ಕುರುಡಿಯ ಕೈಲಿ ಬಾಳೆ ಒಗೆಸಿದಂತೆ.
ಒಗೆಯುವುದು ಎಂದರೆ ಎಸೆಯುವುದು ಎಂದು ಅರ್ಥ.
ಕುರುಡಿಯ ಕೈಲಿ ಬಾಳೆಯನ್ನು ತೆಗೆದು ಎಸೆ ಎಂದು ಹೇಳಿದರೆ ಅವಳಿಂದ ಅದು ಆಗದ ಕೆಲಸ.
ಬಾಳೆಯನ್ನು ತೆಗೆಯುವುದು ಮಾತ್ರವಲ್ಲದೇ ಅದನ್ನು ಎಸೆಯುವ ಅರೆಗೂ ಅವಳನ್ನು ಕೈ ಹಿಡಿದು ನಡೆಸಿಕೊಂಡು ಹೋಗಬೇಕು.
ಅದೆಲ್ಲದರ ಬದಲು ಆ ಕೆಲಸವನ್ನು ನಾವೇ ಮಾಡುವುದು ಉತ್ತಮ ಎನಿಸುತ್ತದೆ.
ಯಾರಿಗಾದರೂ ಗೊತ್ತಿಲ್ಲದ ಕೆಲಸವನ್ನು ಮಾಡಲು ಹೇಳಿ ಅವರಿಗೆ ಪ್ರತಿಯೊಂದು ಹಂತದಲ್ಲೂ ನಾವೇ ಸಹಾಯ ಮಾಡಬೇಕಾದಂತ ಸಂದರ್ಭದಲ್ಲಿ ಈ ಗಾದೆಯ ಉಪಯೋಗವನ್ನು ಕಾಣಬಹುದು.
4 comments:
nice blog....
Thanks, Dinesh.
ಸೀಮ...
ಬೆಳಿಗ್ಗೆ ಎದ್ದು bread ತಿನ್ನುತ್ತಾ ಇದ್ದೆ. laptop ಮುಂದಿದ್ದ ರಾಜುನ ಬಾಯಲ್ಲಿ ’ಸುಟ್ಟೆವ್ವು ಸುಡ ಮುದುಕಿಗೆ...’ ಅಂತ ಹೇಳುತ್ತಿದ್ದಾರೆ. ’ಏನು ಹಂಗಂದ್ರೆ?’ ಅಂದೆ. ಗಾದೆ ಕೇಳುತ್ತಿದ್ದಂತೆ ನೆನೆಪಾಗಿದ್ದು ನಂಗೆ ನನ್ನ ಸೀಮಕ್ಕ. ’ಇಲ್ಲೊಂದು ಬ್ಲಾಗ್ ಓದ್ತಾ ಇದ್ದಿ, ಅದ್ರಲ್ಲಿದ್ದು.’
’ಸರಿ, ಯಾರ ಬ್ಲಾಗ್ ಅದು ನೋಡು’ ಎಂದೆ.
’ಸೀಮಾ, ಹೇಳಿದ್ದು.’
ತಿನ್ನುವುದು ಬಿಟ್ಟು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ, ನೀವು ಯಾವ ಸೀಮಾ ಅಂತ ಗೊತ್ತಿಲ್ಲಾ. ನಾನು ಮಾತ್ರ ಬೆಂಗಳೆ ಶಾಂತಲಾ.ನೀವು ಉಡೇಲ್ಕೊಪ್ಪದ ಸೀಮಕ್ಕ ಅಲ್ಲದಿದ್ದಲ್ಲಿ ಇಷ್ಟುದ್ದ ಬರೆದಿದ್ದಕ್ಕಾಗಿ ನನ್ನನ್ನು ಕ್ಷಮಿಸಿ.
- ಶಾಂತಲಾ ಭಂಡಿ.
@ ಶಂತಾಲಾ, ಹೌದು. ನಿನ್ನ ಊಹೆ ಸರಿ. ಆನು ಸೀಮಕ್ಕನೇಯ....ನಿನ್ನ contact ಆಗಿದ್ದು ರಾಶಿ ಖುಷಿ ಆತು.
Post a Comment