February 8, 2008

ಶಾಂತಲಾಳೊಂದಿಗೆ ಕೆಲವು ಕ್ಷಣಗಳು…

ಮೊನ್ನೆ gmail ನಲ್ಲಿ online ಇದ್ದೆ. ಶಾಂತಲಾ ping ಮಾಡಿದಳು. ನಾವಿಬ್ಬರೂ ಆಗಾಗ ಮಾತನಾಡುತ್ತಲೇ ಇರುತ್ತೇವೆ. ಅವಳು ನನ್ನ ಅತ್ಯಂತ ಆಪ್ತ ಸ್ನೇಹಿತೆಯರಲ್ಲಿ ಒಬ್ಬಳು. ನಾವಿಬ್ಬರು ಮಾತನಾಡತೊಡಗಿದರೆ ಮಾತು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಮೊದಲು ಹವಾಮಾನ ಹೇಗಿದೆ? ಚಳಿ ಎಷ್ಟಿದೆ? ಏನು ಅಡಿಗೆ? ಎಂಬೆಲ್ಲಾ ಮುಗಿದ ಮೇಲೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯತೊಡಗುತ್ತೇವೆ.
ಮಾತು ಕತೆ ಹೀಗಿತ್ತು ನೋಡಿ; ಮೊದಲಿನ hi ಕೊನೆಯಲ್ಲಿನ bye ಗಳನ್ನೆಲ್ಲ ಬಿಟ್ಟಿದ್ದೇನೆ.
.....
.....
.....
ನಾನು: ಮೊನ್ನೆ ಇಲ್ಲಿ snowfall ಆತು. ಫೋಟೋ link ಕಳಿಸ್ತಿ ತಡಿ. ಫೋಟೋದಲ್ಲಿ ಯನ್ನ ನೋಡು. ಎಷ್ಟು ದಪ್ಪ ಆಜಿ ಹೇಳಿ. ಯನ್ನ ಜೀವಮಾನದ ಗುರಿ ಆಗಿತ್ತು ಅದು :)
ಶಾಂತಲಾ: ಹೌದೇ, ಚೊಲೋ ದಪ್ಪ ಆಜೆ. ಆನೂ ಈಗ ದಪ್ಪ ಆಜಿ.
ನಾನು: ಒಳ್ಳೇದು ತಗ ಹಂಗಾರೆ ಇಬ್ಬರಿಗೂ. ಧಾರವಾಡದಲ್ಲಿ ಓದಲ್ಲೆ ಇದ್ದಾಗಲಂತೂ ಇಬ್ಬರೂ ಬರಗಾಲದ ಹೆಣಗಳ ತರ ಕಾಣ್ತಿದ್ಯ. ಯಾವಾಗ ನೋಡಿದ್ರೂ ಆರಾಮು ಇರ್ತಿತ್ತಿಲ್ಲೆ.
ಶಾಂತಲಾ: ಊರಿಗೆ ಯಾವಾಗ ಹೋಗ್ತಾ ಇದ್ದೆ?
ನಾನು: March ನಲ್ಲಿ.

(ಇನ್ನು ಶಾಂತಲಾ form ಗೆ ಬಂದಳು ಎಂದು ಕಾಣಿಸುತ್ತದೆ)
ಶಾಂತಲಾ: ಸೀಮಕ್ಕ, ನಿನ್ನ ಹತ್ರ ಜಗಳ ಮಾಡವು ಹೇಳಿ ಮಾಡ್ಕ್ಯಂಜಿ.
ನಾನು: ಯಂತಕ್ಕೆ?
ಶಾಂತಲಾ: ಯಂಗೆ ನಿನ್ನ ಮೇಲೆ ಹೊಟ್ಟೆಕಿಚ್ಚು ಬರ್ತಾ ಇದ್ದು.
ನಾನು: ಅಯ್ಯೋ ಯಂತಕ್ಕೆ?
ಶಾಂತಲಾ: ನೀನು ರಾಜೀವ ಭಾವ ಒಳ್ಳೆಯವ ಹೇಳಿ ಬರಿತೆ ಹಂಗಾಗಿ. ಯನ್ನ ಗಂಡನೂ ಒಳ್ಳೆಯವ ಹೇಳಿ ಬರದ್ದೆ ಇಲ್ಲೇ.
ನಾನು: ಅಷ್ಟೆಯ? ಬರದ್ರೆ ಆತು ಬಿಡು. ರಾಜೇಂದ್ರ ಭಾವ ಒಳ್ಳೆಯವ ಹೇಳಿ ಯಂಗೆ ಗೊತ್ತಿದ್ದು. ಮತ್ತೆ ಹೊಟ್ಟೆಕಿಚ್ಚು ಯಂತಕ್ಕೆ ಬಿಡು.
ಶಾಂತಲಾ: ಹೂಂ... ಸುಖ ಹೆಚ್ಚಾಗಿ, ಕೆಲ್ಸ ಇಲ್ದೆ ಹೋದ್ರೆ ಮತ್ತೆಂತ ಆಗ್ತು ಹೇಳು? ಎಲ್ಲರ ಮೇಲೂ ಹೊಟ್ಟೆಕಿಚ್ಚು ಹುಟ್ತು.
(ಜೀವನದ philosophy ಯನ್ನೇ ಹೇಳಿಬಿಟ್ಟಿದ್ದಳು, ಅವಳಿಗೆ ಗೊತ್ತಿಲ್ಲದೆಯೇ!)

ನಾನು: ಸರಿ ಬಿಡು. ಬರಿತಿ. (ನಿಜವಾಗಿಯೂ ರಾಜೇಂದ್ರ ಒಳ್ಳೆಯ ವ್ಯಕ್ತಿ; ಆ ಬಗ್ಗೆ ಎರಡು ಮಾತಿಲ್ಲ)
ಶಾಂತಲಾ: ಬರದ್ದಿಲ್ಲೇ ಅಂದ್ರೆ ನೋಡು ಮತ್ತೆ. ಕಡಿಗೆ ನೋಡ್ಕ್ಯತ್ತಿ ನಿನ್ನ. ಎಲ್ಲಾರೂ ಒಬ್ನೇ ಸಿಗು.
ನಾನು: ಕೊಡ್ಲ ಮಟ್ಟಿ ಕಾನಲ್ಲಿ ಹೊಡಿತ್ಯ?
ಶಾಂತಲಾ: ನೀನು ದಪ್ಪ ಆಜೆ. ಯನ್ನತ್ರ ನಿನಗೆ ಹೊಡಿಯಲ್ಲೇ ಆಗ್ತಿಲ್ಲೆ. ಜನರನ್ನ ಕರಸ್ತಿ :)
ನಾನು: ದೇವಿಕೆರೆ gang ಕರಸ್ತ್ಯ? :)
ಶಾಂತಲಾ: ಅವು ಸಾಕಾ ನಿನಗೆ?
ನಾನು: ಕೋಟೆ ಕೆರೆ gang ಕೂಡ ಕರಶ್ಗ್ಯ ಬೇಕಾರೆ. ಇನ್ನೂ ಬೇಕಾರೆ ಹೀಪನಳ್ಳಿ gang.
ಶಾಂತಲಾ: ಹೀಪನಳ್ಳಿ gang ನವು ಬಂದ್ರೆ ಯಂಗೆ ಹೊಡಿತ :)
ನಾನು: ಯಂತಕ್ಕೆ?
ಶಾಂತಲಾ: ಯಂಗ್ಳ ಊರಿನ ಮಾಣಿ ಮದುವೆ ಆಜೆ. ಗನಾ ಮಾಣಿ ಆಗಿದ್ದ, ಕೆಟ್ಟು ಹೋದ ಹೇಳಿ :)




ಟಿಪ್ಪಣಿ: ಶಾಂತಲಾ, ನೀನು ಹೊಡಿತೆ, ಹೊಡಸ್ತೆ ಹೇಳಿ ಹೆದ್ರಿಕ್ಯಂದು ಬರದ್ನಿಲ್ಲೇ ಮತ್ತೆ... ಬರೆಯವ್ವು ಅನಿಸ್ತು ಬರದ್ದಿ :)

16 comments:

Jagali bhaagavata said...

ಹ್ಹ ಹ್ಹ ಹ್ಹ....ಅವ್ರು ಮೊನ್ನೆ ನನ್ನ ಕೇಳ್ತಾ ಇದ್ರು "ಮಾಣಿ, ಸೀಮಕ್ಕನ ಮೇಲೆ ಸಿಟ್ಟು ಬಂದಿದ್ದು. ನೀನು ಬರ್ತ್ಯಾ ನಮ್ಮ್ gang-ಗೆ"...ಹೇಳಿ :-)

ಏನಕ್ಕೂ ಸ್ವಲ್ಪ ಹುಷಾರು, ಸೀಮಕ್ಕ. ಮತ್ತೆ ಎಂತದಾದ್ರೂ ಬೇಜಾರಿಲ್ಲೆ. ಆದ್ರೆ, ನೀವು ಮಸಾಲೆ ದೋಸೆ ಕೊಡಿಸ್ತೆ ಹೇಳಿ ಹೇಳಿದ್ರಲ್ದಾ...ಮಸಾಲೆ ದೋಸೆ ತಪ್ಪೋಗ್ತೇನೊ ಅಂತ ಹೆದ್ರಿಕೆ ಆಗ್ತು :-) ದೋಸೆ ಕೊಡ್ಸಿರ್ ಮೇಲೆ ಏನ್ ಬೇಕಾರೂ ಮಾಡ್ಕಳಿ :-)

Jagali bhaagavata said...

ಮತ್ತೆ.....ಬರೇ ನೀವಿಬ್ರೇ ದಪ್ಪ ಆಗಿದ್ದಾ? ಇಲ್ಲಾ ಭಾವಂದ್ರೂ ದಪ್ಪ ಆಗಿದಾರಾ? :-) ಸುಮ್ನೆ ಹಿಂಗೆ ಕುತೂಹಲ ಅಷ್ಟೆ :-)

ಶಾಂತಲಾ ಭಂಡಿ (ಸನ್ನಿಧಿ) said...

ಅಕ್ಕಯ್ಯೋ...
ನಮೋ ನಮಃ...
ಯನ್ನ ತೊಳ್ದು ಚೊಕ್ಕು ಮಾಡಿ ಇಟ್ಟಿದ್ದೆ ಇಲ್ಲಿ.
ಆಗ್ಲಿ ಹಾಸ್ಟೆಲ್ ಅಲ್ಲಿ ಇದ್ದಾಗ ಸೀನಿಯರ್ಸ್ ಹೇಳಿ ನಿಂಗಕ್ಕೆ ತಗ್ಗಿ ಬಗ್ಗಿ ನಂಗ ನಡ್ಕಂಡಿದ್ದಕ್ಕೆ ಇವತ್ತು ಇಷ್ಟು ಹೆದ್ರಿಕೆ ಇದ್ದು ಯನ್ನ ಮೇಲೆ. ;)
"ಜೀವನದ ಫಿಲಾಸಫಿಯನ್ನೇ ಹೇಳಿಬಿಟ್ಟಿದ್ದಳು" ಇಷ್ಟೇ ಸಾಕಾಗಿತ್ತು, ಆ ವಾಕ್ಯ ಮುಂದ್ವರ್ಸವ್ವು ಹೇಳೇನಿತ್ತಿಲ್ಲೆ ;)

ನಾ ಎಳೆದ ಕಾಲನ್ನು ಸಾಲಾಗಿ ಮಾಡಿದ ಸೀಮಕ್ಕಂಗೆ ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೇ............
ತಾವು ಯಾವ ಕಡೆ ಅಂತ ಗೊತ್ತಾಗ್ಲಿಲ್ಲ! ಸೀಮಕ್ಕನ ಕಡೆಯೋ ಅಥವಾ ನಿಮ್ಮಕ್ಕ(ಇದು ನಾನೇ ಅಂತ ಜ್ಞಾಪಿಸಬೇಕಿಲ್ಲ ತಾನೇ ;)ನ ಪರವೋ ಗೊತ್ತಾಗ್ಲಿಲ್ಲ! ಹೋರಾಟ ಮುಗಿಯುವತನಕ ನನ್ನ ಕಡೆ ಇರಿ, ಸಮರವಿರಾಮದಲ್ಲಿ ಸೀಮಕ್ಕ ನಮಗೆಲ್ಲ ಮಸಾಲೆದೋಸೆ ಕೊಡಿಸುತ್ತೇನಂತ ಮಾತು ಕೊಟ್ಟಿದ್ದಲ್ಲದೇ,ನಿನ್ನ ತಮ್ಮನ್ನೂ ಕರ್ಕೊಂಬಾ ಅಂತನೂ ಹೇಳಿದ್ದಾರೆ.

Seema S. Hegde said...

@ ಜಗಲಿ ಭಾಗವತ,
ಭಾವಂದಿರೂ ದಪ್ಪ ಆಗಿದ್ದಾರೆ! ಬರೀ ನಾವಷ್ಟೇ ದಪ್ಪ ಆಗಿದ್ದಲ್ಲದೆ ನಾವು ಅವರನ್ನೂ ದಪ್ಪ ಮಾಡಿದೇವೆ!!

@ ಶಾಂತಲಾ,
'ಜೀವನದ ಯನ್ನೇ ಹೇಳಿಬಿಟ್ಟಿದ್ದಳು, ಅವಳಿಗೆ ಗೊತ್ತಿಲ್ಲದೆಯೇ!'... ಇದರಲ್ಲಿ 'ಅವಳಿಗೆ ಗೊತ್ತಿಲ್ಲದೆಯೇ' ಅಂದರೆ ನಾನು ಬರೆದಿದ್ದು 'ಅವಳ ಗಮನಕ್ಕೆ ಬಾರದೆಯೇ' ಅನ್ನುವ ಅರ್ಥದಲ್ಲಿ... ನೀನು ಏನೆಂದುಕೊಂಡೆ?
ಮತ್ತೆ ಇಬ್ಬರಿಗೂ ಮಸಾಲೆ ದೋಸೆ ಕೊಡಿಸುವುದಂತೂ ಅಂತೂ ಗ್ಯಾರೆಂಟಿ.

Unknown said...

ಸೀಮಕ್ಕಾ,
ಹೀಪ್ನಳ್ಳಿ ಗ್ಯಾಂಗ್ ನಲ್ಲಿ ನಾನು ಇದ್ದಿ ನೋಡ್ಕ್ಯ. ನಾನು ಎಷ್ಟು ದಪ್ಪ ಇದ್ದು ಹೇಳಿ ಗೊತ್ತಿದ್ದಲೇ.

ನಾನು ಇಲ್ಲಿಗೆ ಬಂದ ಮೇಲೆ ಸುಮಾರೇ ದಪ್ಪ ಆಜಿ. ಈಗ ಯಾರು ಕೇಳಿದ್ರು, ದಪ್ಪ ಆಗಿದ್ದೆ USಗೆ ಬಂದ ಸಾಧನೆ ಹೇಳಿ ಹೇಳ್ತಿ ಎಲ್ಲರ ಹತ್ರ.

Seema S. Hegde said...

ಮಧು,
ಮೊದಲಂತೂ ನೀನು, ಆನು ಇಬ್ರೂ ಎಷ್ಟು ದಪ್ಪ ಇದ್ದಾಗಿತ್ತು ಹೇಳಿ ಇಬ್ಬರಿಗೂ ಗೊತ್ತಿದ್ದು ಬಿಡು!
ನಮ್ಮ ಹಂಗೆ ಹಿಡಿ ಕಡ್ಡಿ ಹಂಗೆ ಇದ್ದವೆಲ್ಲಾ ದೇಶ ಬಿಟ್ಟು ಹೊರಗೆ ಬಂದ ಮೇಲೆ ದಪ್ಪ ಆಗ್ತಾ ಇದ್ವ ಹೆಂಗೆ ಹಂಗಾರೆ?!!
Lifetime achievement ಹೇಳಿ resume ನಲ್ಲಿ ಹಾಕ್ಯಂಡ್ರೇ ಹೆಂಗೆ ಇಬ್ರೂವ? :)

Unknown said...

ಹ್ಮ್..... ನಾನಂತೂ ಆಗ್ಲೇ ಹಾಕ್ಯಂಜಿ ರೆಸ್ಯೂಮೆ ಅಲ್ಲಿ :-)

ಶಾಂತಲಾ ಭಂಡಿ (ಸನ್ನಿಧಿ) said...

@ ಸೀಮಕ್ಕ
ಆ ವಾಕ್ಯ ಮುಂದ್ವರ್ಸದು ಬೇಡ ಹೇಳಿದ್ದು ನಾ ಫಿಲಾಸಫಿನೇ ಹೇಳಿದ್ದಿ ಹೇಳಿ ಓದಿದವೆಲ್ಲ ತಿಳ್ಕಳ್ಲಿ ಹೇಳಿ. :)

"ಹಿಡಿಕಡ್ಡಿ", "ಬರಗಾಲದ ಹೆಣ" ಎಲ್ಲ ಆತು, ಇನ್ನೊಂದು ಶಬ್ಧ ಬಿಟ್ರಲೆ....
ನನ್ನಮ್ಮ ನಾ ಊಟ ಮಾಡ್ದೆ ಇದ್ಕುಳೆ ಹೇಳ್ತು "ಹಿಂಗೆ ಮಾಡಿರೆ ನಾಯಿ ಹೊಡ್ಯ ಕೋಲಂಗೆ ಆಗೋಗ್ತೆ ನೋಡು" ಹೇಳಿ. ಎಷ್ಟು ಚೊಲೊ ಶಬ್ದ ಅಲ್ದಾ ಇದು? ನಂಗಿಷ್ಟ ಈ ಶಬ್ಧ, so ನನ್ ಮಗ ಊಟ ಮಾಡ್ಲಿ, ಮಾಡ್ದೇ ಹೋಗ್ಲಿ ನಾ ಅವಂಗೆ ಹೇಳ್ತಾ ಇರ್ತಿ :)

ಶಾಂತಲಾ ಭಂಡಿ (ಸನ್ನಿಧಿ) said...

@ ಮಧು
ಹೀಪನಳ್ಳಿಲ್ಲಿ ದೊಡ್ಡ ಟೀಮ್ ಇದ್ದು ನಂದು, ಅವ್ರನ್ನೆಲ್ಲ ಹೀಪನಳ್ಳಿ ಕತ್ರಿಯಲ್ಲಿ ಕೂರ್ಸಿಕ್ಕೆ ಬಂಜಿ.(ಆಸ್ರಾದ್ರೆ ಮಧು ಮನೆಲ್ಲಿ ನೀರು ಕುಡಿರಿ ಹೇಳಿದ್ದಿ) :)
ಮಧು... ನೀ ಈಗ ಯಾರ ಪರ ಹೇಳಾತು?

ಅನಿಕೇತನ said...

Nice Talk ! :)

Seema S. Hegde said...

Aniketana and Shantala,
Thank you again :)

ವಿ.ರಾ.ಹೆ. said...

seemakka,

;-) ;-)

Seema S. Hegde said...

Vikasa,
:-) :-) :-)

ತೇಜಸ್ವಿನಿ ಹೆಗಡೆ said...

ಸೀಮಾ,
ತಮ್ಮ ಸಂಭಾಷಣೆಗಳನ್ನು ಓದಿ ಸಂತೋಷ ಆತು. ನಿನ್ನೆಯಷ್ಟೆಯಾ ಶಾಂತಲಾನ ಹತ್ರ gmail ನಲ್ಲಿ ಮಾತಡ್ದೆ. ತುಂಬಾ ಖುಶಿ ಆತು. ಈಗ ಅವಳೂ ನನ್ನ ಆತ್ಮೀಯ ಸ್ನೇಹಿತೆಯರಲ್ಲೊಬ್ಬಳು. ಕೋಟಿಕೊಪ್ಪದಲ್ಲೂ ಗ್ಯಾಂಗ್ ಇದ್ದು. ಬೇಕಿದ್ರೆ ಈಗ್ಲೇ Book ಮಾಡ್ಕಳಿ;-)

Seema S. Hegde said...

ತೇಜಸ್ವಿನಿ,
ಕೋಟಿಕೊಪ್ಪದ gang ಕೂಡ ಬಂದ್ರೆ ಮುಗಿದೇ ಹೋತು ಕಥೆ ನಂದು ಮತ್ತೆ!! :)