ಈ ಹಾಡನ್ನು ನೀವೇ ಬರೆದಿದ್ದು ಅಂದುಕೊಳ್ಳಿ ಒಂದು ನಿಮಿಷ. ಅಯ್ಯೋ ಅದು ಜಯಂತ ಕಾಯ್ಕಿಣಿ ಅವರು ಬರೆದಿದ್ದು ನಾನು ನನ್ನದು ಅಂತ ಹೇಗೆ ಹೇಳಲಿ ಅಂತೀರಾ? ಒಂದು ನಿಮಿಷ ಹಾಗೇ ಅಂದುಕೊಳ್ಳಿ... ಯೋಚನೆಗೇನು... ಏನು ಬೇಕಾದರೂ ಮಾಡಬಹುದು! In fact ಬೇಕಾಗಿದ್ದನ್ನೆಲ್ಲಾ ಮಾಡಲು ಸಾಧ್ಯವಿರುವುದು ಯೋಚನೆಯಲ್ಲಿ ಮಾತ್ರ ತಾನೇ! ನಿಮ್ಮ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗರು ನೀವು ಬರೆದ ಹಾಡನ್ನೇ ಹೇಳಿ ನಿಮ್ಮ ಮಗಳನ್ನೇ tease ಮಾಡಿದರೆ ಎನೆನಿಸುತ್ತದೆ?
ಅದೇ ಆಗಿದ್ದು ಜಯಂತ ಕಾಯ್ಕಿಣಿಯವರಿಗೆ ಮತ್ತು ಅವರ ಮಗಳಿಗೂ ಕೂಡ. ಇದು ಯಾವುದೋ newspaper ನ ಮಸಾಲಾ column ನಲ್ಲಿ ಓದಿದ್ದಲ್ಲ. ಖುದ್ದಾಗಿ ಜಯಂತ ಕಾಯ್ಕಿಣಿಯವರೇ ಹೇಳಿದ್ದು… ನನಗಲ್ಲ, ನನ್ನ ಚಿಕ್ಕಮ್ಮನಿಗೆ. ಅವರು ನನ್ನ ಚಿಕ್ಕಪ್ಪನ ಹಳೆಯ friend. ಚಿಕ್ಕಪ್ಪನ ಮನೆಗೆ ಕಾಯ್ಕಿಣಿಯವರು ಹಿಂದಿನ ಬಾರಿ ಬಂದಾಗ ಚಿಕ್ಕಮ್ಮ ಹೇಳಿದರಂತೆ, ' ಜಯಂತ ನೀನು ಬರದಿದ್ದು ಹಾಡು... ಅನಿಸುತಿದೆ ಯಾಕೋ ಇಂದು... ರಾಶಿ ಚೊಲೊ ಇದ್ದು.' ಆಗ ಕಾಯ್ಕಿಣಿಯವರು ಹೇಳಿದ್ದರಂತೆ, 'ಅದೇ ಆಗಿದ್ದು ಮಜಾ ಶಕು ಅಕ್ಕಾ, ಈಗಿತ್ತಲಾಗಿ ನನ್ನ ಮಗಳು ಪಿಕ್‌ನಿಕ್‌ಗೆ ಹೋದಾಗ ಯಾರೋ ಹುಡುಗ್ರು ಅದೇ ಹಾಡು ಹೇಳಿ ನನ್ನ ಮಗಳನ್ನು ಗೇಲಿ ಮಾಡಿದಿದ್ವಡ, ಆವಾಗ ನನ್ನ ಮಗಳಿಗೂ ಅನಿಸಿತ್ತಡ ನನ್ನ ಅಪ್ಪ ಬರೆದ ಹಾಡನ್ನ ನನ್ಗೇ ಹೇಳ್ತಾ ಇದ್ದ ಹೇಳಿ!!’ (ಜಯಂತ ಕಾಯ್ಕಿಣಿಯವರು ಹವ್ಯಕರಷ್ಟೇ ಚೆನ್ನಾಗಿ ಹವ್ಯಕ ಭಾಷೆಯನ್ನು ಮಾತನಾಡುತ್ತಾರಂತೆ.)
ಸರಿ, ನಿಮಗೇನು ಅನಿಸ್ತಾ ಇದೆ?
6 comments:
ಹಹ್ಹಹ್ಹಹ್ಹ! ಇದೊಳ್ಳೆ ಚೊಲೋ ಇದ್ದು!ನಾನಂತೂ ಹಾಡು ಬರಿಯದಿಲ್ಯಪ.. ಬರೀ ಕಥೆ ಬರಿತಿ.. ಹುಡುಗ್ರು ಕತೆ ಎಲ್ಲ ಹೇಳಿ ಟೀಸ್ ಮಾದೋದಿಲ್ಲೆ ಅನ್ನೋದು ನನ್ನ ಮುಗ್ದ ನಂಬಿಕೆ.. :-/
ಸುಶ್ರುತ,
ತನ್ನಂತೆ ಪರರ ಬಗೆದೊಡೆ.... ಹೇಳಿ ನೀನು ಎಲ್ಲರೂ ನಿನ್ನ ಹಂಗೆ ಇರ್ತ ಹೇಳಿ ತಿಳಿಯಡ.
ಎಲ್ಲ ಹುಡುಗರೇನೂ ಅಷ್ಟೆಲ್ಲಾ ಮುಗ್ಧರಲ್ಲ!!
ಅಂದ ಹಾಗೆ ನೀನು ಬರೆಯ ಕಥೆ ಎಲ್ಲ ಚೊಲೊ ಇರ್ತು, ಹಾಡು ಯಾಕೆ ಬರಿಯಲ್ಲೆ ಟ್ರೈ ಮಾಡಲ್ಲಾಗ?
ಹ್ಹ ಹ್ಹ ಹ್ಹ.. ಒಳ್ಳೆ ಕಾಮಿಡಿ ಆತು ಇದು.:-)
ಹೂಂ. ನಂಗೂ ಹಾಗೇ ಅನಿಸಿತ್ತು :)
ಜಯಂತ ಕಾಯ್ಕಿಣಿ? ಹ್ಮ್ಮ್ಮ್ ... ಬರೆದಿರೋ ಎಲ್ಲ ಹಾಡೂ ಹಿಟ್ ಆಗ್ತಾ ಇದ್ದು ...
ಹರೀಶ,
ಹೌದು. ಒಳ್ಳೇದು ಬಿಡು.
ಮುಂಬೈನಲ್ಲಿ ಇದ್ದಾಗ, ಮತ್ತೆ ಮೊದಲು ಮಾಡಿದ ಕೆಲಸದಲ್ಲಿ ಎಲ್ಲ ಅವರಿಗೆ ಸ್ವಲ್ಪ ಕಷ್ಟ ಇತ್ತಡ. At least
ಈಗಾದ್ರೂ...
ಅವರು ಬರೆದಿದ್ದು 'ಬೊಗಸೆಯಲ್ಲಿ ಮಳೆ' ಓದಿದ್ಯ? ಒಂದು ವೇಳೆ ಓದಿಲ್ಲದೆ ಇದ್ರೆ ಮುದ್ದಾಂ ಓದು. ಪುಸ್ತಕ ಕೊಂಡುಕೊಳ್ಳಲೂ ಅಡ್ಡಿಲ್ಲೆ. ಅಷ್ಟು ಚೊಲೋ ಇದ್ದು.
Post a Comment