February 14, 2008

ಆಳು ನೋಡಿದರೆ … (ಉತ್ತರ ಕನ್ನಡದ ಗಾದೆ – 163, 164 ಮತ್ತು 165)

ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಾಯಿ ಬಡಿದುಕೊಳ್ಳುವ ಹಾಗಿದೆ.

ಮನೆಯಲ್ಲಿ ಊಟಕ್ಕೆ ಗತಿಯಿಲ್ಲದಿದ್ದರೂ ಕೂಡ ಮನೆಯ ಆಳಿಗೂ ಅಲಂಕಾರ ಮಾಡಿ ಇಟ್ಟಿದ್ದಾರೆ. ಹೊರಗಡೆಯಿಂದ ಆಳೂ ಕೂಡ ಚೆನ್ನಾಗಿಯೇ ಕಾಣುತ್ತಾನೆ. ಆದರೆ ಒಳಗಡೆಯ ಕಥೆಯೇ ಬೇರೆ. ಅಗತ್ಯ ಇದ್ದದ್ದನ್ನು ಬಿಟ್ಟು ಅನಗತ್ಯವಾದುದಕ್ಕೆ ಜಾಸ್ತಿ ಖರ್ಚು ಮಾಡಿಕೊಳ್ಳುವ ಜನರ ಬಗೆಗಿನ ಮಾತು ಇದು. ಅಥವಾ ಹೊರಗಡೆಯಿಂದ ಸ್ಥಿಥಿವಂತರಂತೆ ಕಂಡುಬಂದು ಒಳಗಡೆ ಕಷ್ಟದಲ್ಲಿರುವವರ ಬಗ್ಗೆಯೂ ಹೇಳಬಹುದು. ಇದೆ ರೀತಿಯ ಇನ್ನೊಂದು ಗಾದೆ- ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು.
ಇನ್ನೂ ಸ್ವಲ್ಪ ಬೇರೆಯ ರೀತಿಯಲ್ಲಿ ಬಳಸಬಹುದಾದರೆ, ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು.

7 comments:

ತೇಜಸ್ವಿನಿ ಹೆಗಡೆ said...

ಇದಕ್ಕೆ ಇನ್ನೊಂದು ಗದೆನೂ ಸೇರಿಸ ಬಹುದೇನೋ.. "ಸಾಲ ಮಾಡಿಯಾದರೂ ತುಪ್ಪ ತಿನ್ನು"..ಇದನ್ಫ಼್ನು ನಾಣ್ನುಡಿಯೆಂದೂ ಹೇಳಬಹುದು.

ರಾಧಾಕೃಷ್ಣ ಆನೆಗುಂಡಿ. said...

ಉತ್ತರ ಕನ್ನಡದಲ್ಲಿ ಮಾತ್ರವಲ್ಲ, ನಮ್ಮೂರಿನಲ್ಲೂ ಅಂದರೆ ದಕ್ಷಿಣ ಕನ್ನಡದಲ್ಲೂ ಈ ಗಾದೆ ಪ್ರಚಲಿತ

ರಾಧಾಕೃಷ್ಣ ಆನೆಗುಂಡಿ

Seema S. Hegde said...

@ ತೇಜಸ್ವಿನಿ,
ಈ ಗಾದೆ ನೆನಪಿತ್ತು...ಆದರೆ ಪ್ರತ್ಯೇಕವಾಗಿ ಹಾಕಿದ್ರೆ ಆತು ಹೇಳಿ ಬಿಟ್ಟೆ. ಈಗ ಅದರಲ್ಲೇ ಸೇರಿಸಿಬಿಡನ ಅನಿಸ್ತಾ ಇದ್ದು. ಹೇಳಿದ್ದು ಒಳ್ಳೆಯದು ಆತು. Thanks :)

@ ರಾಧಾಕೃಷ್ಣ ಅವರೆ,
ಧನ್ಯವಾದ. ನಿಮ್ಮ ಕಡೆಗೂ ಇದನ್ನ ಹೇಳ್ತಾರೆ ಅಂತ ಗೊತ್ತಿರಲಿಲ್ಲ. ನೀವು ತಿಳಿಸಿದ್ದು ಉಪಕಾರವಾಯಿತು.

ಶಾಂತಲಾ ಭಂಡಿ (ಸನ್ನಿಧಿ) said...

ಸೀಮಕ್ಕ...
"ಸಾಲ ಮಾಡಿಯಾದ್ರೂ ತುಪ್ಪ ತಿನ್ನು" ಅನ್ನುವ ಗಾದೆಯನ್ನು ಬಹುಶಃ ಈ ರೀತಿ ಬಳಸಲಿಕ್ಕಿಲ್ಲ ಅಂತ ನನ್ನ ಭಾವನೆ. ಔಷಧ ವಸ್ತುವನ್ನು, ಪೌಷ್ಟಿಕ ಆಹಾರವನ್ನು ಹಾಗೂ ತುಂಬ ಅವಶ್ಯಕತೆ ಇರುವ ವಸ್ತುವನ್ನು ಸಾಲಮಾಡಿಯಾದ್ರೂ ಸರಿ, ಬಳಸಬೇಕು ಅನ್ನೋ ಅರ್ಥದಲ್ಲಿರಬಹುದು ಅನ್ನುವುದು ನನ್ನ ಅನಿಸಿಕೆ.

ತೇಜಸ್ವಿನಿ ಹೆಗಡೆ said...

ಶಾಂತಲ,

ತುಪ್ಪ ನಮ್ಮ್ ಕಡೆ ಔಷಧವಾಗಿ ಬಳಸದು ಕಮ್ಮಿ.. ಬಾಯಿ ಚಪಲಕ್ಕೆ, ರುಚಿಗಾಗಿ ಬಳಸದೇ ಜಾಸ್ತಿ ಹೇಳಿ ನನ್ನ ಅನಿಸಿಕೆ. ಪ್ರತಿಷ್ಟೆಯ ಪ್ರೆಶ್ನೆನೂ ಹೌದು. ನೀ ಎಂತ ಹೇಳ್ತೆ ಸೀಮಾ?

Jagali bhaagavata said...

ನಂಗೆ ತೇಜಸ್ವಿನಿಯವ್ರು ಹೇಳದು ಸರಿ ಕಾಣ್ಸ್ತು. ಶಾಂತಲಕ್ಕಂಗೆ ಸೊನ್ನೆ ಅಂಕ.

Seema S. Hegde said...

ಶಾಂತಲಾ, ತೇಜಸ್ವಿನಿ ಮತ್ತು ಜಗಲಿ ಭಾಗವತ,
ಧನ್ಯವಾದಗಳು.
ಸಾಲ ಮಾಡಿಯಾದರೂ ತುಪ್ಪ ತಿನ್ನು... ಸಾಲ ಮಾಡಿದರೂ ಪರವಾಗಿಲ್ಲ ಆದರೆ ಸುಖವನ್ನು ಅನುಭವಿಸು ಎನ್ನುವ ಅರ್ಥದಲ್ಲಿ ಇದನ್ನು ಬಳಸಲಾಗುತ್ತದೆ.