February 19, 2008

ಫ್ಯೂಜಿ ಪರ್ವತ

ನಮ್ಮ ಮೆನೆಯ ಹಿಂದುಗಡೆ balcony ಯಲ್ಲಿ ನಿಂತು ಪಶ್ಚಿಮ ದಿಕ್ಕಿನೆಡೆ ನೋಡಿದರೆ ಫ್ಯೂಜಿ ಪರ್ವತ ಮನೋಹರವಾಗಿ ಕಾಣಿಸುತ್ತದೆ. ಚಳಿಗಾಲವಾದ್ದರಿಂದ ಈಗ ಮೈತುಂಬಾ ಹಿಮದ ಹೊದಿಕೆಯನ್ನು ಹೊದ್ದುಕೊಂಡ ಫ್ಯೂಜಿ ಬೆಳಗಿನ ಸಮಯದಲ್ಲಿ ಪೂರ್ತಿ ಬೆಳ್ಳಗೆ ಕಾಣುತ್ತದೆ.















ಸಂಜೆಯ ಹೊತ್ತಿಗೆ ಸೂರ್ಯ ಅದಕ್ಕೆ ತಾಕಿಕೊಂಡೇ ಮುಳುಗುತ್ತಾನೆ ಎನ್ನುವಂತಿರುತ್ತದೆ. ಆ ಸಮಯದಲ್ಲಿ ಸುತ್ತಮುತ್ತಲೂ ಕೇಸರಿ- ಹಳದಿ ಬಣ್ಣದ ಹಿನ್ನೆಲೆಯಲ್ಲಿ ಫ್ಯೂಜಿ ದಟ್ಟ ಬೂದು ಬಣ್ಣದಲ್ಲಿ ಕಂಡು ಕಣ್ಣಿಗೆ ಮುದ ಕೊಡುತ್ತದೆ. ಆದರೆ ಕೆಲವು electric line ಗಳು ಅಡ್ಡ ಬಂದು ನೋಡುಗರ ಕಣ್ಣಿಗೂ, ಪರ್ವತಕ್ಕೂ ನಡುವೆ ಬೇಲಿ ಕಟ್ಟುತ್ತವೆ.















ಅಸಾಧ್ಯ ಚಳಿ ಇರುವ ಕಾರಣ ಅದನ್ನು ವರ್ಷದ ಎಲ್ಲ ಕಾಲದಲ್ಲಿಯೂ ಹತ್ತಲು ಅನುಮತಿ ಇರುವುದಿಲ್ಲ. ನಡು ಬೇಸಿಗೆಯಲ್ಲಿ ಕೆಲವು ದಿನಗಳು ಮಾತ್ರ ಚಾರಣಿಗರಿಗೆ ಅನುಮತಿ ಇರುತ್ತದೆ. ಅಂತಹ ದಿನಗಳಲ್ಲಿ ಆ ಪರ್ವತವನ್ನು ಲಕ್ಷಾಂತರ ಜನರು ಏರಿರುತ್ತಾರೆ. ಆ ಪರ್ವತವನ್ನು ದೇವತೆ ಎಂದು ತಿಳಿಯುವ ಜಪಾನಿಯರಲ್ಲಿ ಕೆಲವರು ತಮ್ಮ ಜೀವನದಲ್ಲಿ ಅದನ್ನು ಹಲವಾರು ಬಾರಿ ಏರಿರುತ್ತಾರೆ. 3,776 ಮೀಟರುಗಳನ್ನು ಕ್ರಮಿಸಿದ ಚಾರಣಿಗರು ರಾತ್ರಿ ಅಲ್ಲಿಯೇ ಉಳಿದು ಮರುದಿನದ ಸೂರ್ಯೋದಯವನ್ನು ನೋಡಿಕೊಂಡು ಹಿಂದಿರುಗುತ್ತಾರೆ. ಸೂರ್ಯೋದಯದ ಸಮಯದಲ್ಲಿ ಇಡಿಯ ಪರ್ವತವೂ ತಾಮ್ರದ ಬಣ್ಣದಲ್ಲಿ ಹೊಳೆಯುತ್ತದೆಯಂತೆ.






ಚಾರಣದ ಪ್ರಾರಂಭದಲ್ಲಿ.




ಫ್ಯೂಜಿ ಪರ್ವತದ ಮೇಲೆ ಸೂರ್ಯಾಸ್ತದ ನಂತರದ ರಾತ್ರಿ.




ಫ್ಯೂಜಿ ಪರ್ವತದಿಂದ ಕಾಣುವ ಸೂರ್ಯೋದಯ.





ಸೂರ್ಯೋದಯದ ಸಮಯದಲ್ಲಿ ಫ್ಯೂಜಿ ಪರ್ವತ.




ಜ್ವಾಲಾಮುಖಿ ಸಿಡಿದಾಗ ಉಂಟಾದ ಬಿರುಕುಗಳು.





ಒಂದು ದಿನಕ್ಕೆ ಪರ್ವತವನ್ನು ಏರಲು ಬರುವ ಜನಸಾಗರ!!

7 comments:

Vijendra ( ವಿಜೇಂದ್ರ ರಾವ್ ) said...

ಇಷ್ಟೆಲ್ಲಾ ಚಂದ ಫೋಟೋ ತೋರಿಸಿ ಫ್ಯೂಜಿ ಪರ್ವತ ನೋಡೋ ಆಸೆ ಹುಟ್ಟಿಸಿದಿರಿ. ಆದ್ರಿಂದ ನೀವೆ ಕರ್ಕೊಂಡು ಹೋಗಿ ಜಪಾನ್ ತೋರಿಸಬೇಕು..

Sanath said...

sakkat ಆಗಿದೆ photos...

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ...
ಫೋಟೋಸ್ ಸೂಪರ್ ಇದ್ದು. ಆನು ಬಂದಾಗ ನಿಮ್ಮನೆಯಿಂದ ತೋರ್ಸಿದ್ದೆ ಇಲ್ಯಲೆ ಆ ಪರ್ವತನ?

ಅನಿಕೇತನ said...

Nice photos and Nice piece of information ;-)

Seema S. Hegde said...

@ ವಿಜೇಂದ್ರ,
ನೀವು ಜಪಾನ್ airport ತನಕ ಬನ್ನಿ... ಆಮೇಲೆ ಪೂರ್ತಿ ಜಪಾನ್ ತೋರಿಸೋಣವಂತೆ :)

@ ಸನತ್,
ಧನ್ಯವಾದಗಳು. ಯಾರಿಗೂ ಹೇಳಬೇಡಿ, ನಿಮಗಷ್ಟೇ ಹೇಳುತ್ತಿದ್ದೇನೆ- ಆ Photos ತೆಗೆದವರು ಅನಿಕೇತನ :)

@ ಶಾಂತಲಾ,
ನೀ ಹಿಂದಿನ ಸಲ ಯಮ್ಮನೆಗೆ ಬಂದಾಗ ಮೋಡ ಆಗಿತ್ತಲೇ ಹಂಗಾಗಿ ಹೇಳಿದ್ನೆ ಇಲ್ಲೇ. ನಿನ್ನತ್ರೆ ಇನ್ನೊಂದೆರಡು ದಿನ ಉಳಿ ಅಂದ್ರೆ ಉಳದ್ದಿಲ್ಲೇ. ;)

@ ಅನಿಕೇತನ,
Photos ಯಾರು ತೆಗೆದಿದ್ದು ಅನ್ನೋದು ಮರೆತು ಹೋಗಿದೆಯಾ? ಹಾಗಾದ್ರೆ ಅಲ್ಲೇ ಸ್ವಲ್ಪ ಮೇಲೆ ಓದಿ ;)

ನಾವಡ said...

ಫ್ಯೂಜಿ ಬಗ್ಗೆ ಚೆನ್ನಾಗಿದೆ. ನಾವೂ ಬರಬಹುದೇ?
ನಾವಡ

Seema S. Hegde said...

@ ನಾವಡ,
ಓಹೋ. ತಪ್ಪದೇ ಬನ್ನಿ.