ಅಬ್ಬಾ! ಈ ವಿಕಿಪೀಡಿಯಾ, ಗೂಗಲ್ ಗಳ ಕಾಲದಲ್ಲಿ ಸುಖವಿಲ್ಲ.
ಮೊನ್ನೆ ಒಂದು ವಿಷಯ ತಲೆ ತಿನ್ನುತ್ತಿತ್ತು. Specific gravity, biomass estimation ಗಳ ನಡುವೆ ಸಿಕ್ಕಿ ಒದ್ದಾಡುತ್ತಿದ್ದೆ. Specific gravity ಬಗ್ಗೆ ಏನನ್ನೋ ಕೇಳಬೇಕಿತ್ತು. ರಾಜೀವ್ online ಇರುವುದನ್ನು ನೋಡಿ ಪಿಂಗ್ ಮಾಡಿದೆ. Office ನಲ್ಲಿ ಇದ್ದಿದ್ದು ನಿಜ. Busy ಇದ್ದಿರಲೂಬಹುದು. ನಾನು ಒಂದು ಪ್ರಶ್ನೆ ಕೇಳಿದ್ದೇ ತಡ, ಬಂತು ಉತ್ತರ 'ವಿಕಿಪೀಡಿಯಾ ನೋಡೇ'. ಸರಿ ಬಿಡು ಹೋಗ್ಲಿ ಎಂದುಕೊಂಡೆ.
ರಾಜೀವ್ ನ ಫ್ರೆಂಡ್ ರೋಹಿತ್ online ಇರುವುದನ್ನು ನೋಡಿ ಅವನಿಗೆ ಪಿಂಗ್ ಮಾಡಿದೆ. 'ನನಗೊಂದು doubt ಇತ್ತು....' ಅವನು ತಮಾಷೆ ಮಾಡಿದ 'ಏನು ಸಂಶಯ? ಜಪಾನಿನಿಂದ ಭೂಮಿಯನ್ನು ಕೊರೆದರೆ ಭಾರತವನ್ನೋ ಅಥವಾ ಪ್ರಪಂಚದ ಇನ್ಯಾವುದೋ ಮೂಲೆಯನ್ನು ತಲುಪಬಹುದಾ ಎಂಬುದಾ ;)?' ಅದಲ್ಲ ಎಂದು ಹೇಳಿ ನಾನು ನನ್ನ ಸಮಸ್ಯೆಯನ್ನು ಬರೆದೆ...ಒಂದೆರಡು ನಿಮಿಷ ರೋಹಿತ್ ಪತ್ತೆಯೇ ಇಲ್ಲ... ಮನಸ್ಸು ಹೇಳಿತು 'ಮುಗಿಯಿತು ಕಥೆ. ಇನ್ನು ಕನಿಷ್ಠ ಹತ್ತು ಲಿಂಕ್ ಗಳು ಬಂದು ಚಾಟ್ ವಿಂಡೋವಿನ ಬಾಗಿಲು ಬಡಿಯುವುದರಲ್ಲಿ ಸಂಶಯವೇ ಇಲ್ಲ....ಮೊದಲೇ ರೋಹಿತ್ ಗೂಗಲ್ ನಲ್ಲಿ expert'. ಮರು ಘಳಿಗೆಯಲ್ಲೇ 'r u there?' ಎನ್ನುತ್ತ ಒಂದು ಲಿಂಕ್ ಬಂದು ಅಪ್ಪಳಿಸಿತು. ಆದರೆ ಆಶ್ಚರ್ಯವೆನಿಸುವಂತೆ ಆ ದಿನ ಬಂದಿದ್ದು ಒಂದೇ ಒಂದು ಲಿಂಕ್!! ಅದು ಚೆನ್ನಾಗಿತ್ತು ನಿಜ, ಆದರೆ ನನ್ನ ಸಮಸ್ಯೆಗೆ ಪರಿಹಾರವನ್ನು ಕೊಡಲಿಲ್ಲ. ಸರಿ ಬಿಡು ಎಂದೆ.
ನನ್ನ ಹೈಸ್ಕೂಲ್ ಫ್ರೆಂಡ್ ವಿನಯ್ online ಕಾಣಿಸಿದ. ಅವನಿಗೂ ಹೇಳಿಯೇ ಬಿಡೋಣ...ಹೋದರೆ ಒಂದು ಕಲ್ಲು, ಬಿದ್ದರೆ ಮೂರು ಹಣ್ಣು ಎಂದುಕೊಂಡು ಅವನಿಗೆ ನನ್ನ ಸಮಸ್ಯೆಯನ್ನು ಹೇಳಿದೆ. ಅಬ್ಬಾ!!..ಮರುನಿಮಿಷದಲ್ಲಿ ಮೂರು pdf ಫೈಲುಗಳು ಮತ್ತು ಏಳೆಂಟು ಲಿಂಕ್ ಗಳು ಹಾರಿಕೊಂಡು ಬಂದು ದೊಪ್ಪೆಂದು ನನ್ನ inbox ನ ತಲೆಯ ಮೇಲೆ ಬಿದ್ದವು. ನೂರಾರು ಪುಟಗಳಿರುವ ಆ ಫೈಲುಗಳಲ್ಲಿ ನನಗೆ ಬೇಕಾಗಿರುವುದನ್ನು (ಅದು ಇದ್ದೇ ಇರುತ್ತದೆ ಎಂದು ಖಾತ್ರಿ ಇಲ್ಲ) ಹುಡುಕುವುದು ಎಂದರೆ ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ. ಇನ್ನು ಲಿಂಕ್ ಗಳೋ ಒಂದರಲ್ಲಿ ಇನ್ನೊಂದಕ್ಕೆ ಲಿಂಕ್ ಎಂದು ಒಳಗೊಳಗೆ ಹೋಗಿ ಅದರ ಸುಳಿಯಲ್ಲಿ ಸಿಕ್ಕಿಕೊಂಡು ಮುಳುಗಿಯೇ ಹೋಗುತ್ತೇನೆ.
ಅವರು ಕೊಟ್ಟ ಲಿಂಕ್ ಗಳೆಲ್ಲವೂ informative ನಿಜ. ಇನ್ನು ವಿಕಿಪೀಡಿಯಾ, ಗೂಗಲ್ ಗಳ ಬಗ್ಗೆ ಅಂತೂ ಎರಡು ಮಾತಿಲ್ಲ. ಆದರೆ ತಕ್ಷಣವೇ ಪರಿಹಾರ ಸಿಗಬಹುದು ಎಂದುಕೊಂಡು ಕೇಳಿದ ಪ್ರಶ್ನೆಗಳಿಗೆ ಯಾವುದಕ್ಕೂ ತಕ್ಷಣದ ಪರಿಹಾರ ಸಿಗುವುದಿಲ್ಲ. ಗಣಿಯಲ್ಲಿ ಚಿನ್ನ ಹುಡುಕಿದಂತೆ ಹುಡುಕುತ್ತಾ ಹೋಗುತ್ತೇನೆ... ಈ ಮಧ್ಯೆ ಕೊನೆ ಮೊದಲಿಲ್ಲದ ಯಾವುದೋ ಸೈಟ್ ನಲ್ಲಿ ಸಿಕ್ಕಿಕೊಂಡು ಬಿಡುತ್ತೇನೆ. ಏನು ಹುಡುಕುತ್ತಿದ್ದೇನೆ ಎಂಬುದನ್ನೂ ಕೆಲವೊಮ್ಮೆ ಮರೆತು ಇನ್ನೆಲ್ಲೋ ತಲುಪಿರುತ್ತೇನೆ.
ಶ್ರೀನಿವಾಸ ಕುಲಕರ್ಣಿಯವರು ಬರೆದ ಪುಟ್ಟ ಕವನ ನೆನಪಾಗುತ್ತದೆ.
ಮನಸು
ಗೂಗಲ್ ಸರ್ಚ್ ಎಂಜಿನ್ ನಂತೆ !!
ಒಂದು ನೆನಪು ತುಂಬಿ ಗುಂಡಿ ಒತ್ತಿ ಬಿಟ್ಟರೆ,
ಬೇಕಾದ ಬೇಡವಾದ ಹಣ್ಣುಗಳ ಜೊತೆಗೆ,
ಕಸ ಕಡ್ಡಿಯನ್ನು ತಂದು ಒಗೆಯುತ್ತದೆ
ನಮ್ಮ ಕಡೆಗೆ ಸುನಾಮಿ ಅಲೆಯಂತೆ !!
ವಿನಯ್ ನಿಂದ ಅನೇಕ ಮಾಹಿತಿಗಳು ಬಂದವು. ಆದರೆ ರೋಹಿತ್ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸಿ ಮರುದಿನ ಒಂದು ಒಳ್ಳೆಯ mail ರವಾನಿಸಿದ. ಧನ್ಯವಾದಗಳು ರೋಹಿತ್, ವಿನಯ್ :)
ಗೂಗಲ್ ಕೂಡ ಮನಸ್ಸಿನಂತೆಯೇ ತಾನೆ?
10 comments:
ಇದನ್ನ ಓದ್ತಾ ಇದ್ದಾಗ, ಹಿಂದೆಲ್ಲೋ (ಬಹುಶಃ 'ಭಾವನಾ' ಮಾಸಿಕದಲ್ಲಿ) 'ಗೂಗಲ್ ಎಂಬ ಸರ್ಚ್ ಎಂಜಿನ್' ಎಂಬ ಶೀರ್ಷಿಕೆಯಡಿ ಬೇಳೂರು ಸುದರ್ಶನ ಬರೆದಿದ್ದ ಕವನ ನೆನಪಾಯ್ತು.. ಅದರಲ್ಲಿ ಕವಿ, 'ಗೂಗಲ್ಲಿನಲ್ಲಿ ಎಲ್ಲಾನೂ ಹುಡುಕಿ ಪಡೆಯಬಹುದು, ಆದರೆ ಕಳೆದು ಹೋದ ಸ್ನೇಹ-ಪ್ರೀತಿಗಳನ್ನಲ್ಲ' ಅನ್ನೋ ಭಾವದಲ್ಲಿ ಬರೆದಿದ್ದರು.. ನನಗೆ ತುಂಬಾ ಇಷ್ಟವಾಗಿದ್ದ ಸರಳ ಕವಿತೆ ಅದು.. ಗೂಗಲ್ಲಲ್ಲಿ ಏನಾದ್ರೂ ಸಿಗಲಿಲ್ಲವಾದಾಗಲೆಲ್ಲ ನಂಗೆ ಆ ಕವಿತೆ ನೆನಪಾಗತ್ತೆ..
ಥ್ಯಾಂಕ್ಸ್..
sometimes i feel like searching my car key also on google!
ooof//:-)
@ ಸುಶ್ರುತ,
ಆ ಕವನದ ಬಗ್ಗೆ ಕೇಳಿದ್ದೇನೆ. ಓದುವ ಭಾಗ್ಯ ಇನ್ನೂ ಸಿಕ್ಕಿಲ್ಲ.
@ Ganapathi,
Keep searching!! You may get it someday :D
@ Arun Manipal,
ooof ಯಾಕೆ? :-) :-)
how stuff works ಕೂಡ ಒಂದು ಒಳ್ಳೆ ಸೈಟ್.. ಯಾವಾಗಾದ್ರು ಹುಡುಕಿ ನೋಡು :)
ಹರೀಶ,
ನೋಡ್ಜಿ, ನೀ ಹೇಳಿದ ಮೇಲೆ :)
ನೀವೆಲ್ಲ ಹುಡುಕುತ್ತಿದ್ದ ಕವನವನ್ನು ನಾನೂ ಹುಡುಕುತ್ತಿದ್ದೆ!! ಅದು ಕಳೆದೇ ಹೋಗಿತ್ತು. ಗೂಗಲ್‌ನ ನೆರವಿಲ್ಲದೆ, ಸ್ನೇಹಿತೆಯ ಸಹಾಯದಿಂದ ಅದು ಸಿಕ್ಕಿದೆ!! ಸದ್ಯದಲ್ಲೇ ನನ್ನ ಬ್ಲಾಗ್‌ನಲ್ಲಿ ಪ್ರಕಟಿಸುವೆ. ಓದಿರಿ. ಈಗಲೂ ಅದು ನನಗೆ ಖುಷಿ ಕೊಟ್ಟ ಡಿಜಿಟಲ್ ಕವನದ ಸರಣಿಯ ಒಂದು ಕವನ...
@ ಬೇಳೂರು ಸುದರ್ಶನ,
ತುಂಬಾ ಧನ್ಯವಾದಗಳು- ಭೇಟಿಯಿತ್ತಿದ್ದಕ್ಕೆ, ಕಮೆಂಟಿಸಿದ್ದಕ್ಕೆ. ಸರಿ, ಕವನವನ್ನು ತಪ್ಪದೇ ಓದುತ್ತೇನೆ.
ಈಗ ಈ ಕವನವನ್ನು ಮತ್ತು ನನ್ನ ಆ ಕಾಲದ ಎಲ್ಲ ಡಿಜಿಟಲ್ ಕವನಗಳನ್ನು http://bit.ly/1KTq7Pc ಇಲ್ಲಿ ಓದಬಹುದು! ನಿಮ್ಮ ಆಸಕ್ತಿಗೆ ವಂದನೆಗಳು.
Post a Comment