ಇದೂ ಕೂಡ ಮರೆಯಲಾರದ್ದು...
ನನ್ನ ಧರ್ಮಪತಿ (ಹೆಂಡತಿ ಧರ್ಮಪತ್ನಿಯಾದ ಮೇಲೆ ಗಂಡ...) ರಾಜೀವ ಅವರ ಸಹೋದ್ಯೋಗಿಗಳೆಲ್ಲಾ ಹೇಳುವಂತೆ ideal husband. ಆ ಮಾತನ್ನು ನಾನೂ ಒಪ್ಪಲೇ ಬೇಕು. ಅವರಷ್ಟು ಸಹನೆ ಇರುವವರನ್ನು ಇನ್ನೂ ತನಕ ನಾನು ನೋಡಿಲ್ಲ. ನಾನು ಕೆಲವೊಮ್ಮೆ ಜಗಳವಾಡಿ ಅವರಿಗೆ ಹೊಡೆದರೂ, ಉಗುರಿನಿಂದ ಪರಚಿದರೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಾರೆ, ನಾನು ಅವರಿಗಿಂತ ಚಿಕ್ಕವಳು ಎಂಬ ಒಂದೇ ಕಾರಣಕ್ಕಾಗಿ. ಸಿಟ್ಟು ಇಳಿದ ಮೇಲೆ ನಾನು, 'ನೀವೇಕೆ ನನ್ನನ್ನು ತಡೆಯಲಿಲ್ಲ' ಎಂದು ಕೇಳಿದರೆ, 'ಹೊಡೆಯುವಾಗ, ಪರಚುವಾಗ ನಿನಗೆ ಸಿಗುವ ಖುಷಿಯನ್ನು ನಾನು ತಡೆದಂತೆ ಆಗುತ್ತದೆ. ಅದಕ್ಕಾಗಿ ತಡೆಯಲಿಲ್ಲ' ಎನ್ನುತ್ತಾರೆ!
ಇದೇನು ಗಂಡನನ್ನು ಇಷ್ಟೊಂದು ಹೊಗಳುತ್ತಿದ್ದಾಳೆ ಎಂದುಕೊಳ್ಳದೇ ಮುಂದೆ ಓದಿ. ನನಗೆ ಇಷ್ಟಕ್ಕೇ ಸಮಾಧಾನವೆಲ್ಲಿ? ಒಮ್ಮೆ ಹೇಳುತ್ತಿದ್ದೆ, 'ನೋಡಿ ಉಳಿದವರೆಲ್ಲಾ ತಮ್ಮ ಹೆಂಡತಿಯರಿಗೆ ಹೊರಗಡೆಗೆ ಹೋಗಿ ಮಾಡಬೇಕಾದಂತ ಕೆಲಸಗಳನ್ನೆಲ್ಲಾ ಮಾಡಿಕೊಡುತ್ತಾರೆ, ನೀನೆ ಹೋಗಿ ನೋಡು, ಕಲಿತುಕೋ, ನೀನೆ try ಮಾಡು, explore ಮಾಡು ಎಂದೆಲ್ಲಾ ಹೇಳುವುದಿಲ್ಲ. ನೀವು ಮಾತ್ರ ನನ್ನನ್ನೇ ದೂಡುತ್ತೀರಿ. so very unkind of you' ಎಂದು.
ಆಗ ಅವರು ಹೇಳಿದ್ದರು,' ಅದು ಹಾಗಲ್ಲ, ಎಲ್ಲವನ್ನೂ ನೀನೆ ನಿಭಾಯಿಸುವಷ್ಟರ ಮಟ್ಟಿಗೆ ನೀನು ಸಶಕ್ತಳಿರಬೇಕು, ಎಲ್ಲವನ್ನೂ ಕಲಿತಿರಬೇಕು....ಹೆಂಡತಿಯನ್ನು ವೈಧವ್ಯಕ್ಕೆ ಸಿದ್ಧವಾಗಿಡುವುದೇ ಗಂಡನ ಪ್ರಪ್ರಥಮ ಕರ್ತವ್ಯ' ಮುಂದೆ ನನಗೆ ಮಾತಾಡಲೂ ಆಗಲಿಲ್ಲ. ಗಂಟಲು ಕಟ್ಟಿತ್ತು... ಮನಸ್ಸಿಗೆ ಹೌದೆನಿಸಿದರೂ ಹೃದಯ ಇನ್ನೊ ಒಪ್ಪಿಕೊಳ್ಳಲು ತಯಾರಿಲ್ಲ. ಈಗ ಯೋಚಿಸಿದರೂ ಅನಿಸುತ್ತದೆ, ಅವರು ಹೇಳುವುದು ನಿಜ. ಆದರೆ ನನ್ನ ಯೋಚನೆಯೇ ಬೇರೆ. ಸಾವು ಬರುವಾಗ ಇಬ್ಬರಿಗೂ ಒಟ್ಟಿಗೆ ಬರಲಿ. ಇಲ್ಲವಾದರೆ ಅವರಿಗೆ ಮೊದಲು ಬರಲಿ. ಅವರಿಲ್ಲದೆ ನಾನು ಹೇಗೋ ಬದುಕಿಬಿಡಬಲ್ಲೆ, ಅವರ ನೆನಪಿನಲ್ಲೇ. ಆದರೆ ನಾನು ಇಲ್ಲವಾದರೆ ಅವರನ್ನು ಗಮನಿಸಲೂ ಯಾರೂ ಇರುವುದಿಲ್ಲ, ಅವರಿಗೆ ಅಂತ ಪರಿಸ್ಥಿತಿ ಬೇಡ.
ರಾಜೀವನಿಗೆ ವಿಶೇಷ ಸೂಚನೆ: ಹೋಗಳಿದ್ದೇನೆ, ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದೇನೆಂದು ಅಳಿದುಳಿದ ಕೆಲಸಗಳಿಗೂ ನನ್ನನ್ನೇ ದೂಡುವಂತಿಲ್ಲ, ನಾನು ಮಾಡುವುದಿಲ್ಲ ಅಷ್ಟೇ! :)
6 comments:
ಸೀಮಾ ಅವರೆ,
ನಿಜಕ್ಕು ನಿಮ್ಮ ರಾಜೀವ್ ನಾ ನಾನು ಅಪ್ರಿಶಿಯೆಟ್ ಮಾಡಲೇಬೇಕು.
ಸತ್ಯವಾದ ಮಾತನ್ನು ಹೇಳಿದ್ದಾರೆ.
ನನ್ನ ಅಜ್ಜ ಇಲ್ಲದೆ ನನ್ನ ಅಜ್ಜಿಯ ಪಾಡನ್ನು ನಾನು ನೋಡಲಾಗುತ್ತಿಲ್ಲಾ. ಮಾತಿಗೆ ಮುಂಚೆ ’ಯಮ್ಮನೆ ಆವರು ಇದ್ದಿದ್ರೆ ಹಿಂಗಾಗ್ತಿರ್ಲೆ’ ಅಂತಾ ಹೇಳ್ತಾನೆ ಇರ್ತಾರೆ.
ಗುಡ್, ಹೆಂಡತಿ ಅಂದ್ರೆ ಹಿಂಗಿರವು ನೋಡು!!
over to Rajiv bhava now :-)
ಪಾಪ, ಪರಚಿಸಿಕೊಳ್ಳುವವರು ಅವರು ತಾನೆ ! :D
ಸೀಮಕ್ಕ...
ಗಾದೆ ಮಾತು ಹೇಳಿ ತಿಳ್ಕಂಡು ಮೊದಲನೇ ಪ್ಯಾರ ಮಾತ್ರಾ ಯಮ್ಮನೆಲ್ಲೂ ಚಾಲ್ತಿಗೆ ತರಂವ ಇದ್ದಿ ಆನು.:)
ಅಕ್ಕಯ್ಯ ಮಾಡಿದ್ಮೇಲೆ ತಂಗಿನೂ ಹಂಗೆ ಮಾಡದೆಯ. :)
"ಹಿರಿಯಕ್ಕನ ಚಾಳಿ ಮನೆ ಮಂದಿಗೆ" ಹೇಳಿ ಯಾರರೂ ಬಯ್ದ್ರು ಅಡ್ಡಿಲ್ಲೆ. ಒಂದಿನ ನೀ ಮಾಡಿದ್ದೆಲ್ಲ ಮಾಡಂವ್ನೆಯ. ಯಮ್ಮನೆಲ್ಲೂ ಎಲ್ಲ ಕೆಲ್ಸ ಆನೆ ಮಾಡ್ಕ್ಯಳವ್ವು, ಸಂಸಾರನೆ ಬೇಜಾರಾಗೋಜು. :) :)
ಸೀಮಕ್ಕ, ಚಂದನೆಯ ಅರ್ಥ ಇರುವಂಥ ಸರಳ ಸುಂದರ ಬರಹ.
@ ರಂಜನಾ,
ರಾಜೀವ್ ನ appreciate ಮಾಡಿದ್ದಕ್ಕೆ thanks.
ನೀವು ಹೇಳಿದ್ದು ನಿಜ. ಇನ್ನೊಂದು ವಿಚಾರ ಗಮನಿಸಿದ್ದೀರಾ?
ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡಸರು ಹೆಂಡತಿ ಸತ್ತುಹೋದ ನಂತರ ಬಹಳ ದಿನ ಬದುಕಿ ಉಳಿಯುವುದಿಲ್ಲ.
@ ವಿಕಾಸ,
ಒಮ್ಮೊಮ್ಮೆ ಪರಚಿಸಿಕೊಂಡರೆ ನಿನ್ನ ರಾಜೀವ ಭಾವನೇನೂ ನಪ್ಪಿ ಹೊಗ್ತ್ನಿಲ್ಲೆ ಬಿಡು! :)
ಪರಚುವುದೊಂದೇ ಅಲ್ಲ, ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಕಾಳಜಿಯಿಂದ ಅವರನ್ನು ನೋಡ್ಕ್ಯತ್ತಿ ಆನು ಗೊತ್ತಿದ್ದ ನಿಂಗೆ? :)
@ ಶಾಂತಲಾ,
ಯನ್ನ ಕಿಂತಾ ಆರು ವರ್ಷ ಮೊದುಲು ಮದುವೆ ಆಜೆ ನೀನು. ಆದ್ರೂ ಇನ್ನೂ ಒಮ್ಮೇನೂ ಪರಚಿದ್ದಿಲ್ಲೇ?
ಥೂ ಎಂಥಾ ನಾಚಿಗೆಗೇಡು. ಮೊದ್ಲು ಆ ಕೆಲ್ಸಾ ಮಾಡು :)
ಓ ದೇವರೇ ರಾಜೇಂದ್ರ ಭಾವನ್ನ ಕಾಪಾಡು!!!! :)
ಪಾಪ... ರಾಜೀವ್ :(
ಅಲ್ಲ.. ನಿಂಗೆ ಇಷ್ಟು ಬೇಕ ಸಾವಿನ ಯೋಚನೆ ಯಾಕೆ ಬಂತು ಹೇಳಿ?
>> ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಗಂಡಸರು ಹೆಂಡತಿ ಸತ್ತುಹೋದ ನಂತರ ಬಹಳ ದಿನ ಬದುಕಿ ಉಳಿಯುವುದಿಲ್ಲ.
ಅಜ್ಜನೇ ಒಂದು ತಾಜಾ ಉದಾಹರಣೆ ಅಂಬ್ಯ?
ಹರೀಶ,
ರಾಜೀವಂಗೆ ಪಾಪ ಅಂದ್ಯ?...ಅಲ್ಲೇ ಸ್ವಲ್ಪ ಮೇಲೆ ವಿಕಾಸಂಗೆ ಬರದ್ದಿ ನೋಡು...
ಆತಲಾ ಮೂವತ್ತು ವರ್ಷ...ಹಂಗಾಗಿ ಇನ್ನೆಲ್ಲಾ ಧರೆ ಅಂಚಿಗಿನ ಮರ ಹೇಳಿ....ಹ್ಹ ಹ್ಹ ಹ್ಹ...ತಮಾಷೆ ಮಾಡ್ಜಿ.
ಸಾವು unexpected ಹೇಳಿ ತಿಳ್ಕ0ಡಿದಿದ್ದಿ. ಆದ್ರೆ ಕೇವಲ ಎರಡೇ ವರ್ಷದಲ್ಲಿ ತೀರಾ ಹತ್ತಿರದವರದ್ದೇ ಐದು ಸಾವು ಕಂಡಿ. ಅಜ್ಜಿ, ಅಜ್ಜ, ಮಾವ, ದೊಡ್ಡಮ್ಮ ಮತ್ತೆ ಅಣ್ಣ.
ಜೀವನದಲ್ಲಿ the most expected ಅಂದ್ರೆ ಸಾವು ಮಾತ್ರ, ಉಳಿದದ್ದೆಲ್ಲಾ unexpected ಹೇಳಿ ಕೊನೆಗೆ ಅರ್ಥ ಆತು. ಹಂಗಾಗಿ ಸಾವಿನ ಬಗ್ಗೆ ವಿಚಾರ ಮಾಡಲ್ಲೆ ವಯಸ್ಸು ಯಾವುದೇ ರೀತಿಯಲ್ಲೂ ಅಡ್ಡಿ ಅಲ್ಲ ಹೇಳಿ ಗೊತ್ತಾತು.
ಅದಕ್ಕೇ ಹಿಂಗೇ ಸುಮ್ನೇ ಸಾವಿನ ಬಗ್ಗೆ ವಿಚಾರ ಮಾಡ್ತಾ ಇರ್ತಿ ಒಮ್ಮೊಮ್ಮೆ.
ನೀನು ಹೇಳಿದ್ದು ಹೌದು. ಅಜ್ಜಿ ಹೋಗಿ ಬರೀ ನಾಲ್ಕೂವರೆ ತಿಂಗಳಿಗೆ ಅಜ್ಜನೂ ಹೋಗಿಬಿಟ್ಟ :(
Post a Comment