ಅಕ್ಕಸಾಲಿಗ ಚುಚ್ಚಿದರೆ ನಚ್ಚ ನಚ್ಚಗೆ.
ನಚ್ಚಗೆ ಆಗುವುದು ಎಂದರೆ ಬೆಚ್ಚಾಗಾಗುವಿಕೆ ಅಥವಾ ಹಿತವಾಗುವಿಕೆ.
ನೋವಿದ್ದಾಗ ಶಾಖ ಮಾಡಿಕೊಂಡರೆ ನಚ್ಚಗಾಗುತ್ತದೆ ಎನ್ನುವುದು ರೂಢಿ.
ಯಾರೋ ಕಿವಿ ಚುಚ್ಚಿದರೆ ನಚ್ಚಗಾಗುವುದಿಲ್ಲ ಆದರೆ ಅಕ್ಕಸಾಲಿಗ ಚುಚ್ಚಿದರೆ ಮಾತ್ರ ನಚ್ಚಗಾಗುತ್ತದೆ.
ನಾವು ಹೇಳಿದರೆ ಆ ಮಾತು ಪಥ್ಯವಾಗುವುದಿಲ್ಲ ಆದರೆ ಬೇರೆ ಯಾರೋ ಒಬ್ಬ ನಿರ್ದಿಷ್ಟ ವ್ಯಕ್ತಿ ಹೇಳಿದರೆ ಮಾತ್ರ ಮನಸ್ಸಿಗೆ ನಾಟುತ್ತದೆ ಎಂಬ ಅರ್ಥವನ್ನು ಕೊಡುತ್ತದೆ.
ಇದೇ ಅರ್ಥದಲ್ಲಿ ಉಪಯೋಗಿಸಲ್ಪಡುವ ಇನ್ನೊಂದು ಗಾದೆ ಎಂದರೆ ಶಂಖದಿಂದ ಬಿದ್ದರೇ ತೀರ್ಥ. ಬೇರೆ ಯಾವುದೋ ಪಾತ್ರೆಯಿಂದ ಬಿದ್ದರೂ, ಅದು ತೀರ್ಥವೇ ಆಗಿದ್ದರೂ ತೀರ್ಥವೆಂದು ಅನಿಸುವುದಿಲ್ಲ. ಆದರೆ ಅದೇ ನೀರು ಶಂಖದಿಂದ ಬಿದ್ದಾಗ ತೀರ್ಥವೆಂದು ಅನಿಸುತ್ತದೆ.
3 comments:
ನಮಸ್ಕಾರ,
ನಮ್ಮ ಜಿಲ್ಲೆಯ ಎಷ್ಟೆಲ್ಲ ಗಾದೆಗಳನ್ನು ನೆನಪಿನಂಗಳದಿಂದ ಇಲ್ಲಿಗೆ ತಂದು ಉಣಬಡಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು.
ಚೆನ್ನಾಗಿವೆ.
ನಚ್ಚಗೆ ಆಗುವುದು... ಇದು ನಾನು ಮೊದಲಿಗೆ ಕೇಳುತ್ತಿರುವ ಶಬ್ದ. ಹೊಸ ಶಬ್ದವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಳು..
ನಚ್ಚಗೆ ಬರೆದ ಲೇಖನ ಕೂಡ ಚೆನ್ನಾಗಿತ್ತು.
ಮನಸ್ವಿನಿ ಮತ್ತು ಜೋಮನ್,
ಧನ್ಯವಾದಗಳು.
ನಿಮ್ಮ encouragementಗೆ ನಾನು ಋಣಿ.
Post a Comment