January 25, 2012

ಇವು ನನ್ನನ್ನು ನಗಿಸಿದವು!


ಕೆಲವು ಬರಹಗಳು ಎಷ್ಟು funny ಆಗಿರುತ್ತವೆಂದರೆ ನಗದಿರಲು ಸಾಧ್ಯವೇ ಇಲ್ಲ. Stressful ಜೀವನದಲ್ಲಿ ಇವು ಮನಸ್ಸಿಗೆ ಮುದ ಕೊಡುವುದಂತೂ ನಿಜ. 





ನಾಗವಾರದ ಬಳಿ ring road ನ ಪಕ್ಕದಲ್ಲಿ ಕಂಡಿದ್ದು. ಈ photo ಚಲಿಸುತ್ತಿದ್ದ bus ನಲ್ಲಿ ಕುಳಿತಿದ್ದ ನಾನು cell phone ನಿಂದ ತೆಗೆದಿದ್ದರಿಂದ ಅಷ್ಟೊಂದು clear ಇಲ್ಲ. ಅಲ್ಲಿ ಬರೆದಿರುವುದು 'ಓಲ್ಡ್ ಬಿಲಿಂಡ್ಗ್ ಡೆಮಲೀಶನ್ ಕಂಟ್ರೆಕರ್ಸ್'. ಕೆಳಗಡೆ ಇಂಗ್ಲಿಷ್ ನಲ್ಲಿ ಬರೆದಿತ್ತು- ‘Old Building Demolition Contractors’. ಇದನ್ನು ನೋಡಿದ ಒಂದೆರಡು ತಿಂಗಳುಗಳ ನಂತರ ಮತ್ತೊಮ್ಮೆ ಅಲ್ಲಿ ಹೋದಾಗ ಈ board ಕಾಣಿಸಲಿಲ್ಲ, ಮುರಿದು ಬಿದ್ದಿತ್ತು. ಆ board ಇದ್ದ building demolish ಆಗಿ ಹೋಗಿದೆ! 



ರಸ್ತೆ ಕಿರಿದಿದೆಯೋ? ಕಿರಿದಾಗಿದೆಯೋ?- ಶಿರಸಿಯಿಂದ ಕುಮಟಾಕ್ಕೆ ಹೋಗುವಾಗ ದೇವಿಮನೆ ಘಟ್ಟ ಮುಗಿದ ನಂತರ ಕಂಡಿದ್ದು.  


ಇದು ಬೆಂಗಳೂರಿನಲ್ಲಿ ಎಲ್ಲಿ ಬೇಕಾದಲ್ಲಿ ಕಾಣಸಿಗುತ್ತದೆ. ಇದನ್ನು ಬರೆದವರು 'ಮಧ್ಯ'ಪಾನ (ಮದ್ಯಪಾನ) ಮಾಡಿಕೊಂಡೇ ಬರೆದಿರಬಹುದೇ?


ಮೈಸೂರಿನಲ್ಲಿ 'Nirmala Convent (Nirmalacon) ನಿಂದ L&T' ವರೆಗೆ ಎಂಬುದು ಕನ್ನಡದಲ್ಲಿ 'ಕಹಜಕ ದಿಂದ ಹಜಕಲಜಹ'ದ ವರೆಗೆ ಎಂದಾಗುತ್ತದೆಯೆ?


Pregnancy test ಮಾಡಿಸಿದ ನಂತರ silent ಆಗಿರಬೇಕೇ? ಗಂಗಾನಗರದ 5th main ನಲ್ಲಿ ನಡು ರಸ್ತೆಯಲ್ಲಿ ಇದು ನನ್ನನ್ನು ನಗಿಸಿತ್ತು!

4 comments:

anilkumar said...
This comment has been removed by a blog administrator.
anilkumar said...
This comment has been removed by a blog administrator.
anilkumar said...

KASTA SADYA,,,

Seema S. Hegde said...

@Anilkumar,
Alva? Nangoo hage anistu!