September 2, 2009

ಹೂವಲ್ಲದಿದ್ದರೆ (ಉತ್ತರ ಕನ್ನಡದ ಗಾದೆ 239, ಮತ್ತು 240)

ಹೂವಲ್ಲದಿದ್ದರೆ ಹೂವಿನ ಎಸಳು.
ಯಾವುದೋ ವಸ್ತು ಪೂರ್ತಿ ಸಿಗದೇ ಹೋದರೂ ಕೂಡ ಸ್ವಲ್ಪವಾದರೂ ಸಿಕ್ಕಾಗ (ಅಥವಾ ಬೇರೆಯವರು ಕೊಟ್ಟಾಗ) ಹೇಳುವ ಮಾತು. ಇದೇ ತರಹದ, ಆದರೆ ಬೇರೆ ಸಂದರ್ಭದಲ್ಲಿ ಬಳಸುವಂಥ ಮಾತೆಂದರೆ- ಬೆಲ್ಲವಿಲ್ಲದಿದ್ದರೂ ಬೆಲ್ಲದಂಥಾ ಮಾತು. ಒಳ್ಳೆಯದನ್ನು ಮಾಡುಲು ಸಾಧ್ಯವಿಲ್ಲದಿದ್ದರೂ ಒಳ್ಳೆಯದನ್ನು ಬಯಸಬಹುದು, ಹಾರೈಸಬಹುದು ಎನ್ನುವಾಗ ಬಳಸಬಹುದು.

12 comments:

Amit Hegde said...

ನಿಮ್ ಮಾತಂದ್ರ ಹಸಿ ಗೋಡೆಗೆ ಹಳ್ಳು ಎಸದಾಂಗ್ ಐತಿ ನೋಡ್ರಿ...!

http://eyeclickedit.blogspot.com/

Ittigecement said...

ಸೀಮಾ...

ಬಹಳ ಚಂದದ ಮಾತು...!

Seema S. Hegde said...

@ ಅಮಿತ,
ಹೌದೇನ್ರಿ?!!...Thanks :)

@ ಸಿಮೆಂಟು ಮರಳಿನ ಮಧ್ಯೆ,
ಹೌದು. ನಂಗೂ ಈ ಮಾತು ಇಷ್ಟ.
ಧನ್ಯವಾದಗಳು :)

Harisha - ಹರೀಶ said...

ಸೀಮಕ್ಕಾ, ಈಗೀಗ ನೀನು ಬರೀತಿರ ವೇಗ ನೋಡಿರೆ ಹೂವಲ್ಲದಿದ್ದರೆ ಹೂವಿನ ಎಸಳು ಹೇಳದೇಯಾ! :-(

Seema S. Hegde said...

@ ಹರೀಶ,
'ಕೋಲು ಕೊಟ್ಟು ಹೊಡೆಸಿಕೊಳ್ಳುವುದು' ಅಂದ್ರೆ ಇದೇಯಾ ನೋಡು!
ಮತ್ತೆ ಹೆಂಗಿದ್ದೆ? ಯಾವಾಗ ಸಿಕ್ತೆ? :)

ದಿನಕರ ಮೊಗೇರ said...

ತುಂಬಾ ಧನ್ಯವಾದಗಳು, ಯಾಕೆಂದರೆ ಎಲ್ಲರು ಮರೆತು ಹೋಗ್ತಾ ಇರೋ ಗಾದೆ ಮಾತುಗಳನ್ನ ನೆನಪಿಸಲು ಹೊರಟಿದ್ದೀರಿ.
keep it up ...

Seema S. Hegde said...

Dinakar,
Tumba thanks :-)
Matte matte baruttiri; time sikkidaga bareyuttiruttene :-)

ಬಸವರಾಜ said...

ಈ ಗಾದೆ ಕೇಳಿರಲಿಲ್ಲ ಇಲ್ಲೀವರೆಗೆ. ನಾನು ಬೆಳಗಾವಿಯಾವನು, ನಮ್ಮ ಕಡೆ ಈ ಗಾದೆ ಬಳಕೆಯಲಿಲ್ಲ. ಮಜವಾಗಿದೆ ಗಾದೆ. ಬರೀತೀರಿ.

Shankar Prasad ಶಂಕರ ಪ್ರಸಾದ said...

"ಬರಿಗೈಗಿಂತಾ ಹಿತ್ತಾಳೆ ಕಡಗ ಲೇಸು" ಅನ್ನೋ ಗಾದೆ ಕೂಡಾ ಇದೆ ಅರ್ಥ ಕೊಡುತ್ತೆ ಆಲ್ವಾ ಸೀಮಕ್ಕ?

ಕಟ್ಟೆ ಶಂಕ್ರ

ಸಾಗರದಾಚೆಯ ಇಂಚರ said...

ಸೀಮಾ,
ನಿಮ್ಮ ಬ್ಲಾಗಿಗೆ ಇಂದು ಬಂದೆ,
ಉತ್ತರ ಕನ್ನಡ ದ ಗಾದೆ ನೋಡಿ ಬಹಳ ಸಂತಸವಾಯಿತು
ಮನೆ ಕಡೆ ಹೋದಷ್ಟೇ :)

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

Seema S. Hegde said...

@ Basavaraaja,

Thanks :-)

@ Shankar prasad,
Swalpa sandarbha bere ashte.
Hoovalladiddare...usually, enaadaroo koduvaaga doddadannu kodalaaguvudilla ennuvaaga heluvudu.... "X is better than Y"
Khaali kailiruvudakkinta... "X is better than nothing"

@ Sagaradacheya Inchara,
Thanks :-)

@ V. R. Bhat,
Thanks for the wishes :-)