February 25, 2008

ಹಣ ಇದ್ದರೂ … (ಉತ್ತರ ಕನ್ನಡದ ಗಾದೆ – 173)

ಹಣ ಇದ್ದರೂ ಋಣ ಇದ್ದಷ್ಟೇ ತಿನ್ನುತ್ತಾರೆ.

ಶ್ರೀಮಂತನಾದ ಮಾತ್ರಕ್ಕೆ ಜಾಸ್ತಿ ದಿನ ಬದುಕುತ್ತಾನೆ ಎಂಬುದು ಸುಳ್ಳು. ಅವನ ಬಳಿ ಎಷ್ಟು ಹಣವಿದ್ದರೂ ಋಣವಿದ್ದಷ್ಟೇ ಅನುಭವಿಸುತ್ತಾನೆ. ಯಾರಾದರೂ ಕೆಟ್ಟ ದಾರಿಯಿಂದ ಹಣ ಸಂಪಾದನೆ ಮಾಡಿ ಶ್ರೀಮಂತರಾಗಿ ಏನೋ ಕಾರಣದಿಂದ ಬೇಗ ಸತ್ತು ಹೋದರೆ ಅಥವಾ ಜೈಲು ಸೇರಿದರೆ ಈ ಮಾತು ಕೇಳಿ ಬರುತ್ತದೆ.

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕಾ...
ಹಣವಿದ್ದಾಗಿಯೂ ಅದನ್ನು ಅನುಭವಿಸುವ ಅದೃಷ್ಟವಿಲ್ಲವಾದಾಗ ಹೇಳುವ ಈ ಗಾದೆ ಚೆನ್ನಾಗಿದೆ ಅಲ್ವಾ?
ಹಣ ಅಂತ ಅಲ್ಲ, ಯಾವುದೇ ವಸ್ತುವಾಗ್ಲಿ ಲಭ್ಯವಿದ್ದರೂ ಅದನ್ನು ಬಳಸಿಕೊಳ್ಳಲಾಗದ ಅಸಹಯಾಕತೆಯಲ್ಲೂ ಈ ಗಾದೆಯನ್ನು ಬಳಬಹುದೇನೋ ಅನಿಸುತ್ತೆ ಅಲ್ವ?
ಉದಾ: ಮನೆಯಲ್ಲಿ ಸಿಹಿ ತಿಂಡಿ ಇದೆ, ಆದರೆ ವ್ಯಕ್ತಿ diabetic. ಇಂಥಹ ಸಂದರ್ಭಗಳಲ್ಲಿ ಬಲಸಬಹುದಾ ಈ ಗಾದೆಯನ್ನ?
(ನಂಗೂ ಗೊತ್ತಿಲ್ಯೇ..ಅದ್ಕೆ ಕೇಳ್ದಿ. :)

Seema S. Hegde said...

ಶಾಂತಲಾ,
ನೀನು ಹೇಳಿದ್ದು ಸರಿ. ಅದೆಲ್ಲಾ ಸಂದರ್ಭದಲ್ಲೂ ಬಳಸಲೆ ಬರ್ತು ಈ ಗಾದೆನ. ಆದ್ರೆ ನೀನು ಹೇಳಿದ ಸಂದರ್ಭಕ್ಕೆ ಬಳಸಲೆ ಬಪ್ಪ ಇನ್ನೊಂದು ಗಾದೆ ಮೊದಲೇ ಹಾಕಿದ್ದಿ ನೋಡು.
'ಖರ್ಜೂರದ ಹಣ್ಣು ಆದಾಗ ಕಾಗೆಯ ಬಾಯಿಯಲ್ಲಿ ಹುಣ್ಣು' ಹೇಳಿ.
'ಹಣ ಇದ್ದರೂ.....' ಗಾದೆ ಸ್ವಲ್ಪ strong ಮತ್ತೆ intense situation ನಲ್ಲಿ ಹೇಳದು ಆದ್ರೆ 'ಖರ್ಜೂರದ.....' ಸ್ವಲ್ಪ lighter situation ನಲ್ಲಿ ಬಳಸದು ಅಷ್ಟೆ ವ್ಯತ್ಯಾಸ.