ಕುದುರೆ ಕಂಡರೆ ಕಾಲು ನೋವು.
ಎಷ್ಟೋ ಹೊತ್ತಿನ ತನಕ ಸುಮ್ಮನೆ ನಡೆಯುತ್ತಿದ್ದವನಿಗೆ ಕುದುರೆ ಕಂಡ ಕೂಡಲೇ ಕಾಲು ನೋವು ಬಂದಂತೆನಿಸುತ್ತದೆ.
ಆರಾಮದಾಯಕ ವಸ್ತುಗಳನ್ನು ಕಂಡ ಕೂಡಲೇ ಆಯಾಸವೆಂದು ಹೇಳುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.
ಹೆಚ್ಚೂ ಕಡಿಮೆ ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಹೊತ್ತುಕೊಂಡು ಹೋಗುವವರಿದ್ದರೆ ಸತ್ತವರಂತೆ ಬಿದ್ದೇನು. ಬೇರೆ ಯಾರಾದರೂ ಕೆಲಸ ಮಾಡುತ್ತಾರೆ ಎಂದು ಅನಿಸಿದರೆ ನಾನು ಆಲಸಿಯಾಗುತ್ತೇನೆ ಎಂಬ ಅರ್ಥವನ್ನು ಕೊಡುತ್ತದೆ.
ಇವೆರಡರ ಬದಲಿಗೆ ಉಪಯೋಗಿಸಬಹುದಾದಂತ ಗಾದೆ ಎಂದರೆ ತಾಯಿ ಕಂಡರೆ ತಲೆ ಬೇನೆ. ಇದನ್ನು ನೆನಪಿಸಿದ ಗಾಯತ್ರಿ ಅವರಿಗೆ ಧನ್ಯವಾದಗಳು.
4 comments:
ತುಂಬಾ ಚೆನ್ನಾಗಿವೆ. ನಿಮ್ಮ ಮೆದುಳಿನ ಗೋದಾಮಿನಲ್ಲಿದ್ದ ಎಲ್ಲಾ ಗಾದೆಗಳನ್ನು ಬ್ಲೋಗ್ ಶೋ ರೂಮಿಗೆ ಹಾಕಿದ್ದು ತುಂಬಾ ಚೆನ್ನಾಗಿದೆ..
ನನಗೆ ಗಾದೆಗಳ ಅಗತ್ಯ ಬಿದ್ರೆ, ನಿಮ್ಮ ಹತ್ರ ಬರ್ತೇನೆ.
Thanks Vijendra. You are always welcome.
Taayi kandre tale bene heli yangala kade helta
Gayatri,
nenapu madiddakke thanks,
yange ee gaade maretu hogittu.
Post a Comment