ಕುರಿ ಕೇಳಿ ಸಾಂಬಾರ ಅರೆಯುವುದಿಲ್ಲ.
ಕುರಿಯ ಬಳಿ 'ನಿನ್ನನ್ನು ಕಡಿಯಬೆಕಾಗಿದೆ, ಸಾಂಬಾರ ಅರೆಯಲಾ?' ಎಂದು ಕೇಳಿದರೆ ಅದು ಬೇಡ ಎಂದೇ ಹೇಳುತ್ತದೆ. ಆದ್ದರಿಂದ ಅದನ್ನು ಕೇಳುವುದಿಲ್ಲ, ಸಾಂಬಾರ ಅರೆಯುತ್ತಾರೆ. ಇನ್ನೊಬ್ಬರನ್ನು ಕೇಳಿದರೆ ಅವರು ಬೇಡವೆಂದೇ ಹೇಳುತ್ತಾರೆ ಅದಕ್ಕಾಗಿ ಅವರನ್ನು ಕೇಳುವುದಿಲ್ಲ ಆ ಕೆಲಸವನ್ನು ಮಾಡುತ್ತೇನೆ ಎನ್ನುವ ಅರ್ಥದಲ್ಲಿ ಹೇಳಬಹುದು.
ನಾನು High school ನಲ್ಲಿ ಓದುತ್ತಿದ್ದಾಗ ನಮ್ಮ ಕನ್ನಡ ಶಿಕ್ಷಕರಾದ ಶ್ರೀ ಜಿ. ಕೆ. ಭಟ್ಟರು ಪರೀಕ್ಷೆ ಪೇಪರ್ ತೆಗೆಯುವ ಮೊದಲು ನಾವು ‘ಸರ್, ಈ ಪರೀಕ್ಷೆಗೆ ಎರಡೇ ಪಾಠ ಸಾಕು, ಮೂರನೆಯದು ಬೇಡ’ ಎಂದು ಗೋಗರೆಯುತ್ತಿದ್ದೆವು. ಆಗ ಅವರು ಈ ಗಾದೆಯನ್ನು ಉಪಯೋಗಿಸುತ್ತಿದ್ದುದು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಕಂಡ ಅತ್ಯುತ್ತಮ ಶಿಕ್ಷಕರಲ್ಲೊಬ್ಬರಾದ ಅವರನ್ನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ನನಗೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿದವರೇ ಅವರು.
8 comments:
ನಮಸ್ಕಾರ,
’ಜಿ.ಕೆ ಭಟ್’ ಸರ್ ಹೆಸ್ರು ಓದಿದ್ದೆ ಎಂತ ಖುಶಿಯಾಯ್ತು ನಂಗೆ :) ಆವೆ ಮರಿಯಾ ಹೈಸ್ಕೂಲಲ್ಲಿ ಓದಿದವ್ರಿಗೆ ಜಿ.ಕೆ ಭಟ್ರ ಪರಿಚಯ ಇದ್ದೇ ಇರುತ್ತೆ . ಕನ್ನಡ ಕ್ಲಾಸು ಅಂದ್ರೆ ಕಾಯ್ತ ಇರ್ತಿದ್ವಿ ನಾವೆಲ್ಲ. Thanks :)
ಮನಸ್ವಿನಿ,
ಜಿ. ಕೆ. ಭಟ್ ಸರ್ ವ್ಯಕ್ತಿತ್ವವೇ ಅಂಥದು ಅಲ್ವ?
ಅವರ ಕ್ಲಾಸಿಗಾಗಿ ಕಾಯದವರಿಲ್ಲ. ನಾವೂ ಕೂಡ ಅದಕ್ಕೆ ಹೊರತಲ್ಲ.
ಸೀಮಕ್ಕ, ನಿನಗೊಬ್ಬನಿಗೆ ಅಲ್ಲ, ನನ್ನಂಥ ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ , ಹೆಚ್ಚು ಸಾಹಿತ್ಯ ಓದಲು ಪ್ರೆರೇಪಿಸಿದವರೇ ಅವರು.
ಯಾವಗಲಾದ್ರು ಅವರ ನೆನಪು, ಅವರ ಪಾಠದ ಶೈಲಿ, ಮೇಲೆ ಸಣ್ಣ ಲೇಖನ್ ಬರಿಯವೂ ಹೇಳಿದ್ದು.
ಮಧುಸೂದನ,
ನೀನು ಹೇಳಿದ್ದು ಅಕ್ಷರಶಃ ನಿಜ.
ಖಂಡಿತ ಬರಿ. ನಂಗೂ ಓದಲ್ಲೆ ಖುಷಿ ಆಗ್ತು.
ಕೋಳಿ ಕೇಳಿ ಸಾಂಬಾರು ಅರೆಯುವುದಿಲ್ಲ ;)
@Vikasa,
Idu yaavudu?.... gotte ittile :-)
i m sorry, it must be ಕೋಳಿ ಕೇಳಿ ಖಾರ ಅರೆಯುವುದಿಲ್ಲ ;)
@ Vikasa
Houdena hangare. Yange idu gottittille.
Post a Comment