ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ...
ಕ0ಜೂಸಿಗೆ ಮತ್ತೊಂದು ಖರ್ಚು, ಮೈಗಳ್ಳನಿಗೆ ಮತ್ತೊಂದು ಕೆಲಸ ಬಂದೆ ತೀರುತ್ತದೆ ಎಂದರೆ ಗಾದೆ ಪೂರ್ತಿಯಾಗುತ್ತದೆ. ಆದರೆ ವಾಡಿಕೆಯಲ್ಲಿ ಅದನ್ನು ಹೇಳುವುದು ಕಡಿಮೆ. ಕ0ಜೂಸಿಯು ಹಣ ಉಳಿಸಲು ಹೋಗಿ ಅಗ್ಗದ ವಸ್ತುವನ್ನು ಕೊಳ್ಳುತ್ತಾನೆ. ಅದು ಬೇಗ ಹಾಳಾಗುವುದರಿಂದ ಅವನಿಗೆ ಪುನಃ ಖರ್ಚು ಬರುತ್ತದೆ. ಮೈಗಳ್ಳನು ಕೆಲಸವನ್ನು ಸುಲಭದಲ್ಲಿ ಮಾಡಲು ಹೋಗಿ ಇನ್ನೊಂದು ಕೆಲಸವನ್ನು ಮೈಮೇಲೆ ಹಾಕಿಕೊಳ್ಳುತ್ತಾನೆ.
ನಾನು ಕುಳಿತಲ್ಲಿಂದಲೇ ಕಸವನ್ನು ಬುಟ್ಟಿಗೆ ಎಸೆಯಲು ಹೋದಾಗಲೆಲ್ಲಾ ಅದು ಬುಟ್ಟಿಯ ಪಕ್ಕದಲ್ಲಿ ಬೇಳುತ್ತದೆ. ಮತ್ತೆ ಎದ್ದು ಹೋಗಿ ಅದನ್ನು ಆರಿಸಿ ಬುಟ್ಟಿಗೆ ಹಾಕಬೇಕಾಗುತ್ತದೆ. ಹೀಗಾದಗಲೆಲ್ಲಾ ಈ ಗಾದೆ ನೆನಪಾಗುತ್ತದೆ.
2 comments:
ಸೀಮಕ್ಕ, M ಉಪಯೋಗಿಸಿದರೆ ಅನುಸ್ವಾರ ಬತ್ತು.. 0 ಉಪಯೋಗಿಸ ಅವಶ್ಯಕತೆ ಇಲ್ಲೆ..
ಹರೀಶ,
ಉಳಿದೆಲ್ಲ ಕಡೆ ನೀನು ಹೇಳಿದ್ದು work ಆತು. ಆದ್ರೆ ಇದೊಂದು ಶಬ್ದಕ್ಕೆ ಮಾತ್ರ ತ್ರಾಸು ಕೊಟ್ಚು.
ತಾಳ್ಮೆ ಇತ್ತಿಲ್ಲೆ. ಹೋಗ್ಲಿ ಅತ್ಲಾಗೆ ಹೇಳಿ...
Post a Comment