September 11, 2007

ಹಂಚು ಕಾಣದ ಮೂಳೆ … (ಉತ್ತರ ಕನ್ನಡದ ಗಾದೆ – 4, 5 ಮತ್ತು 6)

ಹಂಚು ಕಾಣದ ಮೂಳೆ (ಮುದುಕಿ) ಕಂಚು ಕಂಡರೆ ಮೂರು ಸಲ ಬೆಳಗಿ ನೋಡಿದ್ದಳು.

ಹೆಂಚಿನ ಮನೆಯನ್ನೂ ಕಾಣದ ಮುದುಕಿಗೆ ಅಕಸ್ಮಾತ್ ಕ0ಚಿನ ಪಾತ್ರೆಗಳೇನಾದರೂ ಸಿಕ್ಕಿದರೆ ಅವುಗಳನ್ನು ಸೊಕ್ಕಿನಿಂದ ಮೂರು ಸಲ ತಿಕ್ಕಿ, ತೊಳೆದು ಎಲ್ಲರ ಮುಂದೆ ಪ್ರದರ್ಶನ ಮಾಡುತ್ತಾಳೆ.

ಅಪರೂಪಕ್ಕೊಮ್ಮೆ ಸಿಕ್ಕ ವಸ್ತುವನ್ನು ಎಲ್ಲರ ಮುಂದೆ ಜಂಭದಿಂದ ಪ್ರದರ್ಶನ ಮಾಡುವವರ ಬಗ್ಗೆ ಇರುವ ಗಾದೆ ಇದು.

ಇದಕ್ಕೆ ತತ್ಸಮಾನವಾದ ಇನ್ನೂ ಎರಡು ಗಾದೆಗಳು ಪ್ರಚಲಿತದಲ್ಲಿವೆ.
ಅಲ್ಪನಿಗೆ ಐಶ್ವರ್ಯ ಬಂದರೆ ಹಗಲಲ್ಲಿ ದೀವಟಿಗೆ ಹಿಡಿದ ಮತ್ತು ಮೂರ್ಖನಿಗೆ ಅಧಿಕಾರ ಬಂದರೆ ಮಧ್ಯ ರಾತ್ರಿಯಲ್ಲೂ ಕೊಡೆ ಹಿಡಿದ.
ಇದನ್ನು ನೆನಪಿಸಿದಂತಹ ಹರೀಶ್ ಗೆ ಧನ್ಯವಾದಗಳು.

2 comments:

Harisha - ಹರೀಶ said...

ಇದೇ ಅರ್ಥ ಬರುವಂತೆ "ಮೂರ್ಖನಿಗೆ ಐಶ್ವರ್ಯ ಸಿಕ್ಕಿದರೆ ಮಧ್ಯ ರಾತ್ರಿ ಕೊಡೆ ಹಿಡಿದು ನಿಂತ" ಅಂತ ಇನ್ನೊಂದು ಗಾದೆ ಕೂಡ ಇದೆ :)

Seema S. Hegde said...

Harish, Thanks for coming and thanks for adding information too.