September 28, 2007

ಮನೆಯಲ್ಲಿ ಗದ್ದಲ ಎಂದು … (ಉತ್ತರ ಕನ್ನಡದ ಗಾದೆ – 21)

ಮನೆಯಲ್ಲಿ ಗದ್ದಲ ಎಂದು ಮಂಜುಗುಣಿ ತೇರಿಗೆ ಹೋಗಿದ್ದನಂತೆ.

ತೇರು ಎಂದರೆ ಸಣ್ಣ ಪ್ರಮಾಣದ ಜಾತ್ರೆ.
ಮನೆಯಲ್ಲಿ ಗದ್ದಲವನ್ನು ತಡೆಯಲಾರದೇ ಒಬ್ಬನು ಮಂಜುಗುಣಿ ಎಂಬ ಊರಿನಲ್ಲಿ ನಡೆಯುವ ತೇರಿಗೆ ಹೋಗಿದ್ದನಂತೆ.

ಯಾರಾದರೂ ಮನಃ ಶಾಂತಿಯನ್ನು ಹುಡುಕಿಕೊಂಡು ಇದ್ದ ಸ್ಥಳದಿಂದ ಬೇರೆ ಕಡೆ ಹೋಗಿ ಅಲ್ಲೂ ಗದ್ದಲದ ಪರಿಸ್ಥಿತಿಯನ್ನೇ ಎದುರಿಸುವ ಪ್ರಸಂಗ ಬಂದರೆ ಈ ಮಾತನ್ನು ಉದಾಹರಿಸುತ್ತಾರೆ.

3 comments:

Harisha - ಹರೀಶ said...

Hmmm.. Pursuit of Happiness..

ಎಷ್ಟೊಂದು ಗಾದೆ ನಂಗೆ ಗೊತ್ತೆ ಇಲ್ಲೆ... ನಿಜಕ್ಕೂ ಇದೊಂದು ಒಳ್ಳೆ ಕೆಲ್ಸ :)

ವಿ.ರಾ.ಹೆ. said...

Seema. nimma gaade sangraha adbhutha. i m very much enjoying and collecting it. i m curiously looking fwd for further more gaades :). thanks

Seema S. Hegde said...

ಹರೀಶ ಮತ್ತು ವಿಕಾಸ,
ನಿಂಗಕ್ಕಿಬ್ಬರಿಗೂ Thanks.
ನಿಂಗಳ comments ಅಂದ್ರೆ ಯಂಗೆ support ಇದ್ದ ಹಾಂಗೆ.
ಹಿಂದಿನ ತಲೆಮಾರಿಗೇ ಮುಗಿದು ಹೋಗ್ತಾ ಇದ್ದ ಗಾದೆ ಮುಂದಿನ ತಲೆಮಾರಿನ ತನಕ ಮುಟ್ಟಿಸ ಪ್ರಯತ್ನ ಮಾಡ್ತಾ ಇದ್ದಿ ಅಷ್ಟೇಯ.