ವರ್ಷದಿಂದ
ವರ್ಷಕ್ಕೆ ಅಪ್ಪ ಕನ್ನಡಕದೊಂದಿಗೆ ಮಾಡಿಕೊಳ್ಳುವ ಅನಾಹುತ ಒಂದಲ್ಲ ಎರಡಲ್ಲ. ಹಿಂದೊಮ್ಮೆ ಆ ಬಗ್ಗೆ ಬರೆದಿದ್ದೆ (http://seemahegde78.blogspot.nl/2012/01/blog-post.html). ಅದರ ನಂತರ ಮತ್ತೆ ಎಷ್ಟೋ ಅನಾಹುತಗಳು
ನಡೆದುಹೋದವು. ಈಗ ಬರೆಯಲೇ ಬೇಕಾಗಿದೆ.
೨೦೧೨ : ಜನೆವರಿ. ನಾನು, ರಾಜೀವ ಮೈಸೂರಿನಲ್ಲಿದ್ದೆವು. ನಮ್ಮ ಮನೆಗೆ ಅಪ್ಪ, ಅಮ್ಮ ಬಂದಿದ್ದರು, ಎರಡು-ಮೂರು ದಿನ ಉಳಿದಿದ್ದರು. ಮೈಸೂರು, ಶ್ರೀರಂಗಪಟ್ಟಣ, ರಂಗನತಿಟ್ಟು ಎಲ್ಲಾ ಅಡ್ಡಾಡಿಸಿ ಮೈಸೂರು-ಶಿರಸಿ ರಾತ್ರಿ ಬಸ್ಸಿಗೆ ಅವರನ್ನು ಹತ್ತಿಸಿ
ನಾವು ಮನೆಗೆ ಬಂದೆವು. ಅಪ್ಪ ರಾತ್ರಿ ಬಸ್ಸಿನಲ್ಲಿ ಕನ್ನಡಕವನ್ನು ಜೇಬಿನಲ್ಲಿಟ್ಟುಕೊಂಡು ನಿದ್ದೆ
ಮಾಡಿದ. ಅದು ಎಲ್ಲೊ ಬಿದ್ದು ಹೋಗಿರಬೇಕು, ಬಸ್ಸಿನ
ಸದ್ದಿನಲ್ಲಿ, ನಿದ್ದೆಯಲ್ಲಿ, ಗೊತ್ತೇ ಆಗಲಿಲ್ಲ. ಶಿರಸಿಯಲ್ಲಿ ಬೆಳಿಗ್ಗೆ
ಇಳಿದ ಮೇಲೂ ಗಮನಿಸಲಿಲ್ಲ. ಅಲ್ಲಿಂದ ಬೇರೆ ಬಸ್ಸು ಹಿಡಿದು ಮನೆಗೆ ಹೋದ ಮೇಲೆ ಗಮನಕ್ಕೆ ಬಂತು.
ತಕ್ಷಣ ಸಿರಸಿ bus stand ನ control room ಗೆ phone ಮಾಡಿ ವಿಚಾರಿಸಿದ, “ಸಿಗಲಿಲ್ಲ” ಎಂದುಬಿಟ್ಟರು. ಸರಿ, ಬೇರೆ ಕನ್ನಡಕ ಮಾಡಿಸಿಕೊಂಡ. ತೆಳ್ಳನೆಯ frame ನದು ಎಂದು ರಘು ಮತ್ತು ನಾನು ತಾಕೀತು
ಮಾಡಿದ್ದರಿಂದ ಆ ತರಹದ್ದೇ ಮಾಡಿಸಿಕೊಂಡ.
ಕೆಲ ದಿನಗಳ
ಕಳೆದವು. ೨೦೧೨ ರ ಮಳೆಗಾಲದ ಸಮಯ. ಮನೆಯಿಂದ ದೂರದಲ್ಲಿನ ನಮ್ಮ
ಜಾಗದಿಂದ ಹಸಿರು ಹುಲ್ಲು ತರಲೆಂದು ಅಪ್ಪ ಒಂದೆರಡು ಆಳುಗಳನ್ನು ಕರೆದುಕೊಂಡು jeep drive ಮಾಡಿಕೊಂಡು ಹೋಗಿದ್ದ. Drive ಮಾಡುವಾಗ ದೂರ ದೃಷ್ಟಿಯ ಸಲುವಾಗಿ
ಅವನಿಗೆ ಕನ್ನಡಕ ಬೇಕೇಬೇಕಾಗುತ್ತದೆ. Driving ನ ನಂತರದಲ್ಲಿ ಅದು ಅವಶ್ಯವಿರುವುದಿಲ್ಲ, ತೆಗೆದು ಜೇಬಿಗೆ ಸೇರಿಸಿಬಿಡುತ್ತಾನೆ. ಕೆಲಸವಾದ ನಂತರ ಹಿಂದಿರುಗಿ ಹೊರಟಾಗ ಜೇಬಿಗೆ ಕೈಹಾಕಿದರೆ ಕನ್ನಡಕ ಇಲ್ಲ! ಸುತ್ತಮುತ್ತಲಿನ ಜಾಗವನ್ನೆಲ್ಲಾ ಒಮ್ಮೆ ಹುಡುಕಿದ, ಸಿಗಲಿಲ್ಲ. ಅಂತೂ
ಸ್ವಲ್ಪ ಕಷ್ಟಪಟ್ಟು drive ಮಾಡಿಕೊಂಡು
ಮನೆಗೆ ಬಂದ. Jeep ನಿಂದ ಹುಲ್ಲನ್ನು
ಇಳಿಸಿ ದನ-ಕರುಗಳಿಗೆ ಹಾಕುವಾಗ ಆಳು ದ್ಯಾಮ್ಯಾನಿಗೆ ಕನ್ನಡಕ ಸಿಕ್ಕಿತು! ಹುಲ್ಲಿನ ಹೊರೆಯನ್ನು jeep ನ ತಲೆಯ ಮೇಲೆ ನಿಂತು ಅಪ್ಪ ಕಟ್ಟುತ್ತಿದ್ದನಂತೆ. ಆಗ
ಜೇಬಿನಲ್ಲಿದ್ದ ಕನ್ನಡಕ ಹುಲ್ಲಿನ ನಡುವೆಲ್ಲೋ ಬಿದ್ದುಹೋಗಿರಬೇಕು, ಅವನಿಗದು ಗೊತ್ತಾಗಲೇ ಇಲ್ಲ! ಇದರಿಂದ ಅಪ್ಪ ಪಾಠ ಕಲಿಯಲಿಲ್ಲ. ಆ ಕನ್ನಡಕಕ್ಕೊಂದು ದಾರ
ಹಾಕಿಸಿಕೊಳ್ಳಲಿಲ್ಲ. ಇಂತದೇ ಮತ್ತೊಂದು ಘಟನೆ ನಡೆಯಿತು.
೨೦೧೨ ರ ಚಳಿಗಾಲ.
ಅಡಿಕೆಕೊಯ್ಲಿನ ಸಮಯ. ತನ್ನ ತೋಟದ ಅಡಿಕೆಯನ್ನು ಕೊಯ್ಸಿಕೊಂಡು ಅದನ್ನು ನಮ್ಮೂರಿನ co-op society ಯ van ನಲ್ಲಿ ಹೇರಿಕೊಂಡು, ಸುಲಿಯಿಸಲೆಂದು
ಬೇರೆಯವರ ಮನೆಗೆ ತೆಗೆದುಕೊಂಡು ಹೋಗಿ ಹಾಕಿ ಮನೆಗೆ ಬಂದ. ಯಾಕೋ ಕನ್ನಡಕ ಬೇಕಾಯಿತು, ಆದರೆ
ಕಾಣಿಸಲಿಲ್ಲ. ಮನೆಯೆಲ್ಲ ಹುಡುಕಿದ, ಸಿಗಲಿಲ್ಲ. ಅವನಿಗೂ ಆ
ಕನ್ನಡಕಕ್ಕೂ ಅದೇನು ನಂಟೋ ಆ ದೇವರಿಗೇ ಗೊತ್ತು! ಎರಡು ದಿನಗಳ ನಂತರ ಅಡಿಕೆ ಸುಲಿಯುವ
ಹೆಂಗಸರಲ್ಲಿ ಯಾರಿಗೋ ಅಡಿಕೆ ಕೊನೆಯ ರಾಶಿಯಲ್ಲಿ ಕನ್ನಡಕವೊಂದು ಸಿಕ್ಕಿತ್ತು! ಕೆಲಸಕ್ಕೆ ಬರುವ
ದ್ಯಾಮ್ಯಾನ ಜೊತೆ ಬಂದು ಪುನಃ ಅಪ್ಪನ ಕೈಸೇರಿತು.
೨೦೧೩: ಒಂದೆರಡು
ತಿಂಗಳುಗಳ ಹಿಂದೆ ಅಪ್ಪ ಒಂದಿಷ್ಟು ಕಟ್ಟಿಗೆಯ ಜಿಗ್ಗು, ಮಣ್ಣು ಎಲ್ಲವನ್ನೂ ಸೇರಿಸಿ ಬೆಂಕಿ ಹಾಕಿ ಸುಟ್ಟ. ಆ ರೀತಿ ತಯಾರಿಸಿದ ಮಣ್ಣಿಗೆ ‘ಸುಡುಧೂಳು’ ಎನ್ನುತ್ತಾರೆ. ಗೊಬ್ಬರದ ರೀತಿ ಅದನ್ನು ಉಪಯೋಗಿಸುತ್ತಾರೆ, ವಿಶೇಷವಾಗಿ ಕಬ್ಬಿನ ಬೆಳೆಗೆ. ಕಟ್ಟಿಗೆಯ
ಜಿಗ್ಗನ್ನು ಬಗ್ಗಿ ಒಟ್ಟುಗೂಡಿಸುವಾಗ ಅದಕ್ಕೆ ತನ್ನ ಕನ್ನಡಕವನ್ನೂ ಸೇರಿಸಿಬಿಟ್ಟಿದ್ದ. ಮುಂದಿನ
ಸಲ ಊರಿಗೆ phone ಮಾಡಿದಾಗ ಅಮ್ಮ ಅಪ್ಪನ ಕನ್ನಡಕದ ಕಥೆ ಹೇಳಿದಳು. ಅಪ್ಪ phone ತೆಗೆದುಕೊಂಡವನೇ “ಕೂಸೇ, ಕನ್ನಡಕದ ಅಂತ್ಯ
ಸಂಸ್ಕಾರವೂ ಆಗಿ ಹೋಯಿತು” ಎಂದ. ನಾನು “ಹುಮ್ಮ್...
ಹೋಗ್ಲಿ ಬಿಡು, ಬೇರೆ ಮಾಡಿಸಿಕೋ” ಎಂದೆ. ಆದರೆ
ಅಪ್ಪನಿಗೆ ಮತ್ತೆ ಹೊಸ ಕನ್ನಡಕದ ಮೇಲೆ ದುಡ್ಡು ಸುರಿಯುವುದು ಬೇಕಿರಲಿಲ್ಲ ಎಂದು ಕಾಣುತ್ತದೆ. ಯಾವುದೋ
ಓಬೀರಾಯನ ಕಾಲದ ದಪ್ಪ frame..
ಅದೆಲ್ಲಿಟ್ಟಿದ್ದನೊ, ಯಾವಾಗ ಇಟ್ಟಿದ್ದನೋ
ನಮಗ್ಯಾರಿಗೂ ಗೊತ್ತಿಲ್ಲ; ಅಂತೂ ಹೊರತೆಗೆದ. “80 ರ ದಶಕದ frame ತರ ಇದೆ, ಅದಕ್ಕೇ glass ಹಾಕಿಸಲು ಕೊಟ್ಟು ಬಂದಿದ್ದಾರೆ, ಎಷ್ಟು ಬೇಡವೆಂದರೂ ಕೇಳಲಿಲ್ಲ”- ಅಮ್ಮನ ದೂರು. ನಾನು
ಹೇಳಿದೆ, “ತಲೆ ಕೇಡಿಸಿಕೊಳ್ಳಬೇಡ ಬಿಡು, ಅವನು ಕಳೆದುಕೊಳ್ಳುತ್ತಿರುವ rate ನೋಡಿದರೆ ಅದಿನ್ನು ಹೆಚ್ಚಿಗೆ ದಿನ ಬಾಳುವುದಿಲ್ಲ. ನಿನಗಿನ್ನು ತೀರಾ ನೋಡಲು ಹಿಡಿಸದಿದ್ದರೆ ಆ ಕನ್ನಡಕವನ್ನು ಎಲ್ಲಾದರೂ ಅಡಗಿಸಿಟ್ಟುಬಿಡು, ಒಂದೆರಡು ದಿನ ಹುಡುಕಿ ತಾನೇ ಎಲ್ಲೋ ಕಳೆದುಕೊಂಡೆ ಎಂದು ಬೇರೆ
ಮಾಡಿಸಿಕೊಳ್ಳುತ್ತಾನೆ” ಎಂಬ ಕುತಂತ್ರದ idea ಕೊಟ್ಟೆ.
ಇವತ್ತು ಅಮ್ಮ- “ನಿನಗೊಂದು ಸುದ್ದಿ ಹೇಳುವುದಿತ್ತು” ಅಂದಳು. “ಅಪ್ಪನ ಕನ್ನಡವಾ?” ಎಂದೆ. ಅಮ್ಮನಿಗೆ
ನಗು ತಡೆಯಲು ಆಗಲಿಲ್ಲ- “ಹಾ... car ನ ಗಾಲಿಯ ಕೆಳಗಡೆ
ಸಿಕ್ಕು ಪಡ್ಚ” ಎನ್ನುತ್ತಾ
ಮತ್ತೆ ನಗತೊಡಗಿದಳು. “ಅಬ್ಬಾ ಅಂತೂ ಹೋಯಿತಾ ಆ ಕನ್ನಡಕ.. ಅಪ್ಪನನ್ನು ಕರೆ” ಎಂದೆ. “ಈ ಬಾರಿ ಏನು special?” ಎಂದೆ. ಅಪ್ಪ
ಮುಸಿ ಮುಸಿ ನಗುತ್ತಾ “ನಾನು car ನ ಗಾಲಿಗೆ ಗಾಳಿ
ಹಾಕುವಾಗ ಬಿದ್ದು ಹೋಯಿತೋ ಏನೋ, ಆಮೇಲೆ car reverse ನಲ್ಲಿ ತಂದೆ. ಆಗೆಲ್ಲೋ......” ನಾನು “ನೀನು ತಕ್ಷಣ ಹೋಗಿ
ಮಾಡಿಸಲು ಕೊಡಬೇಡ, ಎಂತೆಂಥದೋ frame ನ ಕನ್ನಡಕವನ್ನು
ಆರಿಸುತ್ತೀಯ, ಒಂದು ವಾರ ಹೇಗೋ
ದೂಡು. ಇನ್ನೊಂದು ವಾರದಲ್ಲಿ ಹೇಗೂ ಶ್ವೇತಾ (ಅವನ ಸೊಸೆ) ಬರುವವಳಿದ್ದಾಳೆ. ಅವಳನ್ನು
ಕರೆದುಕೊಂಡು ಹೋಗು. ಚೆನ್ನಾಗಿರುವುದನ್ನು ಆರಿಸಿ ಕೊಡುತ್ತಾಳೆ. ಈ ಸಲ ಮಾತ್ರ ಕನ್ನಡಕಕ್ಕೆ ದಾರ
ಹಾಕಿಸಿಕೊಂಡೇ ಬಾ" ಎಂದೆ. ಅಷ್ಟರಲ್ಲಿ ಅಮ್ಮ ಕಸಿದುಕೊಂಡು "ಮೊನ್ನೆ ನಾನು ನನ್ನ ಕನ್ನಡಕವನ್ನು ಅಕಸ್ಮಾತ್
ಆಚೆ ಬಿಟ್ಟುಬಿಟ್ಟಿದ್ದೆ, ದ್ಯಾಮ್ಯಾ ‘ಅಮ್ಮಾ ಹೆಗಡೇರು
ಮತ್ತೆ ಕನ್ನಡಕ ಅಲ್ಲಿ ಬಿಟ್ಟಿದ್ದರು’ ಎಂದು ತಂದು ಕೊಟ್ಟ" ಎಂದಳು. ನನಗಾಶ್ಚರ್ಯ! ಅಮ್ಮ
ಸಾಮಾನ್ಯವಾಗಿ ಕನ್ನಡಕವನ್ನು ಅಲ್ಲಿ-ಇಲ್ಲಿ ಇಡುವುದೇ ಇಲ್ಲ. "ನಿನಗೂ ಶುರುವಾಯಿತಾ? ಅದೇನು ಸೋಂಕು
ರೋಗವಾ?" ಕೇಳಿದೆ. ಅಮ್ಮ ಮತ್ತೆ
ನಗತೊಡಗಿದಳು.
7 comments:
ನೀವು ಅಪ್ಪನ ಕನ್ನಡಕ ಅಂತ ಬರೆಯುವಾಗ, ನನಗೆ ನೆಂಪಾದದ್ದು ನಮ್ಮ ಅಜ್ಜಿಯ ಕನ್ನಡಕ. ಆಕೆ ಅದನ್ನು ತಮ್ಮ ಹೃದಯಕ್ಕಿಂತಲೂ ಮಿಗಿಲಾಗಿ ನೋಡಿಕೊಂಡರು. ಅದನ್ನು ಆಕೆ ಕರೆಯುತ್ತಿದ್ದದ್ದು "ಸುಲೋಚನ" ಅಂತ.
ನೀವು ಕೊಟ್ಟ ಲಿಂಕ್ ಸಹ ಓದಿದೆ.
http://www.badari-poems.blogspot.in
ಹ್ಹ ಹ್ಹ.. ಮಸ್ತ್ :)
@ ಬದರಿನಾಥ,ಧನ್ಯವಾದಗಳು. ಹೌದು, "ಸುಲೋಚನ" ಎಂದು ತುಂಬಾ ಜನ ಕನ್ನಡಕವನ್ನು ಕರೆಯುವುದನ್ನು ನಾನೂ ಕೇಳಿದ್ದೇನೆ :)
@ ವಿಕಾಸ, ಥ್ಯಾಂಕ್ಯೂ :)
ನಿಮ್ಮ ಬರಹ ಓದಿ ನಂಗು ನನ್ನಪ್ಪನ ಕನ್ನಡಕದ ಅವಾಂತರ ನೆನಪಾತು
@Dippi,
Ha ha :)
@Shivakumar Negimani,
Thanks. Nimma website definitely visit madteeni.
Post a Comment