September 26, 2007

ಮಾಣಿ, ಗೋಣಿ, ಓಣಿ … (ಉತ್ತರ ಕನ್ನಡದ ಗಾದೆ – 17 ಮತ್ತು 18)

ಮಾಣಿ, ಗೋಣಿ, ಓಣಿ ಈ ಮೂರು ಸಿಗದಿದ್ದರೆ ನಾಯಿ ಮೂರೂ ಮುಕ್ಕಾಲು ಘಳಿಗೆಯಲ್ಲಿ ಕಾಶಿಗೆ ಹೋಗುತ್ತಿತ್ತು.

ನಾಯಿ ಕಾಶಿಗೆ ಹೊರಟರೆ ನೇರವಾಗಿ ಹೋಗುವುದಿಲ್ಲ. ಮಾಣಿ (ಹುಡುಗ) ಕಂಡ ಕೂಡಲೇ ಆಟ ಆಡುತ್ತದೆ, ಗೋಣಿಚೀಲ ಕಂಡ ಕೂಡಲೇ ಮಲಗಿಕೊಳ್ಳುತ್ತದೆ ಮತ್ತು ಓಣಿ ಕಂಡ ಕೂಡಲೇ ಸುಮ್ಮನೆ ಅಲೆಯತೊಡಗುತ್ತದೆ.
ಹಾಗಾಗಿ ಅದು ಕಾಶಿಯನ್ನೇ ತಲುಪುವುದಿಲ್ಲ.

ನೇರವಾಗಿ ಗುರಿ ಮುಟ್ಟುವ ಬಗ್ಗೆ ಆಲೋಚನೆ ಮಾಡದೇ ಸಣ್ಣ ಪುಟ್ಟ ಆಕರ್ಷಣೆಗಳಲ್ಲೇ ತಲ್ಲೀನರಾಗಿರುವವರ ಬಗ್ಗೆ ಹೇಳುವಾಗ ಈ ಗಾದೆಯನ್ನು ಬಳಸುತ್ತಾರೆ.

ಇದಕ್ಕೆ ಹತ್ತಿರವಾದ ಇನ್ನೊಂದು ಗಾದೆ ಅಂದರೆ ಮಾಡುವ ಕೆಲಸ ಬಿಟ್ಟು ಹಾಡುವ ದಾಸಯ್ಯನ ಜೊತೆ ಹೋಗಿದ್ದಳು.
ಅವಳು ಕೆಲಸ ಮಾಡುತ್ತಿದ್ದಾಗ ದಾಸಯ್ಯ ಬಂದು ಹಾಡು ಹೇಳಿದರೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಅವನ ಜೊತೆ ಹೋಗಿ ಬಿಡುತ್ತಾಳೆ.ತನ್ನ ಕೆಲಸವನ್ನು ನಿರ್ಲಕ್ಷಿಸಿ ಇನ್ನೊಂದು ಆಕರ್ಷಣೆಗೆ ಒಳಪಟ್ಟಾಗ ಬಳಸುವ ಮಾತು.

4 comments:

ಅನಿಕೇತನ said...

ಚೆನ್ನಾಗಿದೆ ..ಮೆಡಮ್ ...
ಒಳ್ಳೆ ಕೆಲಸ ಮುಂದುವರೆಯಲಿ !

Seema S. Hegde said...

Thanks for your support.
By the way, please don't call me madam! :)

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಾ...
ಒಳ್ಳೆಯ ಗಾದೆಮಾತುಗಳನ್ನು ನೆನಪಿಸುತ್ತಿರುವುದಕ್ಕೆ ಧನ್ಯವಾದಗಳು. ಈ ಗಾದೆಗೆ ಹೀಗೂ ವಿವರಣೆ ಇದೆ. ಮಾಣಿಯ ಜೊತೆ ಆಟ ಆಡುವುದು, ಮತ್ತೊಂದು ಮಾಣಿ ನಾಯಿಯನ್ನು ಕಂಡಾಗ ಕಲ್ಲು ಹೊಡೆಯದೇ ಬಿಡುವುದೇ ಇಲ್ಲ. ಆಗ ನಾಯಿಯ ಹೊರಟ ದಿಕ್ಕೇ ಬದಲಾಗುತ್ತದೆ. ಹೀಗೂ ಹೇಳುವುದುಂಟು.

Seema S. Hegde said...

ಶಾಂತಲಾ,
ಇದು ನನಗೆ ಗೊತ್ತಿರಲಿಲ್ಲ. ನಾನು ಕೇಳಿರಲಿಲ್ಲ.
ಸರಿ ಇದ್ದಿರಬಹುದು.