ಸುಟ್ಟೇವು ಸುಡುವ ಮುದುಕಿಗೆ ಸಿಂಬಳ ತೆಗೆಯಲು ಇನ್ನೊಬ್ಬಳು.
ಸುಟ್ಟೇವು ಅಂದರೆ ಎಣ್ಣೆಯಲ್ಲಿ ಕರಿದ ಸಿಹಿ ತಿಂಡಿ.
ಸುಟ್ಟೇವನ್ನು ಕರಿಯುತ್ತಿರುವ ಮುದುಕಿಗೆ ಸಿಂಬಳ ಬಂದರೆ ಅದನ್ನು ತೆಗೆಯಲು ಇನ್ನೊಬ್ಬಳು ಸಹಾಯಕಿ ಬೇಕು.
ಮಾಡುತ್ತಿರುವುದು ಸಣ್ಣ ಕೆಲಸವಾದರೂ ಅದಕ್ಕೆ ಬೇರೆಯವರ ಸಹಾಯವನ್ನು ಬಯಸಿದರೆ ಈ ಗಾದೆ ಅನ್ವಯಿಸುತ್ತದೆ.
ಇದಕ್ಕೆ ಬದಲಿಯಾಗಿ ಬಳಸುವಂತಹ ಗಾದೆ ಎಂದರೆ ಅಂಬಲಿ ಕುಡಿಯುವವನಿಗೆ ಮೀಸೆ ತೀಡಲು ಇನ್ನೊಬ್ಬ.
ಇದನ್ನು ನೆನಪಿಸಿದಂತಹ ವಿಕಾಸ್‌ಗೆ ಧನ್ಯವಾದಗಳು.
4 comments:
ನನ್ನಮ್ಮನ favourite ಗಾದೆಗಳಲ್ಲೊಂದು.. ನಂಗೆ ಬೈಯಲೆ ಉಪಯೋಗ್ಸದು :D
ಸೀಮಾ ಗಾದೆಗಳನ್ನು ಓದಿ ಖುಶಿಯಾಯಿತು! ನಿಮ್ಮಿಂದ ದಕ್ಷಿಣ ಕನ್ನಡದ ಗಾದೆಗಳನ್ನು ನಿರೀಕ್ಷಿಸುತ್ತೇನೆ.
ಸೀಮಾ, "ಅಂಬಲಿ ಕುಡಿಯೋನಿಗೆ ಮೀಸೆ ತಿಕ್ಕೋನೊಬ್ಬ" . ಈ ಗಾದೆ ಅದೇ ಅರ್ಥ ಕೊಡುವ ಗಾದೆ ಆಗ್ಲಕ್ಕಾ?
@ ಹರೀಶ್, :)
ದಿನಾಲೂ ನೀನು comment ಬರೆದಿದ್ದು ಓದಲ್ಲೆ ಖುಷಿ ಆಗ್ತು.
@ ಶೀಲಾ, ದಕ್ಷಿಣ ಕನ್ನಡದ ಗಾದೆಗಲ್ಲಿ ನನ್ನ ಜ್ಞಾನ ಕಮ್ಮಿ. Sorry :( ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಬಂದಂತಹ ಕೆಲವು ಗಾದೆಗಳು ಮಾತ್ರ ಗೊತ್ತು. ಅಂದಹಾಗೆ ನೀವೇಕೆ ನಿಮ್ಮ Blog ನಲ್ಲಿ ದಕ್ಷಿಣ ಕನ್ನಡದ ಗಾದೆಗಳನ್ನು ಹಾಕಬಾರದು? ನನಗೂ ಅವುಗಳನ್ನು ಕಲಿತಂತಾಗುತ್ತದೆ.
@ ವಿಕಾಸ, ಸರಿ ಹೊಂದುವಂತೆ ಕಾಣ್ತು... ಯಂಗೆ ಈ ಗಾದೆ ಮರೆತು ಹೋಗಿತ್ತು.
ನೆನಪಿಸಿದ್ದು ಚೊಲೋ ಆತು. Thanks.
Post a Comment