December 6, 2007

ನಾನೂ ನಾಗಪ್ಪನೂ … (ಉತ್ತರ ಕನ್ನಡದ ಗಾದೆ – 94)

ನಾನೂ ನಾಗಪ್ಪನೂ ಕೂಡಿಯೇ ಕಚ್ಚಿದೆವು.

ನಾಗಪ್ಪ ಎಂದರೆ ಇಲ್ಲಿ ಹಾವು ಎಂದು ಅರ್ಥ. ನಿಜವಾಗಿ ಕಚ್ಚಿದವನು ನಾಗಪ್ಪ. ಹೇಳುವಾಗ ನಾನೂ ಮತ್ತು ನಾಗಪ್ಪನೂ ಸೇರಿ ಕಚ್ಚಿದೆವು ಎಂದು ಹೇಳಲಾಗಿದೆ.

ತಾನೇನೂ ಮಾಡದಿದ್ದರೂ ಕೆಲಸ ಆದ ಮೇಲೆ ತಾನೂ ಕೆಲಸದಲ್ಲಿ ಶಾಮೀಲಾಗಿದ್ದೆ, ತಾನು ಮತ್ತು ಇನ್ನೊಬ್ಬರು ಕೂಡಿ ಕೆಲಸ ಮಾಡಿದೆವು ಎಂದು ಹೇಳಿಕೊಳ್ಳುವವರ ಬಗೆಗಿನ ಮಾತು ಇದು. ಆದರೆ ನಿಜವಾಗಿ ಕೆಲಸವನ್ನು ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ!

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ,
ಒಳ್ಳೆಯ ಗಾದೆ. ಇದರ ಹಿನ್ನೆಲೆಯನ್ನು ಹೀಗೂ ಕೇಳಿದ್ದೇನೆ.
ಯವುದೋ ಕಿರುಕುಳ ಕೊಡುತ್ತಿದ್ದ ಪ್ರಾಣಿಗೆ ನಾಗರಹಾವು ಕಚ್ಚುವ ಸಮಯಕ್ಕೆ ಸರಿಯಾಗಿ ಒಂದು ಇರುವೆಯೂ ಕಚ್ಚಿರುತ್ತದೆ. ಆ ಪ್ರಾಣಿ ಸತ್ತ ನಂತರ ಇರುವೆ ಆ ಪ್ರಾಣಿಯನ್ನು ಸಾಯಿಸಿದ ಹೆಮ್ಮೆಯು ತನಗೂ ಇರಲೆಂದು "ನಾನೂ ನಾಗಪ್ಪನೂ ಸೇರಿಯೇ ಕಚ್ಚಿದೆವು" ಎಂದು ಹೇಳಿತ್ತೆಂದು ಚಿಕ್ಕವಳಿರುವಾಗ ಅಜ್ಜಿ ಹೇಳಿದ್ದರು.
ಉಳಿದೆಲ್ಲ ಅರ್ಥ ನೀವು ಹೇಳಿದಂತೆಯೇ ನಾನೂ ಕೇಳ್ಳಿದ್ದು.
ಚೆನ್ನಾಗಿದೆ.

Seema S. Hegde said...

ಶಾಂತಲಾ,
ಈ ಕಥೆ ನನಗೆ ಗೊತ್ತಿರಲಿಲ್ಲ.
ಆ ಗಾದೆಯನ್ನು ಉಪಯೋಗಿಸುವ ಸಂದರ್ಭ ಮಾತ್ರ ಗೊತ್ತಿತ್ತು.
ನೀನು ಬರೆದಿದ್ದು ನನಗೂ, ಓದುಗರಿಗೂ ಒಳ್ಳೆಯ ಮಾಹಿತಿ ಕೊಟ್ಟ ಹಾಗೆ ಆಗಿದೆ.
ಧನ್ಯವಾದಗಳು.