ಹುಚ್ಚು ಮುಂಡೆಯ ಮದುವೆಯಲ್ಲಿ ಹೆಚ್ಚು ಉಂಡವನೇ ಜಾಣ.
ಇದನ್ನು 'ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ' ಎಂದೂ ಕೂಡ ಹೇಳುತ್ತಾರೆ. ಹೇಗಿದ್ದರೂ ಹೇಳುವವರು, ಕೇಳುವವರು ಇಲ್ಲದ ಮದುವೆ. ಅಲ್ಲಿ ಎಲ್ಲರೂ ತಮ್ಮ ತಮ್ಮ ಲಾಭವನ್ನು ನೋಡಿಕೊಳ್ಳುವವರೇ. ಸಿಕ್ಕ ಅವಕಾಶವನ್ನು ಕೈತಪ್ಪಿ ಹೋಗದಂತೆ ನೋಡಿಕೊಂಡು ಸಿಕ್ಕಷ್ಟು ದೋಚಿಕೊಳ್ಳುವವರ ಬಗೆಗಿನ ಮಾತು ಇದು. ಇದರ ಬದಲು ನೀವು ಉಪಯೋಗಿಸಬಹುದಾದಂಥವು- ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು ಮತ್ತು ಬಂದಷ್ಟೇ ಬಂತು ಬರಡೆಮ್ಮೆಯ ಹಾಲು.
8 comments:
ಇದು ಗುಂಪಿಗೆ ಸೇರುತ್ತಾ ನೋಡಿ.
ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
ಸೀಮಾ,
ಉತ್ತರಕನ್ನಡದಲ್ಲಿ ಇನ್ನೊಂದು ಗಾದೆ ರಾಶಿನೇ ಬಳಕೆಲಿ ಇದ್ದು. "ಉದ್ಯೋಗಿಲ್ಲದ ಆಚಾರಿ ಮಗನ ಕುಂಡೆ ಕೆತ್ನಡ ಹೇಳಿ" ಮೊದ್ಲು ಹಾಕಿದ್ಯ ಈ ಗಾದೆನ?
ಮನಸ್ವಿನಿ,
ನಾನು ಅದನ್ನು ಹೇಳಿದ್ದೇನೆ ನೋಡಿ, 'ಓಡಿ ಹೋಗುತ್ತಿರುವವನನ್ನು ಕಿತ್ತು ಕೊಂಡಷ್ಟೇ ಬಂತು.' ಅದೇ ಅರ್ಥ ಮತ್ತು ಒಂದೇ ತರ ಇದೆ ಅಲ್ವಾ?
ತೇಜಸ್ವಿನಿ,
ಆ ಗಾದೆಯನ್ನು ಮೊದಲು ಹಾಕಿದ್ದಿ; ಗಾದೆ 113 ಮತ್ತು 114ನೋಡು.
"ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ" ಅಂತ ಇನ್ನೊಂದು ಗಾದೆ ಇದ್ದು...
ಇನ್ನೂ ಒಂದು ಗಾದೆ ನೆನಪಾತು.. "ಬರಡೆಮ್ಮೆ ಹಾಲು ಬಂದಷ್ಟೇ ಬಂತು" ಹೇಳಿ...
ಹರೀಶ,
ಬರಡೆಮ್ಮೆಯ ಹಾಲು... already ಹಾಕಿದಿದ್ದಿ ನೋಡಿದ್ದಿಲ್ಯ? ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಬೇರೆ ಸಂದರ್ಭದಲ್ಲಿ ಬಳಸುವಂತಹ ಗಾದೆ. ಇಲ್ಲಿ ಸರಿ ಹೋಗ್ತಿಲ್ಲೆ ಅನಿಸ್ತು.
ನೋಡಿಕ್ಕು.. ಆದ್ರೆ ಈಗ ಮರ್ತ್ ಹೋಯ್ದು...
Post a Comment