December 24, 2007

ಎಣ್ಣೆ ಬರುವ ಹೊತ್ತಿಗೆ … (ಉತ್ತರ ಕನ್ನಡದ ಗಾದೆ – 112)

ಎಣ್ಣೆ ಬರುವ ಹೊತ್ತಿಗೆ ಕಣ್ಣು ಮುಚ್ಚಿಕೊಂಡಿದ್ದನು.

ಎಣ್ಣೆ ಗಾಣದಲ್ಲಿ ರಾತ್ರಿ ಕೆಲಸ ಮಾಡುತ್ತಿರುವಾಗ, ಇಡೀ ರಾತ್ರಿ ಕೆಲಸ ಮಾಡಿ ಸುಸ್ತಾಗಿರುತ್ತದೆ, ತಾಳ್ಮೆ ಹೊರಟು ಹೋಗಿರುತ್ತದೆ.
ಕಣ್ಣ ತುಂಬಾ ನಿದ್ರೆಯೂ ಬಂದಿರುತ್ತದೆ. ಇನ್ನೇನು ಗಾಣದಿಂದ ಎಣ್ಣೆ ಬೀಳಬೇಕೆನ್ನುವಷ್ಟರಲ್ಲಿ ಒಂದು ಕ್ಷಣ ಕಣ್ಣು ಮುಚ್ಚಿಹೋಗುತ್ತದೆ.
ಎಣ್ಣೆ ಪಾತ್ರೆಯಲ್ಲಿ ಬೀಳದೇ ಇನ್ನೆಲ್ಲೋ ಬಿದ್ದು ಹೋಗುತ್ತದೆ. ಎಷ್ಟೋ ಹೊತ್ತಿನಿಂದ ಪಟ್ಟ ಶ್ರಮ ವ್ಯರ್ಥವಾಗುತ್ತದೆ.

ಪ್ರತಿಫಲದ ನಿರೀಕ್ಷೆಯಲ್ಲಿ ಯಾವುದೋ ಕೆಲಸವನ್ನು ಬಹಳ ಶ್ರಮವಹಿಸಿ ಮಾಡಿ ಇನ್ನೇನು ಪ್ರತಿಫಲ ಸಿಗುವುದರಲ್ಲಿದೆ ಎನ್ನುವಾಗ ತಾಳ್ಮೆ ಕಳೆದುಕೊಂಡು ಆ ಕೆಲಸವನ್ನು ಬಿಟ್ಟು ಬಿಡುವವರನ್ನು ಕುರಿತು ಈ ಗಾದೆಯನ್ನು ಹೇಳುತ್ತಾರೆ.

2 comments:

ಸುಧೀಂದ್ರ said...

ಎಷ್ಟು ಅರ್ಥಪೂರ್ಣವಾಗಿದ್ದು ಈ ಗಾದೆ...... ಇಂತ ಗಾದೆನ ಸಂಗ್ರಹಿಸಿ ಪೋಸ್ಟ್ ಮಾಡಿದ್ದಕ್ಕೆ ಧನ್ಯವಾದಗಳು. ಒಂದು ಕೆಲಸ ಪರಿಪೂರ್ಣ ಆಯಕ್ಕಿದ್ರೆ ಅದರ ಫಲ ಸಿಕ್ಕಿದಾಗ ಮಾತ್ರ. ಹಿಂಗೆ ಒಳ್ಳೊಳ್ಳೆ ಗಾದೆನ ಪೋಸ್ಟ್ ಮಾಡ್ತಾ ಇರಿ.

Seema S. Hegde said...

ಸುಧೀಂದ್ರ,
ನೀವು ಹೇಳಿದ್ದು ನಿಜ. Visit ಮಾಡಿದ್ದಕ್ಕೆ ಧನ್ಯವಾದಗಳು.
ನಂಗೆ ಗೊತ್ತಿರ ಎಲ್ಲ ಗಾದೆನೂ post ಮಾಡವು ಹೇಳಿದ್ದು... ನಿಮ್ಮೆಲ್ಲರ ಹಾರೈಕೆಯ ಜೊತೆ ಮುಂದೆ ಹೋಗ್ತಾ ಇರ್ತಿ.