ಹುಚ್ಚು ಬಿಟ್ಟ ಹೊರತೂ ಮದುವೆಯಾಗುವುದಿಲ್ಲ, ಮದುವೆಯಾದ ಹೊರತೂ ಹುಚ್ಚು ಬಿಡುವುದಿಲ್ಲ.
ಎರಡು ಕೆಲಸಗಳು ಒಂದಕ್ಕೊಂದು ಸಂಬಂಧಪಟ್ಟಿದ್ದು ಒಂದು ಕೆಲಸವಾದಂತೂ ಇನ್ನೊಂದು ಆಗುವುದಿಲ್ಲ ಎಂಬ ಸಂದರ್ಭಕ್ಕೆ ಅನ್ವಯಿಸುತ್ತದೆ. ಉದಾಹರಣೆಗೆ, ನಮ್ಮ ಸಮಾಜ ಮತ್ತು ಸಿನಿಮಾಗಳು- ಸಮಾಜವನ್ನು ನಾವು ಪ್ರತಿಬಿಂಬಿಸುತ್ತೇವೆ ಎಂದು ಸಿನಿಮಾದವರು ಹೇಳಿದರೆ, ಇಂದಿನ ಸಿಮಿಮಾಗಳನ್ನು ನೋಡಿ ಸಮಾಜ ಹಾಳಾಗುತ್ತದೆ ಎಂದು ಜನರು ಹೇಳುತ್ತಾರೆ. ಕೋಳಿ ಮೊದಲೋ? ಮೊಟ್ಟೆ ಮೊದಲೋ? :)
6 comments:
gaade howdu, adare idu uttarakannadaddallavalla :) idu bari kannadaddu :) chennagide.
ಸೀಮಕ್ಕಾ,
ಅಂತೂ ಇವತ್ತು ರಿಪೀಟ್ ಮಾಡಿದ್ರಿ :-) ಇದನ್ನ ನೋಡಿ - http://seemahegde78.blogspot.com/2008/02/172.html
ಭಾಗ್ವತ್ರ ಹದ್ದಿನ ಕಣ್ಣುಗಳು ;-))
ನಿಮ್ಮ ಗಾದೆ ಮಾತು ನನಗೆ ಹೀಗೆ ಅನ್ವಹಿಸಿಕೊಳ್ಳುತ್ತೇನೆ.
ಫೋಟೊ ತೆಗೆಯದ ಹೊರತು, ತೆಗೆಯವ ಹುಚ್ಚು ಬಿಡುವುದಿಲ್ಲ. ತೆಗೆದಮೇಲು ಮತ್ತೊಂದು ತೆಗೆಯುವ ಹುಚ್ಚು ಹಿಡಿಯದೇ ಬಿಡುವುದಿಲ್ಲ ಏನಂತೀರಿ?
ಆಹಾಂ! ನನ್ನ ಬ್ಲಾಗಿಗೆ ಹೊಸ ಟೋಪಿಗಳು ಬಂದಿವೆ. ಒಮ್ಮೆ ಬನ್ನಿ.
@ ~ragu
ಈ ಗಾದೆಯನ್ನು ನಾನು ಇಲ್ಲಿಯವರೆಗೆ ಕೇಳಿದ್ದು ಬರೀ ಉತ್ತರ ಕನ್ನಡದಲ್ಲಿ ಮಾತ್ರ. ಯಾವುದೇ ಪುಸ್ತಕಗಳಲ್ಲಿಯೂ ಓದಿರಲಿಲ್ಲ. ಹಾಗಾಗಿ ಉತ್ತರ ಕನ್ನಡದ್ದೇನೋ ಎಂಬ ಭಾವನೆಯಲ್ಲಿ ಇದ್ದೆ. ಉತ್ತರ ಕನ್ನಡ ಎಂಬ title ತೆಗೆದಿದ್ದೇನೆ.
@ ಜಗಲಿ ಭಾಗವತ,
ಭಾಗವತರ ಹದ್ದಿನ ಕಣ್ಣುಗಳಿಗೆ ಪೊರೆ-ಗಿರೆ ಬಂದು ಬಿಟ್ಟಿದೆಯೇನೋ ಅಂತ ಪರೀಕ್ಷೆ ಮಾಡೋಕೆ repeat ಮಾಡಿದ್ದು. ಸುಮ್ ಸುಮ್ನೆ ಅಲ್ಲ ;-)
ಮುಖ ಅಡಿಯಾಗಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ (ಸ್ವಗತ, ನನ್ನ ಬಗ್ಗೆ ನಾನೇ ಹೇಳಿಕೊಳ್ತಾ ಇದ್ದೇನೆ).
ಹಾಕಿ ಮುಗಿಸಿರುವ ಗಾದೆಗಳ list ನಿಂದ ಹೇಗೆ ತಪ್ಪಿಸಿಕೊಂಡಿತು ಅನ್ನೋದು ಇನ್ನೂ ಯಕ್ಷಪ್ರಶ್ನೆಯೇ!!
ಅಂತೂ ತಮ್ಮ radar ಚೆನ್ನಾಗಿಯೇ ಕೆಲಸ ಮಾಡ್ತಾ ಇದೆ :)
@ ಶಿವು,
ನಿಮಗೇ ನೀವು ಅದನ್ನು ಅನ್ವಯ ಮಾಡಿಕೊಂಡಿದ್ದು ಮಜವಾಗಿದೆ...ಹ್ಹ ಹ್ಹ ಹ್ಹ...
ನಿಮ್ಮ recent phots ತುಂಬಾ ಚೆನ್ನಾಗಿವೆ.
ಸೀಮಕ್ಕಾ, ಕೋಳಿ ಮೊದಲೋ? ಮೊಟ್ಟೆ ಮೊದಲೋ?
ಯಾರೋ ಹೇಳಿದ್ದು.. ಮೊದಲು ಆರ್ಡರ್ ಮಾಡಿದ್ದು ಮೊದಲು :-)
ಭಾಗ್ವತ್ರೇ, ಎಲ್ಲೂ ಬಿಡಲ್ವಲ್ರೀ ನಿಮ್ಮತನವನ್ನ! ಸಲ್ಲಾಪದಲ್ಲೆಲ್ಲೋ ಇದನ್ನು ಪ್ರಸ್ತಾಪಿಸಿದ ನೆನಪು :-)
@ ಹರೀಶ,
"ಮೊದಲು ಆರ್ಡರ್ ಮಾಡಿದ್ದು ಮೊದಲು"
ಹ್ಹ..ಹ್ಹ..ಹ್ಹ... ಇದು ಮಸ್ತ್ ಇದ್ದು.
ಒಬ್ಬನೇ ಸಿಕ್ಕಾಪಟ್ಟೆ ನೆಗ್ಯಾಡಿದ್ದಿ....ಇದನ್ನು ಯಾರಿಗಾದರೂ ಹೇಳವು ಕಾಣ್ತಾ ಇದ್ದು :)
Post a Comment