September 12, 2007

ತೆಪ್ಪಾರ ಗೌಡ... (ಉತ್ತರ ಕನ್ನಡದ ಗಾದೆ – 7)

ತೆಪ್ಪಾರ ಗೌಡ ಮುಂಡಾಸು ಸುತ್ತುವುದರೊಳಗೆ ಮಂಜುಗುಣಿ ತೇರು ನೆಲೆ ನಿಂತಿತ್ತು.

ಮಂಜುಗುಣಿ ಎಂಬ ಊರಲ್ಲಿ ತೇರನ್ನು ಎಳೆಯುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದ್ದ ತೆಪ್ಪಾರು ಎಂಬ ಊರಿನ ಗೌಡ ಮುಂಡಾಸು ಸುತ್ತಿಕೊಂಡು ತಯಾರಾಗಿ ಬರುವುದರೊಳಗೆ ತೇರನ್ನು ಎಳೆದು ಮುಗಿಸಿದ್ದರು.

ಯಾವುದಾದರೂ ಕೆಲಸಕ್ಕೆ ಯಾರಾದರೂ ಗಡಿಬಿಡಿಯಿಲ್ಲದೇ ತುಂಬಾ ನಿಧಾನವಾಗಿ ತಯಾರಿ ನಡೆಸುತ್ತಿದ್ದರೆ ಅಂಥವರ ಬಗ್ಗೆ ಈ ಗಾದೆಯನ್ನು ಹೇಳಲಾಗುತ್ತದೆ.

2 comments:

ಭಾವಜೀವಿ... said...

ಸೀಮಾ,
ಗಾದೆಗಳು ಒಂದು ಸಂಸ್ಕೃತಿಯನ್ನು, ಒಂದು ಪ್ರದೇಶದ ಜನರ ಬದುಕು, ಬವಣೆಯನ್ನು ಬಿಂಬಿಸುವ ಕನ್ನಡಿಗಳು. ಜನರ ನಡೆ ನುಡಿಗಳ ಜೊತೆಗೆ ಅವರ ಸುತ್ತ ಮುತ್ತಲಿನ ಚಿತ್ರ,ಜೀವನ ಶೈಲಿಯನ್ನು ಸುತ್ತಿಡುವ ಸಾರ್ವಕಾಲಿಕ ಸತ್ಯವೆನಿಸುವ 70 mm ಸಿನಿಮಾ ರೀಲುಗಳು!
ಅದನ್ನು ಈ ರೀತಿಯಲ್ಲಿ ಉಳಿಸುವ ನಿಮ್ಮ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್! ಹೌದು ಗಾದೆಗಳದ್ದೆ ಒಂದು ಬ್ಲಾಗ್ ಏಕೆ ಮಾಡಬಾರದು ನೀವು!?

Seema S. Hegde said...

Bhavajeevi, Thanks. People hardly use these local proverbs now a days. They are about to vanish forever. It's a small contribution from my side to make people to remember them. Thanks for the hope.