February 1, 2008

ಅಜ್ಜಿ ಸುಟ್ಟ ಹಾಗೂ … (ಉತ್ತರ ಕನ್ನಡದ ಗಾದೆ – 147 ಮತ್ತು 148)

ಅಜ್ಜಿ ಸುಟ್ಟ ಹಾಗೂ ಆಯಿತು, ಚಳಿ ಕಾಯಿಸಿದ ಹಾಗೂ ಆಯಿತು.

ಅಜ್ಜಿ ಸತ್ತು ಹೋಗಿದ್ದಾಳೆ. ಹೇಗಿದ್ದರೂ ಅವಳನ್ನು ಸುಡಲು ಬೆಂಕಿ ಹಾಕಿಯೇ ಹಾಕುತ್ತಾರೆ. ಅದೇ ಬೆಂಕಿಯಲ್ಲೇ ಚಳಿಯನ್ನು ಕಾಯಿಸಿಕೊಳ್ಳಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಜಿಪುಣರನ್ನು ಕುರಿತು ಹೇಳುವ ಮಾತಲ್ಲ. ಆದರೆ, ಒಂದರ ಜೊತೆಯಲ್ಲೇ ಇನ್ನೊಂದು ಕೆಲಸದ ಸಾಧ್ಯತೆಯನ್ನು ಅರಿತು ಎರಡೂ ಕೆಲಸವನ್ನು ಒಟ್ಟಿಗೆ ಮಾಡಿ ಮುಗಿಸಿಕೊಳ್ಳುವವರನ್ನು ಕುರಿತು ಹೇಳುವ ಮಾತು. ಇದನ್ನೇ ಸ್ವಲ್ಪ ಬದಲಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವವನು ಎಂದು ಕೂಡಾ ಹೇಳುತ್ತಾರೆ.

4 comments:

ತೇಜಸ್ವಿನಿ ಹೆಗಡೆ said...

ಸೀಮಾ ಅವ್ರೆ.. ನನೂ ಉತ್ತರ ಕನ್ನಡದವಳಾಗಿರುವ ಕಾರಣ ಈ ಗಾದೆಯನ್ನು ಬಹಳ ಸಲ ಕೇಳಿರುವೆ. ಆದರೆ ಅದೇಕೋ ಏನೋ ಈ ಗಾದೆ ಮನಸ್ಸಿಗೆ ಪಿಚ್ಚೆನಿಸುವಂತಿದೆ.. ಮನುಷ್ಯವ ಕ್ರೂರತ್ವವೋ ಇಲ್ಲಾ ಭಾವಹೀನತೆಯೋ..ಏನೋ ಒಂದು ಈ ಗಾದೆಯನ್ನು ಹುಟ್ಟುಹಾಕಿರಬಹುದೆನಿಸುತ್ತದೆ. ಶವದ ಬೆಂಕಿಯ ಮುಂದೆ ಚಳಿಕಾಯಿಸುವುದು !!!!

Seema S. Hegde said...

ತೇಜಸ್ವಿನಿ,
ಬ್ಲಾಗ್ ಗೆ ಸ್ವಾಗತ.
ನೀವು ಹೇಳಿದ್ದು ನಿಜ. ಈ ಗಾದೆಯನ್ನು ಕೇಳಲು ಖುಷಿ ಆಗುವುದಿಲ್ಲ. ಆದರೆ ಪ್ರಚಲಿತದಲ್ಲಿದೆ ಎಂದು ಹಾಕಿದ್ದೇನೆ ಅಷ್ಟೇ.

Parisarapremi said...

ಅನೇಕ ಕೇಳರಿಯದ ಗಾದೆಗಳನ್ನು ಓದುತ್ತಿದ್ದೇನೆ. ವಿಸ್ತರಿಸಿದ್ದಕ್ಕೆ ಧನ್ಯವಾದಗಳು. 'ಉತ್ತರ ಕನ್ನಡದ ಗಾದೆಗಳ' ಸಮುದ್ರದ ತೀರಕ್ಕೆ ತಪ್ಪದೇ ಬರುತ್ತಲಿರುತ್ತೇನೆ.

ಅಜ್ಜಿಯ ಸುಡುವ ಗಾದೆಯನ್ನು ಬಳಸಲು ಮನಸ್ಸಿಗೆ ನಿಜ್ಜಕ್ಕೂ ಹಿಂಸೆಯಾಗುತ್ತೆ..

Seema S. Hegde said...

ಪರಿಸರ ಪ್ರೇಮಿ ಅವರೆ,
ಧನ್ಯವಾದಗಳು. ಮತ್ತೆ ಮತ್ತೆ ಬರುತ್ತಿರಿ. ಸದಾ ಸ್ವಾಗತ.