ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ; ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
ಒಬ್ಬನಿಗೆ ಮದುವೆಯಾಗಬೇಕೆಂಬ ಹುಚ್ಚು. ಆದರೆ ಅವನು ಹುಚ್ಚ ಎಂದು ಯಾರೂ ಹೆಣ್ಣು ಕೊಡುವವರಿಲ್ಲ. ಆದರೆ ಮದುವೆಯಾದ ಹೊರತೂ ಅವನಿಗೆ ಹುಚ್ಚು ಬಿಡುವುದಿಲ್ಲ. ಯಾವುದಾದರೂ ಎರಡು ಕೆಲಸಗಳು interdependnet ಇದ್ದು ಒಂದು ಕೆಲಸ ಆದ ಹೊರತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭದಲ್ಲಿ ಬಳಸಿ.
6 comments:
ಆಧುನಿಕ ವಾತಾವರಣದಲ್ಲಿ, ನಮ್ಮ ಗಾದೆಗಳನ್ನು ನಾವು ಮರೆತೇ ಬಿಡುತ್ತೇವೇನೊ ಅನ್ನೊ ಹೆದರಿಕೆ ಆಗುತ್ತಾ ಇತ್ತು. ಆದರೆ ನೀವು ಆ ಸುಂದರ ಗಾದೆಗಳನ್ನು ತೋರಿಸಿ ಕೊಡುತ್ತಿದ್ದೀರಿ. ಧನ್ಯವಾದಗಳು.
ಸುನಾಥ್,
ಧನ್ಯವಾದಗಳು. ಬರುತ್ತಿರಿ :)
ಸೀಮಕ್ಕಾ,
ಗಾದೆ ಸಂಗ್ರಹ ಛೊಲೋ ಇದ್ದು...
ಮೊನ್ನೆ ಎಂತದೋ ಓದಕಾದ್ರೆ ಈ ಕತೆ ಕಂಡ್ತು... ಇದ್ರಲ್ಲಿ ಇದ್ದ ಎಷ್ಟೆಲ್ಲಾ ಗಾದೆ ನಮ್ ಬದೀಗೆ ಬಳಸದು ಅಲ್ಲಾ, ಆದ್ರೂ ನಿಂಗೆ ತೋರ್ಸನ ಅನ್ಸ್ತು... ಟೈಮ್ ಆದಾಗ ಓದು.
http://www.gelathi.com/archive_files/Page430.htm
ನಲ್ಮೆಯಿಂದ,
ಪೂರ್ಣಿಮಾ
ಹೇ.. ಪೂರ್ಣಿಮಾ,
Thanks. ಲಿಂಕ್ ಚೊಲೋ ಇದ್ದು. ಬರ್ತಾ ಇರು .
Post a Comment