January 28, 2008

ಆತ್ಮಹತ್ಯೆ… (ಉತ್ತರ ಕನ್ನಡದ ಗಾದೆ – 139, 140,141 ಮತ್ತು 142)

ಆತ್ಮಹತ್ಯೆ ಮಾಡಿಕೊಂಡವನಿಗೆ ಬ್ರಹ್ಮಹತ್ಯೆ ಮಾಡಿದವನು ಸಾಕ್ಷಿ ಹೇಳಿದ್ದ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸರಿಯಿಲ್ಲ ಎಂದುಕೊಂಡರೆ ಅವನಿಗೆ ಸಾಕ್ಷಿ ಹೇಳುವ ವ್ಯಕ್ತಿ ಬ್ರಾಹ್ಮಣನನ್ನೇ* ಕೊಂದವನು. ಯಾರ ಪರವಾಗಿಯೂ ಮಾತನಾಡುವ ಹಾಗಿಲ್ಲ. ಇಬ್ಬರೂ equally bad ಎಂದು ಹೇಳುವಾಗ ಬಳಸುವ ಇನ್ನೂ ಕೆಲವು ಗಾದೆಗಳೆಂದರೆ, ಹೊಟ್ಟು ಗಡಿಗೆ, ಹುಳುಕು ತೊಗರಿ- ಗಡಿಗೆ ಒಡಕು ಅದರ ಪರವಾಗಿ ಮಾತನಾಡುವಂತಿಲ್ಲ ಎಂದರೆ ಅದರ ಜೊತೆಗಿರುವ ತೊಗರಿ ಕೂಡ ಹುಳುಕು. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ ಮತ್ತು ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಚಿಕ್ಕವರಿದ್ದಾಗ (ಈಗಲೂ ಕೂಡ!) ನಾನು, ನನ್ನ ತಮ್ಮ ಒಬ್ಬರ ಪರವಾಗಿ ಇನ್ನೊಬ್ಬರು ವಕಾಲತ್ತು ನಡೆಸಿದಾಗ ಈ ಮೇಲಿನ ಗಾದೆಗಳಲ್ಲಿ ಯಾವುದೋ ಒಂದು ಅಮ್ಮನ ಬಾಯಿಂದ ಉದುರುತ್ತಿದ್ದುದು ಗ್ಯಾರೆಂಟಿ! ಇದೇ ಅರ್ಥವನ್ನು ಕೊಡುವ ಇನ್ನೊಂದು ಗಾದೆ ಕೂಡ ಗೊತ್ತು. ಅಮ್ಮನಿಂದ ಗೊತ್ತಾಗಿದ್ದಲ್ಲ; ಬೇರೆಲ್ಲೋ ಕೇಳಿದ್ದು. ಆದರೆ ಅದು ಅಷ್ಲೀಲವಾಗಿರುವುದರಿಂದ ಇಲ್ಲಿ ಹಾಕುವುದಿಲ್ಲ.


*ತಪ್ಪನ್ನು ತಿದ್ದಿದ ಹರೀಶ ಮತ್ತು ಗಣಪತಿಗೆ ಧನ್ಯವಾದಗಳು.

4 comments:

Harisha - ಹರೀಶ said...

ಬ್ರಹ್ಮಹತ್ಯೆ ಅಂದ್ರೆ ಬ್ರಹ್ಮನ್ನ ಕೊಂದ ಅಂತಲ್ಲ...

Seema S. Hegde said...

ಹರೀಶ,
ಮತ್ತೆ? ನಾನು ಕೇಳಿ ತಿಳಿದಿದ್ದು ಹಾಗೆ.
ಸರಿ ಯಾವುದು?

Unknown said...

Brahma andre 'Brahmana'

I guesss people are curious to know abt that non veg proverb :) can some one put it here at least?

Seema S. Hegde said...

ಗಣಪತಿ,
ತಪ್ಪನ್ನು ತಿದ್ದಿದ್ದಕ್ಕೆ ಧನ್ಯವಾದಗಳು.
ಇನ್ನು... non-veg ಗಾದೆಗಳು. ಬೇರೆ ಯಾರಾದರೂ ಅವುಗಳನ್ನು ತಮ್ಮ ಬ್ಲಾಗನಲ್ಲಿ ಹಾಕುವುದಾದರೆ ನನ್ನದೇನೂ ಅಭ್ಯಂತರವಿಲ್ಲ. ನನಗೇಕೋ ಅಂಥ ಗಾದೆಗಳ ಬಗ್ಗೆ ಪ್ರೀತಿಯಿಲ್ಲ. ಜನರ ಕುತೂಹಲವನ್ನು ತಣಿಸಲು ನಾನು ನನ್ನ ಬ್ಲಾಗನ್ನು ಗಲೀಜು ಮಾಡಲಾರೆ. ದಯವಿಟ್ಟು ಕ್ಷಮಿಸಿ.