ಅಪ್ಪನನ್ನು ದೂಡಿ ಮಾವಿನ ಹಣ್ಣು ಆರಿಸುವವನು.
ದೂಡುವುದು ಎಂದರೆ ತಳ್ಳುವುದು.
ಅಪ್ಪ, ಮಗ ಇಬ್ಬರೂ ಮಾವಿನ ಹಣ್ಣುಗಳನ್ನು ಆರಿಸುತ್ತಿರುವಾಗ ಮಗನಿಗೆ ಒಂದು ಒಳ್ಳೆಯ ಮಾವಿನ ಹಣ್ಣು ಬಿದ್ದಿರುವುದು ಕಾಣಿಸುತ್ತದೆ.
ಅಪ್ಪ ಅದರ ಹತ್ತಿರ ಹೋಗಿಬಿಟ್ಟಿದ್ದಾನೆ.
ಇನ್ನೇನು ಅಪ್ಪ ಅದನ್ನು ಆರಿಸಿಕೊಳ್ಳುತ್ತಾನೆ ಎನ್ನುವಷ್ಟರಲ್ಲಿ ಮಗ ಬಂದು ಅಪ್ಪನನ್ನು ತಳ್ಳಿ ಚೆನ್ನಾಗಿರುವ ಆ ಮಾವಿನ ಹಣ್ಣನ್ನು ತಾನು ಎತ್ತಿಕೊಳ್ಳುತ್ತಾನೆ.
ಚೆನ್ನಾಗಿರುವ ವಸ್ತುವನ್ನು ಅಪ್ಪನಿಂದ ಮಗ/ ಮಗಳು ಹೇಗಾದರೂ ಮಾಡಿ ಕಿತ್ತುಕೊಂಡಾಗ ಈ ಮಾತನ್ನು ಹೇಳುತ್ತಾರೆ.
3 comments:
hi seema,
ee gadeya artha heegu agabahude?
namage bekaada channagiruva vasthuvannu padeyalu naavu enannu bekaadaru maadutheve...bekaadare appanannu doodutheve!
Hi Chetana,
Houdu. Ade arthdalli nanu heliddu.
Eshtu jana appanannu dooduvudannu navu agaga nodtane irtheve alva?!!
ಸೀಮಾ, ನಾನೂ ಅದ್ನೇ ಕೇಳವು ಹೇಳಿ ಇದ್ದಿದ್ದಿ. ಈ ಗಾದೆ ಬರೇ ಅಪ್ಪನಿಂದ ಮಗ/ಮಗಳು ಕಿತ್ಕಳದು ಅನ್ನೋ ಅರ್ಥ ಆಗ್ತಿಲ್ಲೆ ಅಲ್ದಾ ಹೇಳಿ. ಹ್ಮ್. ಈಗ ಒ.ಕೆ ಬಿಡು.
Post a Comment