ಹೀಗೊಂದು ಕಥೆ...ನೀವು ಕೇಳಿದ್ದಿರಲೂ ಬಹುದು...
'ಮನುಷ್ಯ ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೂ ಸ್ವಾರ್ಥ ಇದ್ದೇ ಇರುತ್ತದೆ. ಸ್ವಾರ್ಥ ಸಿದ್ಧಿಯಿಲ್ಲದೆ ಯಾವ ಮನುಷ್ಯನೂ ಯಾವ ಕೆಲಸವನ್ನೂ ಮಾಡಲಾರ.' ಹೀಗೆಂದು ಹೇಳಿದವರು ಅಮೇರಿಕಾದ ಹಿಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್. ಅವರು ತಮ್ಮ ಸ್ನೇಹಿತನ ಜೊತೆ ಮಾತನಾಡುತ್ತಿದ್ದಾಗ ಇದನ್ನು ಹೇಳಿದರು. ಸ್ನೇಹಿತ ಸುತರಾಂ ಒಪ್ಪಲಿಲ್ಲ. ಸಾಧ್ಯವೇ ಇಲ್ಲ ಎಂದು ತಳ್ಳಿ ಹಾಕಿದರು.
ಒಂದು ಭಾನುವಾರದಂದು ಇಬ್ಬರೂ ಕಾರಿನಲ್ಲಿ ಕುಳಿತು ಹೊರಟರು. ಹಳ್ಳಿಗೆ ಹೊರಟಾಗ ನಡುವೆ ದಾರಿಯಲ್ಲಿ ಅಬ್ರಹಾಂ ಲಿಂಕನ್ ಅವರು ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದರು. ಏಕೆಂದರೆ ಅವರು ಮುಳ್ಳಿನ ಬೇಲಿಯಲ್ಲಿ ಒಂದು ಹಂದಿಯ ಮರಿ ಸಿಕ್ಕಿ ಬಿದ್ದು ತಪ್ಪಿಸಿಕೊಳ್ಳಲು ಬಾರದೆ ಒದ್ದಾಡುತ್ತಿರುವುದನ್ನು ಕಂಡಿದ್ದರು. ಕಾರಿನಿಂದ ಇಳಿದು ಹೋಗಿ ಅವರು ಆ ಹಂದಿಯ ಮರಿಯನ್ನು ಮುಳ್ಳು ಬೇಲಿಯಿಂದ ತಪ್ಪಿಸಿ ಬಿಟ್ಟು ಬಂದರು.
ಅವರ ಸ್ನೇಹಿತ ಕೇಳಿದರು, "ನೀವು ಈಗ ಮಾಡಿದ ಕೆಲಸದಲ್ಲಿ ನನಗೇನೂ ಸ್ವಾರ್ಥ ಕಾಣಲಿಲ್ಲ." ಅದಕ್ಕೆ ಅಬ್ರಹಾಂ ಲಿಂಕನ್ ಹೇಳಿದ್ದು, "ಆ ಕೆಲಸದಲ್ಲಿಯೂ ಕೂಡ ಸ್ವಾರ್ಥವೇ ಇತ್ತು. ಹಂದಿಯ ಮರಿಯನ್ನು ನೋಡಿಕೊಂಡು ಹಾಗೆಯೇ ಬಿಟ್ಟು ಮುಂದೆ ಹೋಗಿದ್ದರೆ ನನಗೆ ರಾತ್ರಿಯಿಡೀ ನಿದ್ದೆ ಬರುತ್ತಿರಲಿಲ್ಲ!"
ಎಷ್ಟು ನಿಜ ಅಲ್ಲವೇ? ನಾವೂ ಕೂಡ ಸ್ವಾರ್ಥ ಸಾಧನೆಗಾಗಿಯೇ ಏನೆಲ್ಲಾ ಮಾಡುತ್ತಿರುತ್ತೇವೆ; ಕೆಲವೊಂದು ನಮಗೆ ಅರಿವಿರುತ್ತದೆ, ಇನ್ನು ಕೆಲವು ನಮಗೆ ಅರಿವಿಲ್ಲದಂತೆಯೇ.
8 comments:
ಸೀಮಕ್ಕ...
ಥ್ಯಾಂಕ್ಸ್, ಒಳ್ಳೆಯ ಬೆಡ್ ಟೈಮ್ ಸ್ಟೋರಿ ಹೇಳಿದ್ದಕ್ಕೆ. ಗುಡ್ ನೈಟ್.
Shantala,
Thanks :)
ಚೊಲೋ ಇದ್ದು ಈ ಕಥೆ ...
ಮೊದ್ಲು ಎಲ್ಲೋ ಓದಿದ್ದಿ ...ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು
Thank you Roopa.
ಮನುಷ್ಯ ಉಸಿರಾಡದು, ಉಸಿರು ತೆಗೆಯದು ಎರಡೂ ತನ್ನ ಸ್ವಾರ್ಥಕ್ಕಾಗಿನೇಯಾ.. ತಾ ಬದಕವು ಹೇಳಿ. ಚೊಲೋ ಇದ್ದು ಕತೆ.
ಈ ಕಥೆ ಕೇಳಿರಲಿಲ್ಲ. ಮನುಷ್ಯ ಮಾಡೋದೆಲ್ಲ ಸ್ವಾರ್ಥಕ್ಕೆ ಅನ್ನುವ ಮಾತು ಗೊತ್ತಿತ್ತು, ಅದರ ಹಿಂದಿರುವ ಈ ಸ್ವಾರ್ಥದ ಅರ್ಥವೂ.
ಕಥೆ ಚೆನ್ನಾಗಿ ಹೇಳಿದ್ದೀರಿ. ಧನ್ಯವಾದ.
ಸೀಮಾರೇ,
ಕಥೆ ಚೆನ್ನಾಗಿದೆ ಮತ್ತು ಹೋರಿಗರುವಿನ ಗಾದೆಯೂ ಚೆನ್ನಾಗಿದೆ.
ನಾವಡ
ತೇಜಸ್ವಿನಿ, ಸುಪ್ತದೀಪ್ತಿ ಮತ್ತು ನಾವಡ ಅವರೆ,
ಧನ್ಯವಾದಗಳು. ಕಥೆ ಎಲ್ಲರಿಗೂ ಗೊತ್ತಿರುವಂಥದೆ, ಹಾಕಿ ಪ್ರಯೋಜನವಿಲ್ಲ ಅಂದುಕೊಂಡಿದ್ದೆ!
Post a Comment