ನಾನು, ರಘು computer ಕೊಂಡ ಆರಂಭದಲ್ಲಿ ಅಪ್ಪನಿಗೆ computer ಕಲಿಸಿಯೇ ತೀರಬೇಕೆಂದು ನಿರ್ಧರಿಸಿಬಿಟ್ಟಿದ್ದೆವು. ಅವನೂ ಒಪ್ಪಿದ್ದ.... 'ಹಾ, ಈಗಿನ ಕಾಲಕ್ಕೆ ಸ್ವಲ್ಪವನ್ನಾದರೂ ತಿಳಿದಿಟ್ಟುಕೊಳ್ಳಬೇಕು, ಮೊನ್ನೆ ಮೊನ್ನೆ ಹುಟ್ಟಿದ ಮಕ್ಕಳಿಗೂ ಕೂಡ ತಿಳಿದಿರುತ್ತದೆ' ಎಂಬ ಅಭಿಪ್ರಾಯವನ್ನೂ ಹೊರಹಾಕಿದ್ದ. ನಂತರ ಕಲಿಯಲು ಒಂದೆರಡು ದಿನ ಬಂದು ಕೂತ. paint-brush ನಿಂದ ಶುರುಮಾಡಿದ್ದೆವು. ದಿನವಿಡೀ ಗದ್ದೆ-ತೋಟಗಳಲ್ಲಿ ಕೆಲಸ ಮಾಡಿರುತ್ತಿದ್ದ ಅಪ್ಪ ಹತ್ತೇ ನಿಮಿಷಕ್ಕೆ ಆಕಳಿಸುತ್ತಿದ್ದ ಇಲ್ಲವೇ ತೂಕಡಿಸುತ್ತಿದ್ದ. ನಂತರ ಕಲಿಯುವಿಕೆ ಅಲ್ಲಿಗೇ ನಿಂತು ಹೋಯಿತು. ನಾನು, ರಘು ಮನೆಯಿಂದ ಹೊರಬಿದ್ದೆವು; computer ಕೂಡ ಮಾರಿಬಿಟ್ಟೆವು. ಹಾಗಂತ ಅಪ್ಪ ಕಲಿಯಲು ಆಗದಂಥ ದಡ್ಡನಲ್ಲ. ಆಗಿನ ಕಾಲದ B.Sc.(Mathematics). ನಾನು, ರಘು ಮಾತಾಡಿದ English ನಲ್ಲಿ ವ್ಯಾಕರಣ ದೋಷ ಹುಡುಕುವಷ್ಟು ನಿಷ್ಣಾತ. ನೆಂಟರಿಷ್ಟರ ಮನೆಗಳಿಂದ high school, college ಗೆ ಹೋಗುವ ಹುಡುಗರನ್ನೆಲ್ಲ ಒಟ್ಟು ಹಾಕಿಕೊಂಡು Mathematics ಮತ್ತು English ತರಬೇತಿ ಕೊಡುತ್ತಿರುತ್ತಾನೆ.
Engineer ಅಥವಾ doctor ಆಗಬೇಕಾಗಿದ್ದ ಅಪ್ಪ ಯಾವುದೋ ಕಾರಣಕ್ಕೆ ಮನೆಯಲ್ಲಿಯೇ ಉಳಿಯಬೇಕಾಯಿತಂತೆ. ಆ ಬಗ್ಗೆ ಅವನಿಗೆ ಇಂದಿಗೂ ವಿಷಾದವಿದೆ; ನಮಗೂ ಇದೆ. Human physiology, medicine ಗಳ ಬಗ್ಗೆ ಅಪ್ಪನ ಜ್ಞಾನ ನಮಗೆ ಅಚ್ಚರಿ ಮೂಡಿಸುತ್ತದೆ. ನಾನು ಕಲಿತು ಆಗಲೇ ಮರೆತು ಹಾಕಿದ Pythagoras ನ theorem ಅನ್ನು ಮನೆಕಟ್ಟುವಾಗ 'ಐಮೂಲೆ' ತೆಗೆಯಲು, ಮಾಡು ಕಟ್ಟಲು ಹೇಗೆ ಬಳಸಬಹುದು ಎಂದು ಅಪ್ಪ ತೋರಿಸಿದಾಗ ಆತನಿಗೊಂದು engineer ಪಟ್ಟವನ್ನು ನಾನು ಕೊಟ್ಟುಬಿಟ್ಟಿದ್ದೆ! Veterinary doctor ಸಹಾಯ ಇಲ್ಲದೆಯೇ ದನ-ಕರುಗಳಿಗೆ ಔಷಧ, injection ಮಾಡುತ್ತಾನೆ....ಕೃಷಿಯಲ್ಲೂ ಅವನದು ವಿವಿಧ ಪ್ರಯೋಗ. ಒಮ್ಮೊಮ್ಮೆ ಅವನು ಸಂಶೋದನೆಯಲ್ಲಿರಬೇಕಾಗಿತ್ತು ಎನಿಸುತ್ತದೆ.
ಮೊನ್ನೆ ರಘು ಮಣಿಪುರದಿಂದ ಮನೆಗೆ phone ಮಾಡಿದ್ದನಂತೆ.... ಸಂಭಾಷಣೆ ಹೀಗೆ ನಡೆಯಿತು ಎಂದು ರಘು ನಂತರ ನನಗೆ phone ಮಾಡಿ ಹೇಳಿದ.
"ಅಪ್ಪ, ಊರ ಕಡೆ ಸಿಕ್ಕಾಪಟ್ಟೆ ಮಳೆ ಅಲ್ದಾ?"
"ನಿಂಗೆ ಹೆಂಗೆ ಗೊತ್ತಾತು? ವಾರ್ತೆ ಕೇಳಿದ್ಯ?"
"ಇಲ್ಲೆ, ದಿನಾಲೂ ಪ್ರಜಾವಾಣಿ ಓದ್ತಿ".
"ಪ್ರಜಾವಾಣಿ ಮಣಿಪುರದ ವರೆಗೆ ಬರ್ತ?!!!"
"ಇಲ್ಲೆ, online ಓದ್ತಿ". (ರಘು ಈಗ ಸ್ವಲ್ಪ ದಿನಗಳಿಂದ ಮಣಿಪುರದಲ್ಲಿ headquarters ನಲ್ಲಿ ಇರುವುದರಿಂದ internet ಸಿಗುತ್ತಿದೆಯಂತೆ)
"Computer ನಲ್ಲಿ ಓದಕಾದ್ರೆ ಪುಟ ಹೆಂಗೆ ಮಗ್ಚ್ತೆ?!!"
"Click ಮಾಡಿರೆ ಮುಂದಿನ ಪುಟಕ್ಕೆ ಹೋಗ್ತು, ಮುಂದಿನ ಸಲ ಮನೆಗೆ ಬಂದಾಗ ತೋರಿಸ್ತಿ."
ಅಪ್ಪ computer ವಿಷಯದಲ್ಲಿ zero ಆದರೇನಾಯಿತು, ಅವನಲ್ಲೊಬ್ಬ engineer, doctor, researcher, teacher ಹೀಗೆ ಎಷ್ಟೆಲ್ಲಾ ಜನರು ಅಡಗಿದ್ದಾರೆ. ನಾಡಿದ್ದು ಮೂವತ್ತೊಂದನೆಯ ತಾರೀಖಿಗೆ ಅಪ್ಪನಿಗೆ ಅರವತ್ತು ತುಂಬುತ್ತದೆ. ಅವನಿಗೆ ನೆನಪಿದೆಯಾ ಎಂಬ ಬಗ್ಗೆ ನನಗಿನ್ನೂ ಅನುಮಾನ. ಆದರೆ ಹಿಂದಿನ ವರ್ಷ July 31 ಕ್ಕೆ ನಮ್ಮಿಬ್ಬರ phone call ಗಾಗಿ ಅಪ್ಪ ಕಾದಿದ್ದ ಎಂದು ಅಮ್ಮ ಹೇಳಿದ್ದಳು. ಅವನಿಗೆ phone ಮಾಡಿ greet ಮಾಡುವ ಮೊದಲೇ ಅವನ ಜ್ಞಾನ ಸಾಗರಕ್ಕೊಂದು hats off ಹೇಳುತ್ತಾ birthday wishes advance ಆಗಿ ಹೇಳುತ್ತಿದ್ದೇನೆ - Many Happy returns of the Day ಅಪ್ಪ :-)

ಮ. ಮಾ: ರಘು ಹಿಂದಿನ ವರ್ಷ ಅಪ್ಪ, ಅಮ್ಮನನ್ನು ಮಣಿಪುರಕ್ಕೆ ಕರೆದುಕೊಂಡು ಹೋದಾಗ ಅಪ್ಪನ ಇಚ್ಚೆಗೆ ವಿರುದ್ಧವಾಗಿ ಅಪ್ಪನಿಗೆ ಆ ರೀತಿ dress ಮಾಡಿಸಿದ್ದನಂತೆ.... ಆಗ ತೆಗೆದ photo ಅದು .
16 comments:
appa andre appane houdu nOdu.
nandu wishes .. bega computerru kaltubidli :)
ನಿಮ್ಮ ಅಪ್ಪಂಗೆ ನನ್ನ ಕಡೆಯಿಂದ ಶುಭಾಶಯಗಳು.. ಕಂಪ್ಯೂಟರ್ ಅನ್ನ ಅವರ ಇಷ್ಟವಾದ ವಿಷಯಗಳ ಮುಖಾಂತರ ತಿಳಿಸಿಕೊಡೋಕೆ ಪ್ರಯತ್ನ ಮಾಡಿ, ಬೇಗ ಕಲಿತಾರೆ.. :)
ಇದನ್ನೋದಿ ನನ್ನ ಚಿಕ್ಕಪ್ಪನ ನೆನಪಾಯ್ತು. ಹೊಲ ನೋಡಿಕೊಳ್ಳೊಕೆ ಯರದ್ರು ಬೇಕು ಅಂತ ಅವ್ರನ್ನ ನಮ್ಮ ತಾತ ಮುಂದೆ ಓದ್ಲಿಕ್ಕೆ ಬಿಡ್ಲಿಲ್ಲ ಅಂತೆ.. ಆದರೆ ಅವರನ್ನ ಅವ್ರ ಕೆಲಸಗಳನ್ನ ನೋಡಿದ್ರೆ ಗೊತ್ತಾಗುತ್ತೆ ಅವರು ಯಾವುದೇ electrical/civil ಎಂಜಿನಿಯರ್ ಗಿಂತ ಕಮ್ಮಿ ಇಲ್ಲ ಅಂತ..
bardiddu nice akka.. appange nandoo ondu shubhashaya. :-)
ಸೀಮಕ್ಕಾ,
ಒಳ್ಳೇ ಬರಹ.
ನನಗೆ ಬಹಳ ದಿನದಿಂದ ಕಾಡತಾ ಇದ್ದು ಈ ವಿಷಯ. ನಮ್ಮ ಅಪ್ಪಂದಿರೆಲ್ಲಾ ಎಷ್ಟು ವೈವಿಧ್ಯಮಯ ಹವ್ಯಾಸ, ವಿದ್ಯೆ ಮತ್ತು ಅಭಿರುಚಿಗಳನ್ನು ಇಟ್ಟ್ಕಂಡಿದಿದ್ದ. ನಾವು ಇಷ್ಟೆಲ್ಲಾ ಓದಿಯೂ ಎಂತಕ್ಕೆ ಅವರ ೧೦% ಇರಲೆ ಆಗ್ತಾ ಇಲ್ಲೆ?
ಅಪ್ಪಂಗೆ ನನ್ನದೂ ಶುಭಾಶಯ ಹೇಳಿಬಿಡು.
ಸೀಮಕ್ಕಾ...
ಅಪ್ಪನ ಹುಟ್ಟುಹಬ್ಬಕ್ಕೆ ಚೆಂದದ ಉಡುಗೊರೆ ಅಪ್ಪನಿಗೆ. ನಿನ್ನ ಅಪ್ಪ ಬೇಗ ಕಂಪ್ಯೂಟರ್ ಕಲಿತು ನೀ ಬರೆವ ಬರಹಗಳಿಗೆಲ್ಲ ಪ್ರತಿಕ್ರಿಯಿಸುವಂತಾಗಲಿ ಅಂತ ನನ್ನ ಕಡೆಯ ಹಾರೈಕೆ.
ಅಪ್ಪನ ಹುಟ್ಟುಹಬ್ಬಕ್ಕೆ ನನ್ನದೂ ಶುಭಾಶಯ ತಿಳಿಸೇ :-)
Hi Seema.. nice thought. Even i tried to make my dad acquainted with mobile phone, but still he is not comfortable with its operations. Imagine he worked for a bank as depputy manager.. he even tried to work on computer during his retiring days.. but as you said our parents are more genius than today's any professionally qualified person. But its their lack of interest in these machines.
All the Best! :)
ಸೀಮಕ್ಕ,
ನಿನ್ನ ಅಪ್ಪಂಗೆ ನನ್ನ ಕಡೆ ಇಂದ ಶುಭಾಶಯಗಳು :)
Nandoo ondu irli... :)
@ ವಿಕಾಸ, ಅನಂತ, ಸುಶ್ರುತ, ಮಧುಸೂದನ, ಶಾಂತಲ, ಪೂರ್ಣಿಮಾ, ಶರಶ್ಚಂದ್ರ, ಕಲ್ಲಾರೆ...
ನಿಮ್ಮೆಲ್ಲರ ಶುಭಾಶಯಕ್ಕೆ ಅಪ್ಪನಿಂದ, ನನ್ನಿಂದ ಧನ್ಯವಾದಗಳು.
ಸದಾ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಕೋರುತ್ತಾ,
ಸೀಮಾ
@ ಶಿವಶಂಕರ,
ತುಂಬಾ ಧನ್ಯವಾದಗಳು ಇಷ್ಟಪಟ್ಟಿದ್ದಕ್ಕೆ, ಪುರಸೊತ್ತಾದಾಗ ಬರೆಯುತ್ತಿರುತ್ತೇನೆ ಬರುತ್ತಿರಿ :)
Seemakka,
nanna kadeyindanoo shubhaashaya tiLisi appange.
@ Jagali Bhagavata,
Addiyilla. Tilistene. Thanks.
Matte...hegiddeeri? :-)
olle baraha ista aaytu...
kodsara
i don't know how i got this link to seema's blog...
i came to know that this is daughter of savitrattige & shitannayya by seeing their photo...
i feel very happy to see them atleat in photo after so many years!!! thank u seema....
love from swarna,bengle
u may not remember me ask your amma
bye.. i will read ur full blog whenever i find time...
@ Vinayaka,
Thank you so much, ishtapattiddakke :-)
@ Gouri,
Swarnakka, I remember you. May be we have met once or twice. I remember you as Janakka and Shakkakka's sister! Are you in Pune?
Thanks for visiting. So nice to hear from you :-)
Affectionately,
Seema
Post a Comment