ಬೇಡಿಕೊಂಡು ಬಂದ ಅಕ್ಕಿಯಲ್ಲಿ ಬೆಕ್ಕು ಉಚ್ಚೆ ಮಾಡಿತ್ತು.
ಮೊದಲೇ ಮನೆಯಲ್ಲಿ ಅಕ್ಕಿಯಿಲ್ಲ. ಹೇಗೋ ಬೇಡಿಕೊಂಡು ಬಂದು ಸ್ವಲ್ಪ ಅಕ್ಕಿಯನ್ನು ಕೂಡಿಹಾಕಿದರೆ ಅದರಲ್ಲಿ ಬೆಕ್ಕು ಉಚ್ಚೆ ಮಾಡಿಬಿಟ್ಟಿತು.
ಕಷ್ಟಪಟ್ಟು ಕೂಡಿಹಾಕಿಕೊಂಡ ವಸ್ತುವನ್ನು ಇನ್ಯಾರಾದರೂ ತೆಗೆದುಕೊಂಡರೆ ಅಥವಾ ಹಾಳು ಮಾಡಿದರೆ ಈ ಮಾತು ಸರಿಹೋಗುತ್ತದೆ. ಮಾಡಿದ ಅಡುಗೆ ಸ್ವಲ್ಪವೇ ಇದ್ದಾಗ ಯಾರಾದರೂ (ಸಾಮಾನ್ಯವಾಗಿ ಮಕ್ಕಳು) ಅದನ್ನು ಬೀಳಿಸಿ ಚೆಲ್ಲಿ ಹಾಕಿದಾಗ ಈ ಮಾತನ್ನು ಹೇಳಿಸಿಕೊಳ್ಳುವುದುಂಟು.
9 comments:
ನಮಸ್ಕಾರ ಸೀಮಾ,
ಹೇಗಿದ್ದೀರಾ? ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತಿದ್ದೇನೆ.
ನಿಮ್ಮ ಬರಹ ಚೆನ್ನಾಗಿದೆ. ಅದ್ರಲ್ಲೂ ನಮ್ಮೂರ ಭಾಷೆಯ ಕೆಲವು ಶಬ್ದಗಳನ್ನ (ಅದನ್ನು ಬೀಳಿಸಿ 'ಚೆಲ್ಲಿ' ಹಾಕಿದಾಗ...)ಮತ್ತೆ ಮತ್ತೆ ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಮುಂದುವರೆಯಲಿ...
ಪ್ರಮೋದ್.
ಪ್ರಮೋದ,
ಧನ್ಯವಾದಗಳು.
ನಿಮ್ಮ Blog ಗೆ ನಾನು ಆಗಾಗ ಭೇಟಿ ನೀಡುತ್ತಲೇ ಇರುತ್ತೇನೆ. ತುಂಬಾ ಚೆನ್ನಾಗಿವೆ ನಿಮ್ಮ greetings ಮತ್ತು paintings.
ನಿಮ್ಮ encouragement ಗೆ ಮತ್ತೊಮ್ಮೆ thanks.
ಅಂತು ಸೆಂಚುರಿ ಬಾರ್ಸಿ ಬಿಟ್ಯಲ!
ಹರೀಶ,
ಅಯ್ಯೋ ಹೌದಲ, ಲಕ್ಷಕ್ಕೇ ಬಂದಿತ್ತಿಲ್ಲೆ!!
seemakka, century abhinandanegaLu.:)
ವಿಕಾಸ,
Thanks ಕಣೋ ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ.
ಸೀಮಕ್ಕ.
ಶತಕ ಗಾದೆಗಳತ್ತ ಸಾಗಿದ ಸೀಮಕ್ಕನವರಿಗೆ ಅಭಿನಂದನೆಗಳು.
ಸಾವಿರ ಆದ್ಕುಳೆ ಪಾರ್ಟಿ ಕೊಡ್ಸು. ಉಡುಪಿ ಹೊಟೆಲ್’ನಲ್ಲಿ ಮಸಾಲೆ ದೋಸೆ! ಯನ್ನ ತಮ್ಮನ್ನೂ ಕರ್ಕಬತ್ತಿ.ಎಂತಕ್ಕೆ ಅಂದ್ರೆ ಅವಂಗೆ ಆನು ಪಾರ್ಟಿ ಕೊಡ್ಸದಿದ್ದು.:)(ಯಾವ್ದೋ ಬೇರೆ ಕಾರಣಕ್ಕೆ) ಅದೂ ಮುಗ್ದೋಗ್ಲಿ ನಿನ್ ದುಡ್ಡಲ್ಲಿ. (ಯಾರ್ದೋ ದುಡ್ಡು-ಯಲ್ಲಮ್ಮನ್ ಜಾತ್ರೆ, ಹೇಳಿ ಬಯ್ಯಡ, ತಮಾಶೆಗೆ ಹೇಳ್ದಿ.)
ಶಾಂತಲಾ,
ಧನ್ಯವಾದಗಳು.
ಅಡ್ಡಿಲ್ಲೆ. 1000 ಆದ್ರೆ ಮುದ್ದಾಂ ಪಾರ್ಟಿ ಕೊಡ್ತಿ.
ನಮ್ಮ ಹತ್ತಿರದವ್ಕೆಲ್ಲಾ 'ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ' ಹೇಳಲ್ಲಾಗ ಅಲ್ದ?
Post a Comment