ಇಂದು ಅವರ ಮೂವತ್ತೊಂದನೆಯ wedding anniversary.
ಮೊದಲೆಂದೂ ನಾನು ಅವರ ಮದುವೆಯಾದ ದಿನದ ಬಗ್ಗೆ ತಲೆ ಕೆಡಿಸಿಕೊಂಡವಳೂ ಅಲ್ಲ, ಫೋನ್ ಮಾಡಿದವಳೂ ಅಲ್ಲ. ಆದರೆ ಈಗ ಎರಡು ವರ್ಷಗಳಿಂದ ಮಾಡುತ್ತಿದ್ದೇನೆ. ಏಕೆಂದರೆ ನನಗೆ ಮದುವೆ ಎಂದರೆ ಏನು ಎಂಬುದು ಅರ್ಥವಾಗಿದೆ ಎಂದು ಹೇಳಲಾಗದಿದ್ದರೂ ಕೂಡ ಅರ್ಥವಾಗತೊಡಗಿದೆ ಎಂದು ಹೇಳಬಲ್ಲೆ. ಅಪ್ಪ ಅಮ್ಮನ ಮದುವೆ ನನ್ನ ಕಲ್ಪನೆಗೂ ಮೀರಿದ್ದು. ವೀಡಿಯೋ ಇರದಿದ್ದ ಕಾಲ, ಆದರೆ ಒಂದು ಫೋಟೋ ಕೂಡ ಇಲ್ಲ. ಮದುವೆ ಕರೆಯೋಲೆಯನ್ನೂ ಇಟ್ಟುಕೊಳ್ಳುವ ಗೋಜಿಗೆ ಅವರು ಹೋಗಲಿಲ್ಲ. ಆದರೆ ಅವರ ಮದುವೆಯ ಕರೆಯೋಲೆಯನ್ನು ನಾನು, ರಘು ಇಬ್ಬರೂ ನೋಡಿದ್ದೇವೆ. ಏಕೆಂದರೆ ಅಜ್ಜ ಇಟ್ಟುಕೊಂಡಿದ್ದರು!
ಮದುವೆ, ಒಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತಹ ಅಮೂಲ್ಯ ಘಳಿಗೆ. ಕೆಲವರ ಜೀವನದಲ್ಲಿ ಅದು ಎರಡು ಮೂರು ಬಾರಿಯೂ ಬರುವುದುಂಟು. ಆದರೆ ಆಗ ಅದು ಅರ್ಥ ಕಳೆದುಕೊಂಡಿರುತ್ತದೆ. ಎಲ್ಲೋ ಹುಟ್ಟಿ ಬೆಳೆದ ಬೇರೆ ಬೇರೆ ಮನಸ್ಥಿತಿಯ ಇಬ್ಬರನ್ನು ತಂದು ಆ ದಿನ ಒಟ್ಟಿಗೆ ನಿಲ್ಲಿಸಿ, ಮುಂದೆ ಜೀವನ ಪರ್ಯಂತ ಒಟ್ಟಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿಸಿರುತ್ತಾರೆ. ಅದಕ್ಕೆ ನೂರಾರು ಜನರ ಸಾಕ್ಷಿ ಬೇರೆ! ನನಗಂತೂ ಇದು ತೀರ ವಿಚಿತ್ರ ಎನಿಸಿತ್ತು. ಹಾಗೆಂದು ನನಗೆ ಇದಕ್ಕೆ ವಿರುದ್ಧವಾದ ಪಾಶಿಮಾತ್ಯ ಪದ್ಧತಿಯಲ್ಲಿ ಎಳ್ಳಷ್ಟೂ ನಂಬಿಕೆಯಿಲ್ಲ. ನನ್ನ ಮದುವೆಗೆ ಕೆಲವು ದಿನಗಳಿದ್ದಾಗ ಜ್ಯೋತಿ ಅಕ್ಕನನ್ನು ಕೇಳಿದ್ದೆ 'ಒಬ್ಬ ಗೊತ್ತಿಲ್ಲದ ಮನುಷ್ಯನ ಜೊತೆ ಹೇಗೆ ಬದುಕುವುದು, ಅದೂ ನನ್ನ ಮನೆ ಬಿಟ್ಟು ಹೋಗಿ?' ಎಂದು. ಅದಕ್ಕವಳು 'ನಾವೆಲ್ಲಾ ಬದುಕುತ್ತಿಲ್ಲವಾ ಈಗ? ನಿನಗೇ ಗೊತ್ತಾಗುತ್ತದೆ ನೋಡುತ್ತಿರು. ನೀನು ನಿನ್ನ ಅಮ್ಮನ ಬಳಿ ಇದ್ದಿದ್ದಕ್ಕಿಂತ close ಆಗಿ ಇರುತ್ತೀಯ ನಿನ್ನ ಗಂಡನ ಜೊತೆ.' ಸಾಧ್ಯವೇ ಇಲ್ಲ ಎಂಬ ತೀರ್ಪನ್ನೂ ಕೊಟ್ಟುಬಿಟ್ಟಿದ್ದೆ ಅವಳಿಗೆ.
ಆದರೆ ಆ ಮದುವೆಯ ಬಂಧನವೇ ವಿಚಿತ್ರವಾದುದು. ಅದು ನಿಧಾನವಾಗಿ ನನ್ನನ್ನು ತನ್ನೊಳಗೆ ಸೆಳೆದುಕೊಂಡು ಬಿಟ್ಟಿತು, ನನಗರಿವಿಲ್ಲದಂತೆಯೇ. ಅಮ್ಮನ ಬಳಿ ಹೇಳಲು ಹಿಂಜರಿಯುತ್ತಿದ್ದ ವಿಚಾರವನ್ನೂ ನಾನು ಇಂದು ರಾಜೀವನ ಬಳಿ ಅರೆಕ್ಷಣದಲ್ಲಿ ಹೇಳಿ ಮುಗಿಸಿರುತ್ತೇನೆ. ಜ್ಯೋತಿ ಅಕ್ಕ ಹೇಳಿದ್ದು ಎಷ್ಟು ನಿಜ! ರಾಜೀವ್ ಕೂಡಾ ಅಷ್ಟೇ, ಯಾವ ವಿಷಯವನ್ನು ಬೇಕಾದರೂ ನನ್ನ ಜೊತೆ ಹಂಚಿಕೊಳ್ಳಬಲ್ಲರು. ಅವರು ಒಬ್ಬ opposite sex ನ ಮನುಷ್ಯ ಎಂಬುದೂ ಕೂಡಾ ಮರೆತು ಹೋಗಿರುತ್ತದೆ.
ಒಂದು ಸಣ್ಣ ಕಾರಣವೇ ಅಲ್ಲದ ಕಾರಣಕ್ಕೆ ಜಗಳ, ಪ್ರೀತಿಸಲಂತೂ ಕಾರಣವೇ ಬೇಡ, ಮಾತಿಗೆ ಮಾತು ಬೆಳೆಸುವ ಜಗಳ, ಮಾತನಾಡದೇ ಇರುವ ಶೀತಲ ಸಮರ, ನಾನೇಕೆ sorry ಹೇಳಲಿ ಎಂಬ ego-ಹಟ, ಹೋಗಲಿ ಬಿಡು ಜಗಳವೇಕೆ ಎಂದು ಯಾರೋ ಒಬ್ಬರು ಬಿಟ್ಟುಕೊಡುವ ego, ಒಬ್ಬರಿಗೊಬ್ಬರ ಪ್ರೋತ್ಸಾಹ,-ಉತ್ತೇಜನ, ‘ನಾನಿದ್ದೇನೆ’ ಎಂದು ಇನ್ನೊಬ್ಬರು ಕೊಡುವ ಸಾಂತ್ವನ-ಧೈರ್ಯ, ಒಬ್ಬರ success ನಲ್ಲಿ ಇನ್ನೊಬ್ಬರು ಪಡುವ ಸಂತಸ, ನಾಲ್ಕು ಕಣ್ಣುಗಳು ಒಟ್ಟಾಗಿ ಕಾಣುವ ಕನಸುಗಳು, ಭವಿಷ್ಯದ ಬಗೆಗಿನ ಚಿಂತೆ, ಇನ್ನೊಬ್ಬರ ಬಗೆಗಿನ ಕಾಳಜಿ, ಪ್ರೀತಿ, ವಾತ್ಸಲ್ಯ,... ಹೋಗ್ಲಿ ಬಿಡಿ... ಇನ್ನೂ ಏನೇನೋ ಭಾವನೆಗಳು ಸೇರಿಕೊಂಡು ಈ ಸಂಬಂಧವನ್ನು ನಮಗೇ ಗೊತ್ತಾಗದಂತೆ ಭದ್ರವಾಗಿಸಿಬಿಡುತ್ತವೆ.
ನನಗೆ ಈಗೀಗ ಅರಿವಾಗುತ್ತಿರುವುದು ಅಪ್ಪ, ಅಮ್ಮನಿಗೆ ಮೂವತ್ತು ವರ್ಷಗಳ ಹಿಂದೆಯೇ ಅರಿವಾಗಿರುತ್ತದೆ. ಅದೇ ಅರಿವಿನ ಸೇತುವೆಯ ಮೇಲೆಯೇ ಅವರಿಬ್ಬರೂ ಇಷ್ಟೆಲ್ಲಾ ವರ್ಷಗಳ ಕಾಲ ನಡೆದು ಬರುತ್ತಿದ್ದಾರೆ; ಮುಂದೆ ನಾವೂ ನಡೆಯಲಿ ಎಂದು ಆಶಿಸುತ್ತಾರೆ. ಅಪ್ಪ, ಅಮ್ಮರಿಗೆ ಮದುವೆಯಾದ ದಿನದ ಹಾರ್ದಿಕ ಶುಭಾಶಯಗಳು :)
12 comments:
ನಿಮ್ಮ ಗಾದೆಗಳ ಭಂಡಾರ ಅದ್ಭುತವಾಗಿದೆ..!
ನಿಮ್ಮ ತಂದೆ ತಾಯಿಗೆ ನನ್ನ ಕಡೆಯಿಂದ ಮದುವೆಯ ದಿನದ ಶುಭಾಶಯಗಳು.. :)
ಸೀಮಕ್ಕ, ಚೆನ್ನಾಗಿ ಬರೆದಿದ್ದಿಯ. ಸರಳವಾಗಿ ಮದುವೆ ಬಗ್ಗೆ, ವೈವಾಹಿಕ ಜೀವನದ ಬಗ್ಗೆ ವಿವರಿಸಿದ್ದಿಯ. ನಿಜವಾಗ್ಲೂ ಉತ್ತೇಜಕಾರಿಯಾಗಿದೆ. ಸಣ್ಣವ್ರಿಗೆ ತಿಳುವಳಿಕೆಯೂ ಇದೆ. ಕೊನೆಯಿಂದ ಎರಡನೇ ಪ್ಯಾರಾ ಬಹಳ ಇಷ್ಟ ಆಯಿತು.
ನಮ್ಮ ಕಾಲ ಇನ್ನೂ ಮುಂದಿದೆ . ನೋಡೋಣ ;)
ನನ್ನ ಕಡೆಯಿಂದಲೂ ಶುಭಾಶಯ ಹೇಳಿಬಿಡು ಅಪ್ಪ ಅಮ್ಮಂಗೆ ;)
ಬರಹ ಚೆನ್ನಾಗಿದೆ, ಅಂತೆಯೆ ನಿಮ್ಮ ತಂದೆ ತಾಯಿಗು ನನ್ನ ಕಡೆಯಿಂದಲೂ ಶುಭಾಶಯಗಳು..:-)
ಸೀಮಕ್ಕ...
ಚೊಲೊ ಬರದ್ದೆ.
ನನ್ನ ಶುಭಾಶಯಗಳನ್ನೂ ಹೇಳು ಪ್ಲೀಸ್ ಅಪ್ಪ-ಅಮ್ಮಂಗೆ.
@ ಅನಂತ, ಅರುಣ್ ಮತ್ತು ಶಾಂತಲಾ,
ಬರಹವನ್ನು ಮೆಚ್ಚಿಕೊಂಡಿದ್ದಕ್ಕೆ ಮತ್ತು ಅಪ್ಪ, ಅಮ್ಮಂಗೆ ಶುಭಾಶಯ ತಿಳಿಸಿದ್ದಕ್ಕೆ ಧನ್ಯವಾದಗಳು.
@ ವಿಕಾಸ,
ನಿಂಗೂ ಕೂಡ ಧನ್ಯವಾದಗಳು.
ಮೂವತ್ತು ವರ್ಷಗಳ ಹಿಂದೆ ಅಪ್ಪ, ಅಮ್ಮ ಅನುಭವಿಸಿದ್ದೂ ಅದನ್ನೇ, ಇಂದು ನಾನು ಅನುಭವಿಸುತ್ತಿರುವುದೂ ಅದನ್ನೇ, ಇನ್ನೊಂದೆರಡು ವರ್ಷಗಳ ನಂತರ ನೀನು ಅನುಭವಿಸುವುದೂ ಅದನ್ನೇ. ಆ ಸಂಬಂಧದ ರೂಪುರೇಷೆ ಬದಲಾಗುವುದಿಲ್ಲ. ಏಕೆಂದರೆ ಭಾರತೀಯ ಮದುವೆಗೆ ಭದ್ರವಾದ ತಳಪಾಯವಿದೆ.
All the best!!
ತುಂಬಾ ಚನಾಗ್ ಬರದ್ದೆ ಅಕ್ಕಾ.. ನಾನು ಊರಲ್ಲಿದ್ದಾಗ ವಿಶ್ ಮಾಡ್ತಿರ್ಲೆ.. ಇನ್ ಫ್ಯಾಕ್ಟ್, ಅವ್ರ ಮದುವೆ ದಿನ ಅದು ನೆನಪೂ ಆಗ್ತಿರ್ಲೆ (ಅವ್ರಿಗೂ!!).. ಆದ್ರೆ ಈಗ ಅಪ್ಪ-ಅಮ್ಮರಿಂದ ದೂರ ಇರೋದ್ರಿಂದ, ಫಾದರ್ಸ್ ಡೇ, ಮದರ್ಸ್ ಡೇ, ಅವ್ರ ವೆಡ್ಡಿಂಗ್ ಎನಿವರ್ಸರಿ ಎಲ್ಲಾದಕ್ಕೂ ಫೋನ್ ಮಾಡಿ ವಿಶ್ ಮಾಡ್ತಿ.. ಆ ಕಡೆಯಿಂದ ಅವರ ಮುಜುಗರದ 'ಥ್ಯಾಂಕ್ಸ್' ಕೇಳುಸ್ತು..
ಪರಿಚಯವೇ ಇಲ್ಲದ ಒಂದು ಗಂಡು - ಒಂದು ಹೆಣ್ಣು ಮದುವೆಯಾದ ಮೇಲೆ ಜೀವದ ಗೆಳೆಯ-ಗೆಳತಿಯರಾಗಿಬಿಡೋದು ಅರೇಂಜ್ಡ್ ಮ್ಯಾರೇಜ್‍ನ ನಿಜವಾದ ವಿಸ್ಮಯ..! ನೀನು ಬರ್ದಿದ್ದು ಇಷ್ಟ ಆತು.. ಆಪ್ತವೆನಿಸ್ತು..
ಒಳ್ಳೆಯ ಲೇಖನ ಸೀಮ:) ಓದಿ ಬಹಳ ಸಂತಸ ಆಯಿತು! ನಿಮ್ಮ ತಂದೆ ತಾಯಿಗೆ ನನ್ನ ಕಡೆಯಿಂದ ಶುಭಾಶಯಗಳನ್ನು ತಿಳಿಸಿಬಿಡು!
@ ಸುಶ್ರುತ,
ನೀನು ಹೇಳಿದ್ದು ನಿಜ. ನಾವು wish ಮಾಡಿರೆ ಅಪ್ಪ, ಅಮ್ಮಂಗೆ ಖುಷಿ ಆಗದೇನೋ ನಿಜ. ಆದ್ರೆ ಅಷ್ಟೆ ಮುಜುಗರನೂ ಪಡ್ತ!! Thanks ಕಣೋ.
@ ಸುರೇಶ,
ಧನ್ಯವಾದಗಳು, ಬರಹವನ್ನು ಮೆಚ್ಚಿದ್ದಕ್ಕೆ; ಅಪ್ಪ, ಅಮ್ಮನಿಗೆ ಶುಭಾಶಯಗಳನ್ನು ಹೇಳಿದ್ದಕ್ಕೆ.
ಬರಹ ಚೆನ್ನಾಗಿದೆ...
ನಾನು ನನ್ನ friend ಗೆ ಊಟ ಮಾಡ್ತಾ ಮದುವೆಯ ಬಗ್ಗೆ ಇದೇ ತರಹ ಎನೋ explain ಮಾಡ್ತಾ ಇದ್ದೆ.
ಈಗ ಈ link ಕಳಿಸ್ತಿನಿ ಓದೋಕೆ...
BTW...ಗಾದೆಗಳನ್ನ ಬ್ಲಾಗಿಸಿ ತು೦ಬಾ help ಮಾಡ್ತಿದೀರಿ ನಮಗೆಲ್ಲಾ.ಕೆಲವು ಗಾದೆಗಳು ಮರೆತೇ ಹೊಗಿತ್ತು ನ೦ಗೆ..ಈಗ ಪುನ: ಬೇರೆಯವರೊ೦ದಿಗೆ ಮಾತಾಡೂವಾಗ ಸಮಯಕ್ಕೆ ಸೂಕ್ತ ಕೆಲವು ಗಾದೆಗಳನ್ನ "ಉದುರಿಸೋಕ್ಕೆ" ಆಗ್ತಾ ಇದೆ
ಸನತ್,
ಧನ್ಯವಾದಗಳು. ನಿಮ್ಮ ಫ್ರೆಂಡ್ ಏನಂದ್ರು ಓದಿ?
ಹೌದು. ಮುಂದಿನ ಜನಾಂಗಕ್ಕೆ ಗಾದೆಗಳು ಗೊತ್ತಿಲ್ಲದಂತೆ ಆಗುವ ಮೊದಲು ನಾವೆಲ್ಲಾ ಆಗಾಗ "ಉದುರಿಸುತ್ತಾ" ಇರೋಣ:-)
Thank u very much seema...nanna manassinallididdane baradri. naanu kooda yaavattu appa ammana birthday or anniversary ge wish madidavale alla. namma birthday ge and madve aada mele anniversary kooda avru mareede pooje maadsi wish maadta.
nangu wish madavu avra 1 anniversarynadru celebrate madavu annista ittu tumbaa dinadinda.nan yochanege innastu spoorti kottiddakke dhanyavaada...
@ Ranjana,
Nimage nanninda spoorthi sikkidare naanu barediddu saarthaka.
Thanks :-)
Post a Comment