February 28, 2008

ಮೂರು ದೋಸೆ … (ಉತ್ತರ ಕನ್ನಡದ ಗಾದೆ – 176)

ಮೂರು ದೋಸೆ ಕೊಡುತ್ತೇನೆ ಹಾಡು ದಾಸಯ್ಯ, ಆರು ದೋಸೆ ಕೊಡುತ್ತೇನೆ ನಿಲ್ಲಿಸು ದಾಸಯ್ಯ.

ಮನೆ ಬಾಗಿಲಿಗೆ ದಾಸಯ್ಯ ಬಂದಾಗ ಅವನಿಗೆ ಮೂರು ದೋಸೆಯ ಆಮಿಷ ತೋರಿಸಿ ಹಾಡಲು ಹೇಳಿದರೆ ನಂತರ ಅವನ ಹಾಡನ್ನು ಕೇಳಲು ಸಾಧ್ಯವಿಲ್ಲದೇ ಆರು ದೋಸೆ ಕೊಟ್ಟು ನಿಲ್ಲಿಸು ಎಂದು ಹೇಳುವ ಪ್ರಸಂಗ ಬರಬಹುದು! ಅಂತೆಯೇ ಯಾರ ಬಳಿಯಾದರೂ ಒಂದು ಸಣ್ಣ ಕೆಲಸ ಮಾಡಿಸಿಕೊಳ್ಳಲು ಏನಾದರೂ ಆಮಿಷ ತೋರಿಸಿ ನಂತರ ಅವರಿಂದ ತಪ್ಪಿಸಿಕೊಳ್ಳಲು ಇನ್ನೂ ಹೆಚ್ಚಿನ ಬೆಲೆ ತೆರಬೇಕಾದಾಗ ಈ ಗಾದೆಯನ್ನು ನೆನಪಿಸಿಕೊಳ್ಳಿ.

3 comments:

sunaath said...

ಈ ಗಾದೆಯ ಪರ್ಯಾಯ ಹೇಳಿಕೆಯೊಂದು ಧಾರವಾಡ ಜಿಲ್ಲೆಯಲ್ಲಿ ಬಳಕೆಯಲ್ಲಿದ್ದು, ಅದು ಹೀಗಿದೆ:
’ಒಂದು ದುಡ್ಡು ಕೊಟ್ಟು ಹಾಡು ದಾಸಯ್ಯ, ಎರಡು ದುಡ್ಡು ಕೊಟ್ಟು ನಿಲ್ಸು ದಾಸಯ್ಯ".

Seema S. Hegde said...

ಸುನಾಥ್,
ಈ ಗಾದೆ ಗೊತ್ತಿರಲಿಲ್ಲ. Thanks.
ಆದರೆ 'ಒಂದು ದುಡ್ಡು ಕೊಡುತ್ತೇನೆ ಹಾಡು ದಾಸಯ್ಯ, ಎರಡು ದುಡ್ಡು ಕೊಡುತ್ತೇನೆ ನಿಲ್ಲಿಸು ದಾಸಯ್ಯ' ಎಂದು ಇರಬಹುದೇ?

sunaath said...

ನೀವು ಹೇಳಿದ್ದು precise ಆಗಿದೆ. ನನ್ನ ಹೇಳಿಕೆ ಇಷ್ಟು ಸರಿಯಾಗಿರಲಿಲ್ಲ.