಳಿಲ್ಲ ಅಷ್ಟೇ. ಆದರೆ ಅರ್ಥ ಒಳಗಡೆ ಅಡಕವಾಗಿದೆ.
ಒಪ್ಪಿಗೆಯಾಗಿದೆ. ಯಾಕೆ? ಒಬ್ಬರಿಗೊಬ್ಬರು ಅನಿವಾರ್ಯವಾದ್ದರಿಂದ.

Harisha - ಹರೀಶ said...

ಅಮ್ಮ ಬಂದ್ಮೇಲೆ ಕೇಳಿ ಹೇಳ್ತಿ :)